ಆಗಮ

ಆಗಮಎಂದರೆ ಪರಂಪರೆಯಿಂದ ಬಂದ ಶಾಸ್ತ್ರ ಎಂದು ಹೇಳಬಹುದು.ವೇದ,ಉಪನಿಷತ್ತು ಮುಂತಾದ ಗ್ರಂಥಗಳಲ್ಲಿ ಹೇಳಲ್ಪಟ್ಟ ಆಧ್ಯಾತ್ಮಿಕ ಮತ್ತು ಧಾರ್ಮಿಕವಾದ ತತ್ವಗಳನ್ನು ಪರಿಶೀಲಿಸಲು ನೆರವಾಗುವ ಶಾಸ್ತ್ರಗ್ರಂಥಗಳೇ ಆಗಮಗಳು.ಇವುಗಳು ಜನರ ಉಪಸನಾ ಸೌಕರ್ಯಕ್ಕಾಗಿ ದೇವರಿಗೆ ಗುಣಕಲ್ಪನೆ,ವಿವಿಧ ಸ್ವರೂಪಗಳ ಕಲ್ಪನೆಗಳನ್ನು ಮಾಡಿ ದೇವಾಲಯಗಳ ನಿರ್ಮಾಣ,ಸ್ವರೂಪ,ದೇವತಾವಿಗ್ರಹಗಳ ಪ್ರತಿಷ್ಠಾಪನೆ,ಅರ್ಚನೆ,ಉತ್ಸವ,ಸಾಮಾಜಿಕ ನೀತಿನಿಯಮಗಳು ಎಂಬ ಅನೇಕ ವಿಧದ ಕರ್ಮಗಳು,ಆಚಾರ ವಿಧಾನಗಳನ್ನು ತಿಳಿಸುತ್ತವೆ. ಆಗಮಗ್ರಂಥಗಳು ಹಲವಿದ್ದು ಮುಖ್ಯವಾಗಿ ಶೈವ, ವೈಷ್ಣವ ಮತ್ತು ಶಾಕ್ತ ಎಂಬ ಮೂರು ವಿಭಾಗಳಾಗಿ ವಿಂಗಡಿಸಲ್ಪಟ್ಟಿವೆ. ಶಾಕ್ತ ಆಗಮಗಳು= ೬೭ (ಅಂದಾಜು)
ಶೈವಾಗಮ =೨೮
ವೈಷ್ಣವ ಆಗಮಗಳು = ೭೮
ಪಂಚಾರಾತ್ರ ಆಗಮಗಳು= ೧೦೮
ಅಲ್ಲದೆ ಸೌರ ಆಗಮ ಮತ್ತು ಗಾಣಪತ್ಯ ಆಗಮಗಳೂ ಇವೆ.

ಶೈವಾಗಮಗಳು ಶಿವನ ೫ನೆ (ಈಶಾನ) ಮುಖದಿಂದ ಉದ್ಭವವಾದವು ಅನ್ನೋ ನಂಬಿಕೆ ಇದೆ. (ಇಳಿದ ೪ ಮುಖಗಳಿಂದ ನಾಲ್ಕು ವೇದಗಳು).

ಹಿಂದೂ ಧರ್ಮಗ್ರಂಥಗಳು

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಇತರ ಧರ್ಮಗ್ರಂಥಗಳು
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.