ಅಗ್ನಿ ಪುರಾಣ

ಅಗ್ನಿ ಪುರಾಣ ಹದಿನೆಂಟು ಪುರಾಣಗಳಲ್ಲಿ ಒಂದು.ವೇದಗಳಲ್ಲಿ ಹೇಳಲಾಗಿರುವ ಅಗ್ನಿದೇವತೆಯ ಕುರಿತಾದ ಈ ಪುರಾಣದಲ್ಲಿ ಕಾವ್ಯ,ನಾಟಕಗಳ ಲಕ್ಷಣಗಳು,ರಸವರ್ಣನೆಗಳು,ಮಂತ್ರ ಮತ್ತು ಮಂತ್ರವಿಧಾನಗಳು,ರಾಜಧರ್ಮ ಮುಂತಾದ ವಿಚಾರಗಳು ಹೇಳಲ್ಪಟ್ಟಿದೆ.ಇದರ ಹೆಚ್ಚಿನ ಭಾಗಗಳು ೮ನೇ ಶತಮಾನದಿಂದ ೧೧ನೇ ಶತಮಾನ ಅಂದಾಜಿನಲ್ಲಿ ರಚಿಸಲ್ಪಟ್ಟವು ಎಂದು ವಿದ್ವಾಂಸರ ಅಭಿಪ್ರಾಯ. ಸಂಸ್ಕೃತದಲ್ಲಿರುವ ಹದಿನೆಂಟು ಮುಖ್ಯಪುರಾಣಗಳಲ್ಲೊಂದು. ಅಗ್ನಿದೇವತೆಯಿಂದ ವಸಿಷ್ಠಮುನಿಗೆ ಉಪದಿಷ್ಟವಾದುದೆಂದು ಪ್ರತೀತಿ. ಕಾಲ ಸುಮಾರು ಕ್ರಿ.ಶ. 7ನೆಯ ಶತಮಾನ. ಪ್ರಧಾನವಾಗಿ ಶೈವಮತಕ್ಕೆ ಸಂಬಂಧಪಟ್ಟ ವಿಚಾರಗಳಲ್ಲದೆ ಜಗತ್ತಿನ ಸೃಷ್ಟಿ, ಧರ್ಮಶಾಸ್ತ್ರ, ರಾಜಧರ್ಮ, ಆಯುರ್ವೇದ, ಅಲಂಕಾರ, ಛಂದಸ್ಸು ಮುಂತಾದ ಅನೇಕ ವಿಷಯಗಳನ್ನೊಳಗೊಂಡು ವಿಶ್ವಕೋಶದಂತಿದೆ.

ಹಿಂದೂ ಧರ್ಮಗ್ರಂಥಗಳು

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಇತರ ಧರ್ಮಗ್ರಂಥಗಳು
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಬಾಹ್ಯ ಸಂಪರ್ಕಗಳು

  • Rajendralal Mitra, ed. (1876). Agni Purana (Bibliotheca Indica). Ganesh Press.
  • GRETIL etext
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.