ತಡಿಯಾಂಡಮೋಳ್ ಬೆಟ್ಟ

ತಡಿಯಂಡಮೋಳ್ ಬೆಟ್ಟವು ಕೊಡಗು ಜಿಲ್ಲೆಯಲ್ಲಿರುವ ಅತ್ಯಂತ ಎತ್ತರವಾದ ಬೆಟ್ಟ. ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತದೆ. ಇದರ ಎತ್ತರ ಸುಮಾರು ೧೭೪೮ ಮೀಟರ್. ಇದು ಚಾರಣಿಗರ ಪಾಲಿಗೆ ಬಹಳ ಪ್ರಿಯವಾದ ಜಾಗ. ಇದು ವಿರಾಜಪೇಟೆಯಿಂದ ಸುಮಾರು ೩೦ ಕಿ.ಮೀ ದೂರದಲ್ಲಿದೆ. ಬೆಟ್ಟದ ಮೇಲೆ ಹುಲ್ಲುಗಾವಲು ಇದ್ದು, ಬೆಟ್ಟದ ಸುತ್ತ ಶೋಲ ಅರಣ್ಯವಿದೆ. ಬೆಟ್ಟದ ಕೆಳಭಾಗದಲ್ಲಿ ನಾಲ್ಕು ನಾಡು ಅರಮನೆ ಇದೆ. ಈ ಅರಮನೆಗೆ ಕೆಲವು ಶತಮಾನಗಳ ಇತಿಹಾಸವಿದೆ. ಸ್ಥಳೀಯ ಭಾಷೆಯಲ್ಲಿ ತಡಿಯಂಡಮೋಳ್ ಎಂದರೆ ಎತ್ತರವಾದ ಬೆಟ್ಟ ಎಂದು ಅರ್ಥ.

ತಡಿಯಂಡಮೋಳ್ ಬೆಟ್ಟ
ತಡಿಯಂಡಮೋಳ್ ಬೆಟ್ಟ
ಎತ್ತರ೧,೭೪೮ m (೫,೭೩೫ ft)
Location
ತಡಿಯಂಡಮೋಳ್ ಬೆಟ್ಟ
ತಡಿಯಂಡಮೋಳ್ ಬೆಟ್ಟದ ಸ್ಥಳ, ಕರ್ನಾಟಕ
ನೆಲೆಕರ್ನಾಟಕ, ಭಾರತ
ಶ್ರೇಣಿಪಶ್ಚಿಮ ಘಟ್ಟ
ನಿರ್ದೇಶಾಂಕ12°13′N 75°40′E
Climbing
ಸುಲಭದ ದಾರಿHike


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.