ವಾರ್ತಾ ಭಾರತಿ

ವಾತಾ೯ ಭಾರತಿ ಮಂಗಳೂರು ಮತ್ತು ಬೆಂಗಳೂರಿನಿಂದ ಪ್ರಕಾಶಿತವಾಗುತ್ತಿರುವ ಪ್ರಮುಖ ಕನ್ನಡ ದಿನಪತ್ರಿಕೆ. ೨೦೦೩ರಲ್ಲಿ ವಾತಾ೯ ಭಾರತಿಯನ್ನು ಎ.ಎಸ್. ಪುತ್ತಿಗೆಯವರು ಮಂಗಳೂರಿನಿಂದ ಪ್ರಾರಂಭಿಸಿದರು.

ವಾತಾ೯ ಭಾರತಿ (ದಿನಪತ್ರಿಕೆ)
ಪ್ರಕಟಣೆ: ಮಂಗಳೂರು,ಬೆಂಗಳೂರು
ಈಗಿನ ಸಂಪಾದಕರು: ಎ.ಎಸ್. ಪುತ್ತಿಗೆ
ಜಾಲತಾಣ: http://www.varthabharati.in/
ಇವನ್ನೂ ನೋಡಿ Category:ಕನ್ನಡ ಪತ್ರಿಕೆಗಳು
ವಾರ್ತಾಭಾರತಿ ಪ್ರತಿಗಳು

ಸಮೃದ್ಧ ಭಾಷೆ, ಸರಳ ನಿರೂಪಣೆ ಪತ್ರಿಕೆಯನ್ನು ಜನಸಾಮಾನ್ಯರೆಡೆಗೆ ಒಯ್ಯಿತು. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಉದುಪಿ, ಉತ್ತರ ಕನ್ನಡ ಮಾತ್ರವಲ್ಲದೆ ನೆರೆಯ ಕಾಸರಗೋಡು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲೂ ಪತ್ರಿಕೆ ಅಲ್ಪಾವಧಿಯಲ್ಲಿ ಅಪಾರ ಜನಮನ್ನಣೆ ಪಡೆಯಿತು. ಪತ್ರಿಕೆ ಆರಂಭವಾದ ಮೂರನೇ ವರ್ಷಕ್ಕೆ ಬೆಂಗಳೂರು ಆವೃತ್ತಿಯನ್ನು ಆರಂಭಿಸಲಾಯಿತು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ತುಮಕೂರು, ಕೋಲಾರ, ಹಾಸನ - ಹೀಗೆ ವಾರ್ತಾಭಾರತಿಯ ಪ್ರಸಾರ ರಾಜ್ಯಾದ್ಯಂತ ವ್ಯಾಪಿಸಿದೆ.

ಕರ್ನಾಟಕದ ಹೊರಗೂ ಸಹ ವಾರ್ತಾಭಾರತಿ ಜನಪ್ರಿಯವಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಕುವೈತ್ ಮತ್ತಿತರ ಪರ್ಶಿಯನ್ ಗಲ್ಫ್ ರಾಷ್ಟ್ರಗಳ ಅನಿವಾಸಿ ಭಾರತೀಯರನ್ನು ವಾರ್ತಾಭಾರತಿ ತಲುಪುತ್ತಿದೆ. ಮಾತ್ರವಲ್ಲ, ಗಲ್ಫ್ ರಾಷ್ಟ್ರಗಳಲ್ಲಿ ಅತ್ಯಂತ ಹೆಚ್ಚು ಓದುಗ ಬಳಗವನ್ನು ಹೊಂದಿರುವ ಕನ್ನಡ ದೈನಿಕವಾಗಿದೆ.

ಇತಿಹಾಸ

ವಾರ್ತಾಭಾರತಿ ಕನ್ನಡ ದೈನಿಕದ ಉದಯ ಕನ್ನಡ ಪತ್ರಿಕೋದ್ಯಮದಲ್ಲಿ ಒಂದು ಹೊಸ ಅಧ್ಯಾಯ. ಆಗಸ್ಟ್ ೨೯, ೨೦೦೩ರಂದು ಮಂಗಳೂರನ್ನು ಕೇಂದ್ರವಾಗಿಟ್ಟು ಮಾರುಕಟ್ಟೆಗೆ ಬಂದ ವಾರ್ತಾಭಾರತಿ ಇಂದು ಕರ್ನಾಟಕದ ಒಂದು ಜನಪ್ರಿಯ ದೈನಿಕವಾಗಿದೆ. ಅಬ್ಧುಸ್ಸಲಾಮ್ ಪುತ್ತಿಗೆ (ಎ.ಎಸ್. ಪುತ್ತಿಗೆ) ಯವರ ಪ್ರಧಾನ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಈ ದೈನಿಕವನ್ನು ಮಾಧ್ಯಮ ಕಮ್ಯುನಿಕೇಶನ್ಸ್ ಲಿ. ಮುದ್ರಿಸುತ್ತಿದೆ. ಎಸ್.ಎಂ. ಸಯ್ಯದ್ ಖಲೀಲ್ ಮಾಧ್ಯಮ ಕಮ್ಯುನಿಕೇಶನ್ಸ್ ಲಿ. ನ ಅಧ್ಯಕ್ಷರಾಗಿದ್ದು, ಅಬ್ದುಸ್ಸಲಾಮ್ ಪುತ್ತಿಗೆಯವರು ದೈನಿಕದ ಆಡಳಿತ ನಿರ್ದೇಶಕರೂ ಆಗಿದ್ದಾರೆ. ಮಂಗಳೂರಿನಿಂದ ಪ್ರಾರಂಭವಾದ ಈ ಕನ್ನಡ ದಿನಪತ್ರಿಕೆ ಈಗ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಿಂದಲೂ ಪ್ರಕಾಶನಗೊಳ್ಳುತ್ತಿದೆ.

ಸಂಪಾದಕೀಯ

ಪ್ರಕಾಶಿತ ಸಂಪಾದಕೀಯ

ವಾರ್ತಾಭಾರತಿಯ ಸಂಪಾದಕೀಯಗಳು ವ್ಯಾಪಕ ಜನಮನ್ನಣೆ ಪಡೆದವು. ತನ್ನ ಬದ್ಧತೆ, ನಿಖರತೆ, ಸ್ಪಷ್ಟತೆ ಮತ್ತು ಆಕರ್ಷಕ ನಿರೂಪಣೆಗಳಿಂದಾಗಿ ಈ ಸಂಪಾದಕೀಯಗಳು ಓದುಗರ ದೊಡ್ಡ ಬಳಗವನ್ನು ಹೊಂದಿದೆ. ನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಪತ್ರಿಕೆ ತಳೆಯುವ ಸ್ಪಷ್ಟ ನಿಲುವಿಗೆ ಅದರ ಸಂಪಾದಕೀಯವು ಸಾಕ್ಷಿಯಾಗಿಧೆ. ನಿರ್ಣಾಯಕ ಸಂದರ್ಭಗಳಲ್ಲಿ ಪತ್ರಿಕೆ ತೆಳೆಯ ಸ್ಪಷ್ಟ ನಿಲುವು ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಸಂಪಾದಕೀಯದ ಕಾರಣಕ್ಕಾಗಿಯೇ ಪತ್ರಿಕೆಯನ್ನು ಕೊಂಡು ಓದುವ ಒಂದು ದೊಡ್ಡ ಬಳಗವೇ ವಾರ್ತಾಭಾರತಿಗೆ ಇದೆ. ಪತ್ರಿಕೆಯ ಆಯ್ದ ಸಂಪಾದಕೀಯಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿ ಮನ್ನಣೆ ಪಡೆದಿದೆ.

ಪತ್ರಿಕೆಯ ವೈಶಿಷ್ಠ್ಯಗಳು

ವಿಚಾರ, ರಾಜಕೀಯ, ಸಮೃದ್ಧಿ, ವಿಜ್ಙಾನ ಪರಿಸರ, ಮನರಂಜನೆ -- ಹೀಗೆ ಹಲವು ಅಭಿರುಚಿಗಳಿಗೆ ವೇದಿಕೆಯಾಗಿರುವ ವಾರ್ತಾಭಾರತಿ, ಯಾವುಧೇ ಜಾತಿ, ವರ್ಗ, ಪಕ್ಷ, ಸಂಘಟನೆ ಅಠವಾ ವ್ಯಕ್ತಿಯ ಮರ್ಜಿಗೆ ಒಳಗಾಗದ ಪತ್ರಿಕೆ. ಪ್ರಾತಿನಿಧ್ಯ ವಂಚಿತ ತಳಮಟ್ಟದ ಸಮುದಾಯಗಳಿಗೆ ವಾರ್ತಾಭಾರತಿ ಧ್ವನಿಯಾಗಿದೆ. ಇದರಲ್ಲಿ ಪ್ರಕಟಿತ ಹಲವು ರಾಜಕೀಯ ವಿಶ್ಲೇಷಣೆಗಳು,ಮಾನವೀಯ ವರದಿಗಳು, ರಾಜ್ಯಾದ್ಯಾದಂತ ಸಂಚಲನವನ್ನು ಉಂಟು ಮಾಡಿದೆ. ಅನೇಕ ವಿಶೇಷ ವರದಿಗಳು ವಿಧಾನಸೌಧವನ್ನೂ ತಲುಪಿ ಸದ್ದು ಮಾಡಿದೆ.

ವಿಚಾರಭಾರತಿ

ವಾರ್ತಾಭಾರತಿ ಪತ್ರಿಕೆಯ ಹೆಗ್ಗಳಿಕೆಯಲ್ಲಿ ಅದರ ವಿಚಾರಭಾರತಿ ಪುಟವೂ ಒಂದು. ಈ ಪುಟದಲ್ಲಿ ಪ್ರಕಟವಾಧ ಲೇಖನಗಳು ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಹಲವು ಚರ್ಚೆಗಳಿಗೆ ಪ್ರೇರಣೆಯಾಗಿವೆ. ವರ್ತಮಾನದ ಜ್ವಲಂತ ಸಮಸ್ಯೆಗಳಿಗೆ ವೇದಿಕೆಯಾಗಿರುವ ವಿಚಾರಭಾರತಿಯಲ್ಲಿ ನಾಡಿನ ಖ್ಯಾತ ಲೇಖಕರು ಬರೆಯುತ್ತಿದ್ದಾರೆ. ಹರಿತವಾದ ಸಂಪಾದಕೀಯ, ವೈಚಾರಿಕ ಲೇಖನ, ವ್ಯಕ್ತಿಪರಿಚಯ, ಓದುಗರ ಅಭಿಪ್ರಾಯ ಹೇಳುವ ವಾಚಕಭಾರತಿ ಮೊದಲಾಧವುಗಳ ಮೂಲಕ ವಿಚಾರಭಾರತಿ ಓದುಗರ ಮನದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ವಾರ್ತಾಭಾರತಿಯ ಒದುಗರು ಅತಿ ಹೆಚ್ಚು ಸ್ಪಂದಿಸುವ ಪುಟವಾಗಿದೆ ಈ ವಿಚಾರಭಾರತಿ.

ಆಕರ್ಷಕ ಅಂಕಣಗಳು

ವಾರ್ತಾಭಾರತಿಯಲ್ಲಿ ನಿಯಮಿತವಾಗಿ ಪ್ರಕತವಾಗುವ ಅಂಕಣಗಳು ಓದುಗರ ಪಾಲಿಗೆ ಬೆಳಕಿಂಡಿಗಳು. ರಾಜಕೀಯ, ಪರಿಸರ, ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿ, ಆರೋಗ್ಯ, ಇತ್ಯಾದಿಗಳ ಕುರಿತು ನಾಡಿನ ಖ್ಯಾತ ಲೇಖಕರು, ಚಿಂತಕರು ಪ್ರತಿವಾರ ಪತ್ರಿಕೆಯಲ್ಲಿ ಬರೆಯುತ್ತಾರೆ. ವಾರ್ತಾಭಾರತಿಯಲ್ಲಿ ಪ್ರಕಟವಾಗುವ ಸ್ಥಿರ ಅಂಕಣಗಳು ಮತ್ತು ಅಂಕಣಕಾರರ ಹೆಸರುಗಳು ಹೀಗಿವೆ:

ದಿನಅಂಕಣದ ಹೆಸರುಅಂಕಣಕಾರರು
ಸೋಮವಾರಪ್ರಚಲಿತಸನತ್ ಕುಮಾರ್ (ಹಿರಿಯ ಪತ್ರಕರ್ತ, ಹೋರಾಟಗಾರ)
ಗುರುವಾರನಿಜಾರ್ಥಶಿವಸುಂದರ್ (ಹಿರಿಯ ಲೇಖಕ, ಮಾನವ ಹಕ್ಕುಗಳ ಹೋರಾಟಗಾರ)
ಶುಕ್ರವಾರಆಶಯಡಾ. ಬಿ. ಭಾಸ್ಕರ್ ರಾವ್ (ಖ್ಯಾತ ಶಿಕ್ಷಣ ತಜ್ನ)
ರವಿವಾರಅಂತರಗಂಗೆಡಾ. ಸಿ. ಎಸ್. ದ್ವಾರಕನಾಥ್ (ಹಿರಿಯ ನ್ಯಾಯವಾದಿ, ಅನುಭವಿ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ)
ರವಿವಾರನಗೆಮೊಗೆಭುವನೇಶ್ವರಿ ಹೆಗಡೆ(ಖ್ಯಾತ ಹಾಸ್ಯ ಲೇಖಕಿ)
ಸೋಮವಾರದಾರಿದೀಪಕೆ. ಟಿ. ಗಟ್ಟಿ (ಕನ್ನಡದ ಖ್ಯಾತ ಕಾದಂಬರಿಗಾರ)
ಮಾಸಿಕ ಗಲ್ಫ್ ಭಾರತಿಮರಳ ಹೆಜ್ಜೆಗಳುಇರ್ಶಾದ್ ಮೊಡಬಿದ್ರೆ (ಲೇಖಕ, ಅನಿವಾಸಿ ಭಾರತೀಯ)


ರವಿವಾರದ ಪುರವಣಿ, ಸುಗ್ಗಿ

ನಿತ್ಯದ ೧೨ ಪುಟಗಳೊಂದಿಗೆ ಪ್ರತಿ ರವಿವಾರ ಸುಗ್ಗಿ ಹೆಸರಿನ ನಾಲ್ಕು ಹೆಚ್ಚುವರಿ ಪುಟಗಳನ್ನು ಪುರವಣಿ ರೂಪದಲ್ಲಿ ವಾರ್ತಾಭಾರತಿ ಪ್ರಕಟಿಸುತ್ತಿದೆ. ನಾಡಿನ ಹೆಸರಾಂತ ಲೇಖಕರ ನುಡಿಚಿತ್ರ, ಲೇಖನ, ಕಥೆ, ಕವನ, ವಿಮರ್ಶೆ, ಪುಸ್ತಕ ಪರಿಚಯ ಇತ್ಯಾದಿಗಳನ್ನು ಈ ಪುರವಣಿ ಹೊಂದಿದೆ. ಖುಷಿ ಖುಷಿ ಎಂಬ ವಿಭಾಗ ಮಕ್ಕಳಿಗಾಗಿ ಮೀಸಲು. ನೀತಿಕಥೆಗಳು, ಮಕ್ಕಳು ರಚಿಸಿದ ಚಿತ್ರಗಳು, ಮಕ್ಕಳ ಪದ್ಯಗಳು ಇತ್ಯಾದಿ ವಿಷಯಗಳು ಇದರಲ್ಲಿದೆ. ಚಿತ್ರಭಾರತಿ ವಿಭಾಗದಲ್ಲಿ ಪ್ರಚಲಿತ ಚಿತ್ರರಂಗದ ಬೆಳವಣಿಗೆಗಳು ಹಾಗೂ ಚಿತ್ರ ವಿಮರ್ಶೆಗಳಿರುತ್ತವೆ.

ಅಂಕಣಕ್ಕೆ ರಾಜ್ಯ ಅಕಾಡೆಮಿ ಪ್ರಶಸ್ತಿ

ವಾರ್ತಾಭಾರತಿ ದೈನಿಕದಲ್ಲಿ ಪ್ರತಿ ವಾರ ಪ್ರಕಟವಾಗುತ್ತಿದ್ದ ಪರಿಸರ ಕಾಳಜಿ ಅಂಕಣ ಭೂಮಿಗೀತೆ. ಲೇಖಕ ಹಾಗೂ ಪರಿಸರ ಚಳವಳಿಯ ಸಕ್ರಿಯ ಕಾರ್ಯಕರ್ತ ಡಾ. ಟಿ. ಎಸ್. ವಿವೇಕಾನಂದ ಈ ಅಂಕಣವನ್ನು ವಾರ್ತಾಭಾರತಿಗಾಗಿ ಬರೆದಿದ್ದರು. ನಂತರ ಈ ಬರಹಗಳು ಭೂಮಿಗೀತೆ ಹೆಸರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ೨೦೦೬ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇದಕ್ಕೆ ದೊರಕಿದೆ.

ಸಂಪಾದಕರು

ವಾತಾ೯ ಭಾರತಿಯ ಸಂಪಾದಕರು ಎ.ಎಸ್. ಪುತ್ತಿಗೆಯವರು.

ಅಂತರ್ಜಾಲ ತಾಣ

ವಾರ್ತಾಭಾರತಿ.ನೆಟ್ ಅಥವಾ ವಾರ್ತಾಭಾರತಿ.ಇನ್ ವಾರ್ತಾಭಾರತಿ ದಿನಪತ್ರಿಕೆಯ ಅಂತರ್ಜಾಲ ತಾಣ. ಅಂತರ್ಜಾಲದ ಹೊಸ ತಂತ್ರಜ್ಞಾನ ಬಳಸಿ ಕನ್ನಡದಲ್ಲಿ ವಾರ್ತಾಭಾರತಿಯ ಅಂತರ್ಜಾಲ ಆವೃತ್ತಿಯನ್ನು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಹೊರಗಿನ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.