ಶ್ರೀರಾಮ ದೇವರ ಬೆಟ್ಟ
ಶ್ರೀರಾಮದೇವರ ಬೆಟ್ಟ ವು ಜಿಲ್ಲಾ ಕೇಂದ್ರವಾದ ರಾಮನಗರದಿಂದ ಕೇವಲ ೩ ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ರಾಮನಗರಕ್ಕೆ ಬರುವಾಗ, ರಾಮನಗರಕ್ಕೆ ಪ್ರವೇಶಿಸುತ್ತಿದ್ದಂತೆ ಬಲಬಾಗದಲ್ಲಿ ಶ್ರೀರಾಮದೇವರ ಬೆಟ್ಟಕ್ಕೆ ದಾರಿ ಎಂದು ಫಲಕ ಕಾಣುತ್ತದೆ ಹಾಗು ಇಲ್ಲಿ ದೇವಾಲಯದ ಬಗ್ಗೆ ಒಂದು ದೊಡ್ಡ ಕಮಾನು ನಿರ್ಮಿಸಿದ್ದಾರೆ. ಇಲ್ಲಿಂದ ೩ ಕಿ.ಮೀ ಟಾರು ರಸ್ತೆಯಲ್ಲಿ ಕ್ರಮಿಸಿದರೆ ರಾಮದೇವರ ಬೆಟ್ಟದ ಕೆಳಬಾಗ ತಲುಪಬಹುದು. ಬೆಟ್ಟದ ಮೇಲೆ ಹತ್ತಲು ಮೆಟ್ಟಿಲುಗಳ ವ್ಯವಸ್ಥೆ ಇದೆ. ರಾಮದೇವರ ಬೆಟ್ಟ ಅರಣ್ಯ ವ್ಯಾಪ್ತಿಗೆ ಬರುವ ಬೆಟ್ಟಗಳಲ್ಲಿ ಒಂದು. ಭಾರತೀಯ ಚಿತ್ರರಂಗದ ಮೈಲಿಗಲ್ಲು ಎನಿಸಿರುವ ರಮೇಶ್ ಸಿಪ್ಪಿ ನಿರ್ದೇಶನದ 'ಶೋಲೆ' ಚಿತ್ರದ ಚಿತ್ರೀಕರಣ ನಡೆದಿರುವ ರಾಮದೇವರ ಬೆಟ್ಟವನ್ನ ಇಂದಿಗೂ ಜನ ಪ್ರೀತಿಯಿಂದ ರಾಮ್‌ಘಡ್ ಎಂದೇ ಕರೆಯುತ್ತಾರೆ.
ಪಕ್ಷಿಧಾಮ
ಉದ್ದ ಕೊಕ್ಕಿನ ರಣಹದ್ದುಗಳಿಗಾಗಿಯೇ ಅರಣ್ಯ ಇಲಾಖೆ ವಿಶಿಷ್ಟವಾದ ಪಕ್ಷಿಧಾಮವನ್ನ್ನು ರಾಮನಗರದಲ್ಲಿ ಸ್ಥಾಪಿಸುತ್ತಿದೆ. ರಣಹದ್ದ್ದುಗಳಿಗಾಗಿಯೇ ನಿರ್ಮಿಸಿರುವ ಈ ವಿಶಿಷ್ಟ ತಾಣದಲ್ಲಿ ಅವುಗಳ ಲಾಲನೆ ಪಾಲನೆ ಮಾಡಲಾಗುತ್ತದೆ.ಆ ಮೂಲಕವಾದರೂ ವಿಶಿಷ್ಟ ಪ್ರಬೇಧದ ರಣಹದ್ದುಗಳ ಸಂತತಿಯನ್ನು ಹೆಚ್ಚಿಸ ಬೇಕೆಂಬುದು ಅರಣ್ಯ ಇಲಾಖೆಯ ಉದ್ದೇಶ. ರಾಮನಗರದ ರಾಮದೇವರ ಬೆಟ್ಟದಲ್ಲಿ ಪ್ರಸ್ತುತ ಕೇವಲ ೧೫೦ ಉದ್ದ ಕೊಕ್ಕಿನ ರಣಹದ್ದುಗಳು ಮಾತ್ರ ಇವೆ. ರಾಮದೇವರ ಬೆಟ್ಟದಿಂದ ೨೦ ಚದರ ಕಿ.ಮೀಗಳ ಪ್ರದೇಶ ಉದ್ದ್ದಕೊಕ್ಕಿನ ರಣಹದ್ದುಗಳ ರಕ್ಷಿತ ತಾಣವಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಗಳಗ್ಗಲ್ಲು ಬೆಟ್ಟ
ರಾಮನಗರ ಜಿಲ್ಲೆಯ ಕುಟಗಲ್ಲು ಬಳಿ ಇರುವ ಗಳಗ್ಗಲ್ಲು ಒಂದು ಸುಂದರವಾದ ಹೆಬ್ಬಂಡೆ . ಇದು ಸುಮಾರು ೭೦೦-೮೦೦ ಅಡಿ ಎತ್ತರವಿದೆ.