ಸಿಯೆರ್ರಾ ಲಿಯೋನ್

ಸಿಯೆರ್ರಾ ಲಿಯೋನ್, ಅಧಿಕೃತವಾಗಿ ಸಿಯೆರ್ರಾ ಲಿಯೋನ್ ಗಣರಾಜ್ಯ, ಪಶ್ಚಿಮ ಆಫ್ರಿಕಾದಲ್ಲಿನ ಒಂದು ಸಾಂವಿಧಾನಿಕ ಗಣರಾಜ್ಯ. ಇದರ ಉತ್ತರಕ್ಕೆ ಗಿನಿ, ದಕ್ಷಿಣಕ್ಕೆ ಲೈಬೀರಿಯ ಮತ್ತು ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ. ೧೮ನೇ ಶತಮಾನದಲ್ಲಿ ಗುಲಾಮಗಿರಿಯ ವಹಿವಾಟಿಗೆ ಈ ಪ್ರದೇಶ ಪ್ರಮುಖವಾಗಿತ್ತು. ಇದರ ರಾಜಧಾನಿ ಫ್ರೀಟೌನ್ ಅನ್ನು ಅಮೇರಿಕದ ಕ್ರಾಂತಿಕಾರಿ ಯುದ್ಧದಲ್ಲಿ ಯುಕೆ ಪರವಾಗಿ ಹೋರಾಡಿ ಬಿಡುಗಡೆಗೊಂಡ ಗುಲಾಮರು ೧೭೮೭ರಲ್ಲಿ ಸ್ಥಾಪಿಸಿದರು. ಮುಂದೆ ೧೮೦೮ರಲ್ಲಿ ಇದು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿತು. ೧೯೬೧ರಲ್ಲಿ ಸ್ವಾತಂತ್ರ್ಯ ಪಡೆದ ಈ ದೇಶ, ೧೯೯೧ರಿಂದ ೨೦೦೨ರವರೆಗೆ ತೀವ್ರ ಅಂತಃಕಲಹ ಅನುಭವಿಸಿತು. ಈಗ ಶಾಂತಿಯುತವಾಗಿರುವ ಈ ದೇಶ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುತ್ತಿದೆ.

Republic of Sierra Leone
ಸಿಯೆರ್ರಾ ಲಿಯೋನ್ ಗಣರಾಜ್ಯ
ಧ್ವಜ ಲಾಂಛನ
ಧ್ಯೇಯ: "Unity - Freedom - Justice"
ರಾಷ್ಟ್ರಗೀತೆ: High We Exalt Thee, Realm of the Free

Location of ಸಿಯೆರ್ರಾ ಲಿಯೋನ್

ರಾಜಧಾನಿ ಫ್ರೀಟೌನ್
8°31′N 13°15′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಆಂಗ್ಲ
ಸರಕಾರ ಸಾಂವಿಧಾನಿಕ ಗಣರಾಜ್ಯ
 - ರಾಷ್ಟ್ರಪತಿ ಅರ್ನೆಸ್ಟ್ ಬಾಯ್ ಕೊರೊಮ
ಸ್ವಾತಂತ್ರ್ಯ  
 - ಯು.ಕೆ. ಇಂದಏಪ್ರಿಲ್ ೨೭, ೧೯೬೧ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ71,740 ಚದರ ಕಿಮಿ ;  (119th)
 27,699 ಚದರ ಮೈಲಿ 
 - ನೀರು (%)1.0
ಜನಸಂಖ್ಯೆ  
 - ಜುಲೈ ೨೦೦೭ರ ಅಂದಾಜು5,866,000 (103rd1)
 - ಸಾಂದ್ರತೆ 83 /ಚದರ ಕಿಮಿ ;  (114th1)
199 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು$4.921 billion (151st)
 - ತಲಾ$903 (172nd)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.335 (176th)  ನಿಮ್ನ
ಕರೆನ್ಸಿ ಲಿಯೋನ್ (SLL)
ಸಮಯ ವಲಯ GMT (UTC+0)
ಅಂತರ್ಜಾಲ TLD .sl
ದೂರವಾಣಿ ಕೋಡ್ +232
1 Rank based on 2007 figures.

ಫ್ರೀಟೌನ್ ಸಿಯೆರ್ರಾ ಲಿಯೋನ್ರಾಜಧಾನಿ ಮತ್ತು ಅತ್ಯಂತ ದೊಡ್ಡ ನಗರ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಕೇಂದ್ರ. ಎರಡನೇ ದೊಡ್ಡ ನಗರ ಬೋ. ಇತರೆ ಪ್ರಮುಖ ನಗರಗಳೆಂದರೆ ಕೆನೆಮಾ, ಮಕೇನಿ ಮತ್ತು ಕೊಯ್ಡು ಟೌನ್.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.