ಹೊಸ ಒಡಂಬಡಿಕೆ
ಹೊಸ ಒಡಂಬಡಿಕೆಯು (New Testament) ಬೈಬಲ್ ನ ದ್ವಿತೀಯ ಭಾಗವಾಗಿದೆ. ಇದು ಕ್ರಿಸ್ತನ ಜನನ, ಬೋಧನೆ, ಶ್ರಮ, ಮರಣ, ದಿವ್ಯಾರೋಹಣ ಮತ್ತು ನಂತರದ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಹೊಸ ಒಡಂಬಡಿಕೆಯ ಮೊದಲಿನ ೪ ಪುಸ್ತಕಗಳನ್ನು 'ಸುವಾರ್ತೆಗಳು' ಅಥವಾ 'ಸುಸಂದೇಶಗಳು' ಎಂದು ಕರೆಯಲಾಗುತ್ತವೆ. ಇದಲ್ಲದೆ ಹೊಸ ಒಡಂಬಡಿಕೆಯು ಪ್ರೇಷಿತರ ಕಾರ್ಯಕಲಾಪಗಳು, ಪೌಲನ ೧೩ ಪತ್ರಿಕೆಗಳು ಮತ್ತು ಇತರ ೮ ಪತ್ರಿಕೆಗಳೂ ಹಾಗು ದಿವ್ಯದರ್ಶನಗಳ ಪ್ರಕಟಣೆಯೂ ಒಳಗೊಂಡಂತೆ ಒಟ್ಟು ೨೭ ಪುಸ್ತಕಗಳಿರುತ್ತವೆ.
ಹಳೆ ಒಡಂಬಡಿಕೆಯಲ್ಲಿ ಒಟ್ಟು ೨೭ ಪುಸ್ತಕಗಳಿವೆ. ಅವುಗಳು:
ಹೊಸ ಒಡಂಬಡಿಕೆಯಲ್ಲಿನ ಪುಸ್ತಗಳು
- ಮತ್ತಾಯನು ಬರೆದ ಸುಸಂದೇಶಗಳು
- ಮಾರ್ಕನು ಬರೆದ ಸುಸಂದೇಶಗಳು
- ಲೂಕನು ಬರೆದ ಸುಸಂದೇಶಗಳು
- ಯೊವಾನ್ನನು ಬರೆದ ಸುಸಂದೇಶಗಳು
- ಪ್ರೇಷಿತರ ಕಾರ್ಯಕಲಾಪಗಳು
- ಪೌಲನು ರೋಮನರಿಗೆ ಬರೆದ ಪತ್ರ
- ಪೌಲನು ಕೊರಿಂಥಿಯರಿಗೆ ಬರೆದ ಮೊದಲ ಪತ್ರ
- ಪೌಲನು ಕೊರಿಂಥಿಯರಿಗೆ ಬರೆದ ಎರಡನೆಯ ಪತ್ರ
- ಪೌಲನು ಗಲಾತ್ಯರಿಗೆ ಬರೆದ ಪತ್ರ
- ಪೌಲನು ಎಫೆಸಿಯರಿಗೆ ಬರೆದ ಪತ್ರ
- ಪೌಲನು ಫಿಲಿಪಿಯರಿಗೆ ಬರೆದ ಪತ್ರ
- ಪೌಲನು ಕೊಲೊಸ್ಸೆಯರಿಗೆ ಬರೆದ ಪತ್ರ
- ಪೌಲನು ಥೆಸೆಲೋನಿಯರಿಗೆ ಮೊದಲ ಬರೆದ ಪತ್ರ
- ಪೌಲನು ಥೆಸೆಲೋನಿಯರಿಗೆ ಎರಡನೆಯ ಬರೆದ ಪತ್ರ
- ಪೌಲನು ತಿಮೊಥೇಯನಿಗ ಬರೆದ ಮೊದಲ ಪತ್ರ
- ಪೌಲನು ತಿಮೊಥೇಯನಿಗೆ ಬರೆದ ಎರಡನೆಯ ಪತ್ರ
- ಪೌಲನು ತೀತನಿಗೆ ಬರೆದ ಪತ್ರ
- ಪೌಲನು ಫಿಲೆಮೋನನಿಗೆ ಬರೆದ ಪತ್ರ
- ಹಿಬ್ರಿಯರಿಗೆ ಬರೆದ ಪತ್ರ
- ಯಕೋಬನು ಬರೆದ ಪತ್ರ
- ಪೇತ್ರನು ಬರೆದ ಮೊದಲ ಪತ್ರ
- ಪೇತ್ರನು ಬರೆದ ಎರಡನೆಯ ಪತ್ರ
- ಯೊವಾನ್ನನು ಬರೆದ ಮೊದಲ ಪತ್ರ
- ಯೊವಾನ್ನನು ಬರೆದ ಎರಡನೆಯ ಪತ್ರ
- ಯೊವಾನ್ನನು ಬರೆದ ಮೂರನೆಯ ಪತ್ರ
- ಯೂದನು ಬರೆದ ಪತ್ರ
- ಯೊವಾನ್ನನು ಕಂಡ ದಿವ್ಯ ದರ್ಶನಗಳ ಪ್ರಕಟಣೆ
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.