ಸುರಿನಾಮ್
ಸುರಿನಾಮ್, ದಕ್ಷಿಣ ಅಮೇರಿಕ ಖಂಡದ ಉತ್ತರ ಭಾಗದಲ್ಲಿನ ಒಂದು ದೇಶ. ಮೊದಲು ಡಚ್ ಗಯಾನ ಎಂದು ಕರೆಯಲ್ಪಡುತ್ತಿದ್ದ ಈ ದೇಶದ ಪೂರ್ವಕ್ಕೆ ಫ್ರೆಂಚ್ ಗಯಾನ ಮತ್ತು ಪಶ್ಚಿಮಕ್ಕೆ ಗಯಾನ ದೇಶಗಳಿವೆ. ವಿಸ್ತಾರ ಮತ್ತು ಜನಸಂಖ್ಯೆಯ ಲೆಕ್ಕದಲ್ಲಿ ದಕ್ಷಿಣ ಅಮೇರಿಕದ ಅತೀ ಚಿಕ್ಕ ದೇಶ ಇದು. ಸುರಿನಾಮ್ ನ ವಿಸ್ತೀರ್ಣ ೧,೬೩,೮೨೦ ಚ.ಕಿ.ಮೀ. ಜನಸಂಖ್ಯೆ ಸುಮಾರು ೫ ಲಕ್ಷ. ರಾಷ್ಟ್ರದ ರಾಜಧಾನಿ ಪರಮಾರಿಬೋ. ಕ್ರಿ.ಶ. ೧೫ನೆಯ ಶತಮಾನದ ನಂತರ ಸುರಿನಾಮ್ ಪ್ರದೇಶದ ಮೇಲೆ ಸ್ಪೆಯ್ನ್ , ಇಂಗ್ಲೆಂಡ್ ಹಾಗೂ ನೆದರ್ಲಂಡ್ಸ್ ದೇಶಗಳು ಸ್ವಾಮ್ಯ ಸಾಧಿಸಲು ಪ್ರಯತ್ನಿಸಿದುವು. ಕೊನೆಗೆ ಸುರಿನಾಮ್ ಡಚ್ಚರ ವಸಾಹತಾಯಿತು. ಮಾಮೂಲಿನಂತೆ ಡಚ್ಚರು ಗುಲಾಮಗಿರಿ ವ್ಯವಸ್ಥೆಯನ್ನು ಜಾರಿಯಲ್ಲಿಟ್ಟರು. ಈ ಗುಲಾಮರು ಬಹುತೇಕ ಆಫ್ರಿಕಾ ಮೂಲದವರಾಗಿದ್ದರು. ೧೮೬೩ ರಲ್ಲಿ ಗುಲಾಮಗಿರಿ ವ್ಯವಸ್ಥೆ ರದ್ದಾದ ಬಳಿಕ ಡಚ್ಚರು ಸುರಿನಾಮ್ ನ ಗದ್ದೆ ಹಾಗೂ ತೋಟಗಳಲ್ಲಿ ದುಡಿಯಲು ಇಂಡೋನೇಷ್ಯಾ ಮತ್ತು ಭಾರತದಿಂದ ಕೆಲಸದಾಳುಗಳನ್ನು ಸಾಗಿಸಿದರು. ೧೯೫೩ರಲ್ಲಿ ಸುರಿನಾಮ್ ಜನತೆ ಸ್ವಲ್ಪಮಟ್ಟಿನ ಸ್ವಯಮಾಡಳಿತದ ಅಧಿಕಾರವನ್ನು ಪಡೆದುಕೊಂಡರು. ನಂತರ ನವೆಂಬರ್ ೨೫ ೧೯೭೫ ರಂದು ಸುರಿನಾಮ್ ಪೂರ್ಣವಾಗಿ ಸ್ವತಂತ್ರವಾಯಿತು. ಭಾರತೀಯ ಮೂಲದ ಜನರು ದೇಶದ ಒಟ್ಟು ಜನಸಂಖ್ಯೆಯ ೩೭% ರಷ್ಟಿದ್ದಾರೆ. ಇವರಲ್ಲದೆ ಕ್ರಿಯೋಲ್ ಎಂದು ಕರೆಯಲ್ಪಡುವ ಮಿಶ್ರಜನಾಂಗೀಯ ಜನರು ೩೧% ರಷ್ಟಿದ್ದಾರೆ. ಇವರಲ್ಲದೆ ಸುಮಾರು ೧೫% ದಷ್ಟು ಜಾವಾ ಮೂಲದ ಜನರು ಹಾಗೂ ಕೊಂಚ ಅಮೆರಿಂಡಿಯನ್ನರು ಮತ್ತು ಡಚ್ ಮೂಲದವರು ಸಹ ಇಲ್ಲಿ ನೆಲೆಸಿದ್ದಾರೆ. ಸುರಿನಾಮ್ ನ ಅಧಿಕೃತ ಭಾಷೆ ಡಚ್. ಇದಲ್ಲದೆ ಸ್ರನಮ್ ಟೋಂಗೋ ಎಂಬ ಮಿಶ್ರಭಾಷೆಯು ಸಹ ವ್ಯಾಪಕವಾಗಿ ನುಡಿಯಲ್ಪಡುತ್ತಿದೆ. ಹಿಂದುಸ್ತಾನಿ ಎನ್ನಲ್ಪಡುವ ಹಿಂದಿ ಭಾಷೆಯ ಉಪಭಾಷೆಯೂ ಹೆಚ್ಚಾಗಿ ಬಳಕೆಯಲ್ಲಿದೆ. ಭೂಮಧ್ಯರೇಖೆಯ ಬಳಿಯಿರುವ ಸುರಿನಾಮ್ ದೇಶದ ೮೦% ಭಾಗವು ಉಷ್ಣವಲಯದ ಮಳೆಕಾಡು ಹಾಗೂ ಸವಾನ್ನಾ ಹುಲ್ಲುಗಾವಲುಗಳಿಂದ ಕೂಡಿದೆ. ಉತ್ತರದ ಅಟ್ಲಾಂಟಿಕ್ ಸಾಗರತೀರದ ಪ್ರದೇಶವು ಬಹುಪಾಲು ಕೃಷಿಭೂಮಿಯಾಗಿದ್ದು ನಾಡಿನ ಬಹುವಾಸಿ ಜನರು ಇಲ್ಲಿಯೇ ನೆಲೆಯಾಗಿದ್ದಾರೆ. ಸುರಿನಾಮ್ ಒಂದು ಹಿಂದುಳಿದ ದೇಶವಾಗಿದೆ. ಬಾಕ್ಸೈಟ್ ಉದ್ಯಮ ದೇಶದ ಆರ್ಥಿಕವ್ಯವಸ್ಥೆಯ ಆಧಾರ. ಬತ್ತ ಹಾಗೂ ಬಾಳೆ ಇಲ್ಲಿಯ ಪ್ರಮುಖ ಬೆಳೆಗಳು.
ಧ್ಯೇಯ: Justitia - Pietas - Fides (ಲ್ಯಾಟಿನ್ನಲ್ಲಿ: "ನ್ಯಾಯ - ಧಾರ್ಮಿಕತೆ - ನಿಷ್ಠೆ") | |
ರಾಷ್ಟ್ರಗೀತೆ: Opo kondreman | |
![]() Location of ಸುರಿನಾಮ್ | |
ರಾಜಧಾನಿ | ಪರಮರಿಬೊ |
ಅತ್ಯಂತ ದೊಡ್ಡ ನಗರ | ಪರಮರಿಬೊ |
ಅಧಿಕೃತ ಭಾಷೆ(ಗಳು) | ಡಚ್ |
ಸರಕಾರ | ಸಾಂವಿಧಾನಿಕ ಪ್ರಜಾತಂತ್ರ |
- ರಾಷ್ಟ್ರಪತಿ | ರೊನಾಲ್ಡ್ ವೆನೆಶಿಆನ್ |
ಸ್ವಾತಂತ್ರ್ಯ | ನೆದರ್‍ಲ್ಯಾಂಡ್ನಿಂದ |
- ದಿನಾಂಕ | ನವೆಂಬರ್ ೨೫, ೧೯೭೫ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 163,820 ಚದರ ಕಿಮಿ ; (91st) |
63,251 ಚದರ ಮೈಲಿ | |
- ನೀರು (%) | 1.1 |
ಜನಸಂಖ್ಯೆ | |
- ಜುಲೈ ೨೦೦೫ರ ಅಂದಾಜು | 449,888 (170th) |
- ೨೦೦೪ರ ಜನಗಣತಿ | 487,024 |
- ಸಾಂದ್ರತೆ | 2.7 /ಚದರ ಕಿಮಿ ; (223rd) 7.0 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $2.898 billion (161st) |
- ತಲಾ | $5,683 (99th) |
ಮಾನವ ಅಭಿವೃದ್ಧಿ ಸೂಚಿಕ (2003) |
0.759 (89th) – medium |
ಕರೆನ್ಸಿ | ಸುರಿನಾಮ್ ಡಾಲರ್ (SRD ) |
ಸಮಯ ವಲಯ | ART (UTC-3) |
- ಬೇಸಿಗೆ (DST) | ಉಪಯೋಗದಲ್ಲಿಲ್ಲ (UTC-3) |
ಅಂತರ್ಜಾಲ TLD | .sr |
ದೂರವಾಣಿ ಕೋಡ್ | +597 |