ಅಡ್ಡಹೆಸರು

ಅಡ್ಡಹೆಸರು ಪರಿಚಿತ ವ್ಯಕ್ತಿ, ಸ್ಥಳ, ಅಥವಾ ವಸ್ತುವಿನ ಸರಿಯಾದ ಹೆಸರಿಗೆ ಒಂದು ಬದಲಿ ಹೆಸರು ಮತ್ತು ಪ್ರೀತಿ ಅಥವಾ ಅಣಕದ ಉದ್ದೇಶಕ್ಕಾಗಿ ಬಳಸಲಾಗುತ್ತದೆ.

ಅಮೇರಿಕಾದ ರಾಜ್ಯಗಳ ಅಡ್ಡಹೆಸರುಗಳನ್ನು ತೋರಿಸುವ ನಕ್ಷೆ.

ಅಕ್ಕರೆಯಿರುವ ಇಬ್ಬರ ಅಥವಾ ಭಾವನಾತ್ಮಕ ಬಂಧವಿರುವವರ ನಡುವೆ ಪ್ರೀತಿಯ ಅಡ್ಡಹೆಸರನ್ನು ಸೂಚಿಸಲು ಮುದ್ದುಹೆಸರು ಪದವನ್ನು ಬಳಸಲಾಗುತ್ತದೆ. ಅಲ್ಪಾರ್ಥಕ ಹೆಸರು ಎಂಬ ಪದವು ಕಿರಿತನವನ್ನು ತಿಳಿಸುವ ಅಡ್ಡಹೆಸರುಗಳನ್ನು ಸೂಚಿಸುತ್ತದೆ, ಹಾಗಾಗಿ ಪ್ರೀತಿ ಅಥವಾ ಅನ್ಯೋನ್ಯತೆ (ಉದಾ. ಮಕ್ಕಳನ್ನು ಉಲ್ಲೇಖಿಸುವುದು), ಅಥವಾ ತಿರಸ್ಕಾರದಿಂದ ಪರಿಗಣಿಸಿದ ಯಾವುದನ್ನೋ ಸೂಚಿಸುತ್ತದೆ.

ಎರಡರ ನಡುವಿನ ವ್ಯತ್ಯಾಸ ಹಲವುವೇಳೆ ಅಸ್ಪಷ್ಟವಾಗಿರುತ್ತದೆ. ಅದು ಪ್ರೀತಿ ಮತ್ತು ವಿನೋದದ ಒಂದು ರೂಪ. ಪರಿಕಲ್ಪನೆಯಾಗಿ, ಅದು ಗುಪ್ತನಾಮ ಮತ್ತು ವೇದಿಕೆಯ ಹೆಸರು ಎರಡರಿಂದಲೂ ಭಿನ್ನವಾಗಿದೆ, ಮತ್ತು ಶೀರ್ಷಿಕೆಯಿಂದಲೂ ಭಿನ್ನವಾಗಿದೆ (ಉದಾ. ಕಾರಂಜಿಗಳ ನಗರ), ಆದರೆ, ಈ ಪರಿಕಲ್ಪನೆಗಳಲ್ಲಿ ಅತಿಕ್ರಮಣವಿರಬಹುದು.

ಮಾನಿಕರ್ ಅಂದರೂ ಅಡ್ಡಹೆಸರು ಅಥವಾ ವೈಯಕ್ತಿಕ ಹೆಸರು ಎಂದು. ಈ ಶಬ್ದವು ವೈಯಕ್ತಿಕ ಹೆಸರುಗಳನ್ನು ಹಿಂದಿನ ಅಡ್ಡಹೆಸರುಗಳಿಂದ ಸರಿಯಾದ ಹೆಸರುಗಳಾದ ಅಡ್ಡಹೆಸರುಗಳಿಂದ ಭೇದಮಾಡುತ್ತದೆ. ಬಾಬ್ ಮತ್ತು ರಾಬ್ ಆಂಗ್ಲ ಉದಾಹರಣೆಗಳು, ಇವೆರಡೂ ರಾಬರ್ಟ್ ಹೆಸರಿನ ಅಡ್ಡಹೆಸರು ರೂಪಾಂತರಗಳು.

ಅಡ್ಡಹೆಸರನ್ನು ಹಲವುವೇಳೆ ಅಪೇಕ್ಷಣೀಯವೆಂದು ಪರಿಗಣಿಸಲಾಗುತ್ತದೆ, ಮತ್ತು ಅಂಗೀಕಾರದ ಒಂದು ರೂಪವನ್ನು ಸಂಕೇತಿಸುತ್ತದೆ, ಆದರೆ ಕೆಲವೊಮ್ಮೆ ಅಣಕದ ಒಂದು ರೂಪವಾಗಿರಬಹುದು.

ಆಂಗ್ಲ-ಅಮೇರಿಕನ್ ಸಂಸ್ಕೃತಿಯಲ್ಲಿ, ಅಡ್ಡಹೆಸರು ಹಲವುವೇಳೆ ಒಬ್ಬ ವ್ಯಕ್ತಿಯ ಸರಿಯಾದ ಹೆಸರನ್ನು ಮೊಟಕುಗೊಳಿಸುವುದರ ಮೇಲೆ ಆಧಾರಿತವಾಗಿರುತ್ತದೆ. ಆದರೆ, ಇತರ ಸಮಾಜಗಳಲ್ಲಿ, ಇದು ಇಲ್ಲದಿರಬಹುದು.

ಭಾರತೀಯ ಸಮಾಜದಲ್ಲಿ, ಉದಾಹರಣೆಗೆ, ಸಾಮಾನ್ಯವಾಗಿ ಜನರು ಕನಿಷ್ಠಪಕ್ಷ ಒಂದು ಅಡ್ಡಹೆಸರನ್ನು (ಅಕ್ಕರೆ ಹೆಸರು) ಹೊಂದಿರುತ್ತಾರೆ ಮತ್ತು ಈ ಅಕ್ಕರೆ ಹೆಸರುಗಳು ಸಾಮಾನ್ಯವಾಗಿ ವ್ಯಕ್ತಿಯ ಸರಿಯಾದ ಹೆಸರಿಗೆ ಸಂಬಂಧಿಸಿರುವುದಿಲ್ಲ. ಭಾರತೀಯ ಅಡ್ಡಹೆಸರುಗಳು ಹಲವುವೇಳೆ ಒಂದು ಕ್ಷುಲ್ಲಕ ಶಬ್ದ ಅಥವಾ ಅಲ್ಪಾರ್ಥಕ ಪದವಾಗಿರುತ್ತವೆ (ಉದಾಹರಣೆಗೆ ಬಬ್ಲು, ಡಬ್ಬು, ಬಂಟಿ, ಬಬ್ಲಿ, ಗುಡಿಯಾ, ಗೋಲು, ಸೋನು, ಛೋಟು, ರಾಜು, ಆದಿ, ರೀತು, ಇತ್ಯಾದಿ).

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.