ಸುನಾಮಿ
ಸಾಗರ ಅಥವಾ ಇನ್ನಿತರ ಜಲರಾಶಿಯಲ್ಲಿ ಅಗಾಧ ಪ್ರಮಾಣದ ಚಲನೆಯುಂಟಾದಾಗ ಜನಿಸುವ ಸಾಗರದ ತರಂಗಗಳ ಸರಣಿಗೆ ಸುನಾಮಿ (ತ್ಸುನಾಮಿ) ಎಂದು ಕರೆಯಲಾಗುತ್ತದೆ. ಭೂಕಂಪ[1], ಜ್ವಾಲಾಮುಖಿ[2], ಬಾಹ್ಯಾಕಾಶದ ಬೃಹತ್ ಗಾತ್ರದ ವಸ್ತುವಿನ ಅಪ್ಪಳಿಕೆ ಇತ್ಯಾದಿ ಸುನಾಮಿ ಅಲೆಗಳನ್ನು ಹುಟ್ಟುಹಾಕುವ ಸಾಮರ್ಥ್ಯ ಪಡೆದಿವೆ. ಸುನಾಮಿಯು, ಗಮನಕ್ಕೆ ಬಾರದಷ್ಟು ಸಣ್ಣ ಪ್ರಮಾಣದಿಂದ ಹಿಡಿದು ಅತ್ಯಂತ ಹಾನಿಕರವಾದ ನೈಸರ್ಗಿಕ ವಿಕೋಪದವರೆಗೂ ತನ್ನ ಪ್ರಭಾವ ಬೀರಬಲ್ಲುದಾಗಿದೆ.

ತ್ಸುನಾಮಿ ಎಂಬ ಪದ ಮೂಲತಃ ಜಪಾನಿ ಭಾಷೆಯಿಂದ ಬಂದದ್ದು. ಇಲ್ಲಿ "ತ್ಸು"(津) ಅಂದರೆ "ಬಂದರು" ಹಾಗು "ನಾಮಿ"( 波) ಎಂದರೆ "ಅಲೆ". ಜಪಾನಿ ಭಾಷೆಯಲ್ಲಿ ಸುನಾಮಿ ಪದವನ್ನು ಏಕವಚನ ಹಾಗೂ ಬಹುವಚನದಲ್ಲಿ ಬಳಸುತ್ತಾರೆ, ಆದರೆ ಕನ್ನಡದಲ್ಲಿ ಬಹುವಚನವಾಗಿ "ಸುನಾಮಿಗಳು" ಎಂದೂ ಇಂಗ್ಲಿಷಿನಲ್ಲಿ "tsunamis" ಎಂದು ಕರೆಯಲಾಗುತ್ತದೆ. ಅಲ್ಲಿಯ ಮೀನುಗಾರರು ಅಲೆಗಳ ಬಗ್ಗೆ ಹೆಚ್ಚು ಗೊತ್ತಿಲ್ಲದಿದ್ದರೂ "ಸುನಾಮಿ" ಪದವನ್ನು ಅವರೇ ಹುಟ್ಟಿಹಾಕಿದಂತೆ. ಸುನಾಮಿಯು ಸಾಗರದ ತೀರಾ ಒಳ-ಮೇಲ್ಮೈನಲ್ಲಿ ಘಟಿಸುವಂತಹದಲ್ಲ; ಇದು ಅತಿ ದೂರದಲ್ಲಿ ತುಂಬಾ ಚಿಕ್ಕ ವಿಸ್ತಾರವುಳ್ಳ (ಅಲೆಗಳ ಎತ್ತರ) ಹಾಗೂ ತೀರ ಉದ್ದವಾದ ತರಂಗಗಳನ್ನು ಹೊಂದಿರುತ್ತದೆ (ಬಹಳಷ್ಟು ಬಾರಿ ನೂರಾರು ಕಿಲೋಮೀಟರ್ ಉದ್ದವುಳ್ಳದಾಗಿರುತ್ತದೆ). ಇದೇ ಕಾರಣಕ್ಕೆ ಸಮುದ್ರದಲ್ಲಿ ಬಹಳಷ್ಟು ಬಾರಿ ಇದನ್ನು ಯಾರೂ ಗಮನಿಸುವುದೇ ಇಲ್ಲ.
ಸುನಾಮಿಯನ್ನು ದೈತ್ಯ ಅಲೆಗಳು ಎಂದೂ ಸಂಬೋಧಿಸುವುದುಂಟು, ಕಾರಣ ಇದರ ಅತೀವ ಉಬ್ಬರ - ಇಳಿತಗಳು. ಈ ದೈತ್ಯ ಅಲೆಗಳು ಬಹಳಷ್ಟು ಬಾರಿ ಸೂರ್ಯ ಚಂದ್ರರ ಗುರುತ್ವಾಕರ್ಷಣ ಸೆಳೆತದಿಂದಾಗಿ ಉಂಟಾಗುವ ಸ್ವಾಭಾವಿಕ ಉಬ್ಬರ - ಇಳಿತಗಳು. ಆದರೆ ಇದನ್ನು ಸಮುದ್ರ ಅಧ್ಯಯನ ಮಾಡುವ ವಿಜ್ಞಾನಿಗಳು ಅಲ್ಲಗಳೆಯುತ್ತಾರೆ.
== ಕಾರಣಗಳು ==

ಸಮುದ್ರದ ಕೆಳಪದರಿನಲ್ಲಿ ಏಕಾಏಕಿ ಉಂಟಾಗುವ ವಿಕೃತೀಕರಣ ಅಲ್ಲಿರುವ ನೀರನ್ನು ನೇರವಾಗಿ(ಲಂಬವಾಗಿ) ಹೊರಚೆಲ್ಲುತ್ತದೆ, ಇದೇ ಸುನಾಮಿಗೆ ಕಾರಣ. ಮಹಾಸಮುದ್ರಗಳಡಿಯ ಭೂಮಿಯ ಹೊರ ಪದರಿನಲ್ಲಿ ಹಲವೆಡೆ ಬಿರುಕುಗಳಿದ್ದು (ಆಂಗ್ಲಭಾಷೆಯಲ್ಲಿ: ಪ್ಲೇಟ್ ಬೌಂಡರಿ), ಭಾಗಗಳಾಗಿ ಬೇರ್ಪಡೆಯಾಗಿದೆ. ಈ ಭಾಗಗಳು ಸ್ಥಾನ ಪಲ್ಲಟಗೊಳ್ಳುವುದು ಈ ವಿಕೃತಿಗೆ ಕಾರಣ.
ವಿಶೇಷವಾಗಿ, ಈ ಭಾಗಗಳು ಒಂದರಮೇಲೊಂದು ಜರುಗಿದರೆ ಸುನಾಮಿಗೆ ಎಡೆಗೊಡುವ ಪ್ರಮೇಯ ಹೆಚ್ಚಾಗುತ್ತದೆ. ಸಮುದ್ರದ ಕೆಳಗಿನ ಪದರು ಖಂಡಗಳ ಪದರಿನಡಿಗೆ ಹೊಕ್ಕಾಗ, ಖಂಡದ ಪದರಿನ ಅಂಚನ್ನು ಕೆಲವೊಮ್ಮೆ ತನ್ನೊಂದಿಗೆ ಒಯ್ಯುತ್ತದೆ. ಕ್ರಮೇಣ, ಈ ಅಂಚಿನ ಮೇಲೆ ಬಹಳ ಒತ್ತಡ ಉಂಟಾಗಿ ಅದು ಹಿಂದಕ್ಕೆ ಮಗುಚುತ್ತದೆ. ಇದರ ರಭಸಕ್ಕೆ ಉಂಟಾಗುವ ಅಲೆಗಳು ಹೊರಪದರಿನಲ್ಲಿ ಹಬ್ಬಿ ಸಮುದ್ರದಡಿಯ ಭೂಕಂಪವನ್ನು ಉಂಟುಮಾಡುತ್ತದೆ. ಸಮುದ್ರದಡಿಯಲ್ಲಿ ಕೆಲವೊಮ್ಮೆ ಉಂಟಾಗುವ ಭೂಕುಸಿತಗಳು, ಜ್ವಾಲಾಮುಖಿಗಳ ಉದ್ಭವಗಳು ಮತ್ತು ಹಳೆ ಜ್ವಾಲಾಮುಖಿಗಳ ಅವಶೇಷಗಳ ಕುಸಿತಗಳು ಕೂಡ ಮೇಲಿರುವ ನೀರನ್ನು ತಲ್ಲಣಗೊಳಿಸಿ ಸುನಾಮಿಯನ್ನುಂಟು ಮಾಡಬಹುದು.
ಗುರುತ್ವಾಕರ್ಷಣೆಯ ಪ್ರಭಾವದಿಂದ ಹೊರದೂಡಲ್ಪಟ್ಟ ಜಲರಾಶಿಯು ,ತನ್ನ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುವಾಗ ಅಲೆಗಳು ರೂಪುಗೊಳ್ಳುತ್ತವೆ ಹಾಗೂ ಇವು ಕೊಳದೊಳಗಿನ ಸಣ್ಣ ಅಲೆಗಳಂತೆ ಸಾಗರದುದ್ದಕ್ಕೂ ಹರಡುತ್ತವೆ.
ಸುನಾಮಿಗಳ ಬಗ್ಗೆ ಹಿಂದೆ ಇದ್ದ ನಂಬಿಕೆಗಳಿಂದ ಬೇರೆಯಾಗಿ,೧೯೫೦ರಲ್ಲಿ ದೊಡ್ಡ ಗಾತ್ರದ ಸುನಾಮಿಗಳಿವೆ ಹಾಗೂ ಅವು ಭೂಕುಸಿತ,ಜ್ವಾಲಾಮುಖಿಯ ಸ್ಫೋಟನ ಮತ್ತು ತೀವ್ರತರ ಘಟನೆಗಳಿಂದ ಸಂಭವಿಸುತ್ತವೆ ಎಂದು ಕಂಡುಹಿಡಿದರು.ನೀರಿಗೆ ಬೀಳುತ್ತಿದ್ದ ಭಗ್ನಾವಶೇಷಗಳ ಶಕ್ತಿ ಅಥವಾ ಭಗ್ನಾವಶೇಷಗಳು ನೀರಿಗೆ ವರ್ಗಾವಣೆಗೊಂಡ ತಕ್ಷಣ ವ್ಯಾಪಕವಾಗಿ ಹರಡುತ್ತಿದ್ದುದರಿಂದ,ಇಂತಹ ಘಟನೆಗಳು ನೀರಿನ ಪರಿಮಾಣವನ್ನು ವೇಗವಾಗಿ ಸ್ಥಾನಪಲ್ಲಟಗೊಳಿಸುತ್ತಿದ್ದವು.ಈ ವಿಕೃತೀಕರಣಗಳಿಂದ ಉಂಟಾದ ಸುನಾಮಿಗಳು,ಕೆಲವು ಭೂಕಂಪಗಳಿಂದ ಸಾಗರದಗಲಕ್ಕೂ ಹರಡುವ ಸುನಾಮಿಗಳಂತಲ್ಲದೆ,ಸಾಮಾನ್ಯವಾಗಿ ಬೇಗ ಚದುರಿ ಹೋಗುತ್ತಿದ್ದವು ಹಾಗೂ ಸಮುದ್ರದ ಕೆಲ ಭಾಗಕ್ಕೆ ಮಾತ್ರ ಧಕ್ಕೆಯಾಗುತ್ತಿದ್ದ ಕಾರಣ,ಬಹುದೂರದ ಕಡಲತೀರಕ್ಕೆ ಹರಡುವ ಸಾಧ್ಯತೆ ಕಡಿಮೆ ಇತ್ತು.ಅದರೆ ಈ ಘಟನೆಗಳು ಸುಮಾರು ದೊಡ್ಡವಾದ ಸ್ಥಳೀಯ ಆಘಾತಕಾರಿ ಅಲೆ(local shock waves)ಗಳನ್ನು(solitions) ಹುಟ್ಟು ಹಾಕಬಲ್ಲವು.ಉದಾಹರಣೆಗೆ ಲಿಟುಯ ಕೊಲ್ಲಿ(Lituya Bay)ಯ ಶಿರೋಭಾಗದಲ್ಲಿ ಸಂಭವಿಸಿದ ಭೂಕುಸಿತ ಅಂದಾಜು ೫೦-೧೫೦ ಮೀ.ನಷ್ಟು ನೀರಿನ ಅಲೆಗಳನ್ನು ಸೃಷ್ಟಿಸಿತು ಹಾಗೂ ಸ್ಥಳೀಯ ಪರ್ವತಗಳ ೫೨೪ ಮೀ.ನಷ್ಟುಎತ್ತರ ತಲುಪಿತು.ಒಟ್ಟಾರೆ ಅತ್ಯಂತ ಪರಿಣಾಮಕಾರಿ ದೊಡ್ಡ ಭೂಕುಸಿತ ಸಾಗರದಗಲಕ್ಕೂ ಪ್ರಭಾವ ಬೀರಬಲ್ಲ ಒಂದು ದೈತ್ಯ ಸುನಾಮಿಯನ್ನು ಸೃಷ್ಟಿಸಬಲ್ಲುದು.
ಲಕ್ಷಣಗಳು

ಆಗಾಗ್ಗೆ "ಉಬ್ಬರದ ಅಲೆಗಳು" ಎಂದೇ ಉಲ್ಲೇಖಿಸಲ್ಪಡುವ ಸುನಾಮಿ "ಸ್ವಲ್ಪ ದೊಡ್ಡದಾದ ಒಂದು ಸಾಧಾರಣ ಅಲೆ" ಎಂಬ ಪ್ರಸಿದ್ಧ ಜನಾಭಿಪ್ರಾಯಕ್ಕೆ ಹೊಂದುವುದಿಲ್ಲ.ತದ್ವಿರುದ್ಧವಾಗಿ ಅದು ಕೊನೆಯೇಇಲ್ಲದೆ, ಒಂದರ ಹಿಂದೊಂದು ಯಾವುದೇ ಅಡೆ ತಡೆ ಇಲ್ಲದೆ ನುಗ್ಗುತ್ತಿರುವ ತರಂಗವಾಗಿ ಕಾಣುತ್ತದೆ.ಹೆಚ್ಚಿನಂಶ ಹಾನಿಯುಂಟಾಗಿರುವುದು,ಮೊದಲಿನ ಅಲೆಗಳ ಹಿಂದೆಯೇ ನುಗ್ಗಿ ಬರುವ ಅಪಾರ ಪ್ರಮಾಣದ ಜಲರಾಶಿಯಿಂದ ಹಾಗೂ ಸಮುದ್ರದ ನೀರಿನ ಎತ್ತರ ವೇಗವಾಗಿ ಹೆಚ್ಚಿ,ಪ್ರಬಲವಾಗಿ ಕರಾವಳಿಯನ್ನು ಅಪ್ಪಳಿಸುವುದರಿಂದ.ಕೇವಲ ನೀರಿನ ಭಾರವೊಂದೇ ಸಾಕು,ತನ್ನ ಹಾದಿಯಲ್ಲಿ ಬರುವ ವಸ್ತುಗಳನ್ನು ಧೂಳೀಪಟ ಮಾಡುವುದಕ್ಕೆ,ಅನೇಕ ಸಲ ಕಟ್ಟಡಗಳನ್ನು ಅವುಗಳ ತಳಪಾಯದವರೆಗೂ ಕುಗ್ಗಿಸಿ, ಬಯಲುಭೂಮಿಯ ಒಳಗಿನ ಕಲ್ಲುಬಂಡೆಗಳು ಕಾಣುವವರೆಗೂ ಉಜ್ಜಿಬಿಡುವುದಕ್ಕೆ.ಸುನಾಮಿಯ ಅಬ್ಬರ ತಗ್ಗುವ ಮೊದಲು ಹಡಗು ಮತ್ತು ದೊಡ್ಡ ಕಲ್ಲುಬಂಡೆಗಳಂತಹ ಬೃಹತ್ ವಸ್ತುಗಳನ್ನೂ ಸಹ ಒಳಪ್ರದೇಶದಲ್ಲಿ ಮೈಲಿಗಟ್ಟಳೆ ಎಳೆದೊಯ್ಯಬಹುದು.
ಸುನಾಮಿ ಅಲೆ
ಸಮುದ್ರದ ಅಲೆಗಳನ್ನು ಅವುಗಳ ಆಳಕ್ಕೆ ಅನುಸಾರವಾಗಿ ಮೂರು ರೀತಿಯಾಗಿ ವಿಂಗಡಿಸಬಹುದು :
- ಆಳ ನೀರು
- ಅಂತರ್ವರ್ತಿ ನೀರು
- ಮೇಲಿನ (ಆಳವಲ್ಲದ ನೀರು)
ಸುನಾಮಿಯು ೪೦೦೦ ಮೀಟರ್ ಆಳದ ನೀರಿನಲ್ಲಿ ಹುಟ್ಟಿದರೂ, ಸುನಾಮಿ ಅಲೆಗಳನ್ನು ಮೇಲಿನ (ಆಳವಲ್ಲದ) ನೀರಿನ ಅಲೆಗಳೆಂದು ಪರಿಗಣಿಸಲಾಗುತ್ತದೆ. ಸುನಾಮಿ ಅಲೆಯು ಆಳವಲ್ಲದ ನೀರಿನ ಹತ್ತಿರ ಬರುತ್ತಿದ್ದಂತೆ ಅವುಗಳ ತರಂಗಾಂತರ ಶೀಘ್ರಗತಿಯಲ್ಲಿ ಕಡಿಮೆಯಾಗಿ ನೀರಿನ ರಾಶಿ ದೊಡ್ಡ ಮಕುಟವಾಗಿ ದಡಕ್ಕೆ ಅಪ್ಪಳಿಸುತ್ತದೆ. ಇದಕ್ಕೆ "shoaling" ಎಂದು ಕರೆಯುವರು.
ಬರಲಿರುವ ಸುನಾಮಿಯ ಮುನ್ಸೂಚನೆಗಳು
- ಭೂಕಂಪನ ಉಂಟಾಗಬಹುದು
- ಬಹಳಷ್ಟು ಅನಿಲ ಗುಳ್ಳೆಗಳು ನೀರಿನ ಮೇಲೆ ಕಾಣಬಹುದು
- ಅಲೆಗಳಲ್ಲಿರುವ ನೀರು ಬಹಳ ಉಷ್ಣವಾಗಿರಬಹುದು
- ನೀರು ಕೊಳೆತ ಮೊಟ್ಟೆಗಳ ವಾಸನೆ ಪಡೆಯಬಹುದು (ಹೈಡ್ರೋಜನ್ ಸಲ್ಫೈಡ್) ಅಥವಾ ಪೆಟ್ರೋಲ್ ಅಥವಾ ಎಣ್ಣೆಯ ವಾಸನೆಯನ್ನೂ ಪಡೆಯಬಹುದು
- ನೀರು ಚರ್ಮವನ್ನು ಚುಚ್ಚಬಹುದು
- ಕಿವಿ ಗಡಚಿಕ್ಕುವ ಗುಡುಗಿನ ಶಬ್ದ ಕೇಳಬಹುದು, ನಂತರ
- ಜೆಟ್ ವಿಮಾನದಂತಹ ಸದ್ದು
- ಅಥವಾ ಹೆಲಿಕಾಪ್ಟರ್ ನಂತಹ ಸದ್ದು
- ಅಥವಾ ಸಿಳ್ಳೆ ಹೊಡೆದಂತಹ ಶಬ್ದ
- ಸಮುದ್ರವು ಬಹಳಷ್ಟು ಹಿಂದೆ ಸರಿಯಬಹುದು
- ದಿಗಂತದಲ್ಲಿ ಕೆಂಪು ದೀಪದ ಬೆಳಕು ಕಾಣಬಹುದು
ಸುನಾಮಿ ಪದದ ಉತ್ಪತ್ತಿ
"ಸುನಾಮಿ" ಎಂಬ ಪದವು ಜಪಾನಿ ಭಾಷೆಯಲ್ಲಿ "ಬಂದರು ಅಲೆ" ಎಂಬ ಅರ್ಥ ಕೊಡುತ್ತದೆ. ಇದು ಏಕೆಂದರೆ ಸುನಾಮಿಗಳು ಒಳಸಮುದ್ರದಲ್ಲಿ ಬಹಳಷ್ಟು ಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಬಹಳಷ್ಟು ಸಲ ಜಪಾನಿ ಮೀನುಗಾರರು ಸಮುದ್ರದಲ್ಲಿ ಮೀನು ಹಿಡಿಯಲು ಹೋಗುತ್ತಿದ್ದರು, ಹಾಗೂ ಸಂಜೆ ವೇಳೆ ತಮ್ಮ ಹಳ್ಳಿಗೆ ಬಂದರೆ ಹಳ್ಳಿಯು ಸುನಾಮಿಯ ಹೊಡೆತಕ್ಕೆ ಸಿಕ್ಕು ನಿರ್ನಾಮವಾಗುತ್ತಿತ್ತು.
ಎಚ್ಚರಿಕೆಗಳು ಮತ್ತು ತಡೆಗಟ್ಟುವಿಕೆ
![]() Tsunami wall at Tsu-shi, Japan |
ಸುನಾಮಿಗಳನ್ನು ತಡೆಗಟ್ಟಲಾಗುವುದಿಲ್ಲ ಅಥವಾ ಕರಾರುವಾಕ್ಕಾಗಿ ಭವಿಷ್ಯ ನುಡಿಯಲಾಗುವುದಿಲ್ಲ,ಆದರೆ ಸದ್ಯದಲ್ಲೇ ಸಂಭವಿಸುವ ಸುನಾಮಿಯ ಮುನ್ನೆಚ್ಚರಿಕೆಯ ಸೂಚನೆಗಳಿವೆ ಹಾಗೂ ಸುನಾಮಿಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಅನೇಕ ಕ್ರಮಗಳನ್ನು ರೂಪಿಸಲಾಗುತ್ತಿದೆ.
ಮೊದಲ ಮುನ್ನೆಚ್ಚರಿಕೆ ಸಮೀಪದಲ್ಲಿರುವ ಪ್ರಾಣಿಗಳಿಂದ ಬರುತ್ತದೆ.ಅನೇಕ ಪ್ರಾಣಿಗಳು ಅಪಾಯವನ್ನು ಗ್ರಹಿಸಿ,ನೀರು ಸಮೀಪಿಸುವುದಕ್ಕೆ ಮುನ್ನವೇ ಎತ್ತರದ ಪ್ರದೇಶಗಳಿಗೆ ಪಲಾಯನ ಮಾಡುತ್ತವೆ.ಯುರೋಪಿನಲ್ಲಿ ಸಂಭವಿಸಿದ ಅಂತಹ ಘಟನೆಗಳಲ್ಲಿ ಮೊದಲು ದಾಖಲಿತವಾಗಿರುವುದು ಲಿಸ್ಬನ್ ಕಂಪನ.ಇಂತಹುದೇ ಘಟನೆ ಶ್ರೀಲಂಕದಲ್ಲೂ ೨೦೦೪ರಲ್ಲಿ ಸಂಭವಿಸಿದ ಹಿಂದೂಮಹಾಸಾಗರದ ಭೂಕಂಪ ದಲ್ಲಿ ನಡೆದಿರುವುದನ್ನು ಗುರುತಿಸಲಾಗಿದೆ.()ಪ್ರಾಣಿಗಳಿಗೆ ಸುನಾಮಿ ದಡಕ್ಕೆ ಅಪ್ಪಳಿಸುವ ನಿಮಿಷ ಅಥವಾ ಘಂಟೆಗಳ ಮುಂಚೆ ಭೂಕಂಪನದ ಶಬ್ದವೇಗ(subsonic-ಶಬ್ದವೇಗಕ್ಕಿಂತ ಕಡಿಮೆ)ವನ್ನು (Rayleigh waves)ಗ್ರಹಿಸುವ ಸಾಮರ್ಥ್ಯವಿದೆಯೆಂದು ಕೆಲವು ವಿಜ್ಞಾನಿಗಳು ಊಹಿಸುತ್ತಾರೆ.(Kenneally, ).
ಸುನಾಮಿಯನ್ನು ತಡೆಗಟ್ಟುವುದು ಅಸಾಧ್ಯವಾದರೂ,ಕೆಲವು ನಿರ್ದಿಷ್ಟವಾದ, ಸುನಾಮಿ-ಸಾಧ್ಯತೆ ಹೆಚ್ಚಿರುವ ದೇಶಗಳಲ್ಲಿ ತೀರದಲ್ಲುಂಟಾಗುವ ಹಾನಿಯನ್ನು ಕಡಿಮೆ ಮಾಡಲು ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ.ಜಪಾನ್,ಜನದಟ್ಟಣೆಯಿರುವ ಕರಾವಳಿ ಪ್ರದೇಶದುದ್ದಕ್ಕೂ ೪.೫ ಮೀ.(೧೩.೫ ಅಡಿ)ಎತ್ತರದ ಸುನಾಮಿ ತಡೆಗೋಡೆಯನ್ನು ನಿರ್ಮಿಸುವ ವ್ಯಾಪಕವಾದ ಕಾರ್ಯಕ್ರಮವನ್ನು ಜಾರಿಗೊಳಿಸಿದೆ.ಇತರ ಸ್ಥಳಗಳಲ್ಲಿ ಒಳಗೆ ಪ್ರವೇಶಿಸುವ ಸುನಾಮಿಗೆ ಪ್ರವಾಹದ್ವಾರಗಳು,ಕಾಲುವೆಗಳನ್ನು ನಿರ್ಮಿಸಿ,ನೀರು ಇವುಗಳ ಮೂಲಕ ಹರಿದು ಹೋಗುವಂತೆಮಾಡಿದ್ದಾರೆ.ಹೇಗಾದರೂ,ಅನೇಕ ಸಲ ಸುನಾಮಿಗಳು ಈ ಅಡೆತಡೆಗಳಿಗಿಂತ ಎತ್ತರವಾಗಿರುವುದರಿಂದ,ಇವುಗಳ ಉಪಯುಕ್ತತೆ ಪ್ರಶ್ನಾರ್ಹ.ಉದಾಹರಣೆಗೆ,ಜುಲೈ ೧೨,೧೯೯೩ ರಲ್ಲಿ ಹೊಕ್ಕೈದೊ ದ್ವೀಪಕ್ಕೆ ಅಪ್ಪಳಿಸಿದ ಸುನಾಮಿ ೩೦ ಮೀ(೧೦೦ ಅಡಿ)ಎತ್ತರದ ಅಲೆಗಳನ್ನು ಸೃಷ್ಟಿಸಿತು,ಅಂದರೆ ೧೦ ಮಹಡಿ ಕಟ್ಟಡದ ಎತ್ತರದಷ್ಟು. ಅಯೋನೆ(Aonae)ಬಂದರು ಪಟ್ಟಣದ ಸುತ್ತಲೂ ಇದ್ದ ಸುನಾಮಿ ತಡೆಗೋಡೆಯನ್ನು ಅಲೆಗಳು ಕೊಚ್ಚಿ ಹಾಕಿದ್ದಲ್ಲದೆ,
ಆ ಪ್ರದೇಶದಲ್ಲಿದ್ದ ಎಲ್ಲಾ ಮರ-ಜೋಡಣೆಯ ಕಟ್ಟಡಗಳನ್ನು ನಿರ್ನಾಮಮಾಡಿದವು.ಆ ತಡೆಗೋಡೆ ಸುನಾಮಿಯ ಎತ್ತರವನ್ನು ಕಡಿಮೆ ಮಾಡಿ, ವೇಗವನ್ನು ನಿಧಾನಗೊಳಿಸುವಲ್ಲಿ ಸಹಾಯಕವಾದರೂ,ಹೆಚ್ಚಿನ ವಿನಾಶವನ್ನಾಗಲಿ ಹಾಗೂ ಜೀವಹಾನಿಯನ್ನಾಗಲಿ ತಡೆಯುವಲ್ಲಿ ಸಹಕಾರಿಯಾಗಲಿಲ್ಲ.
ಇತಿಹಾಸದಲ್ಲಿ ಸುನಾಮಿಗಳು
ಸುನಾಮಿಗಳು ಪೆಸಿಫಿಕ್ ಸಾಗರದಲ್ಲಿ ಪದೇ ಪದೇ ಸಂಭವಿಸುತ್ತಿರುವುದಾದರೂ ಸಹ ,ಅವು ಜಾಗತಿಕ ಲಕ್ಷಣಗಳಲ್ಲಿ ಒಂದಾಗಿವೆ.ಬೃಹತ್ ಜಲರಾಶಿಯಿರುವೆಡೆ,ಒಳಪ್ರದೇಶದ ನೀರಿನ ಹರವಿನಲ್ಲಿ(ಸರೋವರಗಳಲ್ಲಿ)ಸುನಾಮಿಗಳು ಭೂಕುಸಿತಗಳಿಂದ ಸಂಭವಿಸುವ ಸಾಧ್ಯತೆ ಇದೆ.ಕೆಲವು ವಿನಾಶಕಾರಿಯಲ್ಲದ ಮತ್ತು ವಿಶೇಷ ಉಪಕರಣಗಳ ಸಹಾಯದಿಂದ ಮಾತ್ರ ಪತ್ತೆ ಹಚ್ಚಬಹುದಾದ,ತೀರಾ ಸಣ್ಣ ಸುನಾಮಿಗಳು,ಸಣ್ಣ ಪ್ರಮಾಣದ ಭೂಕಂಪ ಹಾಗೂ ಇತರ ಸಂಘಟನೆಗಳಿಂದಲೇ ಆಗಾಗ್ಗೆ ಸಂಭವಿಸುತ್ತಿರುತ್ತವೆ.
ಸುಮಾರು ಕ್ರಿ.ಪೂ. ೬೫ ದಶಲಕ್ಷ ವರ್ಷಗಳು
೬೫ ದಶಲಕ್ಷ ವರ್ಷಗಳ ಹಿಂದೆ ಉಲ್ಕೆಯೊಂದು ಭೂಮಿಗೆ ಅಪ್ಪಳಿಸಿತು. ಈ ಘಾತದ ಪರಿಣಾಮವೆ ಚಿಕ್‍ಖುಲುಬ್ ಹೆಸರಿನ ಬೃಹದ್ಗಾತ್ರದ ಗುಂಡಿ. ಈ ಸುಮಾರಿಗೆ ಜರುಗಿದ ಸರೀಸೃಪಗಳಾದಿಯಾಗಿ ಅನೇಕ ಜೀವಜಾತಿಗಳ ಸಂತತಿನಾಶಕ್ಕೆ ಈ ಘಟನೆಯೆ ಕಾರಣವಿರಬಹುದು. ಉಲ್ಕೆ ಭೂಮಿಗೆ ಅಪ್ಪಳಿಸಿದ್ದರಿಂದಾಗಿ ೧ ಕಿ.ಮೀ ಎತ್ತರದ ಸುನಾಮಿ ಉಂಟಾದದ್ದರ ಬಗ್ಗೆ ಖಚಿತ ಆಧಾರಗಳಿವೆ.
ಸುಮಾರು ಕ್ರಿ.ಪೂ ೧೫೦೦
೩೫೦೦ವರ್ಷಗಳ ಹಿಂದೆ ಏಜಿಯನ್ ಸಮುದ್ರದಲ್ಲಿನ ಥೆರ ದ್ವೀಪ ಜ್ವಾಲಾಮುಖಿಯಾಗಿ ಸಿಡಿದು ಮಿನೋಸಿನ ಸಂಸ್ಕೃತಿಯ ನಾಶಕ್ಕೆ ಕಾರಣವಾಯಿತು. ಈ ಸ್ಫೋಟ ಹುಟ್ಟುಹಾಕಿದ ೬೦೦ ಅಡಿಗಳ ಎತ್ತರದ ಹಿರಿಯಲೆ ಭೂಮಧ್ಯ ಸಮುದ್ರದ ಉದ್ದಗಲಕ್ಕೂ ಹರಡಿತ್ತು.
ಯಹೂದ್ಯರ ಮತಗ್ರಂಥವಾದ ತೋರಾದಲ್ಲಿ ಈ ತ್ಸುನಾಮಿಯ ಉಲ್ಲೇಖವಿದೆಯೆಂದು ಕೆಲವರ ಅಂಬೋಣ. ಯಹೂದ್ಯರ ಮತಪ್ರವರ್ತಕನಾದ ಮೋಸೆಸ್ ತನ್ನ ಜನರನ್ನು ದಾಸ್ಯದಿಂದ ಬಿಡಿಸಿಕೊಂಡು ನೆಲೆಯನ್ನು ಅರಸಿ ಈಜಿಪ್ಟಿನಿಂದ ಹೊರಡುತ್ತಾನೆ. ಮಾರ್ಗದಲ್ಲಿ ಕೆಂಪು ಸಮುದ್ರವನ್ನು ದಾಟ ಬೇಕಾಗಿ ಬರುತ್ತದೆ. ಆ ವೇಳೆಗೆ ಮೋಸೆಸ್‍ಗೆ ಹೋಗಲು ಅನುಮತಿಯಿತ್ತ ಈಜಿಪ್ಟಿನ ಫೆರೋ ಮನಸ್ಸು ಬದಲಾಯಿಸಿ ತನ್ನ ಸೈನಿಕರನ್ನು ಅವರೆಲ್ಲರನ್ನು ಕರೆತರುವಂತೆ ಅಟ್ಟುತ್ತಾನೆ. ದೇವರ ದಯೆಯಿಂದ ಸಮುದ್ರದ ನೀರು ಇಂಗಿ ಮೋಸೆಸ್‍ನ ಪರಿವಾರ ದಾಟುವುದಕ್ಕೆ ದಾರಿಯಾಗುತ್ತದೆ. ಆದರೆ ಸೈನಿಕರು ದಾಟುತ್ತಿದ್ದಂತೆ ನೀರು ಮತ್ತೆ ಏರಿ ಸೈನ್ಯ ಮುಳುಗುತ್ತದೆ. ನೀರಿನ ಮಟ್ಟ ಹಾಗೆ ಇಳಿದು ಏರುವುದಕ್ಕೆ ತ್ಸುನಾಮಿಯೆ ಕಾರಣವೆಂದೂ, ಅದು ಥೆರ ಸ್ಫೋಟದ ತ್ಸುನಾಮಿಯೆ ಇರಬೇಕೆಂದು ವಾದಿಸುವವರಿದ್ದಾರೆ. ಮೊಸೆಸ್‍ನ ಕಥೆ ಹೇಗಾದರಾಗಲಿ, ಥೆರ ಸ್ಫೋಟದಿಂದ ತ್ಸುನಾಮಿಯಾದದ್ದಕ್ಕೆ ಸಾಕಷ್ಟು ಆಧಾರಗಳಿವೆ.
೧೬೦೭ - ಬ್ರಿಸ್ಟಲ್ ಕಾಲುವೆ, ಇಂಗ್ಲೆಂಡ್ ಮತ್ತು ವೇಲ್ಸ್
ಇಂಗ್ಲೆಂಡ್ ಹಾಗು ವೇಲ್ಸ್ ನಡುವಿರುವ ಬ್ರಿಸ್ಟಲ್ ಕಡಲ್ಗಾಲುವೆಯಲ್ಲಿ ೧೬೦೭ರಲ್ಲಿ ಉಂಟಾದ ನೆರೆ ತ್ಸುನಾಮಿಯಿಂದ ಆದದ್ದು ಎಂಬ ಅಭಿಪ್ರಾಯ ೨೦೦೨ರಲ್ಲಿ ಕೇಳಿಬಂತು.
೧೭೦೦ - ವ್ಯಾಂಕೂವರ್ ದ್ವೀಪ, ಕೆನಡ
೧೭೫೫ - ಲಿಸ್ಬನ್, ಪೋರ್ಚುಗಲ್
೧೮೮೩ - ಕ್ರಕಟೋವ ಜ್ವಾಲಾಮುಖಿ ಸ್ಫೋಟ
ಹ್ಯಾಲಿಫ್ಯಾಕ್ಸ್ ಸ್ಫೋಟ ಮತ್ತು ಸುನಾಮಿ
೧೯೨೯ - ನವಶೋದಿತಭೂಭಾಗ(Newfoundland) ಸುನಾಮಿ
೧೯೪೬ - ಪೆಸಿಫಿಕ್ ಸುನಾಮಿ
೧೯೬೦ - ಚಿಲಿಯ ಸುನಾಮಿ
೧೯೬೩ - ವಜೋಂಟ್ ಅಣೆಕಟ್ಟಿನ ಅನಾಹುತ
೧೯೬೪ - ಶುಭ ಶುಕ್ರವಾರದ(Good Friday) ಸುನಾಮಿ
೧೯೭೬ - ಮೋರೋ ಖಾರಿ ಸುನಾಮಿ(Moro Gulf)
೧೯೭೯ - ಟುಮ್ಯಾಕೋ ಸುನಾಮಿ(Tumaco)
೧೯೯೩ - ಒಕುಶಿರಿ ಸುನಾಮಿ(Okushiri)
೨೦೦೪ - ಹಿಂದೂ ಮಹಾಸಾಗರದ(Indian Ocean) ಸುನಾಮಿ


೨೦೦೪ರಲ್ಲಿ ಹಿಂದೂಮಹಾಸಾಗರದಲ್ಲಿ ಸಂಭವಿಸಿದ ಭೂಕಂಪವು ಬಲು ತೀವ್ರತರದ್ದಾಗಿ ಡಿಸೆಂಬರ್ ೨೬ ರಂದು ಹಿಂದೂ ಮಹಾಸಾಗರದಲ್ಲಿ ಮಾರಕ ಸುನಾಮಿ ಅಲೆಗಳನ್ನುಂಟುಮಾಡಿತು. ಈ ಸುನಾಮಿಗೆ ಏಷ್ಯಾದ ಹಲವು ದೇಶಗಳ ಒಟ್ಟು ೨೩೦೦೦೦ ಜನರು ಬಲಿಯಾದರು. ಈ ಸುನಾಮಿಯು ಇದುವರೆಗಿನ ಅತಿ ಘಾತಕ ಸುನಾಮಿಯಾಗಿ ಹೆಸರಾಯಿತು. ಭೂಕಂಪದ ಕೇಂದ್ರಸ್ಥಾನಕ್ಕೆ ನಿಕಟವಾಗಿದ್ದ ಇಂಡೋನೇಷ್ಯಾ,ಥೈಲಂಡ್ ಮತ್ತು ಮಲೇಷ್ಯಾ ಮಾತ್ರವಲ್ಲದೆ ಸಾವಿರಾರು ಕಿ.ಮೀ. ದೂರದ ಬಾಂಗ್ಲಾದೇಶ, ಭಾರತ, ಶ್ರೀಲಂಕಾ, ಮಾಲ್ಡೀವ್ಸ್, ಕೆನ್ಯಾ, ಸೋಮಾಲಿಯಾ ಮತ್ತು ಟಾಂಜಾನಿಯಾಗಳಿಗೆ ಕೂಡ ಈ ಸುನಾಮಿಯ ಅಲೆಗಳು ಅಪ್ಪಳಿಸಿ ದೊಡ್ಡ ಪ್ರಮಾಣದ ಪ್ರಾಣಹಾನಿಯನ್ನು ಉಂಟುಮಾಡಿದುವು. ಹಿಂದೂಮಹಾಸಗರದಲ್ಲಿ ಸುನಾಮಿಯ ಬಗ್ಗೆ ಮುನ್ನೆಚ್ಚರಿಕೆ ನೀಡುವಂತಹ ಯಾವುದೇ ವ್ಯವಸ್ಥೆ ಇಲ್ಲದಿದ್ದುದು ಈ ದುರಂತದ ಪ್ರಮಾಣ ಹೆಚ್ಚಾಗುವಲ್ಲಿ ಕಾರಣವಾಯಿತು. ೨೦೦೪ರ ಸುನಾಮಿಯ ನಂತರ ಜಾಗತಿಕ ಮಟ್ಟದಲ್ಲಿ ಸುನಾಮಿ ಮುನ್ನೆಚ್ಚರಿಕೆಯ ವ್ಯವಸ್ಥೆಗಳನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಇಲ್ಫ಼್ಲಿ ಲ್ಫ಼್ಲಿ ಅಆಕೈ
ದಕ್ಷಿಣ ಏಷ್ಯಾದಲ್ಲಿ ಇನ್ನಿತರ ಸುನಾಮಿಗಳು
Tsunamis in South Asia (Source: Amateur Seismic Centre, India) | ||||||
---|---|---|---|---|---|---|
ದಿನಾಂಕ | ಸ್ಥಳ | |||||
೧೫೨೪ | ದಾಭೋಲ್ ಹತ್ತಿರ, ಮಹಾರಾಷ್ಟ್ರ | |||||
೦೨ ಏಪ್ರಿಲ್ ೧೭೬೨ | ಅರಕಾನ್ ದಡ, ಮ್ಯಾನ್ಮಾರ್ | |||||
೧೬ ಜೂನ್ ೧೮೧೯ | ಕಚ್ಛದ ರಣ, ಗುಜರಾತ್, ಭಾರತ | |||||
೩೧ ಅಕ್ಟೋಬರ್ ೧೮೪೭ | ಗ್ರೇಟ್ ನಿಕೋಬಾರ್ ದ್ವೀಪ, ಭಾರತ | |||||
೩೧ ಡಿಸೆಂಬರ್ ೧೮೮೧ | ಕಾರ್ ನಿಕೋಬಾರ್ ದ್ವೀಪ, ಭಾರತ | |||||
೨೬ ಆಗಸ್ಟ್ ೧೮೮೩ | ಕ್ರಕಟೋವ ಜ್ವಾಲಾಮುಖಿ | |||||
೨೮ ನವೆಂಬರ್ ೧೯೪೫ | ಮೇಕ್ರನ್ ದಂಡೆ, ಬಲೂಚಿಸ್ತಾನ | |||||
೨೬ ಡಿಸೆಂಬರ್ ೨೦೦೪ | ಬಂದ ಅಚೆ, ಇಂಡೊನೀಶಿಯ; ತಮಿಳು ನಾಡು (ಭಾರತ), ಕೇರಳ (ಭಾರತ), ಆಂಧ್ರ ಪ್ರದೇಶ (ಭಾರತ), ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ (ಭಾರತ); ಶ್ರೀಲಂಕಾ; ಥಾಯ್ ಲ್ಯಾಂಡ್; ಮಲೇಷ್ಯಾ; ಮಾಲ್ಡೀವ್ಸ್; ಸೊಮಾಲಿಯಾ; ಕೀನ್ಯಾ; ತಾಂಜಾನಿಯಾ |
ಇನ್ನಿತರ ಐತಿಹಾಸಿಕ ಸುನಾಮಿಗಳು
ಇನ್ನಿತರ ಐತಿಹಾಸಿಕ ಸುನಾಮಿಗಳಲ್ಲಿ ಈ ಕೆಳಗೆ ಕಾಣಿಸಿದವುಗಳೂ ಸೇರಿವೆ:
- ಸುಮಾರು ಕ್ರಿ.ಪೂ.೫೦೦: ಪೂಂಪುಹಾರ್,ತಮಿಳು ನಾಡು,ಭಾರತ,ಮಾಲ್ಡೀವ್ಸ್
- 1541: ಬ್ರೆಜಿಲ್ ನಲ್ಲಿ ಯುರೋಪಿಯನ್ನರ ವಸಾಹತನ್ನು ಅಪ್ಪಳಿಸಿದ ಸುನಾಮಿ. ಪ್ರಾಣಹಾನಿಯ ಬಗ್ಗೆ ದಾಖಲೆಗಳು ಇಲ್ಲದಿದ್ದರೂ ಸಾವೊ ವಿಸೆಂಟ್ ಪಟ್ಟಣವು ಸಂಪೂರ್ಣವಾಗಿ ನಾಶವಾಯಿತು.
- ಜನವರಿ 20, 1606 /1607: ಬ್ರಿಸ್ಟಲ್ ಕಡಲ್ಗಾಲುವೆಗುಂಟ ಸಂಭವಿಸಿದ ದುರಂತದಲ್ಲಿ ಸಾವಿರಾರು ಜನ ಮರಣಿಸಿದರು. ಗ್ರಾಮಗಳು ಮತ್ತು ಮನೆಗಳು ಕೊಚ್ಚಿಹೋದುವು. ಈ ಜಲಪ್ರಳಯಕ್ಕೆ ಸುನಾಮಿಯು ಅಂಶಿಕ ಕಾರಣವೆಂದು ನಂಬಲಾಗಿದೆ.
(discussion).
- ಜನವರಿ 26, 1700: ಕ್ಯಾಸ್ಕಾಡಿಯಾ ಭೂಕಂಪವು ಶಾಂತಸಾಗರದ ವಾಯವ್ಯಭಾಗದಲ್ಲಿ ಬೃಹತ್ ಸುನಾಮಿಗೆ ಕಾರಣವಾಯಿತು.
- ೧೮೯೬ರಲ್ಲಿ ಜಪಾನಿನ ಸನ್ರಿಕು ಕರಾವಳಿಯುದ್ದಕ್ಕೆ ೨೦ ಮೀಟರ್ ( ೭ ಮಹಡಿ) ಎತ್ತರದ ಸುನಾಮಿ ಅಲೆಗಳೆದ್ದು ಅನೇಕ ಗ್ರಾಮಗಳು ನಾಮಾವಶೇಷವಾದುವು. ಈ ದುರಂತದಲ್ಲಿ ೨೬೦೦೦ ಮಂದಿ ಪ್ರಾಣ ಕಳೆದುಕೊಂಡರು.
- 1946ರಲ್ಲಿ ಅಲಾಯ್ಷಿಯನ್ ದ್ವೀಪದಲ್ಲಿ ಸಂಭವಿಸಿದ ಭೂಕಂಪವು ಹವಾಯ್ ದ್ವೀಪಗಳೆಡೆಗೆ ಸುನಾಮಿ ಅಲೆಗಳನ್ನು ರವಾನಿಸಿ ಅಲ್ಲಿ ೧೫೯ ಮಂದಿಯ ಸಾವಿಗೆ ಕಾರಣವಾಯಿತು.
- ಮೇ 26, 1983: ಪಶ್ಚಿಮ ಜಪಾನಿನಲ್ಲಿ ಸುನಾಮಿಯೊಂದಕ್ಕೆ 104 ಜನ ಬಲಿಯಾದರು.
- ಜುಲೈ 17, 1998: ಪಾಪುವ ನ್ಯೂ ಗಿನಿಯಲ್ಲಿ ಸುನಾಮಿಯೊಂದು ಸುಮಾರು ೨೨೦೦ ಜನರನ್ನು ಬಲಿತೆಗೆದುಕೊಂಡಿತು.
ಉಲ್ಲೇಖಗಳು
- Dudley, Walter C. & Lee, Min (1988: 1st edition) Tsunami! ISBN 0-8248-1125-9 link
- Kenneally, Christine (December 30, 2004). "Surviving the Tsunami". Slate. link
- Macey, Richard (January 1, 2005). "The Big Bang that Triggered A Tragedy", The Sydney Morning Herald, p 11 - quoting Dr Mark Leonard, seismologist at Geoscience Australia.
- Lambourne, Helen (March 27, 2005). "Tsunami: Anatomy of a disaster". BBC News. link
- abelard.org. tsunamis: tsunamis travel fast but not at infinite speed. Website, retrieved March 29, 2005. link
- What about the famous image of a great canyon of water? Could this have any basis in reality?
ಬಾಹ್ಯ ಸಂಪರ್ಕಗಳು
![]() |
ವಿಕಿಮೀಡಿಯ ಕಣಜದಲ್ಲಿ Tsunami ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
Articles and websites
- Tsunami Information — Information on tsunamis in Portuguese.
- Tsunami Information from the Coastal Ocean Institute, Woods Hole Oceanographic Institution
- Tsunami Forums
- NOVA: Wave That Shook The World — Site and special report shot within days of the 2004 Indian Ocean tsunami.
- Biggest Tsunami Countdown — Description of the five largest historical tsunamis.
- NOAA Tsunami — General description of tsunamis and the United States agency NOAA's role in Tsunami hazard assessment, preparedness, education, forecasts & warnings, response and research.
- Can HF Radar detect Tsunamis? — University of Hamburg HF-Radar.
- Development Gateway Tsunami Special
- The Higher Ground Project — Stories of children who survived the tsunami.
- The International Centre for Geohazards (ICG)
- ITIC tsunami FAQ
- NOAA PMEL Tsunami Research Program (United States)
- USGS: Surviving a tsunami (United States)
- ITSU — Coordination Group for the Pacific Tsunami Warning System.
- Pacific Tsunami Museum
- Tsunamis and Earthquakes
- Tsunami Centers — United States National Weather Service.
- Science of Tsunami Hazards journal
- The International Centre for Geohazards (ICG)
- The Indian Ocean tsunami and what it tells us about tsunamis in general.
- Tsunami: Magnitude of Terror
- General Tsunami Resources
- Natural Disasters - Tsunami — Great research site for kids.
- Envirtech Tsunami Warning System — Based on seabed seismics and sea level gauges.
- Indian Ocean Disaster Relief
- Benfield Hazard Research - Mega Tsunamis - Cumbre Vieja volcano on the Canary Island of La Palma Risk
- What Causes a Tsunami?
Images and video
See also: Images and video, 2004 Indian Ocean earthquake
- Large Collection of Amateur Tsunami Videos with Thunbnail Images and Detailed Descriptions
- 5 Amateur Camcorder Video Streams of the December 26, 2004 tsunami that hit Sri Lanka, Thailand and Indonesia.
- 2004 Asian Tsunami Satellite Images (Before and After)
- Satellite Images of Tsunami Affected Areas High resolution satellite images showing the effects of the 2004 tsunami on the affected areas in Indonesia, Thailand and Nicobar island of India.
- Computer-generated animation of a tsunami
- Animation of 1960 tsunami originating outside coast of Chile
- The Survivors - A moving travelogue full of stunning images along the tsunami ravaged South-Western Coast of India
Tsunamis are Dangerous- A site for about tsunamis for everyone