ಕೈರೋ

ಕೈರೋ (ಅರೇಬಿಕ್: القاهرة ಅಲ್-ಖಾಹಿರ), ಈಜಿಪ್ಟ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಅಲ್-ಖಾಹಿರ ಎಂದರೆ ವಿಜಯಿ ಎಂದು ಅರ್ಥ. ಇದು ಅರಬ್ ಪ್ರಪಂಚದ ಅತ್ಯಂತ ದೊಡ್ಡ ನಗರ ಹಾಗೂ ಆಫ್ರಿಕ ಖಂಡದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.[3] ಈಜಿಪ್ಟ್ನ ಅರೇಬಿಕ್ ಭಾಷೆಯಲ್ಲಿ ಇದನ್ನು ಮಸ್ರ್ ಎಂದೂ ಕರೆಯುತ್ತಾರೆ.

{{#if:|

ಕೈರೋ
القـــاهــرة ಅಲ್-ಖಾಹಿರ
ಎಲ್-ಗೆಜೀರ ಉದ್ಯಾನ, ಕೈರೋ
ಎಲ್-ಗೆಜೀರ ಉದ್ಯಾನ, ಕೈರೋ
ಅಡ್ಡಹೆಸರು(ಗಳು): "ಎಂದೂ ಮಲುಗದಿರುವ ನಗರ", or "ಸಾವಿರ ಮಿನಾರೆಟ್‌ಗಳ ನಗರ"
ರೇಖಾಂಶ: 30°03′N 31°22′E
ದೇಶ ಈಜಿಪ್ಟ್
ರಾಜ್ಯ(ಗವರ್ನೇಟ್) ಕೈರೋ
ಸರ್ಕಾರ
 - ರಾಜ್ಯಪಾಲ ಡಾ. ಅಬ್ದುಲ್ ಅಜಿಮ್ ವಜೀರ್
ವಿಸ್ತೀರ್ಣ
 - ಒಟ್ಟು ೨೧೪ ಚದರ ಕಿಮಿ (೮೨.೬ ಚದರ ಮೈಲಿ)
ಜನಸಂಖ್ಯೆ (೨೦೧೧[1][2])
 - ಒಟ್ಟು ೧,೦೨,೩೦,೩೫೦
 - ಸಾಂದ್ರತೆ ೧೯,೩೭೬/ಚದರ ಕಿಮಿ (೫೦,೧೮೩.೬/ಚದರ ಮೈಲಿ)
 - ಮಹಾನಗರ ೨,೦೪,೩೯,೫೪೧
{{{language}}} {{{ಭಾಷೆ}}}
ಕಾಲಮಾನ EET (UTC+2)
 - ಬೇಸಿಗೆ (DST) EEST (UTC+3)
ಅಂತರ್ಜಾಲ ತಾಣ: www.cairo.gov.eg

ಭೌಗೋಳಿಕ

ನಗರದ ಪೂರ್ವಕ್ಕಿರುವ ಅಲ್ ಮೊಕತ್ತಂ ಮರಳುಗುಡ್ಡದಿಂದ ಕೈರೋ ನಗರದ, ನದಿಯ ಮತ್ತು ದೂರದ ಗೀಜದ ಪಿರಮಿಡ್‍ಗಳ ಸುಂದರ ದೃಶ್ಯವನ್ನು ಕಾಣಬಹುದು. ಪಶ್ಚಿಮ ಏಷ್ಯ ಪ್ರದೇಶದಲ್ಲೇ ಮತ್ತು ಇಡೀ ಆಫ್ರಿಕದಲ್ಲೇ ಇದು ಅತ್ಯಂತ ದೊಡ್ಡ ನಗರ.

ಜನಸಂಖ್ಯೆ

ಜನಸಂಖ್ಯೆ 10,230,350(೨೦೧೧)[4] .

ವಾಯುಗುಣ

ಬಹುತೇಕ ಇಡೀ ವರ್ಷ ಕೈರೋದಲ್ಲಿ ಶುಷ್ಕ ವಾಯುಗುಣ ಇರುತ್ತದೆ. ಹಗಲಿನ ಉಷ್ಣತೆಯ ಸರಾಸರಿ ಜನವರಿಯಿಂದ ಜುಲೈ-ಆಗಸ್ಟ್‍ಗಳವರೆಗೆ 600 ಫ್ಯಾ-960ಫ್ಯಾ.ಗಳ ಅಂತರದಲ್ಲಿರುತ್ತದೆ. ಏಪ್ರಿಲ್-ಮೇ ತಿಂಗಳುಗಳಲ್ಲಿ ಮರಳು ತುಂಬಿದ ಬಿಸಿಗಾಳಿ ದಕ್ಷಿಣದಿಂದ ಬೀಸಿದಾಗ 1000 ಫ್ಯಾ.ಗೂ ಮೀರಿ ಇಲ್ಲಿ ಉಷ್ಣತೆ ಇರುವುದುಂಟು. ಬೇಸಗೆಯ ಗರಿಷ್ಠ ಉಷ್ಣತೆ ಸು.1080 ಫ್ಯಾ. ವರ್ಷದಲ್ಲಿ ಮೂರು ನಾಲ್ಕು ಬಾರಿ ಮಾತ್ರ-ಅದೂ ಚಳಿಗಾಲದಲ್ಲಿ-ಮಳೆಯಾಗುತ್ತದೆ.

ಮೆಟ್ರೋಪಾಲಿಟನ್ ಪ್ರದೇಶ

Qasr al-Nil Bridge.
Nile view of Grand Hyatt Cairo at night
Night view of the Nile City Towers. Orascom Construction Industries headquarters is at the south tower (on the right). The Fairmont Hotel lies in-between the two towers
Cairo Skyline

ನಾಗರಿಕ ವಿಮಾನ ನಿಲ್ದಾಣದಿಂದ ಈಶಾನ್ಯಕ್ಕೆ ಸಾಗುವ ರಸ್ತೆ ಕೈರೋದ ಆಧುನಿಕ ಉಪನಗರವಾದ ಹೆಲಿಯೊಪೊಲಿಸಿನ ಮೂಲಕ ಹಾದು, ಷರಿಯ ರ್ಯಾಮಿಸೀಸ್ ಮತ್ತು ಷರಿಯ ಅಲ್ ಗೇಷ್‍ಗಳಿಗೆ ಕವಲೊಡೆಯುತ್ತದೆ. ಷರಿಯ ರ್ಯಾಮಿಸೀಸ್‍ನ ಕೊನೆಯಲ್ಲಿ ರೈಲ್ವೆ ನಿಲ್ದಾಣದ ಎದುರಿಗೆ ಇರುವುದೇ ರಾಮಿಸೀಸ್ ಚೌಕ. ಇಲ್ಲಿ 2ನೆಯ ರ್ಯಾಮಿಸೀಸ್‍ನ ಬೃಹದಾಕಾರದ ಪುರಾತನ ಪ್ರತಿಮೆಯಿದೆ. ಮೆಂಫಿಸ್ ಸ್ಥಳದಿಂದ ಇಲ್ಲಿಗೆ ಈ ಪ್ರತಿಮೆಯನ್ನು 1955ರಲ್ಲಿ ತರಲಾಯಿತು. ಇಲ್ಲಿಂದ ಹೊರಡುವ ಮುಖ್ಯ ರಸ್ತೆಗಳಲ್ಲೊಂದಾದ ಷರಿಯ ಅಲ್ ಗುಮ್ಹುರಿಯದಲ್ಲಿ ಸಾಗಿದರೆ ಒಪೆರ ಚೌಕ ಸಿಗುತ್ತದೆ. ಸೂಯೆಜ್ ಕಾಲುವೆಯ ಆರಂಭೋತ್ಸವದ ಅಂಗವಾಗಿ ಇಲ್ಲಿ 1869ರಲ್ಲಿ ಒಪೆರ ಭವನದ ಆರಂಭವಾಯಿತು. ಒಪೆರ ಚೌಕದ ನಡುವೆ ಮಹಮ್ಮದ್ ಆಲೀ ಪಾಷನ ಮಗ ಇಬ್ರಾಹಿಮನ ಸುಂದರ ಪ್ರತಿಮೆಯಿದೆ. ಅದಕ್ಕೆದುರಾಗಿ ಕಾಂಟಿನೆಂಟಲ್-ಸವಾಯ್ ಹೋಟೆಲು. ಹತ್ತಿರದಲ್ಲೇ ಅಲ್ ಎಜ್ಬೇóಕಿಯ ಸಾರ್ವಜನಿಕ ಉದ್ಯಾನ. ಇದರೊಳಗೆ ಹಾಯ್ದು ಹೋಗುವ ಉದ್ದನೆಯ ಬೀದಿಯೇ ಷರಿಯ ಜುಲೈ 26. ಮುಂದೆ ಇದು ನದಿಯನ್ನು ದಾಟಿ ಜೆಜಿಕೀರ ದ್ವೀಪಕ್ಕೆ ಸಾಗುತ್ತದೆ. ಷರಿಯ ಸುಲಿಮಾನ್ ಪಾಷ ರಸ್ತೆಯಲ್ಲಿ ದಕ್ಷಿಣಾಭಿಮುಖವಾಗಿ ಸಾಗಿದರೆ ಸುಲಿಮಾನ್ ಪಾಷ ಚೌಕ ಸಿಗುತ್ತದೆ. ಅಲ್ಲಿಂದ ಪೂರ್ವಕ್ಕೆ ಷರಿಯ ಕಸ್ರ್ ಅಲ್ ನಿಲ್. ಈಜಿಪ್ಟಿನ ರಾಷ್ಟ್ರೀಯ ಬ್ಯಾಂಕ್ (1898) ಅಲ್ಲಿದೆ. ಷರಿಯ ಸುಲಿಮಾನ್ ಪಾಷದ ಆಚೆಗೆ ಕೆಲವು ಮುಖ್ಯ ಪತ್ರಿಕಾ ಕಚೇರಿಗಳಿವೆ. ಸುಲಿಮಾನ್ ಪಾಷ ಚೌಕಕ್ಕೂ ನೈಲ್ ನದಿಗೂ ನಡುವೆ ಇರುವುದೇ ವಿಮೋಚನಾ (ತಹ್ರಿರ್) ಚೌಕ. ಹತ್ತು ರಸ್ತೆಗಳು ಕೂಡುವ ಸ್ಥಳವಿದು. ಇದರ ದಕ್ಷಿಣ ಪಾಶ್ರ್ವದಲ್ಲಿ ಸರ್ಕಾರಿ ಕಚೇರಿಗಳ ಆಧುನಿಕ ಕಟ್ಟಡಗಳುಂಟು. ಅಲ್ಲೇ ಎದುರಿಗೆ 1902ರಲ್ಲಿ ಕಟ್ಟಲಾದ ಈಜಿಪ್ಟ್ ವಸ್ತುಸಂಗ್ರಹಾಲಯವಿದೆ. 1928ರಲ್ಲಿ ನಿರ್ಮಿತವಾದ ಆಧುನಿಕ ಕಲಾ ವಸ್ತುಸಂಗ್ರಹಾಲಯ ಇರುವುದೂ ಹತ್ತಿರದಲ್ಲೇ. ಆಧುನಿಕ ಕೈರೋಗೂ ಅಲ್ ಮೊಕತ್ತಂ ಬೆಟ್ಟಗಳಿಗೂ ನಡುವೆ 11 ರಿಂದ 16ನೆಯ ಶತಮಾನಗಳ ನಡುವಣ ಕಾಲದಲ್ಲಿ ನಿರ್ಮಿತವಾದ ಅರಬ್ ನಗರದ ಬಹುಭಾಗವಿದೆ. ವಿಶ್ವದ ಬೇರಾವುದೇ ನಗರದಲ್ಲಿಲ್ಲದಷ್ಟು ಅಧಿಕ ಸಂಖ್ಯೆಯಲ್ಲಿ ಅರಬ್ ವಾಸ್ತು ಸಂಪತ್ತು ಇಲ್ಲಿ ಸಾಂದ್ರೀಕೃತವಾಗಿದೆ. ಪಟ್ಟಿಮಾಡಲಾದ ಐತಿಹಾಸಿಕ ಸ್ಮಾರಕಗಳ ಸಂಖ್ಯೆಯೇ ಸುಮಾರು 400. ಇಲ್ಲಿ ಮಹಮ್ಮದ್ ಆಲಿ ಕಟ್ಟಿಸಿದ ಆಟೊಮನ್ ಶೈಲಿಯ ಸುಂದರ ಮಸೀದಿ ಇದೆ. ಇದರಲ್ಲಿ ಈತನನ್ನು 1849ರಲ್ಲಿ ಸಮಾಧಿ ಮಾಡಲಾಯಿತು. ಇದು 12ನೆಯ ಶತಮಾನದಲ್ಲಿ ಸಾಲಾದೀನ್ ಕಟ್ಟಿಸಿದ ಕೋಟೆಯೊಳಗಡೆ ಇದೆ. ಇಲ್ಲಿಯೇ 1946ರಲ್ಲಿ ಬ್ರಿಟಿಷ್ ಸೈನ್ಯ ಈಜಿಪ್ಟ್ ಸೈನ್ಯಕ್ಕೆ ಅಧಿಕಾರವನ್ನು ವಹಿಸಿಕೊಟ್ಟದ್ದು. ಸಾಲಾದಿನ್ ಚೌಕವಿರುವುದು ಈ ಕೋಟೆಯಿಂದ ಕೆಳಕ್ಕೆ. ಇಸ್ಲಾಂ ವಾಸ್ತುಶಿಲ್ಪಕ್ಕೆ ಹೆಸರಾದ, 1361ರಲ್ಲಿ ಸುಲ್ತಾನ್ ಹಸನ್ ಕಟ್ಟಿಸಿದ, ಮಸೀದಿ ಈ ಚೌಕದಿಂದಾಚೆಗಿದೆ. 1912ರಲ್ಲಿ ಕಟ್ಟಿ ಮುಗಿಸಿದ ಅಲ್ ರಿಫಾಇಯ ಆಧುನಿಕ ಮಸೀದಿ ಇದೆ. ದೊರೆ ಫೌದ್ ಮತ್ತು ಆತನ ಕುಟುಂಬದವರ ಸಮಾಧಿ ಇರುವುದು ಇಲ್ಲೇ.

ಕಲೋಪಾಸಕರಿಗೆ, ಪಂಡಿತರಿಗೆ ಮತ್ತು ಪ್ರಾಕ್ತನ ಶಾಸ್ತ್ರಜ್ಞರಿಗೆ ಇಲ್ಲಿಯ ಕಟ್ಟಡಗಳು ಒಂದು ಆಕರ್ಷಣೆ. ಉತ್ತರ ಆಫ್ರಿಕದ ಫಾತಿಮೈಟ್ ಆಕ್ರಮಣಕಾರರು 970ರಲ್ಲಿ ಸ್ಥಾಪಿಸಿದ ವಿಶ್ವವಿದ್ಯಾಲಯ ಅಲ್ ಅಜ್ó ಹರ್ ಮಸೀದಿ ಇರುವುದು ಈ ಬಳಿಯಲ್ಲೇ. ಇಲ್ಲಿಗೇ ಚೀನ, ಮೊರಾಕೋ, ಇಂಡೋನೇಷ್ಯ ಮತ್ತು ಸೋಮಾಲಿ ಲ್ಯಾಂಡ್ ಮುಂತಾದ ದೇಶಗಳಿಂದ ಮುಸ್ಲಿಂ ನ್ಯಾಯಶಾಸ್ತ್ರ, ಕೊರಾನ್, ಅರಬೀ ಭಾಷೆ, ತತ್ತ್ವಶಾಸ್ತ್ರ ಮತ್ತು ಇತಿಹಾಸದ ಅಧ್ಯಯನಕ್ಕೆ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಅಹ್ಮದ್ ಇಬ್ನ್‍ಟುಲುನ್ 876-879ರಲ್ಲಿ ಕಟ್ಟಿಸಿದ ಪ್ರಸಿದ್ಧ ಮಸೀದಿ ಹಳೆಯ ನಗರದ ದಕ್ಷಿಣಕ್ಕಿದೆ. ಅಹ್ಮದ್ ಇಬ್ನ್‍ಟುಲುನ್ ಬಾಗ್ದಾದಿನಿಂದ ಬಂದವನು. ಆದ್ದರಿಂದ ಈ ಮಸೀದಿಯಲ್ಲೂ ಬಾಗ್ದಾದಿನ ಸುಂದರ ಕೆತ್ತನೆಯನ್ನು ಕಾಣಬಹುದು.

ಮ್ಯಾಮೆಲೂಕರ ಗೋರಿಯ ಆಗ್ನೇಯಕ್ಕೆ ಇರುವ ಅಲ್ ಪುಸ್ತಾತ್ ಜನರಹಿತ ಭಾಗ. ಅರಬರು ಈ ಪ್ರದೇಶವನ್ನು ಗೆದ್ದಾಗ 641ರಲ್ಲಿ ಸ್ಥಾಪಿಸಲಾದ, ಅತ್ಯಂತ ಹಳೆಯ, ವಸತಿಯ ಪ್ರದೇಶವಿದು. ಅಲ್ ಪುಸ್ತಾತ್‍ಗೂ ನೈಲ್‍ನದಿಗೂ ನಡುವೆ ಹಳೆಯ ಕೈರೋ ಎಂದು ಕರೆಯುವ ಭಾಗವಿದೆ. ಇಲ್ಲಿ ಪುರಾತನ ಕಾಲದಿಂದಲೂ ಕಾಪ್ಟಿಕ್ ಕ್ರೈಸ್ತರು ವಾಸವಾಗಿದ್ದಾರೆ. ಇಲ್ಲಿ ಕಾಪ್ಟಿಕ್ ಶೈಲಿಯ ಹಳೆಯ ಚರ್ಚ್‍ಗಳೂ 1910ರಲ್ಲಿ ಸ್ಥಾಪಿಸಿದ ಕಾಪ್ಪಿಕ್ ಕಲಾ ವಸ್ತುಸಂಗ್ರಹಾಲಯವೂ ಇವೆ. ಇದರ ಹತ್ತಿರ ಬಿಜಾನ್‍ಟೈನ್ ರೋಮನರ ಹೆಬ್ಬಾಗಿಲಿದೆ. ಹಳೆಯ ಕೈರೋದಿಂದ ಆಧುನಿಕ ಕೈರೋಗೆ ಅನೇಕ ರಸ್ತೆಗಳುಂಟು. ಇವುಗಳಲ್ಲಿ ಷರಿಯ ಕಸ್ರ್ ಅಲ್ ಐನಿ ಎಂಬುದು ಮುಖ್ಯ. ಇದು ಕೈರೋ ವಿಶ್ವವಿದ್ಯಾಲಯ ವೈದ್ಯಕೀಯ ಶಾಲೆ ಮತ್ತು ಆ್ಯಂಟಿರಾಬಿಕ್ ಆಸ್ಪತ್ರೆಯನ್ನು ಹಾದು ಹೋಗುತ್ತದೆ. ನೈಲ್ ನದಿಗೂ ಈ ರಸ್ತೆಗೂ ನಡುವೆ ಕೆಲವು ದೂತಾವಾಸಗಳೂ ತೋಟದ ನಗರವೂ ಇವೆ. ಈ ರಸ್ತೆಯ ಇನ್ನೊಂದು ಬದಿಗೆ ಹಲವು ಸಚಿವಾಲಯಗಳೂ 1923ರಲ್ಲಿ ನಿರ್ಮಿತವಾದ ಪಾರ್ಲಿಮೆಂಟ್ ಭವನವೂ ಉಂಟು. ಇದರ ಹತ್ತಿರವೇ ಸಾದ್ ಜಾóಗ್‍ಲುಲ್ ಎಂಬ ಪ್ರಸಿದ್ಧ ರಾಷ್ಟ್ರಪ್ರೇಮಿಯ ಗೋರಿಯೂ ಭೂವಿಜ್ಞಾನ ವಸ್ತುಸಂಗ್ರಹಾಲಯವೂ ಅಮೆರಿಕನ್ ವಿಶ್ವವಿದ್ಯಾಲಯವೂ ಇವೆ. ಪೂರ್ವದಲ್ಲಿರುವ ಗುಮ್ಹೂರಿಯ ಚೌಕದಲ್ಲಿ ಅರಬ್ ಗಣರಾಜ್ಯಾಧ್ಯಕ್ಷರ ಅಧಿಕೃತನಿವಾಸವುಂಟು. ಇದು ಹಿಂದೆ ದೊರೆ ಫರೂಕನ ಅಬ್‍ದಿನ್ ಅರಮನೆಯಾಗಿತ್ತು. ದೊಡ್ಡ ಉದ್ಯಾನದ ನಡುವೆ ಇರುವ ಸುಂದರ ಕಟ್ಟಡವಿದು. ಅರಮನೆಗೆ ಹಿಂದೆ ಇರುವ ಆಹ್ಮೆದ್ ಮಹೆರ್ ಚೌಕದಲ್ಲಿ ಇಸ್ಲಾಮೀ ಕಲಾವಸ್ತು ಸಂಗ್ರಹಾಲಯವಿದೆ. ಖೆಡಿವ್ ಇಸ್ಮೇಲ್ 1869ರಲ್ಲಿ ಸ್ಥಾಪಿಸಿದ ಈಜಿಪ್ಷಿಯನ್ ಗ್ರಂಥಾಲಯ ಇರುವುದು ಇಲ್ಲೇ. ಈ ಗ್ರಂಥಾಲಯದಲ್ಲಿ ಪಶ್ಚಿಮ ಏಷ್ಯ ಪ್ರದೇಶದ ಅನೇಕ ಗ್ರಂಥಗಳೂ ನಾಣ್ಯಗಳೂ ಇವೆ.

ಕೈರೋಗೆ ಎದುರಾಗಿ ನೈಲ್ ನದಿಯಲ್ಲಿರುವ ಜೆಜೀóರ ಮತ್ತು ರೋಡ ದ್ವೀಪಗಳು ಬಹುತೇಕ ನಗರಕ್ಕೆ ಸೇರಿದಂತೆಯೇ ಇವೆ. ಇವಕ್ಕೂ ನಗರಕ್ಕೂ ಸಂಬಂಧ ಕಲ್ಪಿಸುವ ಅನೇಕ ಸೇತುವೆಗಳುಂಟು. ಜೆಜೀóರದ ಉದ್ದ 3 3/4 ಮೈ., ಗರಿಷ್ಠ ಅಗಲ 1ಮೈ. ಇದರ ಉತ್ತರಭಾಗ ವಾಸದ ಮನೆಗಳಿಂದ ಕೂಡಿದೆ. ಮಧ್ಯಭಾಗದಲ್ಲಿ ಜೆಜೀóರ ಕ್ರೀಡಾಸಂಘ, ಕುದುರೆ ಪಂದ್ಯ ಮೈದಾನ, ಪೋಲೋ ಮೈದಾನ, ಮತ್ತು ಈಜುಕೊಳಗಳಿವೆ. ಡೇವಿಸ್ ಕಪ್ ವಲಯ ಪಂದ್ಯಗಳು ನಡೆಯುವ ಟೆನಿಸ್ ಆಟದ ಅಂಗಳಗಳು ಇರುವುದು ಇಲ್ಲೇ. ಪೂರ್ವ ತೀರದಲ್ಲಿರುವ ಉದ್ಯಾನವೊಂದು ವಿಶ್ರಾಂತಿ ಸ್ಥಳ. ದಕ್ಷಿಣ ಭಾಗದಲ್ಲಿ ಪ್ರದರ್ಶನಾವರಣವೂ ಕೃಷಿಸಚಿವಾಲಯಕ್ಕೆ ಸೇರಿದ ತೋಟಗಾರಿಕೆ ಪ್ರಯೋಗ ಕ್ಷೇತ್ರವೂ ಕ್ರೀಡಾಸಂಘಗಳೂ ಉದ್ಯಾನವೂ ಆಸ್ಪತ್ರೆಯೂ ಇವೆ. ರೋಡದ್ವೀಪ ಜೆಜೀóರಕ್ಕಿಂತ ಚಿಕ್ಕದು. ಪ್ರವಾಹಕ್ಕೆ ಎದುರು ದಿಕ್ಕಿನಲ್ಲಿ ರೋಡದಿಂದ ಒಂದು ಮೈಲಿ ದೂರದಲ್ಲಿದೆ. ಇಲ್ಲಿ ಆಸ್ಪತ್ರೆ, ಅರಮನೆ, ಉದ್ಯಾನಗಳು ಮತ್ತು ವಾಸಗೃಹಗಳಿವೆ. ರೋಡ ದ್ವೀಪದ ದಕ್ಷಿಣ ತುದಿಯಲ್ಲಿ 1,000 ವರ್ಷಗಳಿಗಿಂತ ಹೆಚ್ಚು ಕಾಲದಿಂದ ನೈಲ್ ನದಿಯ ಪ್ರವಾಹವನ್ನಳೆಯುತ್ತಿದ್ದ ನೈಲೋಮಾಪಕವನ್ನು ಕಾಣಬಹುದು. ಈ ದ್ವೀಪಗಳ ಪಶ್ಚಿಮಕ್ಕೆ ನದಿಯ ದಂಡೆಯ ಮೇಲೆ, ಅನೇಕ ಗ್ರಾಮಗಳೂ ಉಪನಗರಗಳೂ ಉಂಟು. 1798ರಲ್ಲಿ ನೆಪೋಲಿಯನ್ ಮ್ಯಾಮಲೂಕರನ್ನು ಸೋಲಿಸಿದ ಸ್ಥಳವಾದ ಎಂಬಾಬ ಇಲ್ಲಿದೆ. ಇದು ಈಗ ಕಾರ್ಮಿಕ ವಸತಿ ಪ್ರದೇಶ. ದಕ್ಷಿಣಕ್ಕಿರುವ ಗೀಜû ಬಡಜನರಿರುವ ಹಳೆನಗರ. ಕೈರೋ ವಿಶ್ವವಿದ್ಯಾಲಯ ಇರುವುದೂ ಇಲ್ಲೇ. ವಿಶ್ವವಿದ್ಯಾಲಯಕ್ಕೆದುರಾಗಿ ನೈಲ್ ನದಿಗೆ ಹೊಸಸೇತುವೆ ಕಟ್ಟಿದ್ದಾರೆ. ಪಿರಮಿಡ್, ಸ್ಫಿಂಕ್ಸ್‍ಗಳಿಗೆ ಹೋಗುವ ಮುಖ್ಯದಾರಿ ಗೀಜûದ ಮುಖಾಂತರವೇ ಹಾದುಹೋಗುತ್ತದೆ. ಕೈರೋಗೆ ಕೆಲವು ಮೈಲಿಗಳ ದಕ್ಷಿಣದಲ್ಲಿ ಪೂರ್ವದಂಡೆಯ ಮೇಲೆ ಇರುವುದು ಅಲ್ ಮಾದಿ ವನೋಪನಗರ. ಇನ್ನೂ ದಕ್ಷಿಣದಲ್ಲಿ ಮರಳುಗಾಡಿನ ಅಂಚಿನಲ್ಲಿರುವ ಹಲ್‍ವಾನ್ ಗಂಧಕದ ಚಿಲುಮೆಗೆ ಪ್ರಸಿದ್ಧ. ಈಗ ಇಲ್ಲೂ ಕೆಲವು ಕೈಗಾರಿಕೆಗಳು ಸ್ಥಾಪಿತವಾಗಿವೆ.

ಸಾಂಸ್ಕೃತಿಕ ಸಂಸ್ಥೆಗಳು

ಕೈರೋದಲ್ಲಿ ಅನೇಕ ಬಗೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿವೆ. ಅವುಗಳಲ್ಲಿ ಮುಖ್ಯವಾದವು ಸಹಕಾರಿ ತರಬೇತು ಕೇಂದ್ರ, ಅರಬ್ಬೀ ಅಕಾಡೆಮಿ, ಅರಬ್ಬೀ ಸಂಗೀತ ಅಕಾಡೆಮಿ ಮತ್ತು ಕಲಾಸಂಘ. ಅಲ್ಲದೆ ವಾಕ್-ಶ್ರವಣ ನೆರವು ಕೇಂದ್ರವೂ ಹಿಂದುಳಿದವರ ಏಳಿಗೆಗಾಗಿ ಶ್ರಮಿಸುತ್ತಿರುವ ಅನೇಕ ಸ್ವಯಂ ನಿಯಂತ್ರಿತ ಶಾಲೆಗಳೂ ಆಸ್ಪತ್ರೆಗಳೂ ಇವೆ. ಅಲ್ ಅಜಾóರ್, ಕೈರೋ, ಗೀಜ, ಐನ್ ಷಾಮ್ಸ್ ಮತ್ತು ಅಮೆರಿಕನ್ ವಿಶ್ವವಿದ್ಯಾಲಯಗಳಿವೆ. ಚರ್ಚುಗಳೂ ಯಹೂದ್ಯರ ಆರಾಧನ ಮಂದಿರಗಳೂ ಉಂಟು.

ಸಾರಿಗೆ

ಕೈರೋ ಒಂದು ಮುಖ್ಯ ಸಾರಿಗೆ ಕೇಂದ್ರ. ಆಫ್ರಿಕದ ಪ್ರಥಮ ರೈಲ್ವೆಯನ್ನು ಜಾರ್ಜ್ ಸ್ಟೀಫನ್‍ಸನನ ಮಗ ರಾಬರ್ಟ್ ನಿರ್ಮಿಸಿದ. 1855ರಲ್ಲಿ ಅಲೆಕ್ಸಾಂಡ್ರಿಯದಿಂದ ಕೈರೋಗೆ ರೈಲ್ವೆ ಸಂಪರ್ಕ ಏರ್ಪಟ್ಟಿತು. ಕೈರೋ-ಅಲೆಕ್ಸಾಂಡ್ರಿಯ, ಕೈರೋ-ಅಲ್ ಫಯ್ಯೂಂ, ಅಲ್ ಮಾಡಿ-ಸೋಖ್ನ (ಕೆಂಪು ಸಮುದ್ರದ ದಂಡೆ) ರಸ್ತೆಗಳು ಮುಖ್ಯವಾದವು. ಕೈರೋ ನಗರದ ಉತ್ತರಕ್ಕೆ 16 ಮೈ. ದೂರದಲ್ಲಿ ಕೈರೋ ಅಂತರರಾಷ್ಟ್ರೀಯ ವಿಮಾನನಿಲ್ದಾಣವಿದೆ. ಸರಕು ಸಾಗಿಸಲು ನೈಲ್ ನದಿ ತುಂಬ ಉಪಯುಕ್ತ. ಇಲ್ಲಿಂದ ದೇಶದ ಇತರ ಸ್ಥಳಗಳಿಗೆ ರಸ್ತೆಸಾರಿಗೆ ಸಂಪರ್ಕವುಂಟು.

ವಾಣಿಜ್ಯ

ಕೈರೋದಲ್ಲಿ ಅನೇಕ ಕೈಗಾರಿಕೆಗಳಿವೆ. ಈಜಿಪ್ಟಿನ ಪಂಚವಾರ್ಷಿಕ ಯೋಜನೆಯಂತೆ 1950ರಲ್ಲಿ ಹಲ್‍ವಾನ್ ಪ್ರದೇಶದಲ್ಲಿ ಉಕ್ಕು, ಕಬ್ಬಿಣ, ಸಿಮೆಂಟ್ ಮುಂತಾದ ಕೈಗಾರಿಕೆಗಳನ್ನು ಸ್ಥಾಪಿಸಲಾಯಿತು. ಅಲ್ ಬಿಜಾ ಉಪನಗರ ಅರಬ್ಬೀ ಭಾಷೆಯ ಚಲನಚಿತ್ರಗಳ ತಯಾರಿಕಾ ಕೇಂದ್ರ. ಹೊಗೆಸೊಪ್ಪು, ಚರ್ಮ, ರಸಾಯನವಸ್ತು, ಕಟ್ಟಡ ನಿರ್ಮಾಣ ಮುಂತಾದ ಕೈಗಾರಿಕೆಗಳೂ ಕೈರೋದಲ್ಲಿವೆ. ಈ ಕೈಗಾರಿಕೆಗಳೂ ಸರ್ಕಾರಿ ಕಚೇರಿಗಳು, ವಿದ್ಯಾಸಂಸ್ಥೆಗಳು, ಆಸ್ಪತ್ರೆಗಳು, ನ್ಯಾಯಾಲಯಗಳು ಮುಂತಾದವು ಅನೇಕರಿಗೆ ಉದ್ಯೋಗ ದೊರಕಿಸಿಕೊಟ್ಟಿವೆ.

ಇತಿಹಾಸ

Louis Comfort Tiffany (American, 1848–1933). On the Way between Old and New Cairo, Citadel Mosque of Mohammed Ali, and Tombs of the Mamelukes, 1872. Oil on canvas. Brooklyn Museum
Cairo in the 19th century

ಕೈರೋದ ಇತಿಹಾಸ ಬಲು ಪುರಾತನವಾದ್ದು. ಹಳೆಯ ಈಜೆಪ್ಷಿಯನ್ ಸಾಮ್ರಾಜ್ಯದ ರಾಜಧಾನಿ ಮೆಂಫಿಸ್ ಇದ್ದದ್ದು ನೈಲ್ ನದಿಯ ಪಶ್ಚಿಮದಂಡೆಯ ಮೇಲೆ-ಜೆಜಿóೀóರಕ್ಕೆ ದಕ್ಷಿಣದಲ್ಲಿ. ಒಮ್ಮೆ ಪ್ರಸಿದ್ಧವಾಗಿದ್ದ ಈ ನಗರದಲ್ಲಿ ಹೆಚ್ಚಾಗಿ ಏನೂ ಉಳಿದಿಲ್ಲ. ಅನಂತರ ರೋಮನ್-ಬಿಜಾಟಿನ್ ನಗರವಾದ ಬ್ಯಾಬಿಲಾನ್ ಸ್ಥಾಪಿತವಾಯಿತು. ಇದು ಈಗಿನ ಹಳೆಯ ಕೈರೋ ಭಾಗ ಇರುವಲ್ಲಿ ಇತ್ತು. ಈಜಿಪ್ಟನ್ನು ಜಯಿಸಿದ ಅರಬ್ಬೀ ವೀರ ಅಮರ್ ಇಬ್ನ್-ಅಲ್ ಅಸ್ ಇದರ ಮಹಾದ್ವಾರವನ್ನು 641ರಲ್ಲಿ ಪ್ರವೇಶಿಸಿದ. 9ನೆಯ ಶತಮಾನದಲ್ಲಿ ಅರಬ್ ರಾಜ್ಯಪಾಲರು ಈಜಿಪ್ಟನ್ನು ಬಾಗ್ದಾದಿನಿಂದ ಆಳುತ್ತಿದ್ದರು. ಅವರ ಪೈಕಿ ಒಬ್ಬನಾದ ಅಹ್ಮದ್ ಇಬ್ನ್ ಟುಲನ್ ಈಜಿಪ್ಟಿನ ಪ್ರಥಮ ಸ್ವತಂತ್ರ ಮುಸ್ಲಿಂ ದೊರೆಯಾದ. ಅಲ್ ಕತಾಯಿಯನ್ನು ಸ್ಥಾಪಿಸಿದವನಾತನೇ. ಅವನು ಕಟ್ಟಿಸಿದ ಪ್ರಸಿದ್ಧ ಮಸೀದಿ ಈಗಲೂ ಅಲ್ಲಿದೆ. 10ನೆಯ ಶತಮಾನದಲ್ಲಿ ಫಾತಿಮೈಟರು ಈಜಿಪ್ಟನ್ನು ಆಕ್ರಮಿಸಿಕೊಂಡರು. ಅವರ ಸೇನಾಪತಿ ಚೌಹರ್ ಅಲ್ ರೂಮಿ ಅಲ್ ಕತಾಯ್ ಉತ್ತರದಲ್ಲಿ ಅಲ್ ಕಹೀರ (ವಿಜೇತ) ಎಂಬ ಹೆಸರಿನ ಹೊಸ ರಾಜಧಾನಿ ಕಟ್ಟಿಸಿದ. ಕೈರೋ ಎಂಬ ಹೆಸರು ಬಂದದ್ದು ಇದರಿಂದ. ಇದರ ಸುತ್ತಣ ಕೋಟೆಯ ಒಂದು ಭಾಗವೂ ಮೂರು ಹೆಬ್ಬಾಗಿಲುಗಳೂ ಇಂದಿಗೂ ಉಳಿದಿವೆ. ಅನಂತರ ಈಜಿಪ್ಟನ್ನು ಅಯುಬೆಟ್ಸರು ಆಳಿದರು (1169-1250). ಈ ವಂಶದ ಮೊದಲಿಗ ಹಾಗೂ ದೊಡ್ಡ ದೊರೆ ಸಲಾದಿನ್. ಈತ ದುರ್ಗದ ಗೋಡೆಯನ್ನು ವಿಸ್ತರಿಸಿದ. 1250 ರಿಂದ 1517ರ ವರೆಗೆ ಮ್ಯಾಮಲೂಕ್ ವಂಶದವರು ಆಳಿದರು. ಇವರು ಕ್ರೂರಿಗಳೂ ಅನೈತಿಕರೂ ಆಗಿದ್ದರೂ ಇವರ ಕಾಲದಲ್ಲಿ ಒಳ್ಳೊಳ್ಳೆಯ ಕಟ್ಟಡಗಳೂ ಮಸೀದಿಗಳೂ ನಿರ್ಮಿತವಾದುವು. ಇಂದಿನ ಲೆಬನನ್, ಇಸ್ರೇಲ್, ಜಾರ್ಡನ್, ಸಿರಿಯ, ಈಜಿಪ್ಟ್ ಇವೆಲ್ಲ ಇವರ ಆಳ್ವಿಕೆಗೆ ಒಳಪಟ್ಟಿದ್ದುವು. ಕೈರೋ ಮತ್ತು ಡಮಾಸ್ಕಸ್‍ಗಳು ಈ ಸಾಮ್ರಾಜ್ಯದ ಜಂಟಿ ರಾಜಧಾನಿಗಳಾಗಿದ್ದುವು. ಇವೆರಡರ ನಡುವೆ 500 ಮೈಲಿಗಳ ದೂರವಿದ್ದರೂ ಇವೆರಡಕ್ಕೂ ಪರಸ್ಪರ ಸಂಪರ್ಕ ಏರ್ಪಡಿಸಲಾಗಿತ್ತು. 1517ರಲ್ಲಿ ಕೈರೋ ನಗರ ಆಟೊಮನ್ ತುರ್ಕರಿಗೆ ವಶವಾಯಿತು. ಮ್ಯಾಮಲೂಕರ ಕೊನೆಯ ಸುಲ್ತಾನನ ದೇಹವನ್ನು ಅವರು ಜóುವೇಲ ಮಹಾದ್ವಾರಕ್ಕೆ ನೇಣುಹಾಕಿದರು. ಇವರ ಕಾಲದಲ್ಲಿ ಕಲೆ ತಲೆಯೆತ್ತದಂತಾಯಿತು. ಮುಂದಿನ 300 ವರ್ಷಗಳಲ್ಲಿ ಇಲ್ಲಿ ಅನೇಕ ಮಸೀದಿಗಳ ನಿರ್ಮಾಣವಾದರೂ ಇವೆಲ್ಲ ಬಹುತೇಕ ಒಂದೇ ತೆರನಾಗಿದ್ದುವು.

Cairo map 1847

1798ರಲ್ಲಿ ಕೈರೋ ಫ್ರೆಂಚರ ವಶವಾಯಿತು. 1801ರಲ್ಲಿ ಬ್ರಿಟಿಷ್ ಮತ್ತು ತುರ್ಕಿ ಸೈನ್ಯಗಳು ಫ್ರೆಂಚರನ್ನು ಓಡಿಸಿ ಅದನ್ನು ತುರ್ಕಿಗೆ ಕೊಟ್ಟುವು. ಈಜಿಪ್ಟಿನ ಜನ 1805ರಲ್ಲಿ ಮಹಮದ್ ಅಲಿಯನ್ನು ತಮ್ಮ ರಾಜ್ಯಪಾಲನಾಗಿ ಆಯ್ಕೆ ಮಾಡಿದರು. ಈತ ಇನ್ನೂ ಅಳಿದುಳಿದಿದ್ದ, ತನಗೆ ತೊಡಕಾಗಿದ್ದ ಮ್ಯಾಮಲೂಕರನ್ನು ಕೊಂದು ತಾನೇ ಸರ್ವಾಧಿಕಾರಿಯಾದ. ಅಂದಿನಿಂದ ಕೈರೋ ಮತ್ತೆ ಒಂದು ಸ್ವತಂತ್ರ ರಾಜ್ಯದ ರಾಜಧಾನಿಯಾಯಿತು. ಕೈರೋವನ್ನು ಬ್ರಿಟಿಷರು ಆಕ್ರಮಿಸಿಕೊಂಡದ್ದು 1882ರಲ್ಲಿ. ಎರಡನೆಯ ಮಹಾಯುದ್ಧದಲ್ಲಿ ಅದು ಬ್ರಿಟಿಷ್ ಮಧ್ಯಪೂರ್ವ ಸೇನಾಧಿಪತ್ಯದ ಮುಖ್ಯ ಕಚೇರಿಯ ಸ್ಥಳವಾಗಿತ್ತು. ಬ್ರಿಟಿಷ್ ಸೇನೆ ಕೈರೋವನ್ನು ಬಿಟ್ಟು ತೆರಳಿದ್ದು 1946ರಲ್ಲಿ.


ಉಲ್ಲೇಖಗಳು

  1. Central Agency for Public Mobilisation and Statistics, Population and Housing Census 2006, Governorate level, Population distribution by sex (excel-file) Adjusted census result, as Helwan governorate was created on the 17th of April 2008 from a.o. parts of the Cairo governorate.
  2. Arab Republic of Egypt, Towards an Urban Sector Strategy p.33 Table 3.3
  3. Population and Housing Census 2006, Governorate level, Population distribution by sex, Central Agency for Public Mobilisation and Statistics, archived from the original (xls) on 24 January 2009, retrieved 9 July 2009 Cite uses deprecated parameter |deadurl= (help). Adjusted census result, as Helwan governorate was created on 17 April 2008 from a.o. parts of the Cairo governorate.

ಹೊರಗಿನ ಸಂಪರ್ಕಗಳು

Photos and videos

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.