ವ್ಲಾಡಿಮಿರ್ ಲೆನಿನ್

ವ್ಲಾಡಿಮಿರ್ ಇಲ್ಯಿಚ್ ಲೆನಿನ್ (Влади́мир Ильи́ч Ле́нин) (ಏಪ್ರಿಲ್ ೨೨, ೧೮೭೦ - ಜನವರಿ ೨೧, ೧೯೨೪) ಇವರು ರಷ್ಯಾ ದೇಶದ ಕ್ರಾಂತಿಕಾರಿಗಳು, ಕಮ್ಯುನಿಸ್ಟ್ ಸಿದ್ಧಾಂತದ ರಾಜಕಾರಣಿ, ಅಕ್ಟೋಬರ್ ಕ್ರಾಂತಿಯ ಮುಖ್ಯ ನಾಯಕ, ಸೋವಿಯೆಟ್ ಒಕ್ಕೂಟದ ಪ್ರಥಮ ಅಧ್ಯಕ್ಷ. ಅವರು ೧೯೧೭ರಿಂದ ರಷ್ಯಾದ ಸೋವಿಯಟ್ ಫ಼ೆಡರೇಟಿವ್ ಸೋಶಿಯಲಿಸ್ಟ್ ರಿಪಬ್ಲಿಕ್‍ನ ಸರ್ಕಾರದ ಮುಖ್ಯಸ್ಥರಾಗಿ, ಮತ್ತು ೧೯೨೨ರಿಂದ ತಮ್ಮ ನಿಧನದವರೆಗೆ ಸೋವಿಯಟ್ ಒಕ್ಕೂಟದ ಸರ್ಕಾರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ಅವರ ಆಡಳಿತದಡಿಯಲ್ಲಿ, ರಷ್ಯನ್ ಸಾಮ್ರಾಜ್ಯದ ಬದಲಿಗೆ ಸೋವಿಯಟ್ ಒಕ್ಕೂಟ ಅಸ್ತಿತ್ವಕ್ಕೆ ಬಂದಿತು; ನೆಲ, ಕೈಗಾರಿಕೆ ಮತ್ತು ವ್ಯಾಪಾರವನ್ನು ಒಳಗೊಂಡಂತೆ ಎಲ್ಲ ಸಂಪತ್ತನ್ನು ರಾಷ್ಟ್ರೀಕರಿಸಲಾಯಿತು.

ವ್ಲಾಡಿಮಿರ್ ಇಲ್ಯಿಚ್ ಲೆನಿನ್
Владимир Ильич Ленин


ಅಧಿಕಾರದ ಅವಧಿ
ನೆವೆಂಬರ್ ೮, ೧೯೧೭  ಜನವರಿ ೨೧, ೧೯೨೪
ಉತ್ತರಾಧಿಕಾರಿ ಜೋಸೆಫ್ ಸ್ಟಾಲಿನ್

ಜನನ 22 ಏಪ್ರಿಲ್ 1870
ಸಿಂಬಿರ್ಸ್ಕ್, ರಷ್ಯಾದ ಸಾಮ್ರಾಜ್ಯ
ಮರಣ 21 ಜನವರಿ 1924(1924-01-21) (ವಯಸ್ಸು 53)
ಗೋರ್ಕಿ, ಸೋವಿಯೆಟ್ ಒಕ್ಕೂಟ
ರಾಜಕೀಯ ಪಕ್ಷ ಬೋಲ್ಷೆವಿಕ್ ಪಕ್ಷ
ಜೀವನಸಂಗಾತಿ ನಡೆಜ್ಡ ಕ್ರುಪ್ಸ್ಕಾಯ
ವೃತ್ತಿ ರಾಜಕಾರಣಿ, ವಕೀಲ
ಧರ್ಮ ನಾಸ್ತಿಕ
ಹಸ್ತಾಕ್ಷರ

ಉಲ್ಲೇಖಗಳು

[1] [2] [3]

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.