ಮಕಾಲು
ಮಕಾಲು ವಿಶ್ವದ ೫ನೆಯ ಅತ್ಯುನ್ನತ ಪರ್ವತಶಿಖರವಾಗಿದೆ. ನೇಪಾಳ ಮತ್ತು ಟಿಬೆಟ್‍ಗಳ ಗಡಿಯಲ್ಲಿ ಎವರೆಸ್ಟ್ ಪರ್ವತದಿಂದ ೨೨ ಕಿ.ಮೀ. ಪೂರ್ವಕ್ಕಿರುವ ೮೪೬೨ ಮೀಟರ್(೨೭,೭೬೨ ಅಡಿ) ಎತ್ತರವುಳ್ಳ ಮಕಾಲು ಪರ್ವತವು ನಾಲ್ಕು ಮುಖಗಳ ಪಿರಮಿಡ್ ಆಕಾರದಲ್ಲಿದೆ. ಮಕಾಲು ಗಣನೀಯ ಎತ್ತರವುಳ್ಳ ಎರಡು ಉಪಶಿಖರಗಳನ್ನು ಹೊಂದಿದೆ. ಮುಖ್ಯ ಶಿಖರದ ೩ ಕಿ.ಮೀ. ವಾಯವ್ಯದಲ್ಲಿರುವ ಮಕಾಲು - ೨ ಅಥವಾ ಕಾಂಗ್ ಚುಂಗ್ ಟ್ಸೆ ೭೬೭೮ ಮೀ. ಎತ್ತರವಿದ್ದರೆ ಇನ್ನೊಂದು ಉಪಶಿಖರ ಚೋಮೋ ಲೊಂಜೋ ೭೮೦೪ ಮೀ. ಔನ್ನತ್ಯ ಹೊಂದಿದೆ.
ಜಗತ್ತಿನಲ್ಲಿ ೮೦೦೦ ಮೀ. ಗಳಿಗೂ ಹೆಚ್ಚು ಎತ್ತರವುಳ್ಳ ಪರ್ವತಗಳ ಪೈಕಿ ಮಕಾಲುವಿನ ಆರೋಹಣ ಅತಿ ಕಠಿಣವೆಂದು ಪರಿಗಣಿಸಲ್ಪಟ್ಟಿದೆ. ತೀವ್ರ ಚಳಿಗಾಲದಲ್ಲಿ ಈ ಪರ್ವತವನ್ನು ಏರಲು ಇದುವರೆವಿಗೆ ಸಾಧ್ಯವಾಗಿಲ್ಲ.
೧೯೫೫ರಲ್ಲಿ ಫ್ರೆಂಚ್ ತಂಡದ ಲಯೊನೆಲ್ ಟೆರ್ರಿ ಮತ್ತು ಜಾನ್ ಕೌಜಿ ಮಕಾಲುವಿನ ಶಿಖರವನ್ನು ತಲುಪಿದ ಮೊದಲ ಪರ್ವತಾರೋಹಿಗಳಾದರು.

ಮಕಾಲು ಶಿಖರದ ಒಂದು ನೋಟ
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.