ಪರಶುರಾಮ

ಪರಶುರಾಮ ವಿಷ್ಣುವಿನ ಆರನೆಯ ಅವತಾರ, ಮತ್ತು ಬ್ರಹ್ಮನ ವಂಶಸ್ಥ ಹಾಗೂ ಶಿವನ ಶಿಷ್ಯ. ಅವನು ರೇಣುಕಾ ಹಾಗೂ ಸಪ್ತರ್ಷಿ ಜಮದಗ್ನಿಯ ಪುತ್ರ. ಅವನು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದನು.ಇವನು ತಾಯಿಗಾಗಿ ಪರಶುಘಡದಲ್ಲಿ(ಸವದತ್ತಿ) ತಪಗೈದು ವಿಶ್ನುವಿನಿಂದ ಪರುಶು(ಕೊಡಲಿ) ಪಡೆದಿದ್ದನು. ಇವನು ಹಿಂದೂ ಧರ್ಮದ ಏಳು ಅಮರ್ತ್ಯರು ಅಥವಾ ಚಿರಂಜೀವಿಗಳ ಪೈಕಿ ಒಬ್ಬನು.

ಪರಶುರಾಮ
Lithograph by KFLMSBJART2018 depicting Parashurama with his axe
ದೇವನಾಗರಿपरशुराम
ಸಂಸ್ಕೃತ ಲಿಪ್ಯಂತರಣParaśurāma
ಸಂಲಗ್ನತೆAvatar of Lord Vishnu
ನೆಲೆMahendragiri,KARNATAKA(ಪರಶುಘಢ)
ಆಯುಧAxe (Parshu)
ಒಡನಾಡಿDharini
Surya, the sun god, riding across the sky in his chariot
Meeting of Rama and Parashurama

ಪರಶುಘಢ ಪರಶುರಾಮರ ಜನ್ಮಸ್ಥಳ

ಪರಶುರಾಮರ ಜನ್ಮಸ್ಥಳ ರೇಣುಕಾತೀರ್ಥ. ಈಗಿನ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಬಳಿಯ ಪರಶುಘಡ.ಆಧುನಿಕ ಮಹೇಶ್ವರದಲ್ಲಿ ಅವರ ವಂಶಾವಳಿ ನಡೆಯಿತು ಎಂಬುದಾಗಿ ಪ್ರಸ್ತಾಪಿಸಲಾಗಿದೆ. ಅವರ ತಂದೆ ಋಷಿ ಜಮದಗ್ನಿ [ಬ್ರಹ್ಮ] ದೇವರ ನೇರ ತಲೆಮಾರಿನವರಾಗಿದ್ದರು ಎಂಬುದಾಗಿ ಮೂಲಗಳು ತಿಳಿಸಿವೆ.

ಭಗವಾನ್ [[ವಿಷ್ಣು]ವಿನ ಆರನೆಯ ಅವತಾರವೆಂದೇ ಖ್ಯಾತರಾಗಿರುವ ಮಹರ್ಷಿ ಪರಶುರಾಮರು ಬ್ರಾಹ್ಮಣ ಸಪ್ತರ್ಷಿಯಾದ ಜಮದಗ್ನಿ ಮತ್ತು ರೇಣುಕಾದೇವಿ ಯವರ ಪುತ್ರರಾಗಿದ್ದಾರೆ. ತ್ರೇತಾಯುಗದಲ್ಲಿ ಜನಿಸಿ, ಹಿಂದೂ ಧರ್ಮದಲ್ಲಿ ಸಪ್ತಚಿರಂಜೀವಿ ಎಂದು ಕರೆಯಲಾದ ಏಳು ದೇವತೆಗಳಲ್ಲಿ ಒಬ್ಬರೆನಿಸಿದ್ದಾರೆ. ಹುಟ್ಟುವಾಗಲೇ ಬ್ರಾಹ್ಮರಾಗಿದ್ದರೂ, ಕ್ಷತ್ರಿಯರ ಆಕ್ರಮಶೀಲತೆ ಮತ್ತು ಧೈರ್ಯ ಪರಶುರಾಮನಿಗೆ ಇದ್ದುದರಿಂದ ಬ್ರಹ್ಮ ಕ್ಷತ್ರಿಯನೆಂಬ ಹೆಸರನ್ನೂ ಪರಶುರಾಮ ಪಡೆದುಕೊಂಡಿದ್ದಾರೆ.

ಯುದ್ಧ ವಿದ್ಯಾ ಪರಿಣಿತನಾಗಿದ್ದ ಪರಶುರಾಮ ಭ್ರಷ್ಟ ಯೋಧರಿಗೆ ಸಿಂಹಸ್ವಪ್ನ ಎಂದೆನಿಸಿದ್ದರು.ಅಷ್ಟೇ ಅಲ್ಲದೆ ಕೇರಳದ ಕಲರಿಪಯಟ್ಟುವಿನ ಜನಕಕೂಡ ಹೌದು. ಭೂಮಿಯ ಮೇಲೆ 21 ಬಾರಿ ಪರ್ಯಟನೆಮಾಡಿ ಭ್ರಷ್ಟ ಕ್ಷತ್ರಿಯರನ್ನು ಇವರೊಬ್ಬರೇ ವಧಿಸಿದ್ದಾರೆ. ಪರಶು ಎಂಬುದರ ಅರ್ಥ ಕೊಡಲಿ.ಪರಶುರಾಮ ಎಂಬ ಹೆಸರು ಈ ಅರ್ಥವನ್ನು ಹೊಂದಿರುವುದರಿಂದ ಕೊಡಲಿಯನ್ನು ಹೊಂದಿರುವ ರಾಮ ಎಂಬ ಹೆಸರಿನಿಂದ ಕೂಡ ಪರಶುರಾಮ ಜನಜನಿತರಾಗಿದ್ದರು. ತಾಯಿಯ ಶಿರವನ್ನೇ ಕಡಿದ ಪರಶುರಾಮನ ಪಿತೃಭಕ್ತಿಗೆ ಎಣೆಯು೦ಟೇ..?!. ತಮ್ಮ ದಾರಿಗೆ ಅಡ್ಡ ಬರುವಂತಹ ಕ್ಷತ್ರಿಯ ರಾಜರನ್ನು ಕೊಲ್ಲುತ್ತಾ ಹೊರಟ ಪರಶುರಾಮ ಏಕೈಕ ರಾಜನನ್ನೂ ಬಿಟ್ಟಿಲ್ಲ ಎಂಬುದಾಗಿ ಪುರಾಣ ಹೇಳುತ್ತದೆ. ಇದರಿಂದಾಗಿ ಬ್ರಾಹ್ಮಣ ಜೀವನ ಶೈಲಿಯನ್ನು ಅವರು ಉಲ್ಲಂಘಿಸಿದ್ದರೆಂದು ಕೊಲೆಗಳಿಂದ ಅವರು ಕಳಂಕಿತರಾಗಿದ್ದರೆಂದು ಇತರೆ ಬ್ರಾಹ್ಮಣರು ಅವರನ್ನು ದೂರವಿರಿಸಿದ್ದರು. ಹಿಂದೂ ಪುರಾಣದಲ್ಲಿ ಪರಶುರಾಮರನ್ನು ಕುರಿತ ಇನ್ನಷ್ಟು ಸತ್ಯಗಳು ಮರೆಯಾಗಿದ್ದು ಅವುಗಳನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನ.

==ಪರಶುರಾಮನ ಶಿಷ್ಯರು ಬೀಷ್ಮ ( ದೇವವೃತ) ದ್ರೋಣಾಚಾರ್ಯ ಕರ್ಣ

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.