ಜಾರ್ಜ್ ಡಬ್ಲ್ಯು. ಬುಷ್

ಜಾರ್ಜ್ ವಾಕರ್ ಬುಷ್ (ಜನನ: ಜುಲೈ ೬, ೧೯೪೬) ಅಮೇರಿಕ ಸಂಯುಕ್ತ ಸಂಸ್ಥಾನದ ಪ್ರಸಕ್ತ ಹಾಗೂ ೪೩ನೆಯ ಅಧ್ಯಕ್ಷರು. ಅವರ ಮೊದಲ ನಾಲ್ಕು ವರ್ಷಗಳ ಅಧ್ಯಕ್ಷತಾ ಅವಧಿ ಪ್ರಾರ೦ಭವಾದದ್ದು ಜನವರಿ ೨೦, ೨೦೦೧ ರಂದು. ತೀವ್ರವಾದ ಚುನಾವಣೆಯ ನಂತರ ಇನ್ನೊಂದು ಅವಧಿಗೆ ಅವರು ನವೆಂಬರ್ ೩, ೨೦೦೪ ರಂದು ಪ್ರಮುಖ ಎದುರಾಳಿ ಜಾನ್ ಕೆರಿ ಅವರನ್ನು ಸೋಲಿಸಿ ಪುನರಾಯ್ಕೆಯಾದರು. ಅವರ ಎರಡನೆಯ ಅಧ್ಯಕ್ಷತಾ ಅವಧಿ ಕೊನೆಗೊಳ್ಳುವುದು ಜನವರಿ ೨೦, ೨೦೦೯ ರಂದು.

ಜಾರ್ಜ್ ವಾಕರ್ ಬುಷ್

ಅಧ್ಯಕ್ಷತೆ ವಹಿಸಿಕೊಳ್ಳುವ ಮೊದಲು ಅವರು ಉದ್ಯಮಿಯಾಗಿದ್ದರು. ೧೯೯೫ ರಿಂದ ೨೦೦೦ ದ ವರೆಗೆ ಟೆಕ್ಸಸ್ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಅವರು ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಹರ್ಬರ್ಟ್ ವಾಕರ್ ಬುಷ್ ಅವರ ಪುತ್ರ ಹಾಗೂ ಫ್ಲಾರಿಡಾ ರಾಜ್ಯದ ರಾಜ್ಯಪಾಲರಾದ ಜೆಬ್ ಬುಷ್ ಅವರ ಅಣ್ಣ.

ವೈಯಕ್ತಿಕ ಜೀವನ

ಲಾರಾ ಲೇನ್ ವೆಲ್ಚ್ ರವರನ್ನು ನವೆಂರಬರ್ ೫ರ ೧೯೭೭ರಂದು ಮದುವೆಯಾದರು.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.