ಹೈತಿ


ಹೈತಿ (ಅಧಿಕೃತವಾಗಿ ಹೈತಿ ಗಣರಾಜ್ಯ) ಕೆರಿಬ್ಬಿಯನ್ ದ್ವೀಪವಾದ ಹಿಸ್ಪಾನಿಯೋಲದ ಒಂದು ಭಾಗ. ಈ ದ್ವೀಪದ ಉಳಿದ ಭಾಗವು ಡೊಮಿನಿಕ ಗಣರಾಜ್ಯ. ಪರ್ವತಗಳ ನಾಡು ಎಂಬರ್ಥ ಕೊಡುವ ಅಯಿಟಿ ಎಂಬ ಅಮೆರಿಂಡಿಯನ್ ಪದವು ಈ ಪ್ರದೇಶದ ಮೂಲ ಹೆಸರಾಗಿತ್ತು. ೨೭,೭೫೦ ಚ. ಕಿ.ಮೀ. ವಿಸ್ತಾರವಾದ ಹೈತಿಯ ರಾಜಧಾನಿ ಪೋರ್ಟ್-ಒ-ಪ್ರಿನ್ಸ್. ನಾಡಿನ ಭಾಷೆಗಳು ಫ್ರೆಂಚ್ ಮತ್ತು ಕ್ರಿಯೋಲ್. ಹಿಂದೆ ಫ್ರಾನ್ಸ್‌ನ ಸಿರಿವಂತ ವಸಾಹತಾಗಿದ್ದ ದ್ವೀಪರಾಷ್ಟ್ರ ಹೈತಿ ಗುಲಾಮರ ಬಂಡಾಯದಿಂದಾಗಿ ರೂಪುಗೊಂಡ ಜಗತ್ತಿನ ಏಕೈಕ ರಾಷ್ಟ್ರ. ಹೈತಿ ತನ್ನ ಸ್ವಾತಂತ್ರ್ಯ ಘೋಷಿಸಿಕೊಂಡ ಲ್ಯಾಟಿನ್ ಅಮೆರಿಕದ ಮೊದಲ ದೇಶವು ಸಹ ಆಗಿದೆ.

[République d'Haïti] error: {{lang}}: text has italic markup (help)
Repiblik d Ayiti

ಹೈತಿ ಗಣರಾಜ್ಯ
ಚಿತ್ರ:Haiti COA.svg
ಧ್ವಜ ಲಾಂಛನ
ಧ್ಯೇಯ: "ಒಗ್ಗಟ್ಟು ಬಲವನ್ನುಂಟುಮಾಡುವುದು"
ರಾಷ್ಟ್ರಗೀತೆ: "ಲಾ ದಿಸಾಲಿನಿಯೆನ್"

Location of Haiti

ರಾಜಧಾನಿ ಪೋರ್ಟ್-ಒ-ಪ್ರಿನ್ಸ್
18°32′N 72°20′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಫ್ರೆಂಚ್ ಭಾಷೆ, ಹೈತಿಯನ್ ಕ್ರಿಯೋಲ್
ಸರಕಾರ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ರೆನೆ ಪ್ರೆವಾಲ್
 - ಪ್ರಧಾನಿ ಜಾಕ್ ಎಡ್ವರ್ಡ್ ಅಲೆಕ್ಸಿಸ್
ರಚನೆ  
 - ಸೈಂಟ್ ಡೊಮಿನಿಕ್ ಆಗಿ ರಚನೆ1697 
 - ಫ್ರಾನ್ಸ್ ನಿಂದ ಸ್ವಾತಂತ್ರ್ಯ
ಜನವರಿ 1, 1804 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ27,750 ಚದರ ಕಿಮಿ ;  (146ನೆಯದು)
 10,714 ಚದರ ಮೈಲಿ 
 - ನೀರು (%)0.7
ಜನಸಂಖ್ಯೆ  
 - 2005ರ ಅಂದಾಜು9,296,000 (85ನೆಯದು)
 - 2003ರ ಜನಗಣತಿ 8,527,817
 - ಸಾಂದ್ರತೆ 335[1] /ಚದರ ಕಿಮಿ ;  (38ನೆಯದು)
758.1 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2006ರ ಅಂದಾಜು
 - ಒಟ್ಟು$14.76 (2006 ರ ಅಂದಾಜು) ಬಿಲಿಯನ್ (124ನೆಯದು)
 - ತಲಾ$1800 (153ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2005)
0.529 (146ನೆಯದು)  ಮಧ್ಯಮ
ಕರೆನ್ಸಿ ಗೌರ್ಡ್ (HTG)
ಸಮಯ ವಲಯ (UTC-5)
 - ಬೇಸಿಗೆ (DST) (UTC-4)
ಅಂತರ್ಜಾಲ TLD .ht
ದೂರವಾಣಿ ಕೋಡ್ +509
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.