ಬ್ರಹ್ಮ ಪುರಾಣ
ಬ್ರಹ್ಮ ಪುರಾಣ ಇದು ಹದಿನೆಂಟು ಪುರಾಣಗಳಲ್ಲಿ ಒಂದು.ಇದರಲ್ಲಿ ಎರಡು ಭಾಗಗಳಿವೆ. ಪೂರ್ವ ಭಾಗ ಬ್ರಹ್ಮಾಂಡದ ರಚನೆಯ ಬಗ್ಗೆ ಹೇಳುತ್ತದೆ. ಎರಡನೆ ಭಾಗವಾದ ಉತ್ತರ ಭಾಗದಲ್ಲಿ ರಾಮ ಹಾಗೂ ಕೃಷ್ಣರ ಕಥೆಗಳು ಬರುತ್ತದೆ.
ಹಿಂದೂ ಧರ್ಮಗ್ರಂಥಗಳು |
![]() |
ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ |
ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ |
ಇತರ ಧರ್ಮಗ್ರಂಥಗಳು
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ |
ಬ್ರಹ್ಮ ಪುರಾಣ
- ಅಷ್ಟಾದಶ ಮಹಾಪುರಾಣಗಳ ಎಲ್ಲ ಪಟ್ಟಿಗಳಲ್ಲೂ ಹತ್ತು ಸಾವಿರ ಶ್ಲೋಕಗಳುಳ್ಳವೆಂದು ಹೆಸರಾದರೂ ನಿಜವಾಗಿ ಸುಮಾರು 7-8 ಸಾವಿರ ಶ್ಲೋಕಗಳನ್ನಷ್ಟೇ ಉಳ್ಳ ಇದು ಆದಿಪುರಾಣವೆಂದು ಹೆಸರಾಗಿದೆ. ಉಪೋದ್ಘಾತದಲ್ಲಿ ಲೋಮಹರ್ಷಣ ಸೂತನ ನೈಮಿಷಾರಣ್ಯಕ್ಕೆ ಹೋದಾಗ ಅಲ್ಲಿದ್ದ ಋಷಿಗಳು ಪ್ರಪಂಚದ ಆದ್ಯಂತಗಳನ್ನು ವಿವರಿಸಲು ಕೇಳಿಕೊಳ್ಳಲಾಗಿ ಸೂತಪುರಾಣಿಕ ಮಾನವಕುಲದ ಮೂಲಪಿತಾಮಹರಲ್ಲಿ ಒಬ್ಬನಾದ ದಕ್ಷನಿಗೆ ಒಮ್ಮೆ ಸೃಷ್ಟಿಕರ್ತನಾದ ಬ್ರಹ್ಮ ಹೇಳಿದ ಬ್ರಹ್ಮಪುರಾಣವನ್ನು ಹೇಳಲು ಒಪ್ಪುತ್ತಾನೆ. ಅವನ ಪುರಾಣ ಪ್ರವಚನದಲ್ಲಿ ಎಲ್ಲ ಪುರಾಣಗಳಿಗೂ ಹೆಚ್ಚು ಕಡಿಮೆ ಸಾಧಾರಣವೆನ್ನಿಸುವ ವಿಶ್ವಸೃಷ್ಟಿ, ಆದಿಮಾನವನಾದ ಮನು ಮತ್ತು ಅವನ ವಂಶಜರ ಹುಟ್ಟು, ದೇವತೆಗಳ ಉತ್ಪತ್ತಿ, ಗಂಧರ್ವಾದಿಗಳ ಉದಯ, ಸೂರ್ಯ, ಚಂದ್ರವಂಶಜರ ರಾಜ ಮಹಾರಾಜರ ಪೀಳಿಗೆಯ ವೃತ್ತಾಂತ, ಭೂವಿಭಾಗ, ಸ್ವರ್ಗ, ನರಕಗಳ ವಿವರ ಬರುತ್ತವೆ. ಪುರಾಣದ ಬಹ್ವಂಶ ತೀರ್ಥ ಮಾಹಾತ್ಮ್ಯವನ್ನು ಹೇಳುತ್ತದೆ. ಒರಿಸ್ಸದ ದೇವಾಲಯ ಮತ್ತು ಸುತ್ತಮುತ್ತಲಿನ ತೀರ್ಥಕ್ಷೇತ್ರಗಳು ಗಣ್ಯವಾಗಿ ವರ್ಣಿಸಲ್ಪಟ್ಟಿವೆ. ಆದಿತ್ಯೋತ್ಪತ್ತಿ, ಶಿವಪ್ರಿಯವನ, ಉಮಾಜನನ, ಉಮಾವಿವಾಹ, ಶಿವಸ್ತೋತ್ರ, ಕಂಡುಮಹರ್ಷಿಯ ಸ್ತ್ರೀಲೋಲುಪತೆ, ವಿರಾಗ, ಕೃಷ್ಣಲೀಲೆ, ಶ್ರಾದ್ಧನಿಯಮ, ಧಾರ್ಮಿಕ ಜೀವನದ ನೀತಿ, ವರ್ಣಾಶ್ರಮ ಧರ್ಮ, ಸ್ವರ್ಗ, ನರಕ, ವಿಷ್ಣುಪುಜಾದಿಗಳು-ಇವು ಇದರ ಸಾರ. ಯುಗ, ಪ್ರಲಯ, ಸಾಂಖ್ಯಯೋಗ, ಮೋಕ್ಷೋಪಾಯಗಳ ವಿವೇಚನೆಯೂ ಕೊನೆಯಲ್ಲಿವೆ. ಪ್ರಸ್ತುತ ಪುರಾಣದಲ್ಲಿ ಅತ್ಯಲ್ಪಭಾಗ ಪ್ರಾಚೀನ; ತೀರ್ಥಮಾಹಾತ್ಮ್ಯವಂತೂ ಪ್ರ.ಶ. 13ನೆಯ ಶತಮಾನಕ್ಕಿಂತ ಹಿಂದಿನದೆನ್ನಿಸದು.
ನೋಡಿ
ಉಲ್ಲೇಖ
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.