ಬಿಪಿನ್ ಚಂದ್ರ ಪಾಲ್

ಬಿಪಿನ್ ಚಂದ್ರ ಪಾಲ್ (ಜನನ-ನವೆಂಬರ್ ೭, ೧೮೫೮) ಈಗಿನ ಬಾಂಗ್ಲಾದೇಶದ ಸಿಲ್ಹೆಟ್ ನ ಶ್ರೀಮಂತ ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ರಾಮ ಚಂದ್ರ ಪಾಲ್. ಇವರು ಉತ್ತಮ ಶಿಕ್ಷಕ, ಪತ್ರಕರ್ತ, ವಾಗ್ಮಿ, ಬರಹಗಾರ ಮತ್ತು ಗ್ರಂಥ ಪಾಲಕರಾಗಿದ್ದರು. ಇವರು ಪ್ರಾರಂಭ ಮಾಡಿದ ಪತ್ರಿಕೆ - ವ೦ದೇ ಮಾತರಂ.

ಬಿಪಿನ್ ಚಂದ್ರ ಪಾಲ್
ಜನನನವಂಬರ್ ೭,೧೮೫೮
ಹಬಿಗನಿ, ಸಿಲ್ಹೇಟ್,ಅಸ್ಸಾಂ
ನಿಧನಮೇ ೨೦. ೧೯೩೨
OrganizationIndian National Congress, ಬ್ರಹ್ಮ ಸಮಾಜ
Movementಭಾರತದ ಸ್ವಾತಂತ್ರ್ಯ ಚಳವಳಿ
Signature

ಇಪ್ಪತ್ತನೇ ಶತಮಾನದ ಪೂರ್ವಾರ್ದದಲ್ಲಿ ಅತ್ಯಂತ ದೇಶಪ್ರೇಮದಿಂದ ಹೋರಾಡಿ ಪ್ರಾಣತೆತ್ತ ಕೆಲವೇ ಉನ್ನತ ರಾಷ್ಟ್ರವಾದಿ ಕಾಂಗ್ರೆಸ್ ನಾಯಕತ್ರಯರಲ್ಲೊಬ್ಬರು. ಇನ್ನಿಬ್ಬರು ಸಹಚರರೆಂದರೆ ಬಾಲಗಂಗಾಧರ ತಿಲಕ ಮತ್ತು ಲಾಲಾ ಲಜಪತ ರಾಯ್ ಜನ ಈ ಮೂವರನ್ನು ಲಾಲ್-ಬಾಲ್-ಪಾಲ್ ಎಂದೇ ಕರೆಯುತ್ತಿದ್ದರು.



This article is issued from Wikipedia. The text is licensed under Creative Commons - Attribution - Sharealike. Additional terms may apply for the media files.