ಹ್ರಸ್ವಸ್ವರ

ಒಂದು ಮಾತ್ರೆ(ಛಂದಸ್ಸು)ಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು ಹ್ರಸ್ವಸ್ವರಗಳು. ಕನ್ನಡದ ಶುದ್ಧಾಕ್ಷರಗಳಲ್ಲಿ ೫ ಸ್ವರಗಳನ್ನು ಕೇಶಿರಾಜ ಗುರುತಿಸುತ್ತಾನೆ. ಅವುಗಳು, , , ,, ಲುೃ

ಸ್ವರಾಕ್ಷರಗಳು ಎಂದರೇನು ?

  1. ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.
  2. ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.

ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ,

ಕನ್ನಡದಲ್ಲಿ ಅ ಕಾರದಿಂದ ಔ ಕಾರದವರೆಗೆ ೧೨ ಸ್ವರಾಕ್ಷರಗಳು ಇವೆ. ಕೇಶಿರಾಜ ಹೇಳುವ , ಋೂ, ಲುೃ, ಲೂೃ ಸ್ವರಗಳು ಈಗ ಪಠ್ಯಪುಸ್ತಕಗಳಲ್ಲಿ ಬಳಕೆಯಲ್ಲಿ ಇಲ್ಲ. ಆದರೆ ಮತ್ತು ಎಂಬ ಎರಡು ದೇಶಿಯಗಳು ಸ್ವರಾಕ್ಷರಗಳ ಸಾಲಿನಲ್ಲಿ ಬಳಕೆಯಲ್ಲಿವೆ.

ವಿಧಗಳು

ಸ್ವರಗಳನ್ನು ನಾಲ್ಕು ವಿಭಾಗ ಮಾಡಬಹುದು.

  1. ಹೃಸ್ವಸ್ವರ
  2. ದೀರ್ಘಸ್ವರ
  3. ಸಂಧ್ಯಕ್ಷರ
  4. ಪ್ಲುತ

ಹ್ರಸ್ವಸ್ವರ

ಒಂದು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 - ಅ,ಇ,ಉ,ಋ,ಲುೃ. ಈ ಅಕ್ಷರಗಳನ್ನು ಲಘು(ವ್ಯಾಕರಣ) ಎಂದು ಕರೆಯುತ್ತಾರೆ.

ದೀರ್ಘಸ್ವರ

ಎರಡು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 – ಆ,ಈ,ಊ.ಋೂ,ಲೂೃ. ಈ ಅಕ್ಷರಗಳನ್ನು ಗುರು(ವ್ಯಾಕರಣ) ಅಕ್ಷರಗಳು ಎಂದು ಕರೆಯುತ್ತಾರೆ.

ಸ್ವರ ಸಂಧಿ

ಸ್ವರಸಂಧಿ ಎಂದರೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾದರೆ ಸ್ವರಸಂಧಿ. ಉದಾ: ಮಾತು+ಇಲ್ಲ=ಮಾತುವಿಲ್ಲ- ಮಾತಿಲ್ಲ (ಸಂಧಿ ವಿಕಲ್ಪ) ಉ+ಇ(ಸಂದಿಪದ ಸಂದರ್ಭ)

ಸ್ವರಸಂಧಿ ವಿಧಗಳು

ಕನ್ನಡದ ಸ್ವರಸಂಧಿಗಳಲ್ಲಿ ಎರಡು ವಿಧ.

  1. ಲೋಪ ಸಂಧಿ,
  2. ಆಗಮ ಸಂಧಿ

.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.