ದಶಾವತಾರ

ದಶಾವತಾರ ಜಾಗತಿಕ ಸಂರಕ್ಷಣೆಯ ಹಿಂದೂ ದೇವತೆಯಾದ ವಿಷ್ಣುವಿನ ಹತ್ತು ಅವತಾರಗಳನ್ನು ಸೂಚಿಸುತ್ತದೆ.

ದಶಾವತಾರಗಳು

ಅವತಾರ ಎಂದರೆ ಇಳಿದುಬರುವುದು ಎಂದರ್ಥ. ಇದು ಭಗವಂತ ಜೀವಕೋಟಿಯ ಉದ್ಧಾರಕ್ಕೆ ಕೈಕೊಳ್ಳುವ ಒಂದು ಕ್ರಿಯೆ. ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮವನ್ನು ಪುನಃಸ್ಥಾಪಿಸಲು, ಹಾಗು ಅರ್ಹರನ್ನು ಅಥವಾ ಭಕ್ತರನ್ನು ಹುಟ್ಟು ಮತ್ತು ಸಾವುಗಳ ಚಕ್ರದಿಂದ ಮುಕ್ತಗೊಳಿಸಲು ಸುಜನರನ್ನು ಎತ್ತಿಹಿಡಿದು ದುರ್ಜನರನ್ನು ದಮನಗೊಳಿಸುವುದರ ಮೂಲಕ ಧರ್ಮಸಂಸ್ಥಾಪನೆಗೆ ಪರಮಾತ್ಮ ಕಾಲಕಾಲಕ್ಕೆ ಯಾವುದೋ ಒಂದು ರೂಪದಲ್ಲಿ ಭೂಮಿಗೆ ಇಳಿದುಬರುತ್ತೇನೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವ ಮಾತು ಅವತಾರ ಎನ್ನುವುದರ ಉದ್ದೇಶವನ್ನು ಸೂಚಿಸುತ್ತದೆ.

ಈ ಅವತಾರಗಳ ಸಂಖ್ಯೆಯ ವಿಚಾರದಲ್ಲಿ ಒಮ್ಮತವಿಲ್ಲ. ಅಲ್ಲದೆ ಅವತಾರಗಳು ವಿಷ್ಣುವಿಗೇ ಮೀಸಲಾದವಲ್ಲ. ಶಿವನೂ ಅವತಾರ ಮಾಡಿದ್ದಾನೆ ಎಂಬುದನ್ನೂ ಮರೆಯುವಂತಿಲ್ಲ. ಮಹೇಶ್ವರ ಇಪ್ಪತ್ತೆಂಟು ಅವತಾರಗಳನ್ನು ಎತ್ತಿದ್ದಾನೆ ಎಂದು ವಾಯು ಪುರಾಣ ಹೇಳುತ್ತದೆ.

ಹಿಂದೂ ಸಂಪ್ರದಾಯ ವಿಷ್ಣುವಿನ ಅವತಾರಗಳ ಸಂಖ್ಯೆ ಹತ್ತು ಎಂದು ನಂಬಿದೆ. ಹಿಂದೆ ಸಹಸ್ರಾರು ಆಗಿದ್ದವೆಂದೂ ಭವಿಷ್ಯದಲ್ಲಿ ಅನೇಕ ಸಹಸ್ರ ಅವತಾರಗಳು ಆಗುತ್ತವೆ ಎಂದೂ ಹರಿವಂಶದಲ್ಲಿ ಹೇಳಿದೆ. ಪೂರ್ವಮೀಮಾಂಸಾಚಾರ್ಯರಾದ ಕುಮಾರಿಲ ಭಟ್ಟರು ದಶಾವತಾರಗಳಲ್ಲೊಂದಾದ ಬುದ್ಧಾವತಾರವನ್ನು ವಿಷ್ಣುವಿನದೆಂಬುದನ್ನು ಒಪ್ಪುವುದಿಲ್ಲ.

ವಿಷ್ಣುವಿನ ಹತ್ತು ಅವತಾರಗಳು

  1. ಮತ್ಸ್ಯ
  2. ಕೂರ್ಮ
  3. ವರಾಹ
  4. ನರಸಿಂಹ
  5. ವಾಮನ
  6. ಪರಶುರಾಮ
  7. ರಾಮ - ದಶರಥ ನ ಮಗ ರಾಮ
  8. ಕೃಷ್ಣ - ವಸುದೇವನ ಮಗ ಕೃಷ್ಣ
  9. ಬುದ್ಧ -
  10. ಕಲ್ಕಿ - ಕಲಿಯುಗದ ಅಂತ್ಯದಲ್ಲಿ ಅವತರಿಸುವವ



This article is issued from Wikipedia. The text is licensed under Creative Commons - Attribution - Sharealike. Additional terms may apply for the media files.