ಕರ್ನಾಟಕದ ಜಲಪಾತಗಳು
ಕರ್ನಾಟಕ ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ. ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ. ತನ್ನಲ್ಲಿರುವ ಹಲವಾರು ನಯನ ಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಜಲಪಾತಗಳನ್ನು ಅಬ್ಬಿ,, ಅಬ್ಬೆ,, ಹೆಬ್ಬೆ,, ದಬ್ಬೆ,, ಜೋಗ, ದಬ, ದಬೆ, ದಿಡಗ/ದಿಡುಗ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.
ಪಶ್ಚಿಮ ಘಟ್ಟಗಳ ಸೆರಗಿನಲ್ಲಿ
ಕರ್ನಾಟಕ ರಾಜ್ಯದ ಬಹುಪಾಲು ಜಲಪಾತಗಳು ಕಂಡು ಬರುವುದು ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ. ಕೊಡಗಿನಿಂದ ಹಿಡಿದು ಉತ್ತರ ಕನ್ನಡದ ಅಂಚಿನವರೆಗೆ ಹರಡಿರುವ ಪಶ್ಚಿಮ ಘಟ್ಟಗಳು ದೊಡ್ಡ ಹಾಗೂ ಚಿಕ್ಕ ಪುಟ್ಟ ಜಲಪಾತಗಳನ್ನೂ ಸೇರಿ ಏನಿಲ್ಲವೆಂದರೂ ಸುಮಾರು ೫೦೦ ರ ಆಸು ಪಾಸು ಜಲಪಾತಗಳಿವೆ ಎಂದು ಅಂದಾಜು ಮಾಡಲಾಗಿದೆ.
ಜಲಪಾತಗಳ ಪಟ್ಟಿ
ಕೊಡಗು ಜಿಲ್ಲೆ
- ಅಬ್ಬಿ ಜಲಪಾತ
- ಮಲ್ಲಳ್ಳಿ ಜಲಪಾತ
- ಇರುಪ್ಪು ಜಲಪಾತ
- ಚೇಲಾವರ ಜಲಪಾತ
- ಮಾದಂಡಬ್ಬಿ ಜಲಪಾತ
ಮಂಡ್ಯ ಜಿಲ್ಲೆ
- ಗಗನಚುಕ್ಕಿ ಜಲಪಾತ (ಶಿವನ ಸಮುದ್ರ)
ಚಾಮರಾಜನಗರ ಜಿಲ್ಲೆ
- ಭರಚುಕ್ಕಿ ಜಲಪಾತ (ಶಿವನ ಸಮುದ್ರ)
ಉತ್ತರಕನ್ನಡ ಜಿಲ್ಲೆ
- ಸಾತೋಡಿ ಜಲಪಾತ
- ಉಂಚಳ್ಳಿ ಜಲಪಾತ ಅಥವಾ ಲುಷಿಂಗ್ಟನ್ ಜಲಪಾತ ಅಥವಾ ಕೆಪ್ಪ ಜೋಗ
- ಮಾಗೋಡು ಜಲಪಾತ
- ಬೆಣ್ಣೆ ಹೊಳೆ ಜಲಪಾತ
- ವಾಟೆ ಹಳ್ಳ ಜಲಪಾತ
- ಬುರುಡೆ ಜಲಪಾತ ಅಥವಾ ಬುರುಡೆ ಜೋಗ
- ವಿಭೂತಿ ಜಲಪಾತ
- ಶಿವಗಂಗೆ ಜಲಪಾತ
- ಲಾಲ್ಗುಳಿ ಜಲಪಾತ
- ಅಣಶಿ ಜಲಪಾತ
- ಅಪ್ಸರಕೊಂಡ
ಉಡುಪಿ ಜಿಲ್ಲೆ
- ಕೋಸಳ್ಳಿ ಜಲಪಾತ
- ಜೋಮ್ಲು ತೀರ್ಥ
ಶಿವಮೊಗ್ಗ ಜಿಲ್ಲೆ
- ಜೋಗ ಜಲಪಾತ
- ಹಿಡ್ಲುಮನೆ / ಹಿತ್ಲುಮನೆ ಜಲಪಾತ
- ಕೂಡ್ಲು ತೀರ್ಥ ಜಲಪಾತ
- ದಬ್ಬೆ ಜಲಪಾತ
- ಬರ್ಕಣ ಜಲಪಾತ
- ಅಚಕನ್ಯ ಜಲಪಾತ
- ಕುಂಚಿಕಲ್ ಜಲಪಾತ
- ಬಾಳೆಬರೆ ಜಲಪಾತ
ಬೆಂಗಳೂರು ಜಿಲ್ಲೆ
- ಮುತ್ಯಾಲ ಮಡುವು ಜಲಪಾತ (ಪರ್ಲ್ ವ್ಯಾಲಿ ಜಲಪಾತ)
ಹೊರಗಿನ ಸಂಪರ್ಕಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.