ನೇಪಾಳ

ನೇಪಾಳವು ದಕ್ಷಿಣ ಏಷ್ಯಾದ ಒಂದು ರಾಷ್ಟ್ರ. ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳವು ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿದೆ. ನೇಪಾಳದ ಉತ್ತರಕ್ಕೆ ಟಿಬೆಟ್ ಮತ್ತು ಇತರ ಎಲ್ಲಾ ದಿಕ್ಕುಗಳಲ್ಲಿಯೂ ಭಾರತವಿದೆ. ಎವರೆಸ್ಟ್ ಸೇರಿದಂತೆ ವಿಶ್ವದ ಅತಿ ಉನ್ನತ ೧೦ ಪರ್ವತ ಶಿಖರಗಳ ಪೈಕಿ ೮ ನೇಪಾಳದಲ್ಲಿಯೇ ಇವೆ. ನೇಪಾಳದ ವಿಸ್ತೀರ್ಣ ೧೪೧,೭೦೦ ಚ.ಕಿ.ಮೀ. ಜನಸಂಖ್ಯೆ ಸುಮಾರು ೨.೭ ಕೋಟಿ. ರಾಷ್ಟ್ರದ ರಾಜಧಾನಿ ಕಾಠ್ಮಂಡು.

नेपाल अधिराज्य
ನೇಪಾಲ್ ಅಧಿರಾಜ್ಯ್

ನೇಪಾಳ ರಾಜ್ಯ
ಧ್ವಜ ಚಿಹ್ನೆ
ಧ್ಯೇಯ: (ಸಂಸ್ಕೃತ) जननी जन्मभूमिष्च स्वर्गादपि गरीयसी
ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಮೇಲು
ರಾಷ್ಟ್ರಗೀತೆ: ರಾಷ್ಟ್ರೀಯ ಗಾನ್

Location of ನೇಪಾಳ

ರಾಜಧಾನಿ ಕಠ್ಮಂಡು
27°42′N 85°19′E
ಅತ್ಯಂತ ದೊಡ್ಡ ನಗರ ಕಠ್ಮಂಡು
ಅಧಿಕೃತ ಭಾಷೆ(ಗಳು) ನೇಪಾಳಿ ಭಾಷೆ
ಸರಕಾರ ಹಂಗಾಮಿ ಸರ್ಕಾರ
 - ಮಹಾರಾಜ ಗ್ಯಾನೇಂದ್ರ ಬೀರ್ ಬಿಕ್ರಂ ಶಾ ದೇವ್
 - ಪ್ರಧಾನ ಮಂತ್ರಿ ಗಿರಿಜಾ ಪ್ರಸಾದ್ ಕೊಯ್ರಾಲ
ಏಕೀಕರಣ ಡಿಸೆಂಬರ್ ೨೧, ೧೭೬೮ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ೧೪೭,೧೮೧ ಚದರ ಕಿಮಿ ;  (೯೩ನೇ)
 ೫೬,೮೨೭ ಚದರ ಮೈಲಿ 
 - ನೀರು (%)೨.೮
ಜನಸಂಖ್ಯೆ  
 - ೨೦೦೫ರ ಅಂದಾಜು೨೭,೧೩೩,೦೦೦ (೪೨ನೇ)
 - ೨೦೦೨ರ ಜನಗಣತಿ ೨೩,೧೫೧,೪೨೩
 - ಸಾಂದ್ರತೆ ೧೮೪ /ಚದರ ಕಿಮಿ ;  (೫೬ನೇ)
೪೭೭ /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು$39.14 billion (೮೭ನೇ)
 - ತಲಾ$1,675 (153rd)
ಮಾನವ ಅಭಿವೃದ್ಧಿ
ಸೂಚಿಕ
(೨೦೦೩)
0.526 (136th)  ಮಧ್ಯಮ
ಕರೆನ್ಸಿ ನೇಪಾಳಿ ರುಪಾಯಿ (NPR)
ಸಮಯ ವಲಯ NPT (UTC+5:45)
 - ಬೇಸಿಗೆ (DST) not observed (UTC+5:45)
ಅಂತರ್ಜಾಲ TLD .np
ದೂರವಾಣಿ ಕೋಡ್ +977

ಇತಿಹಾಸ

ಕ್ರಿ.ಪೂ.೬ ಮತ್ತು ೫ನಯೆ ಶತಮಾನದಲ್ಲಿ ಈ ಪ್ರದೇಶವು ಶಾಕ್ಯ ಆಡಳಿತಕ್ಕೊಳಪಟ್ಟಿತ್ಥು. ಶಾಕ್ಯ ರಾಜಕುಮಾರರಲ್ಲೊಬ್ಬನಾದ ಸಿದ್ಧಾರ್ಥ ಗೌತಮನು ಐಹಿಕ ಪ್ರಾಪಂಚಿಕ ವ್ಯಾಮೋಹಗಳನ್ನು ತೊರೆದು ದಿವ್ಯ ಜ್ಞಾನವನ್ನು ಹೊಂದಿ ಮುಂದೆ ಬುದ್ಧನೆನಿಸಿಕೊಂಡನು. ಸುಮಾರು ಕ್ರಿ.ಪೂ. ೨೫೦ರ ಸಮಯಕ್ಕೆ ಈ ಪ್ರದೇಶವು ಉತ್ತರಭಾರತದ ಮೌರ್ಯ ಸಾಮ್ರಾಜ್ಯದ ಅಂಗವಾಗಿತ್ತು. ತರುವಾಯ ಗುಪ್ತ ಸಾಮ್ರಾಟರು , ಲಿಚ್ಛವಿ ಸಾಮ್ರಾಟರು ಹಾಗೂ ಚಾಲುಕ್ಯರು ಈ ಪ್ರದೇಶದ ಮೇಲೆ ಹತೋಟಿ ಸಾಧಿಸಿದ್ದರು. ನಂತರ ಈ ಪ್ರದೇಶವು ಹಲವು ಸಣ್ಣ ಅರಸೊತ್ತಿಗೆಗಳಾಗಿ ಹಂಚಿಹೋಯಿತು. ೧೭೬೫ರಲ್ಲಿ ಪೃಥ್ವಿನಾರಾಯಣ ಶಹ ಎಂಬ ಗೂರ್ಖಾ ಅರಸನು ನೇಪಾಳವನ್ನು ಒಂದುಗೂಡಿಸಿದನು. ಭಾರತವು ಬ್ರಿಟಿಷ್ ಆಡಳಿತಕ್ಕೆ ಒಳಗಾದಾಗ ನೇಪಾಳವು ತನ್ನ ಸ್ವಾಯತ್ತತೆಯನ್ನು ಉಳಿಸಿಕೊಂಡಿತ್ತು. ಆಂಗ್ಲರೊಡನೆ ನಡೆದ ಒಂದು ಯುದ್ಧದಲ್ಲಿ ನೇಪಾಳವು ಸೋಲನುಭವಿಸಿತಾದರೂ, ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರೊಂದಿಗೆ ಸಂಧಿ ಮಾಡಿಕೊಂಡಿತು. ಇದರ ಪ್ರಕಾರ ನೇಪಾಳವು ಅಂದು ತನ್ನ ಪ್ರದೇಶಗಳಾಗಿದ್ದ ಉತ್ತರಾಖಂಡ , ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ ಭಾಗಗಳನ್ನು ಆಂಗ್ಲರಿಗೆ ಬಿಟ್ಟುಕೊಟ್ಟಿತು. ಅಲ್ಲಿಂದ ಮುಂದೆ ಇತ್ತೀಚಿನವರೆವಿಗೂ ನೇಪಾಳವು ಅರಸೊತ್ತಿಗೆಯಾಗಿಯೇ ಉಳಿದಿತ್ತು. ಈಚಿನ ದಿನಗಳಲ್ಲಿ ಪ್ರಜಾಸತ್ತೆಗಾಗಿ ಹೋರಾಟವು ತೀವ್ರಗೊಂಡು ಬಹುಪಕ್ಷೀಯ ಸಾಂಸದೀಯ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಅರಸರ ಅಧಿಕಾರಗಳನ್ನು ಬಹುಮಟ್ಟಿಗೆ ಮೊಟಕುಗೊಳಿಸಲಾಯಿತು. ೧೯೯೧ರಲ್ಲಿ ಪ್ರಪ್ರಥಮ ಬಹುಪಕ್ಷೀಯ ಹಾಗೂ ಮುಕ್ತ ಚುನಾವಣೆಗಳು ನಡೆದವು.

ಭೌಗೋಳಿಕ ಲಕ್ಷಣ

ನೇಪಾಳವು ಸುಮಾರು ೮೦೦ ಕಿ.ಮೀ. ಉದ್ದ ಹಾಗೂ ೨೦೦ ಕಿ.ಮೀ. ಅಗಲದ ಪಟ್ಟಿಯಂತೆ ಕಾಣುವುದು. ಭೌಗೋಳಿಕವಾಗಿ ದೇಶವನ್ನು ಉನ್ನತ ಪರ್ವತ ಪ್ರದೇಶ, ಬೆಟ್ಟಗುಡ್ಡಗಳ ಪ್ರದೇಶ ಹಾಗೂ ತರಾಯ್ ಪ್ರದೇಶಗಳೆಂದು ವಿಂಗಡಿಸಬಹುದು. ಭಾರತದ ಗಡಿಗೆ ಹೊಂದಿಕೊಂಡಿರುವ ಪ್ರದೇಶವು ಗಂಗಾ ಬಯಲಿನ ಒಂದು ಭಾಗವಾಗಿದೆ. ಈ ಭಾಗಕ್ಕೆ ಕೋಸಿ, ನಾರಾಯಣಿ (ಗಂಡಕಿ) ಮತ್ತು ಕರ್ನಾಲಿ ನದಿಗಳು ನೀರುಣಿಸುತ್ತವೆ. ಬೆಟ್ಟಗುಡ್ಡಗಳ ಪ್ರದೇಶವು ಕಾಠ್ಮಂಡು ಕಣಿವೆಯನ್ನು ಒಳಗೊಂಡಿದೆ. ದೇಶದ ಹೆಚ್ಚಿನ ಜನವಸತಿ ಇಲ್ಲಿಯೇ ಕಂಡುಬರುವುದು. ಈ ಪ್ರದೇಶದಲ್ಲಿ ಮಹಾಭಾರತ ಲೇಖ್ ಮತ್ತು ಶಿವಾಲಿಕ ಪರ್ವತಶ್ರೇಣಿಗಳು ಇವೆ. ಈ ಶ್ರೇಣಿಗಳು ಮಧ್ಯಮ ಮಟ್ಟದವಾಗಿದ್ದು ಸರಾಸರಿ ೧೦೦೦ದಿಂದ ೪೦೦೦ ಮೀ. ವರೆಗೆ ಎತ್ತರವುಳ್ಳವಾಗಿವೆ. ಹಿಮಾಲಯದ ಉನ್ನತ ಪರ್ವತ ಪ್ರದೇಶವು ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಎತ್ತರದ ಪ್ರದೇಶವಾಗಿದೆ. ಎವರೆಸ್ಟ್ , ಕಾಂಚನ್ ಜುಂಗಾ, ಅನ್ನಪೂರ್ಣಾ , ಮಕಾಲು , ಧವಳಗಿರಿ ಸೇರಿದಂತೆ ವಿಶ್ವದ ಹಲವು ಅತ್ಯುನ್ನತ ಶಿಖರಗಳು ಈ ವಿಭಾಗದಲ್ಲಿ ಇವೆ. ಅರಣ್ಯನಾಶ ದೇಶದ ಎಲ್ಲಕಡೆ ಅವಿರತವಾಗಿ ಸಾಗಿದ್ದು ಇದು ಪ್ರಕೃತಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ.

ಅರ್ಥವ್ಯವಸ್ಥೆ

ನೇಪಾಳವು ಕೃಷಿಪ್ರಧಾನ ದೇಶ. ದೇಶದ ೭೬% ಜನರು ಜೀವನಕ್ಕಾಗಿ ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಬತ್ತ, ಗೋಧಿ, ಕಬ್ಬು ಮತ್ತು ಸೆಣಬು ಮುಖ್ಯ ಬೆಳೆಗಳು. ಕೈಗಾರಿಕೆಗಳು ಕೃಷಿ ಉತ್ಪನ್ನಗಳನ್ನು ಸಂಸ್ಕರಿಸುವುದಕ್ಕೇ ಸೀಮಿತ. ಪ್ರವಾಸೋದ್ಯಮವು ದೇಶದ ಪ್ರಮುಖ ಆರ್ಥಿಕ ಚಟುವಟಿಕೆ. ನೇಪಾಳದ ಹೆಚ್ಚಿನ ಭಾಗವು ಪರ್ವತಪ್ರಾಂತ್ಯವಾಗಿರುವುದರಿಂದ ರಸ್ತೆ ಹಾಗೂ ರೈಲುಮಾರ್ಗಗಳ ನಿರ್ಮಾಣ ಕಠಿಣ ಮತ್ತು ಅತಿ ವೆಚ್ಚವುಂಟುಮಾಡುವುದಾಗಿದೆ. ೨೦೦೩ರಂತೆ ದೇಶದಲ್ಲಿ ಒಟ್ಟು ೮೫೦೦ ಕಿ.ಮೀ. ಉತ್ತಮ ರಸ್ತೆಗಳು ಹಾಗೂ ಕೇವಲ ೫೯ ಕಿ.ಮೀ. ರೈಲುಮಾರ್ಗವಿದ್ದಿತು. ಇದರಿಂದಾಗಿ ರಾಷ್ಟ್ರದ ಆರ್ಥಿಕ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ದೂರಸಂಪರ್ಕ ವ್ಯವಸ್ಥೆಯು ಬಹಳ ಕೆಳಸ್ತರದ್ದಾಗಿದೆ. ಆಧುನಿಕ ತಂತ್ರಜ್ಞಾನವು ದೇಶದ ಜನತೆಯನ್ನು ತಲುಪಿಲ್ಲ. ನೇಪಾಳವು ಹೊರರಾಷ್ಟ್ರಗಳ ಸಹಾಯಧನವನ್ನು ಬಹುಮಟ್ಟಿಗೆ ಅವಲಂಬಿಸಿದೆ. ಭಾರತ, ಅಮೆರಿಕಾ, ಜಪಾನ್ , ಇಂಗ್ಲಂಡ್, ಯುರೋಪಿಯನ್ ಒಕ್ಕೂಟಗಳು ಪ್ರಮುಖ ದಾನಿಗಳು.

ಇತರ ವಿಷಯಗಳು

ನೇಪಾಳವು ವಿಶ್ವದ ಏಕೈಕ ಹಿಂದೂ ರಾಷ್ಟ್ರ. ದೇಶದ ಅಧಿಕೃತ ಭಾಷೆ ನೇಪಾಲಿ. ಉಳಿದಂತೆ ಮೈಥಿಲಿ, ಭೋಜಪುರಿ ಮತ್ತು ಅವಧಿ ಭಾಷೆಗಳು ನುಡಿಯಲ್ಪಡುತ್ತವೆ. ನೇಪಾಳದಲ್ಲಿ ಪುರುಷರ ಸರಾಸರಿ ಆಯುರ್ಮಾನ ಮಹಿಳೆಯರಿಗಿಂತ ಹೆಚ್ಚು. ಇಡೀ ಪ್ರಪಂಚದಲ್ಲಿ ನೇಪಾಳವೊಂದರಲ್ಲಿ ಮಾತ್ರ ಈ ವಿದ್ಯಮಾನ ಕಂಡುಬರುತ್ತದೆ. ಸಾಂಸ್ಕೃತಿಕ ವಿಷಯಗಳಲ್ಲಿ ನೇಪಾಳವು ಟಿಬೆಟ್ ಮತ್ತು ಭಾರತವನ್ನು ಹೋಲುತ್ತದೆ. ಉತ್ತರದ ಹಿಮಾಲಯ ಪ್ರದೇಶದಲ್ಲಿ ಟಿಬೆಟ್ ಸಂಸ್ಕೃತಿಯ ಛಾಪು ಕಂಡುಬರುವುದು. ಉಳಿದಂತೆ ಎಲ್ಲಾ ಕಡೆ ಹಿಂದೂ ಸಂಸ್ಕೃತಿಯ ಗಾಢ ಛಾಯೆ ಇದೆ. ನೇಪಾಳವು ಭಾರತವನ್ನು ಬಹಳವಾಗಿ ಅವಲಂಬಿಸಿದೆ. ಆರ್ಥಿಕ ಸಹಾಯ , ತಂತ್ರಜ್ಞಾನ, ರಕ್ಷಣೆ ಇವುಗಳೆಲ್ಲವೂ ಹೆಚ್ಚಿನ ಪ್ರಮಾಣದಲ್ಲಿ ಭಾರತದಿಂದಲೇ ನೇಪಾಳಕ್ಕೆ ಒದಗಿದೆ.

ಸರ್ಕಾರ

  • ೪-೮-೨೦೧೬: 4th Aug, 2016

ಮಾವೋವಾದಿ ನಾಯಕ ಪ್ರಚಂಡ ಅವರು ಎರಡನೇ ಬಾರಿಗೆ ನೇಪಾಳದ ಪ್ರಧಾನಿಯಾಗಿ ಬುಧವಾರ ಆಯ್ಕೆಯಾದರು. 595 ಸದಸ್ಯ ಬಲದ ನೇಪಾಳ ಸಂಸತ್‌ನಲ್ಲಿ ಪ್ರಚಂಡ ಅವರ ಪರ 363 ಸದಸ್ಯರು ಮತ್ತು ವಿರುದ್ಧವಾಗಿ 210 ಸದಸ್ಯರು ಮತ ಚಲಾಯಿಸಿದ್ದಾರೆ. 22 ಸದಸ್ಯರು ಮತದಾನದಿಂದ ದೂರ ಉಳಿದಿದ್ದಾರೆ[1]

ನಾಲ್ಕನೆಯ ಬಾರಿ ಪ್ರಧಾನಿ

  • 7 Jun, 2017;
  • ನೇಪಾಳದ ಕಾಂಗ್ರೆಸ್‌ ಅಧ್ಯಕ್ಷ ಶೇರ್‌ ಬಹಾದ್ದೂರ್‌ ದೇವುಬಾ ಅವರು ನಾಲ್ಕನೆಯ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ವಿರೋಧ ಪಕ್ಷ ಯುಎಂಎಲ್‌ ಸೇರಿದಂತೆ ಯಾವುದೇ ಪಕ್ಷ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದ ಕಾರಣ, 70 ವರ್ಷದ ಶೇರ್‌ ಬಹದ್ದೂರ್ ಅವರು ಏಕೈಕ ಅಭ್ಯರ್ಥಿಯಾಗಿದ್ದರು. 593 ಸಂಸತ್‌ ಸದಸ್ಯರ ಪೈಕಿ 558 ಮಂದಿ ಮತಚಲಾಯಿಸಿದರು.ಶೇರ್‌ ಬಹದ್ದೂರ್ ಅವರು ಜಯಗಳಿಸಲು 297 ಮತಗಳು ಸಾಕಿತ್ತು. ಆದರೆ ಅವರು 388 ಮತ ಪಡೆದಿದ್ದಾರೆ. 1995–1997, 2001–2002, 2004–2005ರವರೆಗೆ ಪ್ರಧಾನಿಯಾಗಿದ್ದ ಶೇರ್‌ ಬಹದ್ದೂರ್ ಇದೀಗ ನೇಪಾಳದ 40ನೇ ಪ್ರಧಾನಿಯಾಗಿದ್ದಾರೆ.[2] ಮಾವೋವಾದಿ ನಾಯಕ ಪುಷ್ಪಾ ಕಮಲ್ ದಹಾಲ್ ಅವರು 15 ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು- ದೀರ್ಘಾವಧಿಯ ಸ್ಥಳೀಯ ಚುನಾವಣೆ ನೇಪಾಳದಲ್ಲಿ ನಡೆದಿದ್ದರಿಂದ ಬಹದ್ದೂರ್‌ ದೇವುಬಾಗಾಗಿ ಪಕ್ಕಕ್ಕೆ ನಿಲ್ಲಲು ಒಪ್ಪಿಕೊಂಡರು.[3]

ಚಿತ್ರಗಳು

Landscapes and Climates of Nepal
Seto Gumba Panoramic view
Seto Gumba Panoramic view 
View of Khartuwa village from Thakuri village of Sitalpati, Shankhuwasabha, eastern Nepal.
View of Khartuwa village from Thakuri village of Sitalpati, Shankhuwasabha, eastern Nepal. 
NASA Landsat-7 Image of Nepal. Nepal shares its boundaries with India and China
NASA Landsat-7 Image of Nepal. Nepal shares its boundaries with India and China 
The Annapurna range of the Himalayas.
The Annapurna range of the Himalayas. 
Lake Phoksundo in Dolpo.
Lake Phoksundo in Dolpo. 
Kali Gandaki Gorge is one of the deepest gorges on earth.
Kali Gandaki Gorge is one of the deepest gorges on earth. 
Marshyangdi Valley – There are many such valleys in the Himalaya created by glacier flows.
Marshyangdi Valley – There are many such valleys in the Himalaya created by glacier flows. 
Mount Everest, the highest peak on earth, lies on the Nepal-China border
Mount Everest, the highest peak on earth, lies on the Nepal-China border 
Wind erosion in Kalopani.
Wind erosion in Kalopani. 
A field in Terai.
A field in Terai. 
Phulchowki Hill.
Phulchowki Hill. 

ಉಲ್ಲೇಖ

  1. ಪ್ರಚಂಡ ನೇಪಾಳದ ನೂತನ ಪ್ರಧಾನಿ
  2. ನಾಲ್ಕನೆಯ ಬಾರಿ ಪ್ರಧಾನಿಯಾಗಿ ಶೇರ್‌ ಬಹದ್ದೂರ್‌ ದೇವುಬಾ;ಪಿಟಿಐ;7 Jun, 2017
  3. Sher Bahadur Deuba elected new Nepal PM;Agencies | 7 Jun 2017, 00:28 IST
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.