ವಾರಾಣಸಿ

ವಾರಣಾಸಿ, ಕಾಶಿ, ಬನಾರಸ್ ಎಂಬ ಹೆಸರಿನಿಂದ ಖ್ಯಾತವಾದ ಈ ನಗರವನ್ನು ಎಲ್ಲ ಹಿಂದೂಗಳು ಅತ್ಯಂತ ಪವಿತ್ರಸ್ಥಾನವನ್ನಾಗಿ ಪರಿಗಣಿಸುತ್ತಾರೆ. ಪ್ರಪಂಚದ ಅತ್ಯಂತ ಹಳೆಯ ಮತ್ತು ಇಂದಿಗೂ ಜನವಸತಿಯಿಂದ ಕೂಡಿದ ನಗರಗಳಲ್ಲಿ ಇದೂ ಒಂದು. ಗಂಗಾ ನದಿಯ ತಟದಲ್ಲಿರುವ ಈ ನಗರವನ್ನು ವರುಣಾ ಮತ್ತು ಅಸಿ ಎಂಬ ನದಿಗಳು ಸುತ್ತುವರೆದಿವೆ. ಈ ನಗರಕ್ಕೆ ಹಲವಾರು ಸಂತರು ಭೇಟಿನೀಡಿದ್ದಾರೆ.

'ಶ್ರೀ.ತುಲ್ಸೀ ಮಾನಸ್ ಮಂದಿರ್'
ವಾರಣಾಸಿ
वाराणसी
وارانسی

ವಾರಣಾಸಿ
वाराणसी
وارانسی
ರಾಜ್ಯ
 - ಜಿಲ್ಲೆ
ಉತ್ತರ ಪ್ರದೇಶ
 - ವಾರಣಾಸಿ
ನಿರ್ದೇಶಾಂಕಗಳು 25.282° N 82.9563° E
ವಿಸ್ತಾರ
 - ಎತ್ತರ
1550 km²
 - 80.71 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
3147927 (ಜಿಲ್ಲೆ)
 - 1995/ಚದರ ಕಿ.ಮಿ.
ಮೇಯರ್ ಕೌಶಲೇಂದ್ರ ಸಿಂಗ್
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 221 0** (** area code)
 - +0542
 - UP-65

ಸ್ಕಂದ ಪುರಾಣ,ಉಪನಿಷತ್, ಹಾಗು ತಮಿಳಿನ 'ತೇವರಂ'ನಲ್ಲಿ ಇದರ ಉಲ್ಲೇಖ ಬರುತ್ತದೆ. ವಾರಣಾಸಿ ಪಾಲಿ ಆಡು ಭಾಷೆಯಲ್ಲಿ ಬಾರಣಾಸಿ ಆಗಿ ಮುಂದೆ ಬ್ರಟಿಷರ ನಾಲಗೆಯಲ್ಲಿ ಬನಾರಸ್ ಆಯಿತು. ಭಾರತದ ೧೨ ಜ್ಯೋತಿರ್ಲಿಂಗಗಳ ಪೈಕಿ ಇದು ಒಂದು. ಇಲ್ಲಿ ಮರಣಿಸಿದರೆ ಮುಕ್ತಿ ಎಂಬ ನಂಬಿಕೆಯಿದೆ. ವಿದೇಶಿ ಪ್ರವಾಸಿ ಹಗುಯಾನ್ ತ್ಸ್ಯಾಂಗನ ಪ್ರಕಾರ ಪಟ್ಟಣದ ನಡಡುವೆ ನೂರು ಅಡಿ ಎತ್ತರದ ಕಂಚಿನ ಶಿವ ವಿಗ್ರಹವಿತ್ತು. 1033ರಿಂದ 1669ವರರೆಗೆ ಈ ನಗರದ ಮೇಲೆ ಸತತ ದಾಳಿಗಳು ನಡೆದವು. ಸರಿ ಸುಮಾರು ಎಲ್ಲ ಮೊಘಲ ದೊರೆಗಳು ಈ ನಗರದ ಮೇಲೆ ಅನೇಕ ಬಾರಿ ದಾಳಿ ಮಾಡಿದರು.

  • 3500 ವರ್ಷಗಳ ಲಿಖಿತ ಇತಿಹಾಸವಿರುವ ಏಕಮಾತ್ರ ಪಟ್ಟಣವಾಗಿದೆ.
  • ರಾಜಾ ಹರಿಶ್ಚಂದ್ರನು ತನ್ನ ಸಂಪೂರ್ಣ ರಾಜ್ಯವನ್ನು ವಿಶ್ವಾಮಿತ್ರರಿಗೆ ದಾನ ಮಾಡಿ, ಶಿವನ ನಾಡಾದ ಕಾಶಿಯಲ್ಲಿ ಆಶ್ರಯ ಪಡೆದನು
  • ದೇಸಿ ಭಾಷೆಯಲ್ಲಿ ಮೊದಲ ಬಾರಿಗೆ ರಾಮಾಯಣವನ್ನು ರಚಿಸಿದ ರಾಮಚರಿತಮಾನಸದ ಲೇಖಕ ಗೋಸ್ವಾಮಿ ತುಲಸೀದಾಸರು ಈ ನಗರದಲ್ಲಿ ವಾಸಿಸುತ್ತಿದ್ದರು
  • ಮಧ್ಯಯುಗದಲ್ಲಿ ಸಮನ್ವಯದ ಸಂದೇಶವನ್ನು ಸಾರಿ, ಡಂಭಾಚಾರವನ್ನು ಖಂಡಿಸಿದ ರಾಮಭಕ್ತ ಸಂತ ಕಬೀರರು ಈ ನಗರದವರು
  • ಹಿಂದೂ ವಿಶ್ವವಿದ್ಯಾಲಯದ ಸ್ಥಾಪನೆಯನ್ನು ಆಚಾರ್ಯ ಮದನ ಮೋಹನ ಮಾಳವೀಯರು ಕಾಶಿಯಲ್ಲಿ ಮಾಡಿದರು
  • ಕಾಶಿಯಲ್ಲಿಯ ಪ್ರಸಿದ್ಧ ವಿಶ್ವನಾಥ ದೇವಾಲಯವನ್ನು ಮುಘಲ್ ದೊರೆ ಔರಂಗಜೇಬನು ಧ್ವಂಸ ಮಾಡಿಸಿದನು. ನಂತರದ ವರ್ಷಗಳಲ್ಲಿ ಮರಾಠ ರಾಣಿ ಅಹಲ್ಯಾಬಾಯಿ ಹೋಳ್ಕರ ಸಮೀಪದಲ್ಲಿ ಇದನ್ನು ಪುನಃ ನಿರ್ಮಿಸಿದಳು. ಮೂಲ ದೇವಸ್ಥಾನದ ಅವಶೇಷಗಳ ಮೇಲೆ ’ ಗ್ಯಾನವಾಪಿ ಮಸೀದಿಯನ್ನು’ ಔರಂಗಜೇಬನು ಕಟ್ಟಿಸಿದನು.
  • ಪ್ರಸಿದ್ಧ ಬಿಂದು ಮಾಧವ ದೇವಾಲಯವನ್ನು ಮುಘಲ್ ದೊರೆ ಔರಂಗಜೇಬನು ಧ್ವಂಸ ಮಾಡಿಸಿದನು.
  • ಕಾಶಿಯಲ್ಲಿರುವ ಪ್ರಸಿದ್ಧ ದೇವತೆಯರು ವಿಶಾಲಾಕ್ಷಿ ಮತ್ತು ಅನ್ನಪೂರ್ಣೆಯರು
  • ಕಾಶಿಯ ರೇಶ್ಮೆ ಸೀರೆಗಳು ಪ್ರಸಿದ್ಧ. ಕಬೀರರು ಇಂತಹ ನೇಕಾರರ ಮನೆಯಲ್ಲಿ ಬೆಳೆದರು.
  • ಬನಾರಸ ಘರಾಣಾ ಎಂಬ ವಿಶಿಷ್ಟ ಸಂಗೀತ ಪದ್ಧತಿಯನ್ನು ಹಿಂದೂಸ್ತಾನಿ ಸಂಗೀತಕ್ಕೆ ಈ ನಗರವು ಕೊಡುಗೆಯಾಗಿ ಕೊಟ್ಟಿದೆ.
  • ಕಾಶಿಯು ತನ್ನ ವಿಶಿಷ್ಟ ಸಂಸ್ಕೃತಿಗಾಗಿ ಪ್ರಸಿದ್ಧವಾಗಿದೆ
  • ’ಮಹಾ ಸ್ಮಶಾನ’ವೆಂಬ ಹೆಸರಿನಿಂದ ಕರೆಯಲ್ಪಡುವ ಈ ನಗರದಲ್ಲಿ ಮಣಿಕರ್ಣಿಕಾ ಘಟ್ಟ, ಹರಿಶ್ಚಂದ್ರ ಘಟ್ಟ ಮುಂತಾದ ಪ್ರಸಿದ್ಧ ಸ್ನಾನಘಟ್ಟ ಮತ್ತು ಸ್ಮಶಾನಘಟ್ಟಗಳಿವೆ.
ಗಂಗಾ ನದಿಯ ತಟದ ಸ್ನಾನಘಟ್ಟದ ವಿಹಂಗಮ ನೋಟ


ನೋಡಿ

ಹೆಚ್ಚಿನ ಮಾಹಿತಿ

  • ಡಯಾನಾ ಎಕ್ ರ ಪಾಂಡಿತ್ಯ ಪೂರ್ಣಗ್ರಂಥ ’ಬನಾರಸ: ಸಿಟಿ ಆಫ್ ಲಾಯಿಟ್’
  • ಎಸ್. ಎಲ್. ಭೈರಪ್ಪನವರ ’ಆವರಣ’
  • ಶ್ರೀಮಧ್ವೀರಶೈವ ಪಂಚಪಿಠಗಳಲ್ಲಿ ಒಂದಾದ ಜ್ಞಾನಪಿಠ ಜಂಗಮವಾವಡಿವೇಂದು ಪ್ರಸಿದ್ಧವಾಗಿದೆ.(ಜಗದ್ಗುರು ವಿಶ್ವಾರಾಧ್ಯ್ ಸಿಂಹಾಸನ )
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.