ಟರ್ಕಿ


ಟರ್ಕಿ ( ಅಧಿಕೃತವಾಗಿ ಟರ್ಕಿ ಗಣರಾಜ್ಯ ) ಯುರೋಪ್ ಮತ್ತು ಏಷ್ಯಾ ಖಂಡಗಳ ಸಂಧಿಸ್ಥಾನದಲ್ಲಿರುವ ಒಂದು ರಾಷ್ಟ್ರ. ಆದುದರಿಂದ ಕೆಲವೊಮ್ಮೆ ಇದನ್ನು ಯುರೇಷ್ಯಾದ ದೇಶವೆಂದು ಗುರುತಿಸಲಾಗುತ್ತದೆ. ಪಶ್ಚಿಮ ಏಷ್ಯಾದ ಅನಟೋಲಿಯಾ ಜಂಬೂದ್ವೀಪದಿಂದ ಆಗ್ನೇಯ ಯುರೋಪಿನ ಬಾಲ್ಕನ್ ಪ್ರದೇಶದವರೆಗೆ ಹಬ್ಬಿರುವ ಟರ್ಕಿಗೆ ೮ ರಾಷ್ಟ್ರಗಳು ನೆರೆಹೊರೆಯವು. ವಾಯವ್ಯಕ್ಕೆ ಬಲ್ಗೇರಿಯ; ಪಶ್ಚಿಮಕ್ಕೆ ಗ್ರೀಸ್; ಈಶಾನ್ಯಕ್ಕೆ ಜಾರ್ಜಿಯ; ಪೂರ್ವದಲ್ಲಿ ಇರಾನ್, ಆರ್ಮೇನಿಯ ಮತ್ತು ಅಜರ್ ಬೈಜಾನ್; ಆಗ್ನೇಯಕ್ಕೆ ಇರಾಖ್ ಮತ್ತು ಸಿರಿಯ ರಾಷ್ಟ್ರಗಳಿವೆ. ಟರ್ಕಿಯ ದಕ್ಷಿಣದಲ್ಲಿ ಮೆಡಿಟೆರೇನಿಯನ್ ಸಮುದ್ರ; ಪಶ್ಚಿಮದಲ್ಲಿ ಈಜಿಯನ್ ಸಮುದ್ರ ಮತ್ತು ಈಜಿಯನ್ ದ್ವೀಪಸಮೂಹಗಳು; ಉತ್ತರದಲ್ಲಿ ಕಪ್ಪು ಸಮುದ್ರಗಳು ಸಹ ಇವೆ. ಯುರೋಪ್ ಮತ್ತು ಏಷ್ಯಾಗಳ ಗಡಿಯೆಂದು ಪರಿಗಣಿಸಲ್ಪಡುವ ಮರ್ಮಾರಾ ಸಮುದ್ರ ಮತ್ತು ಬಾಸ್ಪೋರಸ್ ಕೊಲ್ಲಿಗಳು ಟರ್ಕಿಯ ಅನಟೋಲಿಯ ಮತ್ತು ಟ್ರಾಕ್ಯಾಗಳನ್ನು ಬೇರ್ಪಡಿಸುತ್ತವೆ. ಹೀಗಾಗಿ ಟರ್ಕಿಯ ಭೂಪ್ರದೇಶವು ಎರಡೂ ಖಂಡಗಳಲ್ಲಿ ವ್ಯಾಪಿಸಿದೆ.

Türkiye Cumhuriyeti
Republic of ಟರ್ಕಿ
ಧ್ವಜ ರಾಷ್ಟ್ರಚಿಹ್ನೆ
ಧ್ಯೇಯ: Yurtta Sulh, Cihanda Sulh
ನಾಡಿನೊಳಗೆ ಶಾಂತಿ ಜಗತ್ತಿನಲ್ಲೂ ಶಾಂತಿ
ರಾಷ್ಟ್ರಗೀತೆ: İstiklâl Marşı
ಸ್ವಾತಂತ್ರ್ಯದ ಗೀತೆ

Location of ಟರ್ಕಿ

ರಾಜಧಾನಿ ಅಂಕಾರಾ
39°55'48.00′N 32°50′E
ಅತ್ಯಂತ ದೊಡ್ಡ ನಗರ ಇಸ್ತಾಂಬುಲ್
ಅಧಿಕೃತ ಭಾಷೆ(ಗಳು) ಟರ್ಕಿಷ್
ಸರಕಾರ ಸಾಂಸದಿಕ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಅಬ್ದುಲ್ಲಾ ಗುಲ್
 - ಸಂಸತ್ತಿನ ಸಭಾಪತಿ ಕೊಕ್ಸಲ್ ಟೋಪ್ಟನ್
 - ಪ್ರಧಾನಿ ರೆಸೆಪ್ ಟಯ್ಯಿಪ್ ಎರ್ಡೊಗನ್
ಒಟ್ಟೊಮನ್ ಸಾಮ್ರಾಜ್ಯದ ವಿಭಜನೆ  
 - ಸ್ವಾತಂತ್ರ್ಯ ಸಂಗ್ರಾಮಮೇ 19 1919 
 - ಸಂಸತ್ತಿನ ರಚನೆಎಪ್ರಿಲ್ 23 1920 
 - ಗಣರಾಜ್ಯವಾಗಿ ಘೋಷಣೆಅಕ್ಟೋಬರ್ 29 1923 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ783562 ಚದರ ಕಿಮಿ ;  (37ನೆಯದು)
 302535 ಚದರ ಮೈಲಿ 
 - ನೀರು (%)1.3
ಜನಸಂಖ್ಯೆ  
 - 2007ರ ಅಂದಾಜು71,158,647 (17ನೆಯದು³)
 - 2000ರ ಜನಗಣತಿ 67,803,927
 - ಸಾಂದ್ರತೆ 93 /ಚದರ ಕಿಮಿ ;  (102nd³)
240 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2007ರ ಅಂದಾಜು
 - ಒಟ್ಟು$708.053 billion (16ನೆಯದು)
 - ತಲಾ$9,628 (69ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2006)
0.7574 (92nd4)  medium
ಕರೆನ್ಸಿ ಟರ್ಕಿಷ್ ಲಿರಾ (TRY)
ಸಮಯ ವಲಯ EET (UTC+2)
 - ಬೇಸಿಗೆ (DST) EEST (UTC+3)
ಅಂತರ್ಜಾಲ TLD .tr
ದೂರವಾಣಿ ಕೋಡ್ +90

ನೋಡಿ


ಉಲ್ಲೇಖನ

[1] [2] [3]

  1. https://wikitravel.org/en/Turkey
  2. https://www.aljazeera.com/news/2018/08/erdogan-turkey-russia-400-missile-defence-system-180831103412006.html
  3. https://hometurkey.com/
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.