ಬೇಡರ ಕಣ್ಣಪ್ಪ

'ಗುಣ ಸಾಗರಿ" ಚಿತ್ರದ ಯಶಸ್ಸಿನಿಂದ ಪುಳಕಿತಗೊಂಡ ಗುಬ್ಬಿವೀರಣ್ಣ (ಕರ್ನಾಟಕ ಗುಬ್ಬಿ ಫಿಲಂಸ್‌) 'ಬೇಡರ ಕಣ್ಣಪ್ಪ" ಚಿತ್ರ ತಯಾರಿಕೆಗೆ ಅಣಿಯಾಗುತ್ತಿದ್ದರು. ಚಿತ್ರದ ನಾಯಕ 'ಕಣ್ಣಪ್ಪ"ನ ಪಾತ್ರಕ್ಕೆ ಭಕ್ತಿ-ವಿನಯದ, ಗಟ್ಟಿ-ಮುಟ್ಟಾದ, ಸ್ಪುರದ್ರೂಪಿ ಯುವಕನನ್ನು ಹುಡುಕಿಕೊಡಲು ಸಿಂಹರಿಗೆ ಹೇಳಿದ್ದರಂತೆ. ಪಾತ್ರಧಾರಿಯ ಹುಡುಕಾಟದಲ್ಲಿದ್ದ ಸಿಂಹ ಅವರಿಗೆ ಬಸ್ಸಲ್ಲಿ ಸಿಕ್ಕ ರಾಜ್‌ ಮೇಲೆ ಮನಸ್ಸು ಹರಿಯಿತು. ಮೊದಲೇ ಸ್ನೇಹಿತನ ಪುತ್ರ. ಅಭಿನಯ ಕಣ್ಣಾರೆ ಕಂಡಾಗಿದೆ. ಬಾಕಿ ಉ-ಳಿ-ದಿ-ದ್ದು ಸ್ಕಿೃೕನ್‌ ಟೆಸ್ಟ್‌ ಮಾತ್ರ ! ಅದಕ್ಕಾಗಿ ರಾಜ್‌ಗೆ ಮದರಾಸಿಗೆ ಬುಲಾವು ಬಂತು. ರಾಜ್‌ ಪಾಸಾದರು. ಅಂದಿನ ಮುತ್ತುರಾಜ್‌, ಸಿಂಹ ಕೃಪೆಯಿಂದ ರಾಜ್‌ಕುಮಾರ್‌ ಆದರು. ಬೇಡ-ರ ಕಣ್ಣ-ಪ್ಪ ಚಿತ್ರ ಸೆಟ್ಟೇರಿತು. ಕಾಲಕ್ಕೆ ತಕ್ಕಂತೆ ಮೆಗಾಹಿಟ್‌ ಆಯಿತು. ಈ ರಾಜಕುಮಾರನನ್ನ 'ಸ್ಟಾರ್‌"ಪದವಿ ಬೆನ್ನು ಹತ್ತಿತು. ಭಕ್ತಿ, ಸಾಂಸಾರಿಕ, ಸಾಮಾಜಿಕ ಹೀಗೆ 50 ವರ್ಷಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದರು. 1956ರಲ್ಲಿ 'ಮಹಿಷಾಸುರ ಮರ್ದಿನಿಯ" ಮೂಲಕ ಹಿನ್ನಲೆ ಗಾಯಕರೂ ಆದರು. ... ಐವತ್ತು ವರ್ಷಗಳು ಕಳೆದು ಹೋದವು. ಮತ್ತೆ ಅಣ್ಣಾವ್ರು 'ಭಕ್ತಿ ಪ್ರಧಾನ" ಚಿತ್ರ 'ಭಕ್ತ ಅಂಬರೀಷ "ದಲ್ಲಿ ಬರುತ್ತಾರೆಂದು ಅಭಿಮಾನಿ ದೇವರುಗಳು ಕಾದಿದ್ದಾರೆ. ಈ ಸುವರ್ಣಮಹೋತ್ಸವದ ಸಂಭ್ರಮ ಆಚರಿಸುವ ನೆನಪು ಯಾರಿಗಾದರು ಆಗಿದೆಯೇ......

ಬೇಡರ ಕಣ್ಣಪ್ಪ
ಬೇಡರ ಕಣ್ಣಪ್ಪ
ನಿರ್ದೇಶನಹೆಚ್.ಎಲ್.ಎನ್. ಸಿಂಹ
ನಿರ್ಮಾಪಕಗುಬ್ಬಿ ವೀರಣ್ಣ
ಪಾತ್ರವರ್ಗರಾಜಕುಮಾರ್ ಪಂಡರೀಬಾಯಿ ಸಂಧ್ಯಾ, ರಾಜಾಸುಲೋಚನ, ಜಿ.ವಿ.ಅಯ್ಯರ್, ನರಸಿಂಹರಾಜು, ಹೆಚ್.ಆರ್.ಶಾಸ್ತ್ರಿ
ಸಂಗೀತಆರ್.ಸುದರ್ಶನಂ
ಛಾಯಾಗ್ರಹಣಎಸ್.ಮಾರ್ಕಂಡೇಯ
ಬಿಡುಗಡೆಯಾಗಿದ್ದು೧೯೫೪
ಪ್ರಶಸ್ತಿಗಳುರಾಷ್ಟ್ರಪ್ರಶಸ್ತಿ
ಚಿತ್ರ ನಿರ್ಮಾಣ ಸಂಸ್ಥೆಗುಬ್ಬಿ ಕರ್ನಾಟಕ ಫಿಲಂಸ್
ಇತರೆ ಮಾಹಿತಿಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಅವರ ಪ್ರಪ್ರಥಮ ಚಲನಚಿತ್ರ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.