ಪೆರಗ್ವೆ

ಪೆರಗ್ವೆ, (ಅಧಿಕೃ‍ತವಾಗಿ ಪರಾಗ್ವೆ ಗಣರಾಜ್ಯ),ದಕ್ಷಿಣ ಅಮೆರಿಕದ ಸರಿಸುಮಾರು ಮಧ್ಯಭಾಗದಲ್ಲಿರುವ ಒಂದು ರಾಷ್ಟ್ರ. ಪೆರಗ್ವೆ ನದಿಯ ಎರಡೂ ದಂಡೆಗಳ ಮೇಲಿರುವ ಇದು ದಕ್ಷಿಣ ಮತ್ತು ನೈರುತ್ಯಗಳಲ್ಲಿ ಅರ್ಜೆಂಟೀನವನ್ನು, ಈಶಾನ್ಯದಲ್ಲಿ ಬ್ರೆಜಿಲ್ ದೇಶವನ್ನು ಮತ್ತು ವಾಯವ್ಯದಲ್ಲಿ ಬೊಲಿವಿಯ ದೇಶಗಳನ್ನು ಹೊಂದಿ ದಕ್ಷಿಣ ಅಮೆರಿಕ ಖಂಡದ ಹೃದಯ ಭಾಗದಲ್ಲಿದೆ. ಗ್ವರಾನಿ ಭಾಷೆಯಲ್ಲಿ ಇದರ ಅರ್ಥ "ದೊಡ್ಡ ನದಿಯಿಂದ" ಎಂದು. ಪರಾನ ನದಿಯೇ ಈ ದೊಡ್ಡ ನದಿ.

República del Paraguay
Tetã Paraguái

ಪೆರಗ್ವೆ ಗಣರಾಜ್ಯ
ಧ್ವಜ ಲಾಂಛನ
ಧ್ಯೇಯ: ಸ್ಪಾನಿಷ್: Paz y justicia
("ಶಾಂತಿ ಮತ್ತು ನ್ಯಾಯ")
ರಾಷ್ಟ್ರಗೀತೆ: "ಪರಾಗ್ವೆಯೋಸ್ ರಿಪಬ್ಲಿಕ ಒ ಮ್ಯುರ್ಟೆ"

Location of ಪೆರಗ್ವೆ

ರಾಜಧಾನಿ ಅಸೂನ್‌ಸಿಯಾನ್
25°16′S 57°40′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಸ್ಪಾನಿಷ್, ಗ್ವರಾನಿ
ಸರಕಾರ ಸಾಂವಿಧಾನಿಕ ಗಣರಾಜ್ಯ
 - ರಾಷ್ಟ್ರಪತಿ ನಿಕಾನೊರ್ ಡ್ವಾರ್ಟೆ ಫ್ರುಟೊಸ್
 - ಉಪರಾಷ್ಟ್ರಪತಿ ಲುಯಿಸ್ ಕ್ಯಾಸ್ಟಿಗ್ಲಿಯೋನಿ ಯೊರಿಯ
ಸ್ವಾತಂತ್ರ್ಯ ಸ್ಪೇನ್ ಇಂದ 
 - ಘೋಷಿತಮೇ ೧೪, ೧೮೧೧ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ406,752 ಚದರ ಕಿಮಿ ;  (59th)
 157,047 ಚದರ ಮೈಲಿ 
 - ನೀರು (%)2.3%
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು6,158,000 (101st)
 - ಸಾಂದ್ರತೆ ೧೫ /ಚದರ ಕಿಮಿ ;  (192nd)
೩೯ /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು$28.342 billion (96th)
 - ತಲಾ$4,555 (107th)
ಮಾನವ ಅಭಿವೃದ್ಧಿ
ಸೂಚಿಕ
(2003)
0.755 (88th)  ಮಧ್ಯಮ
ಕರೆನ್ಸಿ ಗ್ವರಾನಿ (PYG)
ಸಮಯ ವಲಯ (UTC-4)
 - ಬೇಸಿಗೆ (DST) (UTC-3)
ಅಂತರ್ಜಾಲ TLD .py
ದೂರವಾಣಿ ಕೋಡ್ +595

ಇತಿಹಾಸ

೧೬ನೇ ಶತಮಾನದಲ್ಲಿ ಬಂದಿಳಿದ ಮೊದಲ ಯೂರೋಪಿಯನ್ನರು ಆಗಸ್ಟ್ ೧೫, ೧೫೩೭ರಂದು ಅಸೂನ್‌ಸಿಯಾನ್ ನಗರವನ್ನು ಹುಟ್ಟುಹಾಕಿದರು. ನಂತರ ಇದು ಅಮೆರಿಕದ ಸ್ಪಾನಿಷ್ ವಸಾಹತುಗಳ ಕೇಂದ್ರವಾಯಿತು. ಪ್ರಾಂತೀಯ ಸ್ಪಾನಿಷ್ ನಾಯಕರನ್ನು ಸೋಲಿಸಿ ಮೇ ೧೪, ೧೮೧೧ರಂದು ಸ್ವಾತಂತ್ಯ ಘೋಷಿಸಿಕೊಂಡರು.

ರಾಜಕಾರಣ

ಪೆರಗ್ವೆ ಅಧ್ಯಕ್ಷೀಯ ಮಾದರಿಯ ಗಣರಾಜ್ಯ ಪ್ರಜಾಪ್ರಭುತ್ವ. ದೇಶದಲ್ಲಿ ಬಹುಪಕ್ಷೀಯ ವ್ಯವಸ್ಥೆಯಿದೆ. ಕಾರ್ಯಾಂಗದ ಅಧಿಕಾರವನ್ನು ಸರಕಾರ, ಶಾಸಕಾಂಗದ ಅಧಿಕಾರವನ್ನು ಸರಕಾರ ಮತ್ತು ರಾಷ್ಟ್ರೀಯ ಸಂಸತ್ತು ನಿರ್ವಹಿಸುತ್ತವೆ. ನ್ಯಾಯಾಂಗವು ಇವೆರಡಕ್ಕಿಂತ ಪ್ರತ್ಯೇಕವಾಗಿದ್ದು, ಸ್ವತಂತ್ರವಾಗಿದೆ.

ಭೂಗೋಳ

ಪೆರಗ್ವೆ ದೇಶದ ನಕ್ಷೆ

ದೇಶದ ಆಗ್ನೇಯ ಗಡಿಯಲ್ಲಿ ಪರಾನ ನದಿಯಿದ್ದು ಇದರ ಮೇಲೆ ಕಟ್ಟಿರುವ ಇಟೈಪು ಅಣೆಕಟ್ಟು ಬ್ರೆಜಿಲ್ ಜೊತೆಗಿನ ಗಡಿಯಲ್ಲಿದೆ. ಇದು ಪ್ರಪಂಚದ ಅತಿ ದೊಡ್ಡ ಜಲವಿದ್ಯುತ್ ಸ್ಥಾವರವಾಗಿದೆ.

ಅರ್ಥವ್ಯವಸ್ಥೆ

ಪೆರಗ್ವೆ ದೇಶ ಮಾರುಕಟ್ಟೆ ಆಧರಿತ ಅರ್ಥವ್ಯವಸ್ಥೆಯಾಗಿದ್ದು ಹೆಚ್ಚಿನ ಜನರು ಕೃಷಿ ಆಧರಿತ ಜೀವನ ನಡೆಸುತ್ತಾರೆ. ಇನ್ನೊಂದು ಪ್ರಧಾನ ಉದ್ಯಮವೆಂದರೆ ಹೊರದೇಶಗಳಿಂದ ಆಮದು ಮಾಡಿಕೊಂಡ ಸಾಮಾನುಗಳನ್ನು ದಕ್ಷಿಣ ಅಮೇರಿಕದ ಇತರ ದೇಶಗಳಿಗೆ ರಫ್ತು ಮಾಡುವುದು. ಪೆರಗ್ವೆಯ ಅರ್ಥವ್ಯವಸ್ಥೆ ಬ್ರೆಜಿಲ್ ದೇಶದ ಮೇಲೆ ಆಧರಿತವಾಗಿದೆ. ಇದಕ್ಕೆ ಕಾರಣ ಈ ದೇಶದ ಮೂಲಕ ಹಾದು ಹೋಗುವ ಕಾಲುವೆಯು ಪೆರಗ್ವೆ ದೇಶವನ್ನು ಬ್ರೆಜಿಲ್ ಕರಾವಳಿಯ ಬಂದರಿಗೆ ಸಂಪರ್ಕ ಮಾಡುತ್ತದೆ.

ಜನತೆ ಮತ್ತು ಜನಾಂಗ

ದೇಶದ ರಾಜಧಾನಿ ಅಸೂನ್‌ಸಿಯಾನ್

ದೇಶದ ಶೇ. ೯೫ರಷ್ಟು ಜನ ಸ್ಪಾನಿಷ್ ಮತ್ತು ಮೂಲಜನರ ಮಿಶ್ರತಳಿ. ಮೂಲ ಗ್ವರಾನಿ ಭಾಷೆಯನ್ನು ಶೇ. ೯೪ರಷ್ಟು ಜನ ಮಾತನಾಡುತ್ತಾರೆ. ಶೇ. ೭೫ರಷ್ಟು ಜನ ಸ್ಪಾನಿಷ್ ಭಾಷೆಯನ್ನು ಮಾತನಾಡಬಲ್ಲರು. ಇವೆರಡೂ ಅಧಿಕೃತ ಭಾಷೆಗಳು.

ದೇಶದಲ್ಲಿ ಕ್ಯಾಥೊಲಿಕ್ ಧರ್ಮದ ಬಹುಮತವಿದೆ.

ಸಂಸ್ಕೃತಿ

  • ಪೆರಗ್ವೆ ದೇಶದ ಜನರು ಕಸೂತಿ ಕಲೆ ("ಅಹೊ ಪೊಯ್") ಮತ್ತು ಲೇಸ್ ಹೊಲಿಯುವಿಕೆ ("ನಂದೂತಿ")ಗಳಿಗೆ ಹೆಸರುವಾಸಿಯಾಗಿದ್ದಾರೆ.
  • ೧೯೫೦ ಮತ್ತು ೧೯೬೦ರ ದಶಕಗಳಲ್ಲಿ ಪ್ರಖ್ಯಾತ ಕಾದಂಬರಿಕಾರರು ಮತ್ತು ಕವಿಗಳ ಉಗಮವಾಯಿತು. ಇವುಗಳಲ್ಲಿ ಪ್ರಮುಖರು ಯೋಸೆ ರಿಕಾರ್ಡೊ ಮಾತ್ಸೊ, ರೋಕೆ ವಾಲೆಯೋಸ್, ಮತ್ತು ಆಗಸ್ಟೊ ರೋವಾ ಬಾಸ್ಟೊಸ್.
  • ಸಾಮಾಜಿಕವಾಗಿ ಇಲ್ಲಿ ಅವಿಭಕ್ತ ಕುಟುಂಬಗಳಿರುತ್ತವೆ - ಪೋಷಕರು, ಮಕ್ಕಳು, ರಕ್ತ ಸಂಬಂಧಿಗಳು ಹೀಗೆ ಎಲ್ಲರೂ ಒಂದೇ ಮನೆಯಲ್ಲಿರುತ್ತಾರೆ.

ಇವನ್ನೂ ನೋಡಿ

ಹೊರಗಿನ ಸಂಪರ್ಕಗಳು


ದಕ್ಷಿಣ ಅಮೇರಿಕ ಖಂಡದ ದೇಶಗಳು
ಅರ್ಜೆಂಟೀನ | ಬೊಲಿವಿಯ | ಬ್ರೆಜಿಲ್ | ಚಿಲಿ | ಕೊಲೊಂಬಿಯ | ಎಕ್ವಡಾರ್ | ಗಯಾನ | ಪೆರಗ್ವೆ | ಪೆರು | ಸುರಿನಾಮ್ | ಉರುಗ್ವೆ | ವೆನೆಜುವೆಲಾ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.