ಕುಂದಾದ್ರಿ ಬೆಟ್ಟ
ಕುಂದಾದ್ರಿ ಬೆಟ್ಟವು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಇದೆ. ತೀರ್ಥಹಳ್ಳಿಯಿಂದ ಆಗುಂಬೆ ಕಡೆ ಹೋಗುವಾಗ ಗುಡ್ಡೆಕೇರಿ ಎಂಬ ಗ್ರಾಮದಿಂದ ಸುಮಾರು ೯ ಕಿ.ಮೀ ದೂರದಲ್ಲಿ ಕುಂದಾದ್ರಿ ಬೆಟ್ಟವಿದೆ.
ಬೆಟ್ಟವನ್ನು ತಲುಪಲು ಡಾಂಬರು ರಸ್ತೆಯಿದೆ ಹಾಗು ನಡೆದು ಹೋಗಲು ಕಾಲು ದಾರಿ ಕೂಡ ಇದೆ. ಕುಂದಾದ್ರಿ ಬೆಟ್ಟವು ಜೈನರ ಪವಿತ್ರ ಯಾತ್ರಾ ಸ್ಥಳವಾಗಿದೆ. ಬೆಟ್ಟದ ಮೇಲೆ ಪಾರ್ಶ್ವನಾಥ ಚೈತ್ಯಾಲಯವಿದೆ. ಇಲ್ಲಿಗೆ ಪ್ರತಿ ವರುಷ ಸಾವಿರಾರು ಪ್ರವಾಸಿಗರು ಬೇಟಿ ನೀಡುತ್ತಾರೆ ಹಾಗು ನೂರಾರು ಚಾರಣಿಗರು ಚಾರಣ ಮಾಡಲು ಬರುತ್ತಾರೆ. ಬೆಟ್ಟದ ಮೇಲಿನಿಂದ ಕಾಣುವ ಪ್ರಕೃತಿ ಸೌಂದರ್ಯ ಕಣ್ಣಿಗೆ ಹಬ್ಬವಾಗುತ್ತದೆ. ಎಲ್ಲಿ ನೋಡಿದರಲ್ಲಿ ದಟ್ಟ ಕಾಡು, ತೋಟ, [[ಹೊಲ-ಗದ್ದೆಗಳು. ಬೆಟ್ಟಕ್ಕೆ ಬೇಟಿ ನೀಡುವವರು ಊಟ ಮತ್ತು ನೀರಿನ ವ್ಯವಸ್ಥೆ ಮಾಡಿಕೊಂಡು ಬಂದರೆ ಉತ್ತಮ.

ಕುಂದಾದ್ರಿ ಬೆಟ್ಟ | |
ರಾಜ್ಯ - ಜಿಲ್ಲೆ |
ಕರ್ನಾಟಕ - ತೀರ್ಥಹಳ್ಳಿ |
ವಿಸ್ತಾರ | km² |
ಸಮಯ ವಲಯ | IST (UTC+5:30) |
ಜನಸಂಖ್ಯೆ - ಸಾಂದ್ರತೆ |
{{{population_total}}} - {{{population_density}}}/ಚದರ ಕಿ.ಮಿ. |
ಇತಿಹಾಸ
ಕುಂದಾದ್ರಿ ಬೆಟ್ಟದಲ್ಲಿ ಕುಂದ ಕುಂದಕುಂದ ಮಹರ್ಷಿಗಳು ತಪಸ್ಸು ಮಾಡಿದರೆಂಬ ಪ್ರತೀತಿಯ ಹಿನ್ನೆಲೆಯಲ್ಲಿ ಈ ಬೆಟ್ಟಕ್ಕೆ ಕುಂದಾದ್ರಿ ಎಂಬ ಹೆಸರು ಬಂತು. ಭಾಷಾ ಶಾಸ್ತ್ರದ ನಿಟ್ಟಿನಲ್ಲಿ ನೋಡಿದರೆ, ಕನ್ನಡದಲ್ಲಿ ಕುಂದ ಎಂಬ ಪದಕ್ಕೆ ಎತ್ತರವಾದ ಗೋಡೆ ಎಂಬ ಅರ್ಥವೂ ಇರುವುದರಿಂದ, ಕುಂದದ ರೀತಿ ಇರುವ ಬೆಟ್ಟ ಕುಂದಾದ್ರಿ ಎಂಬ ಹೆಸರು ಜನಬಳಕೆಯಲ್ಲಿ ಬಂದಿರಲೂಬಹುದು.
ತಂಗುವುದು ಎಲ್ಲಿ?
ಕುಂದಾದ್ರಿಯ ತುದಿಯಲ್ಲಿ ಒಂದು ದೇವಾಲಯ ಮತ್ತು ನೀರಿನ ಅನುಕೂಲಗಳು ಇರುವುದಾದರೂ, ಜನಸಾಮಾನ್ಯರಿಗೆ ತಂಗಲು ಸರಿಯಾದ ವ್ಯವಸ್ಥೆ ಇಲ್ಲವೆಂದೇ ಹೇಳಬಹುದು. ಹಳೆಯ ಪ್ರವಾಸಿ ಮಂದಿರವು ಅವಶೇಷಗಳ ರೂಪದಲ್ಲಿದೆ (೨೦೧೦) ಮತ್ತು ಭದ್ರತೆ ಇಲ್ಲ. ಚಾರಣಿಗರು ಕ್ಯಾಂಪ್ ಮಾಡಬಹುದು, ಅಷ್ಟೆ. ಜನಸಾಮಾನ್ಯರು ಸಮೀಪದ ತೀರ್ಥಹಳ್ಳಿಯಲ್ಲಿ ಅಥವಾ ಆಗುಂಬೆಯಲ್ಲಿ ತಂಗಬಹುದು.
ಉಲೇಖಗಳು
https://www.tripadvisor.in/Attraction_Review-g1156205-d3434394-Reviews-Kundadri-Shimoga_Shimoga_District_Karnataka.htmlhttps://timesofindia.indiatimes.com/travel/mangalore/kundadri-hills/ps46766035.cms
http://www.365hops.com/trekking-in-kundadri-hills-eid809