ಬಿ.ಸರೋಜಾದೇವಿ
ಬಹುಭಾಷಾ ತಾರೆ, ಅಭಿನಯ ಸರಸ್ವತಿ, ಬಿ. ಸರೋಜದೇವಿ ಕನ್ನಡದ ಹಿರಿಯ ಚಲನಚಿತ್ರತಾರೆಯರಲ್ಲಿ ಒಬ್ಬರು.ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ.ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಹೂಂಕರಿಸಿದ್ದ ಬಿ.ಸರೋಜಾದೇವಿ ಬಭ್ರುವಾಹನ ಚಿತ್ರದಲ್ಲಿ ಚಿತ್ರಾಂಗದೆಯಾಗಿದ್ದರು.
ಬಿ.ಸರೋಜದೇವಿ | |
---|---|
![]() | |
ಜನನ | ಬಿ.ಸರೋಜದೇವಿ ೭ ಜನವರಿ ೧೯೪೨ ಬೆಂಗಳೂರು, ಮೈಸೂರು ರಾಜ್ಯ, ಬ್ರಿಟಿಷ್ ಇಂಡಿಯಾ |
ವೃತ್ತಿ | ನಟಿ |
Years active | ೧೯೫೫-ಪ್ರಸ್ತುತ |
ಸಂಗಾತಿ(ಗಳು) | ಶ್ರೀಹರ್ಷ(೧೯೬೭-೧೯೮೬) |
ಬಾಲ್ಯ, ಚಿತ್ರಜೀವನ
- ಡಾ.ಬಿ.ಸರೋಜಾದೇವಿರವರು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದಶವಾರ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಸರೋಜಾದೇವಿ ಅವರಿಗೆ ಬಾಲ್ಯದಿಂದಲೇ ಲಲಿತಕಲೆಗಳ ಬಗ್ಗೆ ಆಸಕ್ತಿ ಇತ್ತು. ಇವರಲ್ಲಿದ್ದ ಪ್ರತಿಭೆಯನ್ನು ಮೊದಲು ಗುರುತಿಸಿದವರು ಹೊನ್ನಪ್ಪ ಭಾಗವತರು. ಬಿ.ಸರೋಜಾದೇವಿ ಅಂದರೆ ಕನ್ನಡಿಗರಿಗೆ ನೆನಪಾಗುವುದು ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರ.
- ಅರುವತ್ತರ ದಶಕದಲ್ಲಿ, ಅವರು ನಟಿಸಿರುವ ಕಪ್ಪು-ಬಿಳುಪು ಚಿತ್ರಗಳು ಇಂದಿಗೂ ಪುಳಕ ಹುಟ್ಟಿಸುತ್ತವೆ.ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ ಅವರ ಮಹಾಕವಿ ಕಾಳಿದಾಸ ಚಿತ್ರದ ಮೂಲಕ ೧೯೫೫ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಿ. ಸರೋಜಾದೇವಿ ತಮ್ಮ ಅಭಿನಯ ಕೌಶಲದಿಂದ ಬಹುಬೇಗ ಚತುರ್ಭಾಷಾ ತಾರೆಯಾದವರು.
ಕನ್ನಡದ ನಟಿ, 'ಸರೋಜಾದೇವಿ'ಯವರು,'ಬಹುಭಾಷಾತಾರೆ' ಸಹಿತ
ಡಾ.ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಎ. ನಾಗೇಶ್ವರರಾವ್, ಉದಯಕುಮಾರ್, ಎನ್.ಟಿ. ರಾಮರಾವ್, ಜೆಮಿನಿ ಗಣೇಶನ್, ಶಿವಾಜಿಗಣೇಶನ್, ಎಂ.ಜಿ. ರಾಮಚಂದ್ರನ್, ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮೀಕಪೂರ್, ಸುನಿಲ್‌ದತ್ ಮೊದಲಾದವರೊಂದಿಗೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಹೂಂಕರಿಸಿದ್ದ ಬಿ.ಸರೋಜಾದೇವಿ ಬಭ್ರುವಾಹನ ಚಿತ್ರದಲ್ಲಿ ಚಿತ್ರಾಂಗದೆಯಾಗಿದ್ದರು.
'ಕಿತ್ತೂರು ರಾಣಿ ಚೆನ್ನಮ್ಮ' ಅವರ ಪ್ರತಿಭೆಗೆ ಕನ್ನಡಿ ಹಿಡಿದಂತಿತ್ತು
ಹಿಂದಿಯ ದೀಲೀಪ್ ಕುಮಾರ್ ಸೇರಿದಂತೆ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ನಟಿಸಿರುವ ಸರೋಜಾದೇವಿ ಹಳೆಯ ಹಾಗೂ ಹೊಸ ಕಲಾವಿದರ ನಡುವಿನ ಕೊಂಡಿಯಾಗಿದ್ದಾರೆ.
ಅಭಿನಯಿಸಿದ ಚಿತ್ರಗಳು
- ಕಿತ್ತೂರುರಾಣಿ ಚೆನ್ನಮ್ಮ,
- ಅಮರಶಿಲ್ಪಿ ಜಕಣಾಚಾರಿ,
- ಕಥಾಸಾಗರ,
- ಬಬ್ರುವಾಹನ,
- ಭಾಗ್ಯವಂತರು,
- ಆಷಾಡಭೂತಿ,
- ಶ್ರೀರಾಮಪೂಜಾ,
- ಕಚ ದೇವಯಾನಿ,
- ರತ್ನಗಿರಿ ರಹಸ್ಯ,
- ಕೋಕಿಲವಾಣಿ,
- ಸ್ಕೂಲ್‌ಮಾಸ್ಟರ್,
- ಪಂಚರತ್ನ,
- ಲಕ್ಷ್ಮೀಸರಸ್ವತಿ,
- ಚಿಂತಾಮಣಿ,
- ಭೂಕೈಲಾಸ,
- ಅಣ್ಣತಂಗಿ,
- ಜಗಜ್ಯೋತಿ ಬಸವೇಶ್ವರ,
- ಕಿತ್ತೂರುಚೆನ್ನಮ್ಮ,
- ದೇವಸುಂದರಿ,
- ವಿಜಯನಗರದ ವೀರಪುತ್ರ,
- ಮಲ್ಲಮ್ಮನ ಪವಾಡ,
- ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ,
- ಪೂರ್ಣಿಮಾ,
- ಗೃಹಿಣಿ,
- ಪಾಪಪುಣ್ಯ,
- ಸಹಧರ್ಮಿಣಿ,
- ಶ್ರೀನಿವಾಸಕಲ್ಯಾಣ,
- ಚಾಮುಂಡೇಶ್ವರಿ ಮಹಿಮೆ,
- ಚಿರಂಜೀವಿ,
- ಶನಿಪ್ರಭಾವ ಮೊದಲಾದ ಚಿತ್ರಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು.
ಪದವಿ/ಪುರಸ್ಕಾರಗಳು
- ೧೯೯೨ರಲ್ಲಿ ಕೇಂದ್ರ ಸರಕಾರದ 'ಪದ್ಮಭೂಷಣ ಪ್ರಶಸ್ತಿ'
- ೧೯೬೯ರಲ್ಲಿ ಕೇಂದ್ರ ಸರಕಾರದ 'ಪದ್ಮಶ್ರೀ ಪ್ರಶಸ್ತಿ' ಪಡೆದಿದ್ದಾರೆ.
- ೧೯೬೯ರಲ್ಲಿ ರಷ್ಯ ಸರಕಾರದ ಆಮಂತ್ರಣದ ಮೇರೆಗೆ ರಷ್ಯದಲ್ಲಿ ನಡೆದ '೪ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ'ದಲ್ಲಿ ಭಾಗವಹಿಸಿದ್ದರು.
- ೨೦೦೬ನೇ ಸಾಲಿನ 'ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ'ದಲ್ಲಿ 'ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್' ರಿಂದ 'ಜೀವಿತಾವಧಿ ಸಾಧನೆ ಪ್ರಶಸ್ತಿ'ಯನ್ನು ಪಡೆದಿದ್ದಾರೆ.
ಬಾಹ್ಯ ಸಂಪರ್ಕಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.