ನಿಧಿ ಸುಬ್ಬಯ್ಯ

ನಿಧಿ ಸುಬ್ಬಯ್ಯ (ಜನನ: ೧೬-೦೨-೧೯೮೭) ಕನ್ನಡ ಚಲನಚಿತ್ರಗಳ ನಾಯಕಿ ನಟಿ ಮತ್ತು ರೂಪದರ್ಶಿ. ಮೂಲತಃ ಕೊಡಗಿನವರಾಗಿದ್ದು, ಮೈಸೂರಿನಲ್ಲಿ ವಿದ್ಯಾಭ್ಯಾಸ ಪಡೆದರು. ಬಿ ಇ ಮಾಡುತ್ತಿದ್ದಾಗ ಮಾಡೆಲ್ಲಿಂಗಿನಲ್ಲಿ ಆಸಕ್ತಿ ಬೆಳೆಸಿಕೊಂಡು ಬಳಿಕ ಚಿತ್ರರಂಗವನ್ನು ಪ್ರವೇಶಿಸಿದರು.

ನಿಧಿ ಸುಬ್ಬಯ್ಯ

ಜನನ ಮತ್ತು ಬಾಲ್ಯ

ಸುಬ್ಬಯ್ಯ ದಂಪತಿಗಳ ಏಕೈಕ ಪುತ್ರಿ ನಿಧಿ ಜನಿಸಿದ್ದು ೧೬ನೇ ಫೆಬ್ರವರಿ ೧೯೮೭ರಲ್ಲಿ ಕೊಡಗಿನಲ್ಲಿ. ಮೈಸೂರಿನ ಸೈಂಟ್ ಜೋಸೆಫ್'ಸ್ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರೌಢಶಾಲೆಯ ಬಳಿಕ ಶ್ರೀ ಜಯಚಾಮರಾಜೇಂದ್ರ ಕಾಲೆಜ್ ಆಫ್ ಇಂಜಿನಿಯರಿಂಗ್ (ಜೆ ಸಿ ಇ)ನಲ್ಲಿ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಲೇ ಮಾಡೆಲ್ಲಿಂಗ್ನಲ್ಲಿ ಅಭಿರುಚಿಯುಂಟಾಗಿ, ಫೇರ್ ಎಂಡ್ ಲವ್ಲಿ, ಮೊದಲಾದ ಹಲವಾರು ಟಿ ವಿ ಜಾಹೀರಾತುಗಳಲ್ಲಿ ಅಭಿನಯಿಸಿದರು.

ಚಲನಚಿತ್ರಗಳು

ಬಿಡುಗಡೆ ಚಲನಚಿತ್ರ ಪಾತ್ರ ಭಾಷೆ ನಿರ್ದೇಶಕ ಟಿಪ್ಪಣಿಗಳು
೨೦೦೯ ಅಭಿಮಾನಿ ಅಪರ್ಣಾ ಕನ್ನಡ
೨೦೦೯ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಕಮಲಾ ಕನ್ನಡ
೨೦೦೯ ಸ್ವೀಟ್ ಹಾರ್ಟ್ ತೆಲುಗು
೨೦೧೦ ಕೃಷ್ಣಾ ನೀ ಲೇಟ್ ಆಗಿ ಬಾರೋ ಲಕ್ಷ್ಮಿ ಕನ್ನಡ
೨೦೧೦ ಬೆಟ್ಟಿಂಗ್ ಬಂಗಾರರಾಜು ದಿವ್ಯಾ ತೆಲುಗು
೨೦೧೦ ಪಂಚರಂಗಿ ಅಂಬಿಕಾ ಕನ್ನಡ ಯೋಗರಾಜ್ ಭಟ್
೨೦೧೧ ವೀರಬಾಹು ದೇವಿ ಕನ್ನಡ ಎಸ್ ಮಹೇಂದರ್
೨೦೧೧ ಕೃಷ್ಣನ್ ಮ್ಯಾರೇಜ್ ಸ್ಟೋರಿ ಖುಶೀ ಕನ್ನಡ ನೂತನ್ ಉಮೇಶ್
೨೦೧೨ ಅಣ್ಣಾ ಬಾಂಡ್ ದಿವ್ಯಾ ಕನ್ನಡ ದುನಿಯಾ ಸೂರಿ
೨೦೧೨ ಓಹ್ ಮೈ ಗಾಡ್ ಶ್ವೇತಾ ತಿವಾರಿ ಹಿಂದಿ ಉಮೇಶ್ ಶುಕ್ಲ
೨೦೧೨ ಅಜಬ್ ಗಜಬ್ ಲವ್ ಮಾಧುರೀ ಸಿಂಗ್ ಚೌಹಾಣ್ ಹಿಂದಿ ಸಂಜಯ್ ಗಧ್ವಿ
೨೦೧೨ ಸ್ಕೂಲ್ ಡೇಸ್ ಕನ್ನಡ
೨೦೧೫(?) ವರ ಕನ್ನಡ ಕೆ ಆರ್ ಚಂದ್ರಶೇಖರ್
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.