ವಿಜಯ ಕರ್ನಾಟಕ
ವಿಜಯ ಕರ್ನಾಟಕ ಕನ್ನಡದ ಒಂದು ದಿನಪತ್ರಿಕೆ. ಸಮಸ್ತ ಕನ್ನಡಿಗರ ಹೆಮ್ಮೆ ಎಂಬ ಧ್ಯೇಯ ವಾಕ್ಯದೊಂದಿಗೆ, ಹುಬ್ಬಳ್ಳಿಯ ವಿಜಯಾನಂದ ರೋಡ್ ಲೈನ್ಸ್ ಬಳಗದ ಪತ್ರಿಕೆಯಾಗಿದ್ದ ವಿಜಯ ಕರ್ನಾಟಕವನ್ನು 2006ರಲ್ಲಿ ಟೈಂಸ್ ಆಫ್ ಇಂಡಿಯಾ ಪತ್ರಿಕೆ ಸಮೂಹದ, ಬೆನ್ನೆಟ್,ಕೊಲ್ಮನ್ ಅಂಡ್ ಸನ್ಸ್ ಸಂಸ್ಥೆಯವರು, ತಮ್ಮ ಸ್ವಾಮ್ಯಕ್ಕೆ ಸೇರಿಸಿಕೊಂಡಿದ್ದಾರೆ.
ವಿಜಯಕರ್ನಾಟಕ (ದಿನಪತ್ರಿಕೆ) | |
---|---|
ಪ್ರಕಟಣೆ: | ಬೆಂಗಳೂರು |
ಈಗಿನ ಸಂಪಾದಕರು: | ತಿಮ್ಮಪ್ಪ ಭಟ್ |
ಜಾಲತಾಣ: | http://vijaykarnataka.com/ - http://vijaykarnatakaepaper.com/ |
ಇವನ್ನೂ ನೋಡಿ Category:ಕನ್ನಡ ಪತ್ರಿಕೆಗಳು |
ವಿಜಯ ಕರ್ನಾಟಕ ಪತ್ರಿಕೆ ನಡೆದು ಬಂದ ರೀತಿ
2000ರಲ್ಲಿ ವಿಜಯಾನಂದ ಪ್ರಿಂಟರ್ಸ್ ಮೂಲಕ ಆರಂಭಗೊಂಡ ವಿಜಯ ಕರ್ನಾಟಕ (ವಿಕ), ಒಮ್ಮೆ ನಂ.1 ಪಟ್ಟಕ್ಕೇರಿತ್ತು. ಬಳಿಕ 2006ರಲ್ಲಿ ಈ ಪತ್ರಿಕೆಯನ್ನು ಬೆನೆಟ್, ಕೋಲ್ಮನ್ ಆಂಡ್ ಕಂಪನಿ ಲಿ. (ಬಿಸಿಸಿಎಲ್) ಸ್ವಾಧೀನಕ್ಕೆ ಪಡೆದುಕೊಂಡಿತು.
ವಿಜಯ ಕರ್ನಾಟಕದ ಸಂಪಾದಕರಾಗಿದ್ದವರು - ಈಶ್ವರ ದೈತೋಟ, ಮಹಾದೇವಪ್ಪ , ವಿಶ್ವೇಶ್ವರ ಭಟ್, ಇ. ರಾಘವನ್, ಸುಗತ ಶ್ರೀನಿವಾಸ ರಾಜು.
2012ರ ಏಪ್ರಿಲ್ 1ರಂದು ವಿಜಯ ಕರ್ನಾಟಕದ ವೆಬ್ ಸೈಟ್ ಆವೃತ್ತಿ vijaykarnataka.com ಆರಂಭವಾಯಿತು. ನಂತರ ಅದರ ಮೊಬೈಲ್ ಆವೃತ್ತಿ ಆರಂಭವಾಯಿತು.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.