ಯೇಸು ಕ್ರಿಸ್ತ

ಯೇಸು ಅಥವಾ ಜೀಸಸ್ (ಕ್ರಿ.ಪೂ ೬-೪ ರಿಂದ ಕ್ರಿ.ಶ. ೨೯-೩೩) ಕ್ರೈಸ್ತ ಧರ್ಮದ ಸ್ಥಾಪನೆಗೆ ಕಾರಣರಾದವರು. ಇವರನ್ನು ಕ್ರೈಸ್ತರು 'ದೇವರಕುಮಾರ'ನೆಂದು ವಿಶ್ವಾಸಿಸುತ್ತಾರೆ.

Jesus
Jesus depicted as the Good Shepherd
(stained glass at St John's Ashfield in
Sydney, Australia)
ಜನನ7–2 BC[lower-alpha 1]
Herodian Tetrarchy, Roman Empire[5]
ನಿಧನ30–33 AD[lower-alpha 2]
Judea, Roman Empire
Cause of deathCrucifixion[lower-alpha 3]
Home townNazareth, Galilee[11]
ತಂದೆ ತಾಯಿ
Various depictions of Jesus.

ಟೆಂಪ್ಲೇಟು:Jesus

೧೧ ನೆಯ ಶತಮಾನದಲ್ಲಿ ರಚಿಸಲಾದ ಯೇಸು ಕ್ರಿಸ್ತನ ಒಂದು ಚಿತ್ರ
The Sermon on the Mount, depicted by Carl Heinrich Bloch.

ಯೇಸು ಪದದ ನಿಷ್ಪತ್ತಿ

'ಯೇಸು' ಅಥವಾ 'ಜೀಸಸ್' ಪದವು ಗ್ರೀಕ್‌ನ ವ್ಯುತ್ಪನ್ನವಾದ ಪದವೆಂದು ತಙ್ಞರು ಹೇಳುತ್ತಾರೆ. 'ದೇವರೇ ಮೋಕ್ಷ' ಎಂಬುದು ತಙ್ಞರ ಅಭಿಪ್ರಾಯ. 'ಕ್ರಿಸ್ತ'ನ ಅರ್ಥ 'ರಕ್ಷಕ'. ಈ ಅರ್ಥದಲ್ಲಿ ಯೇಸು ಕ್ರಿಸ್ತ (ಜೀಸಸ್ ಕ್ರೈಸ್ಟ್) ಎಂಬ ಹೆಸರು ಉಪಯೋಗವಾಗುತ್ತದೆ. ಇಸ್ಲಾಮ್ ಧರ್ಮವು ಯೇಸುವನ್ನು ದೇವಕುಮಾರನೆಂದು ಹೇಳುವುದಿಲ್ಲ. ಬದಲಾಗಿ ಕ್ರಿಸ್ತನನ್ನು ಒಬ್ಬ ಮುಖ್ಯ ಪ್ರವಾದಿ ಎಂದು ಹೇಳುತ್ತದೆ.

ಜನನ, ಜೀವನ

ಯೇಸು ಹುಟ್ಟಿದ್ದು ಬೆತ್ಲೆಹೆಮ್‌ನಲ್ಲಾದರೂ, ಅವರು ಬೆಳೆದದ್ದು ಮಾತ್ರ ಅವರ ತಂದೆ ಮತ್ತು ತಾಯಿ ವಾಸವಾಗಿದ್ದ 'ನಜರೆತ್‌' ಎಂಬ ಊರಿನಲ್ಲಿ. ಹಾಗಾಗಿ ಯೇಸುವನ್ನು 'ನಜರೆತ್‌ನ ಯೇಸು'ವೆಂದು ಕರೆಯುವುದೇ ವಾಡಿಕೆ. ಇಹಲೋಕದಲ್ಲಿ ಯೇಸುವಿನ ತಂದೆ ಸಂತ ಜೋಸೆಫ್ ಒಬ್ಬ ಬಡಗಿ. ತಾಯಿ ಸಂತ ಮೇರಿ. ವಾಸ್ತವವಾಗಿ ಮೇರಿಯು ಪವಿತ್ರಾತ್ಮ ವರದಿಂದ ಕರ್ತನಾದ ಯೇಸುಕ್ರಿಸ್ತನನ್ನು ಗರ್ಭದಲ್ಲಿ ಹೊಂದಿ ಪರಿಶುದ್ಧ ಜೀವನ ನಡೆಸುತ್ತಾಳೆ. ಯಾವುದೇ ದೇಹ ಸಂಪರ್ಕವಿಲ್ಲದೆ ದೇವರ ಅನುಗೃಹದೀಂದ,ಪವಿತ್ರಆತ್ಮದಿಂದ, ಮೇರಿಯು ಯೇಸುವಿಗೆ ಜನ್ಮ ನೀಡಿದ್ದಾಳೆ. ನವಮಾಸಗಳ ಗರ್ಭಿಣಿ ಯಾಗಿದ್ದಾಗ, ಕಡ್ಡಾಯವಾಗಿ ಜನಗಣತಿಗೆ ಹಾಜರಾಗಬೇಕಾಗಿ ಬಂತು. ಆಗ ಜೋಸೆಫ್ ತನ್ನ ಮಡದಿಯನ್ನು ಬೆತ್ಲೆಹೆಮ್‌ಗೆ ಕರೆದೊಯ್ಯುತ್ತಾನೆ. ಅಲ್ಲಿ ಉಳಿದುಕೊಳ್ಳಲು ಅವರಿಗೆ ಸಿಕ್ಕಿದ್ದು ಒಂದು ದನಗಳ ಕೊಟ್ಟಿಗೆ ಅಥವಾ ಕುರಿದೊಡ್ಡಿ. ಅಲ್ಲೇ ಯೇಸುವಿನ ಜನನವಾಗುತ್ತದೆ. ಯೇಸು ಭೂಮಿ ಮೇಲೆ ಜನ್ಮ ಪಡೆದಾಗ ಆಕಾಶದಲ್ಲಿ ಒಂದು ದೊಡ್ಡ ನಕ್ಷತ್ರ ಕಾಣಿಸಿಕೊಂಡಿತು, ಇವತ್ತಿಗು ಮುಂಜಾನೆ, ಸಾಯಂಕಾಲ ಆಕಾಶದಲ್ಲಿ ಚುಕ್ಕೆ ಕಾಣಿಸುತ್ತದೆ.

ಧರ್ಮಗ್ರಂಥ

  • ಯೇಸುವಿನ ಜೀವನ ವೃತ್ತಾಂತ ಕಂಡು ಬರುವುದು ಕ್ರೈಸ್ತರಿಗೆ ಧರ್ಮಗ್ರಂಥವಾದ ಬೈಬಲ್‌ಹೊಸ ಒಡಂಬಡಿಕೆಯ ನಾಲ್ಕು ಪ್ರಮುಖ ಭಾಗಗಳಾದ ಮತ್ತಾಯ, ಮಾರ್ಕ್, ಲೂಕ್,ಮತ್ತು ಜಾನ್ ಬರೆದ ಸುವಾರ್ತೆಗಳಲ್ಲಿ. ಹಳೇ ಒಡಂಬಡಿಕೆ ಯಲ್ಲಿ ಯೇಸುಕ್ರಿಸ್ತನ ಬರುವಿಕೆಯ ಕುರಿತು ಅನೇಕ ಉಲ್ಲೇಖಗಳಿವೆ. ಇಸ್ರೇಲ್‌ನ ಬೆತ್ಲೆಹೆಮ್‌ನಲ್ಲಿ ಹುಟ್ಟಿ ಯೇಸು ಅನೇಕ ಸೂಚಕ ಕಾರ್ಯಗಳನ್ನು ಮಾಡಿ, ದೇವರ ಸಂದೇಶವನ್ನು ಜನರಿಗೆ ಬೋಧಿಸಿದನು.
  • ಮೊದಲೇ ಮೋಶೆಯ ಧರ್ಮಗ್ರಂಥದಲ್ಲಿ ಲಿಖಿಸಲ್ಪಟ್ಟಂತೆ ಲೋಕಪಾಪಗಳನ್ನು ಹೊತ್ತುಕೊಂಡು ಹೋಗುವ ದೇವರ ಕುರಿಮರಿ ಎಂಬ ವಾಕ್ಯದ ನೆರವೇರಿಕೆಗಾಗಿ ರೋಮನ್ ಅಧಿಕಾರಿಯ ಅಪ್ಪಣೆಯ ಮೇರೆಗೆ ಏಸುವನ್ನು ಶಿಲುಬೆಗೆ ಏರಿಸಲ್ಪಡುತ್ತಾರೆ. ಯೇಸು ಶಿಲುಬೆಗೆ ಏರಿದ ದಿನವನ್ನು 'ಗುಡ್‍ಫ್ರೈಡೇ' ಎನ್ನುತ್ತಾರೆ. ಶಿಲುಬೆಗೆ ಏರುವ ಸಂದರ್ಭದಲ್ಲಿ ಏಸು ಸಾಮಾನ್ಯ ಮನುಷ್ಯರಂತೆ ಎಲ್ಲಾ ಕಷ್ಟಗಳಿಗೂ ತಮ್ಮ ದೇಹವನ್ನು ಒಡ್ಡುತ್ತಾರೆ. ಭಾರವಾದ ಶಿಲುಬೆಯನ್ನು ಹೊತ್ತು, ಮುಳ್ಳಿನ ಕಿರೀಟವನ್ನು ಧರಿಸಿ, ಅರಿಷಡ್ವರ್ಗಗಳನ್ನು ಗೆದ್ದು, ಶಿಲುಬೆಗೆ ಏರುವಾಗಲೂ 'ದೇವರೇ ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬುದರ ಅರಿವಿಲ್ಲ. ಹಾಗಾಗಿ ಅವರನ್ನು ಕ್ಷಮಿಸು' ಎಂದು,ದೇವರಲ್ಲಿ ತಮ್ಮನ್ನು ಶಿಲುಬೆಗೆ ಏರಿಸಿದವರಿಗೂ ಕ್ಷಮಾದಾನ ನೀಡುತ್ತಾರೆ. ಹಾಗೂ ಶುಲುಬೆಯ ಮೇಲೆ ಇದ್ದಾಗ ಕೊನೆಯಲ್ಲಿ ಏಳು ಶಬ್ದಗಳನ್ನು, ನುಡಿದು ತಮ್ಮ ಪ್ರಾಣವನ್ನು ದೇವರಿಗೆ ಅರ್ಪಿಸುತ್ತಾರೆ.
  • ಆಮೇಲೆ ಮೂರು ದಿನಗಳ ನಂತರ ತನ್ನ ಸಮಾಧಿಯಿಂದ ಅವರು ಮೇಲೆದ್ದರು (ಪುನರುತ್ಥಾನ ಹೊಂದಿದರು) ಎಂಬುದನ್ನು ಬೈಬಲ್ ಹೇಳುತ್ತದೆ. ಆ ದಿನವನ್ನು 'ಈಸ್ಟರ್ ಡೇ' ಎಂದು ಕರೆಯುತ್ತಾರೆ. ಯೇಸು ಕ್ರಿಸ್ತನ ಉಪದೇಶಗಳು ಮತ್ತು ಜೀವನ ಬೈಬಲ್‍ನ ಹೊಸ ಒಡಂಬಡಿಕೆಯ (ನ್ಯೂ ಟೆಸ್ಟಮೆಂಟ್) ಮುಖ್ಯ ವಿಷಯವಾಗಿದ್ದು, ಕ್ರೈಸ್ತ ಧರ್ಮದ ಮೂಲಭೂತ ಉಪದೇಶಗಳಾಗಿವೆ. ಏಳನೆಯ ಶತಮಾನದಿಂದೀಚೆಗೆ ಯೇಸುಕ್ರಿಸ್ತನ ಆಳೆತ್ತರದ ಪ್ರತಿಮೆಗಳನ್ನು ಮಾಡಿ ಮೆರುಗಿನ ವಸ್ತ್ರಗಳಿಂದ ಅಲಂಕರಿಸಿ ಶಿಲುಬೆಯ ಬದಿಯಲ್ಲಿ ನಿಲ್ಲಿಸುವ ಪರಿಪಾಠ ಮೊದಲಾಯಿತು. ಕ್ರಮೇಣ ಯೇಸುಕ್ರಿಸ್ತನ ಯಾತನೆ ಮತ್ತು ಸಾವನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಸಲುವಾಗಿ ಯೇಸುಕ್ರಿಸ್ತನ ದೇಹವನ್ನು ನೈಜತೆಗೆ ಅತ್ಯಂತ ಹತ್ತಿರವಾಗಿ ರೂಪಿಸುವ ಪದ್ಧತಿ ಬೆಳೆದುಬಂತು
  • ಯೇಸು ಮರಣದ ಮೇಲೆ ವಿಜಯ ಸಾಧಿಸಿದ ನಂತರ.40 ದಿನಗಳ ವರೆಗೆ ದೇವರ ವಾಕ್ಯಗಳನ್ನು ಜನರಿಗೆ ಹೇಳಿ," ನಾನು ಮತ್ತೇ ಬರುfತ್ತೇನೆ ಎಂದು ಜನರಿಗೆ ವಾಗ್ದಾನ ನೀಡಿದರು. ಜನರಿಗೆ ಬರುವ ಚಿಹ್ನೆಗಳನ್ನು ನೀಡಿದರು. ಅವು ಯಾವವು ಅಂದರೆ ದೇಶ, ದೇಶಗಳ ಮೇಲೆ ಯುದ್ಧ, ರಾಜ್ಯ, ರಾಜ್ಯಗಳ ನಡುವೆ ಉಗ್ರ ಹೊರಾಟ ಆಗುತ್ತವೆ, ಎಲ್ಲಾಕಡೆ ತಾಳಲಾರದ ಭಷ್ಟಾಚಾರ, ಅನ್ಯಾಯ, ನಡೆಯುತ್ತವೆ, ಹಾಗೂ ಎಲ್ಲಾ ಜನರಿಗೆ ದೇವರದ ವಾಕ್ಯವು ಗೊತ್ತಾಗಬೇಕು. ಆವಾಗ ಮತ್ತೆ ಪುನ: ನಾನು ಬರುತ್ತೇನೆ ಎಂದು ಯೇಸು ಹೇಳಿದರು.

ಯೇಸುವಿನ ಸಿದ್ಧಾಂತ

  • ಯೇಸುಕ್ರಿಸ್ತ ಸೆಣಸಿದ್ದು ರೋಮನರ ವಿರುದ್ಧವಲ್ಲ ಬದಲಿಗೆ ತಮ್ಮದೇ ಜನರ ಮೌಢ್ಯ, ಶೋಷಣೆ, ಕಂದಾಚಾರಗಳ ವಿರುದ್ಧ ಹಾಗೂ ಮಾನವತೆಯಿಲ್ಲದ ಸನಾತನವಾದದ ವಿರುದ್ಧ. ಯೇಸುಕ್ರಿಸ್ತ ಅಂದು ಪ್ರಚಲಿತವಾಗಿದ್ದ 'ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು' ಎಂಬ ಮೃಗೀಯ ಅಥವಾ ಪ್ರತೀಕಾರದ ನಿಯಮಗಳ ಬದಲಿಗೆ 'ಬಲಗೆನ್ನೆಗೆ ಹೊಡೆದವಂಗೆ ಎಡಗೆನ್ನೆ ತೋರು' ಎಂಬ ಉದಾತ್ತತೆಯ ಮಾತುಗಳನ್ನಾಡಿದ.
  • ಹಾದರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕೆಂಬ ನೀತಿಗೆ ಯೇಸುಕ್ರಿಸ್ತ ಹೊಸ ವ್ಯಾಖ್ಯಾನ ಬರೆದ. ಸ್ತ್ರೀಯೇನೋ ಹಾದರ ಮಾಡುವಾಗ್ಗೆ ಸಿಕ್ಕಿಬಿದ್ದಳು. ಆದರೆ ಹಾದರದಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ? ಅವನೂ ಸಮಾನ ತಪ್ಪಿತಸ್ಥನಲ್ಲವೇ? ತಪ್ಪು ಮಾಡುವುದು ಮಾನವ ಸಹಜ ಗುಣ. ತಪ್ಪನ್ನು ತೋರಿ ತಿದ್ದಿ ಕ್ಷಮಿಸಿ ಹೊಸತನ ನೀಡುವುದು ದೈವೀಗುಣ. ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು.
  • ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೈವಸ್ವರೂಪಿಯಾಗುತ್ತಾನೆ ಎಂಬುದೇ ಯೇಸುಕ್ರಿಸ್ತನ ಬೋಧನೆಯ ಸಾರ. ಈ ಮಾನವಪ್ರೇಮದ ಸಂದೇಶವನ್ನು ಅವನ ಶಿಷ್ಯರೂ ಅನುಯಾಯಿಗಳೂ ಎಲ್ಲೆಡೆ ಪಸರಿಸುತ್ತಾ ಬಂದರು. ಯೇಸುಕ್ರಿಸ್ತನ ಶಿಷ್ಯರ ಒಗ್ಗಟ್ಟಿನ ಕೆಲಸ, ಸುವ್ಯವಸ್ಥಿತ ರೂಪುರೇಷೆ, ಕ್ರಿಸ್ತತತ್ವಗಳ ಕುರಿತ ಬದ್ದತೆ ಮುಂತಾದವುಗಳ ಕಾರಣದಿಂದ ಕ್ರೈಸ್ತಧರ್ಮ ಎಲ್ಲೆಡೆ ಪಸರಿಸಿತು.
  • ನೀನ್ನ ನೆರೆಹೊರೆಯವರನ್ನು ಪ್ರೀತಿಸು. ದೇವರನ್ನು ಪೂರ್ಣ ಮನಸ್ಸಿನಿಂದ, ಆತ್ಮನಿಂದ, ಹಾಗೂ ಸತ್ಯದಿಂದ ಆರಾಧಿಸು ಜಾರ್ಜ್ ಮತ್ತು ಗಾಡ್ ಸನ್ ಮೂನ್ ಅವನನ್ನು ಉಳಿಸಿದ ಜೀಸಸ್ ಅವನನ್ನು ಜಾರ್ಜ್ ಪುನರುತ್ಥಾನ ಮತ್ತು ಧನ್ಯವಾದಗಳು ಗಿಯಾರ್ಗಿಯೊ ನಾವು ಧನ್ಯವಾದಗಳು ಭೂಮಿಯ ಮೇಲೆ ನಮ್ಮ ದಿನಗಳ ಉಳಿದ ಕಾಲ.
12-year-old Jesus found in the temple depicted by James Tissot
Trevisani's depiction of the baptism of Jesus, with the Holy Spirit descending from Heaven as a dove
A painting of Jesus' final entry into Jerusalem, by Jean-Léon Gérôme, 1897
"Adoration of the Shepherds" by Gerard van Honthorst, 1622
The Transfiguration of Jesus, depicted by Carl Bloch

Notes

Explanatory

  1. Meier writes that Jesus' birth year is c. 7 or 6 BC.[1] Rahner states that the consensus among historians is c. 4 BC.[2] Sanders also favors c. 4 BC and refers to the general consensus.[3] Finegan uses the study of early Christian traditions to support c. 3 or 2 BC.[4]
  2. Most scholars estimate 30 or 33 AD as the year of Jesus' crucifixion.[6]
  3. James Dunn writes that the baptism and crucifixion of Jesus "command almost universal assent" and "rank so high on the "almost impossible to doubt or deny" scale of historical facts" that they are often the starting points for the study of the historical Jesus.[7] Bart Ehrman states that the crucifixion of Jesus on the orders of Pontius Pilate is the most certain element about him.[8] John Dominic Crossan and Richard G. Watts state that the crucifixion of Jesus is as certain as any historical fact can be.[9] Paul R. Eddy and Gregory A. Boyd say that non-Christian confirmation of the crucifixion of Jesus is now "firmly established".[10]
  4. Traditionally, Christians believe that Mary conceived her son miraculously by the agency of the Holy Spirit. Muslims believe that she conceived her son miraculously by the command of God. Joseph was from these perspectives the acting adoptive father.

Citations BIBLE

  1. Meier, John P. (1991). A Marginal Jew: The roots of the problem and the person. Yale University Press. p. 407. ISBN 978-0-300-14018-7.
  2. Rahner 2004, p. 732.
  3. Sanders 1993, pp. 10–11.
  4. Finegan, Jack (1998). Handbook of Biblical Chronology, rev. ed. Hendrickson Publishers. p. 319. ISBN 978-1-56563-143-4.
  5. Brown, Raymond E. (1977). The birth of the Messiah: a commentary on the infancy narratives in Matthew and Luke. Doubleday. p. 513. ISBN 978-0-385-05907-7.
  6. Humphreys, Colin J.; Waddington, W. G. (1992). "The Jewish Calendar, a Lunar Eclipse and the Date of Christ's Crucifixion" (PDF). Tyndale Bulletin. 43 (2): 340.
  7. Dunn 2003, p. 339.
  8. Ehrman 1999, p. 101.
  9. Crossan & Watts 1999, p. 96.
  10. Eddy & Boyd 2007, p. 173.
  11. Theissen & Merz 1998.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.