ಜುಲೈ ೬
ಜುಲೈ ೬ - ಜುಲೈ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೮೭ನೇ ದಿನ(ಅಧಿಕ ವರ್ಷದಲ್ಲಿ ೧೮೮ನೇ ದಿನ). ಟೆಂಪ್ಲೇಟು:ಜುಲೈ ೨೦೧೯
ಪ್ರಮುಖ ಘಟನೆಗಳು
- ೧೮೮೫ - ಲೂಯಿ ಪಾಸ್ಚರ್ ಮೊದಲ ಬಾರಿಗೆ ರೇಬಿಸ್ ರೋಗದ ವಿರುದ್ಧ ತನ್ನ ಲಸಿಕೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ.
- ೧೮೯೨ - ದಾದಾಬಾಯ್ ನವ್ರೋಜಿ ಬ್ರಿಟಿಷ್ ಸಂಸತ್ತಿಗೆ ಆಯ್ಕೆಯಾದ ಮೊದಲ ಭಾರತೀಯರಾದರು.
- ೧೯೬೪ - ಮಾಲಾವಿ ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಘೋಷಿಸಿತು.
- ೧೯೭೫ - ಕೊಮೊರೊಸ್ ಫ್ರಾನ್ಸ್ನಿಂದ ಸ್ವಾತಂತ್ರ್ಯ ಘೋಷಿಸಿತು.
- ೨೦೦೬ - ಚೀನ-ಭಾರತ ಯುದ್ಧದ ಸಮಯದಲ್ಲಿ ಮುಚ್ಚಲಾದ ಭಾರತ ಮತ್ತು ಚೀನದ ಮಧ್ಯದ ನಾಥುಲ ಮಾರ್ಗ ೪೪ ವರ್ಷಗಳ ನಂತರ ಮತ್ತೆ ತೆರೆವುಗೊಂಡಿತು.
ಜನನಗಳು
- ೧೮೩೭ - ಆರ್.ಜಿ. ಭಂಡಾರ್ಕರ್, ಭಾರತದ ವಿದ್ವಾಂಸ.
- ೧೯೦೭ - ಫ್ರೀಡ ಕಾಹ್ಲೊ, ಮೆಕ್ಸಿಕೊದ ಚಿತ್ರಗಾರ್ತಿ.
- ೧೯೩೫ - ತೆನ್ಜಿಂಗ್ ಗ್ಯಾತ್ಸೊ, ೧೪ನೇ ದಲೈ ಲಾಮ.
- ೧೯೪೬ - ಜಾರ್ಜ್ ಡಬ್ಲ್ಯು. ಬುಷ್, ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ.
ಮರಣಗಳು
- ೧೮೫೪ - ಜಾರ್ಜ್ ಒಹ್ಮ್, ಜರ್ಮನಿಯ ಭೌತಶಾಸ್ತ್ರಜ್ಞ.
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.