ಭಾರತದ ಸರ್ವೋಚ್ಛ ನ್ಯಾಯಾಲಯ
ಭಾರತದ ಸರ್ವೋಚ್ಛ ನ್ಯಾಯಾಲಯವು ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಅತೀ ಹೆಚ್ಚಿನ ಅಧಿಕಾರವುಳ್ಳ ನ್ಯಾಯಾಲಯವಾಗಿದೆ. ಭಾರತದ ಸಂವಿಧಾನದ ಛೇದ ೫, ಅನುಚ್ಛೇದ ೪ರ ಮೂಲಕ ಈ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯದ ಮೂಲ ಉದ್ದೇಶವೆಂದರೆ: ಸಂವಿಧಾನದ ರಕ್ಷಣೆ, ಸಂವಿಧಾನಿಕ ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ಯಾವುದೇ ಖಟ್ಲೆಯ ವಾದದ ಕೊನೆಯಹಂತ.

ಭಾರತದ ಸರ್ವೋಚ್ಛ ನ್ಯಾಯಾಲಯ | |
---|---|
![]() ಸರ್ವೋಚ್ಛ ನ್ಯಾಯಾಲಯದ ಮುದ್ರೆ | |
ಸ್ಥಾಪನೆ | ಜನವರಿ ೨೮, ೧೯೫೦ |
ದೇಶ | ಭಾರತ |
ಸ್ಥಳ | ಭಗವಾನ್ ದಾಸ್ ರಸ್ತೆ, ನವ ದೆಹಲಿ, ಭಾರತ, 110201 |
ಅಕ್ಷಾಂಶ ಮತ್ತು ರೇಖಾಂಶ | 28.622237°N 77.239584°E |
ಧ್ಯೇಯವಾಕ್ಯ | यतो धर्मस्ततो जयः॥ (Yato dharmas tato jayah) Whence law (dharma), thence victory. |
ಸಂಯೋಜನೆ ಪದ್ಧತಿ | Collegium System |
ಅಧಿಕೃತ ಗೊಳಿಸಿದ್ದು | ಭಾರತದ ಸಂವಿಧಾನ |
ನ್ಯಾಯಾಧೀಶರ ಅಧಿಕಾರ ಅವಧಿ | 65 ವರ್ಷ ವಯಸ್ಸು |
ಸ್ಥಾನಗಳ ಸಂಖ್ಯೆ | 31 (30+1) |
ಜಾಲತಾಣ | supremecourtofindia.nic.in |
ಭಾರತದ ಮುಖ್ಯ ನ್ಯಾಯಾಧೀಶರು |
ಭಾರತದ ಸರ್ವೋಚ್ಛ ನ್ಯಾಯಾಲಯವು ೨೮ನೇಯ ಜನವರಿ ೧೯೫೦ರಂದು ತನ್ನ ಮೊದಲನೆಯ ಖಟ್ಲೆಯ ವಿಚಾರಣೆಯನ್ನು ಕೈಗೆತ್ತಿಕೊಂಡಿತು.
ಮುಖ್ಯ ನ್ಯಾಯಮೂರ್ತಿಗಳು
ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಅವರು ಭಾರತದ 44ನೇ ಮುಖ್ಯ ನ್ಯಾಯಮೂರ್ತಿಯಾಗಿ ದಿ.5 Jan, 2017 ಬುಧವಾರ ಅಧಿಕಾರ ಸ್ವೀಕರಿಸಿದರು. 64 ವರ್ಷದ ಖೇಹರ್ ಅವರು ದೇಶದ ನ್ಯಾಯಾಂಗ ವ್ಯವಸ್ಥೆಯ ಸರ್ವೋಚ್ಚ ಹುದ್ದೆಯನ್ನು ಅಲಂಕರಿಸಿದ ಸಿಖ್ ಸಮುದಾಯದ ಮೊದಲ ವ್ಯಕ್ತಿ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಖೇಹರ್ ಅವರು ಆಗಸ್ಟ್ 27 ರವರೆಗೆ ಈ ಹುದ್ದೆಯನ್ನು ನಿರ್ವಹಿಸಿದರು.[1]
- 45ನೇ ಮುಖ್ಯನ್ಯಾಯಮೂರ್ತಿಯಾಗಿ ಮಿಶ್ರಾ (63) ಅವರು 2017 ಆಗಸ್ಟ್ ತಿಂಗಳ 28ರಂದು ಅಧಿಕಾರ ಸ್ವೀಕರಿಸಿದ್ದರು. ಹಾಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಅವರು ಇದೇ 27ರಂದು ನಿವೃತ್ತರಾಗಿದ್ದಾರೆ.
ನೂತನ ಮುಖ್ಯ ನ್ಯಾಯಮೂರ್ತಿ
ಸುಪ್ರೀಂಕೋರ್ಟ್‌ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೋಗೊಯ್ ಅವರು ಬುಧವಾರ ಅ.3 ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರಾ ಅವರ ಅವಧಿ ಅ.2ಕ್ಕೆ ಮುಕ್ತಾಯಗೊಂಡಿತ್ತು. ದೀಪಕ್ ಮಿಶ್ರಾ ಅವರು 13 ತಿಂಗಳು ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನ್ಯಾ.ರಂಜನ್ ಗೋಗೊಯ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಅಸ್ಸಾಂ ರಾಜ್ಯದಿಂದ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡ ಮೊದಲ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೂ ರಂಜನ್ ಗೋಗೊಯ್ ಪಾತ್ರರಾದರು. ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ ಗೋಗೊಯ್ ಅವರು ನಿರ್ಗಮಿತ ನಿವೃತ್ತ ಸಿಜೆಐ ದೀಪಕ್ ಮಿಶ್ರಾ ಅವರ ಬೀಳ್ಕೊಡುಗೆ ಭಾಷಣದಲ್ಲಿ, ನಾಗರಿಕ ಸ್ವಾತಂತ್ರ್ಯ ರಕ್ಷಣೆ ವಿಷಯದಲ್ಲಿ ದೀಪಕ್ ಮಿಶ್ರಾ ಅವರ ಕೊಡುಗೆ ಅಪಾರ ಮತ್ತು ಇತ್ತೀಚೆಗೆ ಅವರು ನೀಡಿದ ತೀರ್ಪುಗಳು ಶ್ಲಾಘನೀಯ. ನಾವು ಸಂವಿಧಾನದ ಆದರ್ಶಗಳನ್ನು ಉಳಿಸುವಲ್ಲಿ ವಿಫಲವಾದರೆ, ಕೊಲೆ, ದ್ವೇಷ ಎಂಬುದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎಂದು ಹೇಳಿದರು. ನ್ಯಾ.ಗೋಗೊಯ್ ಅವರ ಅಧಿಕಾರಾವಧಿ 2019 ನವೆಂಬರ್ 17ಕ್ಕೆ ಮುಕ್ತಾಯಗೊಳ್ಳಲಿದೆ. ಒಟ್ಟು 13 ತಿಂಗಳು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ಗೋಗೊಯ್ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಗೃಹಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ, ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ಎಚ್.ಡಿ.ದೇವೇಗೌಡ ಅವರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನೋಡಿ
- ಭಾರತದ ಸರ್ವೋಚ್ಛ ನ್ಯಾಯಾಲಯ
- ಭಾರತದ ಸಂವಿಧಾನ
- ಭಾರತೀಯ ನ್ಯಾಯ ವ್ಯವಸ್ಥೆ
- ಭಾರತದ ಕಾನೂನು
- ಭಾರತದ ಮುಖ್ಯನ್ಯಾಯಾಧೀಶರು