ಜಾಂಬಿಯ

ಜಾಂಬಿಯ ಗಣರಾಜ್ಯವು ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿನ ಒಂದು ರಾಷ್ಟ್ರ. ಜಾಂಬಿಯದ ಉತ್ತರದಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಈಶಾನ್ಯಕ್ಕೆ ಟಾಂಜಾನಿಯಾ, ಪೂರ್ವದಲ್ಲಿ ಮಲಾವಿ, ಪಶಿಮಕ್ಕೆ ಅಂಗೋಲ ಮತ್ತು ದಕ್ಷಿಣದಲ್ಲಿ ಮೊಜಾಂಬಿಕ್, ಜಿಂಬಾಬ್ವೆ, ನಮೀಬಿಯ ಹಾಗೂ ಬೋಟ್ಸ್ವಾನಾ ದೇಶಗಳಿವೆ. ಜಾಂಬಿಯದ ರಾಜಧಾನಿ ಲುಸಾಕಾ. ನಾಡಿನ ಹೆಚ್ಚಿನ ಜನತೆ ರಾಜಧಾನಿಯ ಸುತ್ತಮುತ್ತ ಹಾಗೂ ವಾಯವ್ಯದ ತಾಮ್ರದ ಗಣಿಗಳ ಪ್ರದೇಶದಲ್ಲಿ ನೆಲೆಸಿರುವರು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಜಾಂಬಿಯವನ್ನು ಉತ್ತರ ರೊಡೇಶಿಯ ಎಂದು ಕರೆಯಲಾಗುತ್ತಿತ್ತು.

ಜಾಂಬಿಯ ಗಣರಾಜ್ಯ
[[Image:|85px|ಜಾಂಬಿಯ ದೇಶದ ಲಾಂಛನ]]
ಧ್ವಜ ಲಾಂಛನ
ರಾಷ್ಟ್ರಗೀತೆ: ಎದ್ದೇಳು, ಸ್ವಾಭಿಮಾನಿ ಮತ್ತು ಸ್ವತಂತ್ರ ಜಾಂಬಿಯ ಕುರಿತು ಹಾಡು

Location of ಜಾಂಬಿಯ

ರಾಜಧಾನಿ ಲುಸಾಕಾ
15°25′S 28°17′E
ಅತ್ಯಂತ ದೊಡ್ಡ ನಗರ ಲುಸಾಕಾ
ಅಧಿಕೃತ ಭಾಷೆ(ಗಳು) ಇಂಗ್ಲಿಷ್
ಸರಕಾರ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಲೆವಿ ಎಮ್ ವನಾವಸ
ಸ್ವಾತಂತ್ರ್ಯ ಯು.ಕೆ.ಯಿಂದ 
 - ದಿನಾಂಕಅಕ್ಟೋಬರ್ 24 1964 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ752,618 ಚದರ ಕಿಮಿ ;  (39ನೆಯದು)
 290,587 ಚದರ ಮೈಲಿ 
 - ನೀರು (%)1
ಜನಸಂಖ್ಯೆ  
 - ಜುಲೈ 2005ರ ಅಂದಾಜು11,668,000 (71st)
 - 2000ರ ಜನಗಣತಿ 9,885,591
 - ಸಾಂದ್ರತೆ 16 /ಚದರ ಕಿಮಿ ;  (191st)
40 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು$13.025 ಬಿಲಿಯನ್ (133rd)
 - ತಲಾ$1,000 (168ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
0.407 (165ನೆಯದು)  ನಿಮ್ನ
ಕರೆನ್ಸಿ ಜಾಂಬಿಯನ್ ಕ್ವಾಚಾ (ZMK)
ಸಮಯ ವಲಯ CAT (UTC+2)
 - ಬೇಸಿಗೆ (DST) ಪರಿಗಣನೆಯಲ್ಲಿಲ್ಲ (UTC+2)
ಅಂತರ್ಜಾಲ TLD .zm
ದೂರವಾಣಿ ಕೋಡ್ +260
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.