ಮುರಿಗಪ್ಪ ಸಿದ್ದಪ್ಪ ಸುಗಂಧಿ

ಮುರಿಗಪ್ಪ ಸಿದ್ದಪ್ಪ ಸುಗಂಧಿಯವರು ಮಾಜಿ ಸಂಸದರು ಹಾಗೂ ರಾಜಕೀಯ ಧುರೀಣರು.

ಮುರಿಗಪ್ಪ ಸಿದ್ದಪ್ಪ ಸುಗಂಧಿ
ಜನನವಿಜಯಪುರ, ಕರ್ನಾಟಕ
ವೃತ್ತಿರಾಜಕೀಯ
ರಾಷ್ಟ್ರೀಯತೆಭಾರತೀಯ

ರಾಜಕೀಯ

1957ರಲ್ಲಿ ಅಂದಿನ ಮೈಸೂರು-ಕರ್ನಾಟಕದ ವಿಜಾಪುರ ಉತ್ತರ ಲೋಕಸಭಾ ಕ್ಷೇತ್ರ(ಈಗಿನ ವಿಜಯಪುರ ಲೋಕಸಭಾ ಕ್ಷೇತ್ರ)ದಿಂದ ಮುರಿಗಪ್ಪ ಸಿದ್ದಪ್ಪ ಸುಗಂಧಿಯವರು ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿ ಮೊದಲ ಬಾರಿ ಸಂಸತ್ ಪ್ರವೇಶಿಸಿ ದಾಖಲೆ ಮಾಡಿದ್ದಾರೆ.

ಪಕ್ಷೇತರ ಅಭ್ಯರ್ಥಿ ಹಾಗೂ ರಾಷ್ಟ್ರೀಯ ಅಭ್ಯರ್ಥಿ ಸ್ಫರ್ಧೆಯಿಂದಾಗಿ ಬಿಜಾಪುರ ಕ್ಷೇತ್ರ ಅಂದು ರಾಷ್ಟ್ರದ ಗಮನಸೆಳೆದಿತ್ತು. ಒಟ್ಟು 3,53,151 ಮತಗಳ ಪೈಕಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಮುರಿಯಪ್ಪ ಸಿದ್ದಪ್ಪ ಸುಗಂಧಿ 88,209 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ರಾಜಾರಾಮ ಗಿರಿಧರಲಾಲ ದುಬೆ 77,223 ಮತಗಳನ್ನು ಪಡೆದಿದ್ದರು. ಅಂತಿಮವಾಗಿ ಪಕ್ಷೇತರ ಅಭ್ಯರ್ಥಿಯಾದ ಸುಗಂಧಿಯವರು 10,936 ಮತಗಳಿಂದ ಗೆಲುವಿನ ನಗೆ ಬೀರಿದ್ದರು.

ಇದಾದ ನಂತರ ಮೈಸೂರು ಕರ್ನಾಟಕ ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡ ನಂತರ 1967ರಲ್ಲಿ ಕೆನರಾ ಕ್ಷೇತ್ರ (ಈಗಿನ ಉತ್ತರ ಕನ್ನಡ)ದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಗೆದ್ದು ದಾಖಲೆ ನಿರ್ಮಿಸಿದ್ದರು. ಅಂದು ಪಕ್ಷೇತರ ಅಭ್ಯರ್ಥಿಯಾಗಿ ದಿನಕರ ದತ್ತಾತ್ರೇಯ ದೇಸಾಯಿ ಸ್ಫರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಜಿ.ವಾಮನರನ್ನು ಸೋಲಿಸಿದರು.

ಒಟ್ಟು 3,09,326 ಮತಗಳ ಪೈಕಿ ದಿನಕರ ದತ್ತಾತ್ರೇಯ ದೇಸಾಯಿ 1,43,297 ಮತಗಳನ್ನು ಪಡೆದರೆ ವಾಮನ್ 1,15,490 ಮತಗಳನ್ನಷ್ಟೆ ಪಡೆಯಲು ಶಕ್ತರಾದರು.ಫಲಿತಾಂಶದಲ್ಲಿ ದೇಸಾಯಿ 27,297 ಮತಗಳ ಅಂತರದಿಂದ ಗೆದಿದ್ದರು.

ಮುರಿಯಪ್ಪ ಸಿದ್ದಪ್ಪ ಸುಗಂಧಿ ಮತ್ತು ದಿನಕರ ದತ್ತಾತ್ರೇಯ ದೇಸಾಯಿಯವರು ಕರ್ನಾಟಕ ರಾಜ್ಯದ ಲೋಕಸಭಾ ಚುನಾವಣಾ ಇತಿಹಾಸದಲ್ಲಿಯೇ ಪಕ್ಷೇತರ ಅಭ್ಯರ್ಥಿಯಾಗಿ ಸಂಸದರಾದ ದಾಖಲೆಯಾಗಿದೆ.

ನಿರ್ವಹಿಸಿದ ಖಾತೆಗಳು

  • 1957ರಲ್ಲಿ ನಡೆದ ಲೋಕಸಭೆ 2ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದರಾಗಿ ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದರು.[1]
  • 1937 ಬಾಂಬೆ ಪ್ರೆಸಿಡೆನ್ಸಿ ಚುನಾವಣೆಯಲ್ಲಿ ವಿಜಯಪುರ ಉತ್ತರ ಕ್ಷೇತ್ರದಿಂದ ಶಾಸಕರಾಗಿದ್ದರು.[2]

ಉಲ್ಲೇಖಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.