ರಾಜಾರಾಮ ಗಿರಿಧರಲಾಲ ದುಬೆ
ರಾಜಾರಾಮ ಗಿರಿಧರಲಾಲ ದುಬೆಯವರು ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸಂಸದರು ಹಾಗೂ ರಾಜಕೀಯ ಧುರೀಣರು.
ರಾಜಾರಾಮ ಗಿರಿಧರಲಾಲ ದುಬೆ | |
---|---|
ಜನನ | 30ನೇ ಜೂನ್ 1913 ಸೊಲ್ಲಾಪುರ, ಮಹಾರಾಷ್ಟ್ರ |
ವೃತ್ತಿ | ರಾಜಕೀಯ |
ರಾಷ್ಟ್ರೀಯತೆ | ಭಾರತೀಯ |
ಜನನ
ದುಬೆಯವರು 30ನೇ ಜೂನ್ 1913ರಂದು ಮಹಾರಾಷ್ಟ್ರದ ಸೊಲ್ಲಾಪುರ ಜನಿಸಿದರು.
ಹಿನ್ನಲೆ
ರಾಜಾರಾಮ ಗಿರಿಧರಲಾಲ ದುಬೆಯವರು ಉತ್ತರ ಪ್ರದೇಶ ರಾಜ್ಯದ ಮೊಲದವರು.
ನಿರ್ವಹಿಸಿದ ಖಾತೆಗಳು
- 1951ರಲ್ಲಿ 1ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದರಾಗಿ ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದರು.
- 1951ರಲ್ಲಿ ಜವಾಹರಲಾಲ್ ನೆಹರುರವರ ಸಂಸದೀಯ ಕಾರ್ಯಾದರ್ಶಿಯಾಗಿದ್ದರು.
- 1957ರಲ್ಲಿ 2ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸೋಲು.
- 1962ರಲ್ಲಿ 3ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು.
- 1967ರಲ್ಲಿ 4ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸೋಲು.
- 1939—41ರಲ್ಲಿ ವಿಜಯಪುರ ನಗರ ಸಭೆಯ ಅಧ್ಯಕ್ಷರಾಗಿದ್ದರು.
- 1944—48 ಹಾಗೂ 1957—1959ರಲ್ಲಿ ವಿಜಯಪುರ ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾಗಿದ್ದರು.
- 1953—57ರಲ್ಲಿ ಸಂಸತ್ತಿನ ಉತ್ಪಾದನೆ ಸಚಿವಾಲಯದ ಕಾರ್ಯದರ್ಶಿಯಾಗಿದ್ದರು.
- 1951 - 1953ರಲ್ಲಿ ಕಾರ್ಮಿಕ ಸಹಕಾರ ಸಮಿತಿಯ ಸದಸ್ಯರಾಗಿದ್ದರು.
- 1950-1952ರಲ್ಲಿ ಜಿಲ್ಲಾ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾಗಿದ್ದರು.
- 1960 ರಿಂದ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.[1]
- 1968-1970ವರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದರು.
- ಎಐಸಿಸಿ ಹಾಗೂ ಕೆಪಿಸಿಸಿ ಸದಸ್ಯರಾಗಿದ್ದರು.
ಉಲ್ಲೇಖಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.