ತೈತ್ತಿರೀಯೋಪನಿಷತ್

ತೈತ್ತಿರೀಯೋಪನಿಷತ್ಇದು ಕೃಷ್ಣ ಯಜುರ್ವೇದತೈತ್ತಿರೀಯ ಆರಣ್ಯಕಕ್ಕೆ ಸೇರಿದೆ.ಇದರಲ್ಲಿ ಶಿಕ್ಷಾ ವಲ್ಲಿ,ಬ್ರಹ್ಮಾನಂದ ವಲ್ಲಿ,ಭೃಗುವಲ್ಲಿ ಎಂಬ ಮೂರು ಅಧ್ಯಾಯಗಳಿವೆ.ಬ್ರಹ್ಮ ಎಂದರೇನು ಎಂಬ ಪ್ರಶ್ನೆಗೆ ನಿರ್ದಿಷ್ಟವಾದ ಉತ್ತರವನ್ನು ಕಂಡುಕೊಳ್ಳುವುದು ಈ ಉಪನಿಷತ್ತಿನ ಹಿರಿಮೆಯಾಗಿದೆ.ಮಾನವನು ಜೀವ ಜಗತ್ತು,ಆತ್ಮ ಇವುಗಳ ಬಗ್ಗೆ,ಇವುಗಳ ನಡುವಿನ ಸಂಬಂಧದ ಬಗ್ಗೆ ಇಂದು ಕೂಡಾ ಸಂಶೋಧನೆಗಳನ್ನು ನಡೆಸುತ್ತಿದ್ದಾನೆ.ಪರತತ್ವವೇ ಬ್ರಹ್ಮ ಎಂದು ಹೇಳಿ ಬ್ರಹ್ಮದಿಂದ ಜೀವ ಜಗತ್ತು,ಅನ್ನ,ಅಂತಃಕರಣ,ಜ್ಞಾನ ಇವುಗಳಲ್ಲಾ ಹುಟ್ಟಿ ಎಲ್ಲವೂ ಬ್ರಹ್ಮ ಎಂದು ಈ ಉಪನಿಷತ್ತು ಘೋಷಿಸುತ್ತದೆ.ಬ್ರಹ್ಮವೇ ಆನಂದ,ಆನಂದವೇ ಬ್ರಹ್ಮ ಎಂಬ ಸಿದ್ಧಾಂತವನ್ನು ಸ್ಪಷ್ಟೀಕರಿಸಿದ ವಿವರಣೆಗಳನ್ನು ಕೂಡಾ ಇದರಲ್ಲಿ ಕಾಣ ಬಹುದಾಗಿದೆ.

ಹಿಂದೂ ಧರ್ಮಗ್ರಂಥಗಳು

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಇತರ ಧರ್ಮಗ್ರಂಥಗಳು
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಈ ಉಪನಿಷತ್ತಿನಲ್ಲಿ ಕಂಡು ಬರುವ ಇನ್ನೊಂದು ಮುಖ್ಯ ಅಂಶವೆಂದರೆ ಶಿಕ್ಷಣ ಮುಗಿಸಿ ಮನೆಗೆ ಮರಳುವ ಸ್ನಾತಕನಿಗೆ ನೀಡುವ ಜೀವನೋಪದೇಶವಾಗಿದೆ.ಇದರ ಮೊದಲನೆಯ ಅನುವಾಕ ಈ ರೀತಿ ಇದೆ.

ಹರಿ ಓಮ್|| ಶಂ ನೋ ಮಿತ್ರಃ ಶಂ ವರುಣಃ|ಶಂ ನೋ ಭವತ್ವರ್ಯಮಾ|ಶಂ ನ ಇಂದ್ರೋ ಬೃಹಸ್ಪತಿಃ|ಶಂ ನೋ ವಿಷ್ಣುರುರುಕ್ರಮಃ|ನಮೋ ಬ್ರಹ್ಮಣೇ|ನಮಸ್ತೇ ವಾಯೋ|ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ|ತ್ವಾಮೇವ ಪ್ರತ್ಯಕ್ಷಂ ಬ್ರಹ್ಮ ವದಿಷ್ಯಾಮಿ|ಋತಂ ವದಿಷ್ಯಾಮಿ|ಸತ್ಯಂ ವದಿಷ್ಯಾಮಿ|ತನ್ಮಾಮವತು|ತದ್ವಕ್ತಾರಮವತು|ಅವತು ಮಾಮ್| ಅವತು ವಕ್ತಾರಮ್||ಓಂ ಶಾಂತಿಃ ಶಾಂತಿಃ ಶಾಂತಿಃ||

ಮಿತ್ರನು ನಮಗೆ ಸುಖವನ್ನುಂಟುಮಾಡಲಿ.ವರುಣನು ನಮಗೆ ಸುಖವನ್ನುಂಟುಮಾಡಲಿ.ಆರ್ಯಮನು ನಮಗೆ ಸುಖವನ್ನುಂಟುಮಾಡಲಿ.ಉರುಕ್ರಮನಾದ ವಿಷ್ಣುವು ನಮಗೆ ಸುಖವನ್ನುಂಟುಮಾಡಲಿ.(ಪರೋಕ್ಷರೂಪನಾದ)ವಾಯುವಿಗೆ ನಮಸ್ಕಾರ! ಹೇ ವಾಯುವೆ,(ಪ್ರತ್ಯಕ್ಷನಾದ)ನಿನಗೆ ನಮಸ್ಕಾರ!ನೀನೆ ಪ್ರತ್ಯಕ್ಷ ಬ್ರಹ್ಮವಾಗಿರುತ್ತೀಯೆ.ನಿನ್ನನ್ನೇ ಪ್ರತ್ಯಕ್ಷ ಬ್ರಹ್ಮವೆಂದು ಹೇಳುತ್ತೇನೆ.(ನಿನ್ನನ್ನೇ)ಋತವೆಂದು ಹೇಳುತ್ತೇನೆ.(ನಿನ್ನನ್ನೇ)ಸತ್ಯವೆಂದು ಹೇಳುತ್ತೇನೆ.ಅದು ನನ್ನನ್ನು ಕಾಪಾಡಲಿ!ಅದು ಆಚಾರ್ಯನನ್ನು ಕಾಪಾಡಲಿ!ನನ್ನನ್ನು ಕಾಪಾಡಲಿ.ಆಚಾರ್ಯನನ್ನು ಕಾಪಾಡಲಿ! ಓಂ ಶಾಂತಿಃ ಶಾಂತಿಃ ಶಾಂತಿಃ.,[1]

ಇದಲ್ಲದೆ ಸನಾತನ ಭಾರತೀಯ ಸಂಸ್ಕೃತಿಯ ಗರಿಮೆಯನ್ನು ಸಾರುವ ಹಲವು ಮಹಾವಾಕ್ಯಗಳು ಈ ಉಪನಿಷತ್ತಿನಲ್ಲಿ ಇವೆ. ಅವುಗಳ ಪೈಕಿ ಕೆಲವು :

  • ಮಾತೃ ದೇವೋ ಭವ , ಪಿತೃ ದೇವೋ ಭವ, ಆಚಾರ್ಯ ದೇವೋ ಭವ, ಅತಿಥಿ ದೇವೋ ಭವ.
  • ಕೊಡುವುದನ್ನು ಶ್ರದ್ಧೆಯಿಂದ ಕೊಡು, ಅಶ್ರದ್ಧೆಯಿಂದ ಎಂದೂ ಕೊಡಬೇಡ
  • ಪ್ರತಿಷ್ಠೆಯನ್ನು ಉಪಾಸಿಸುವವನು ಪ್ರತಿಷ್ಠಾವಂತನಾಗುವನು. ಮಹತ್ತನ್ನು ಉಪಾಸಿಸುವವನು ಮಹಾನ್ ವ್ಯಕ್ತಿಯಾಗುವನು. ಮನಸ್ಸನ್ನು ಉಪಾಸಿಸುವವನು ಮಾನವನಾಗುವನು.

ಆಧಾರ

೧.ಈಶಾವಾಸ್ಯೋಪನಿಷತ್:ಸ್ವಾಮೀ ಆದಿದೇವಾನಂದ

೨.ಹಿಂದೂ ಧರ್ಮದ ಪರಿಚಯ:ಎ.ಕೆ.ಶಂಕರನಾರಾಯಣ ಭಟ್

ಬಾಹ್ಯ ಸಂಪರ್ಕಗಳು

  1. ತೈತ್ತಿರೀಯೋಪನಿಷತ್:ಸ್ವಾಮೀ ಆದಿದೇವಾನಂದ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.