ಎಲ್ ಸಾಲ್ವಡಾರ್

ಎಲ್ ಸಾಲ್ವಡಾರ್ ಗ್ವಾಟೆಮಾಲ ಮತ್ತು ಹೊಂಡುರಾಸ್ಗಳ ಮಧ್ಯೆ ಇರುವ ಮಧ್ಯ ಅಮೇರಿಕದ ಒಂದು ದೇಶ.

República de El Salvador
ಎಲ್ ಸಾಲ್ವಡಾರ್ ಗಣರಾಜ್ಯ
ಧ್ವಜ ಲಾಂಛನ
ಧ್ಯೇಯ: "Dios, Unión, Libertad" (ಸ್ಪ್ಯಾನಿಷ್)
"ದೇವರು, ಒಗ್ಗಟ್ಟು, ಸ್ವಾತಂತ್ರ್ಯ"
ರಾಷ್ಟ್ರಗೀತೆ: Himno Nacional de El Salvador

Location of ಎಲ್ ಸಾಲ್ವಡಾರ್

ರಾಜಧಾನಿ ಸಾನ್ ಸಾಲ್ವಡಾರ್
13°40′N 89°10′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಸ್ಪ್ಯಾನಿಷ್
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಆಂಟೊನಿಯೊ ಸಕ
ಸ್ವಾತಂತ್ರ್ಯ  
 - ಸ್ಪೇನ್ ಇಂದಸೆಪ್ಟೆಂಬರ್ ೧೫ ೧೮೨೧ 
 - ಮಧ್ಯ ಅಮೇರಿಕ ಸಂಘಟನೆಯಿಂದ೧೮೪೨ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ21,040 ಚದರ ಕಿಮಿ ;  (೧೫೨ನೇ)
 8,124 ಚದರ ಮೈಲಿ 
 - ನೀರು (%)೧.೪
ಜನಸಂಖ್ಯೆ  
 - ಜುಲೈ ೨೦೦೭ರ ಅಂದಾಜು6,948,073 (೯೭ನೇ)
 - ೧೯೯೨ರ ಜನಗಣತಿ 5,118,598
 - ಸಾಂದ್ರತೆ 318.7 /ಚದರ ಕಿಮಿ ;  (೩೨ನೇ)
823.6 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು$36.246 billion (93rd)
 - ತಲಾ5,515 (೧೦೧ನೇ)
ಮಾನವ ಅಭಿವೃದ್ಧಿ
ಸೂಚಿಕ
(೨೦೦೬)
0.722 (101th)  ಮಧ್ಯಮ
ಕರೆನ್ಸಿ ಡಾಲರ್ (೨೦೦೧ ರಿಂದ)2 (USD)
ಸಮಯ ವಲಯ (UTC-6)
ಅಂತರ್ಜಾಲ TLD .sv
ದೂರವಾಣಿ ಕೋಡ್ +503

ಎಲ್ ಸಾಲ್ವಡಾರ್: ಮಧ್ಯ ಅಮೆರಿಕದ ಅತಿ ಪುಟ್ಟ ಹಾಗೂ ಅತ್ಯಂತ ಜನಸಾಂದ್ರ ಗಣರಾಜ್ಯ. ಮೇರೆಗಳು: ಉತ್ತರ ಪುರ್ವಗಳಲ್ಲಿ ಹಾಂಡುರಾಸ್, ದಕ್ಷಿಣದಲ್ಲಿ ಪೆಸಿಫಿಕ್ ಸಾಗರ ಮತ್ತು ಪಶ್ಚಿಮ ವಾಯವ್ಯಗಳಲ್ಲಿ ಗ್ವಾಟೆಮಾಲ. ಮಧ್ಯ ಅಮೆರಿಕನ್ ರಾಷ್ಟ್ರಗಳ ಪೈಕಿ ಕೆರೆಬಿಯನ್ ಸಮುದ್ರಕ್ಕೆ ತಾಕಿದಂತಿರದ ದೇಶವಿದೊಂದೇ. ಇದರ ಪೆಸಿಫಿಕ್ ತೀರ 272 ಕಿಮೀ. ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ ಬೇರೆ ಯಾವುದರಲ್ಲೂ ಬೇಸಾಯ ಇಲ್ಲಿನಷ್ಟು ಸಾಂದ್ರವಾಗಿ ನಡೆಯುವುದಿಲ್ಲ. ಪುರ್ವ ಪಶ್ಚಿಮವಾಗಿ ಇದರ ಉದ್ದ 225 ಕಿಮೀ; ಅಗಲ ದಕ್ಷಿಣೋತ್ತರವಾಗಿ 96 ಕಿಮೀ; ವಿಸ್ತೀರ್ಣ 21.146 ಚ.ಕಿಮೀ. ರಾಜಧಾನಿ ಸಾನ್ ಸಾಲ್ಪಡಾರ್.

ಮೇಲ್ಮೈ ಲಕ್ಷಣ, ವಾಯುಗುಣ

ದಕ್ಷಿಣದಲ್ಲಿ ಕಿರಿದಾದ ಕರಾವಳಿ. ಮಗ್ಗುಲಲ್ಲೆ ದಕ್ಷಿಣ ಪರ್ವತಶ್ರೇಣಿ. ಇದರ ಹೆಗಲೇರಿ ನಿಂತ ಜ್ವಾಲಾಮುಖಿಗಳ ಪೈಕಿ ಅತ್ಯಂತ ಎತ್ತರವಾಗಿರುವುದು ಸ್ಯಾಂಟ ಆನ (2409ಮೀ). ದಕ್ಷಿಣ ಪರ್ವತ ಶ್ರೇಣಿಗೂ ಉತ್ತರದಲ್ಲಿರುವ ಪರ್ವತಸಾಲಿಗೂ ನಡುವೆ ತೊಟ್ಟಿಲಿನಂತೆ ಪ್ರಸ್ಥಭೂಮಿ ಇದೆ. ಲೇಂಪ, ಸಾನ್ ಮಿಗೆಲ್ ನದಿಗಳೂ ಅವುಗಳ ಉಪನದಿಗಳೂ ಆಳವಾದ ಕಮರಿಗಳನ್ನು ಕೊರೆದುಕೊಂಡು ಹರಿಯುತ್ತವೆ. ಎಲ್ ಸಾಲ್ವಡಾರಿನ ವಾಯುಗುಣ ಎತ್ತರಕ್ಕನುಗುಣವಾಗಿ ವ್ಯತ್ಯಾಸವಾಗುತ್ತದೆ. ಪೆಸಿಫಿಕ್ ಕರಾವಳಿಯಲ್ಲೂ ಅಷ್ಟೇನೂ ಎತ್ತರವಿಲ್ಲದ ಪರ್ವತ ಪ್ರದೇಶದಲ್ಲೂ 250 ಸೆಂ. ನಿಂದ 290 ಸೆಂ. ವರೆಗೆ ಉಷ್ಣತೆ ವ್ಯತ್ಯಾಸವಾಗುತ್ತದೆ. 657 ಮೀ. ಎತ್ತರವಿರುವ ಸಾನ್ ಸಾಲ್ವಡಾರಿನಲ್ಲಿ ಮಾರ್ಚಿಯ ಪರಮಾವಧಿ ಉಷ್ಣತೆ 350 ಸೆಂ. ಜನವರಿಯಲ್ಲಿ 140 ಸೆಂ. 1450ಮೀ ಎತ್ತರದಲ್ಲಿ ಇದು 170 ಸೆಂ.-220 ಸೆಂ. ನಡುವೆ ವ್ಯತ್ಯಾಸವಾಗುತ್ತದೆ. ಎಲ್ ಸಾಲ್ವಡಾರಿನಲ್ಲಿರುವ ಋತುಗಳು ಎರಡು: ಮೇಯಿಂದ ನವೆಂಬರ್ವರೆಗೆ ಬೇಸಗೆ-ಮಳೆಗಾಲ. ನವೆಂಬರಿನಿಂದ ಮೇ ವರೆಗೆ ಒಣಹವೆಯ ಚಳಿಗಾಲ. ಪೆಸಿಫಿಕ್ ಕರಾವಳಿಯಲ್ಲಿ ವಾರ್ಷಿಕ ಮಳೆ ಸರಾಸರಿ 1727 ಮಿಮೀ. (68"); ನಡು ಎತ್ತರ ಪ್ರದೇಶದಲ್ಲಿ 1778-2464 ಮಿಮೀ. ಇನ್ನೂ ಎತ್ತರದಲ್ಲಿ ಇದಕ್ಕೂ ಅಧಿಕವಾಗಿ ಮಳೆ ಬೀಳುತ್ತದೆ. ಆಳದ ಕಣಿವೆಗಳಲ್ಲೂ ಪ್ರಸ್ಥ ಭೂಮಿಯಲ್ಲೂ ಬೀಳುವ ಮಳೆಯ ಮೊತ್ತ 1143-1524 ಮಿಮೀ.

ವ್ಯವಸಾಯ, ಕೈಗಾರಿಕೆ, ವ್ಯಾಪಾರ

ಒಟ್ಟು ಜನಸಂಖ್ಯೆಯಲ್ಲಿ 2/3 ರಷ್ಟು ಜನ ಕೃಷಿಯನ್ನವಲಂಬಿಸಿದ್ದಾರೆ. ಜ್ವಾಲಾಮುಖಿ ಪ್ರದೇಶ ಫಲವತ್ತಾದದ್ದು. ಮುಖ್ಯ ಆಹಾರ ಬೆಳೆ ಮುಸುಕಿನ ಜೋಳ, ಕಬ್ಬು, ಬತ್ತ, ಗೋದಿಗಳನ್ನೂ ಬೆಳೆಯುತ್ತಾರೆ. ಮುಖ್ಯ ವಾಣಿಜ್ಯ ಬೆಳೆಯೆಂದರೆ ಕಾಫಿ. ಎಲ್ ಸಾಲ್ವಡಾರಿನ ರಫ್ತಿನಲ್ಲಿ ಶೇ. 95 ಇದೇ. ವಾಯುಗುಣ, ಭೂಗುಣ, ಕಾರ್ಮಿಕರ ಸರಬರಾಯಿ, ಸಮುದ್ರಕ್ಕೆ ದೂರ_ಮುಂತಾದ ಎಲ್ಲ ದೃಷ್ಟಿಗಳಿಂದಲೂ ಕಾಫಿ ಬೆಳೆಗೆ ಇಲ್ಲಿ ಹೆಚ್ಚು ಅನುಕೂಲವಿದೆ. ಚಿನ್ನ ಬೆಳ್ಳಿಗಳು ಇಲ್ಲಿಯ ಮುಖ್ಯ ಖನಿಜಗಳು, ತಾಮ್ರ, ಕಬ್ಬಿಣ, ಸೀಸ, ತವರ, ಗಂಧಕ, ಪಾದರಸ_ಇವು ಇಲ್ಲಿವೆಯಾದರೂ ಇವನ್ನು ನೆಲದಿಂದ ತೆಗೆಯುತ್ತಿಲ್ಲ. ಎಲ್ ಸಾಲ್ವಡಾರಿನ ಕಾಫಿಗೆ ಅಮೆರಿಕ ಸಂಯುಕ್ತ ಸಂಸ್ಥಾನವೇ ಮುಖ್ಯ ಗ್ರಾಹಕರಾಷ್ಟ್ರ. ಹತ್ತಿ ಜವಳಿ, ಹಿಟ್ಟು, ಮುಟ್ಟುಗಳು, ರಾಸಾಯನಿಕ ಪದಾರ್ಥ-ಇವು ಈ ದೇಶದ ಆಮದುಗಳು.

ಇಲ್ಲಿಯ ಜನಸಂಖ್ಯೆಯಲ್ಲಿ ಶೇಕಡ 80 ಮಂದಿ ಸ್ಪ್ಯಾನಿಷ್-ಇಂಡಿಯನ್ ಮಿಶ್ರ (ಮೆಸ್ಟಿಸೊ). ಉಳಿದವರು ಅಚ್ಚ ಇಂಡಿಯನ್ನರು, ಬಿಳಿಯರು ಮತ್ತು ನೀಗ್ರೊಗಳು. ರಾಜಧಾನಿಯಲ್ಲದೆ ಇಲ್ಲಿಯ ಇತರ ಪಟ್ಟಣಗಳು: ನೇವಾಸಾನ್ ಸಾಲ್ವಡಾರ್, ಸಾನ್ ಮಿಗೆಲ್ ಮತ್ತು ಸಾóಕಾಟೇಕೊಲುಕ. ಇಲ್ಲಿನ ಭಾಷೆ ಸ್ಪ್ಯಾನಿಷ್.

ಸರ್ಕಾರ

ಅಮೆರಿಕ ಸಂಯುಕ್ತಸಂಸ್ಥಾನದಂತೆ ಇಲ್ಲಿಯ ಸಂವಿಧಾನದಲ್ಲೂ ಅಧಿಕಾರ ಕೇಂದ್ರೀಕೃತವಾಗದಂತೆ ವ್ಯವಸ್ಥೆ ನಿರ್ಮಿಸಲಾಗಿದೆ. ಕಾರ್ಯಾಂಗದ ಅಧಿಕಾರ ಅಧ್ಯಕ್ಷನದು. ಈತನನ್ನು ಐದು ವರ್ಷಗಳಿಗೊಮ್ಮೆ ಆರಿಸಲಾಗುತ್ತದೆ. ಇಲ್ಲಿನ ಶಾಸನಸಭೆಗೆ ಚುನಾವಣೆ ನಡೆಯುವುದು ಎರಡು ವರ್ಷಗಳಿಗೊಮ್ಮೆ. ಎಲ್ ಸಾಲ್ವಡಾರ್ ವಿಶ್ವಸಂಸ್ಥೆಯ, ಅಮೆರಿಕನ್ ರಾಜ್ಯಗಳ ಸಂಘದ (ದಿ ಆರ್ಗನೈó¸óೇಷನ್ ಆಫ್ ಅಮೆರಿಕನ್ ಸ್ಟೇಟ್ಸ್‌) ಮತ್ತು ಮಧ್ಯ ಅಮೆರಿಕನ್ ರಾಜ್ಯಗಳ ಸಂಘದ (ಆರ್ಗನೈಸೇಷನ್ ಆಫ್ ಸೆಂಟ್ರಲ್ ಅಮೆರಿಕನ್ ಸ್ಟೇಟ್ಸ್‌) ಸದಸ್ಯ ರಾಷ್ಟ್ರ.

ಇತಿಹಾಸ

ಗ್ವಾಟೆಮಾಲವನ್ನು ಗೆದ್ದ ಸ್ಪ್ಯಾನಿಷ್ ವಲಸೆಗಾರರು ಪೆದ್ರೊ ಆಲ್ವಾರಾದೊನ ನೇತೃತ್ವದಲ್ಲಿ 1524ರಲ್ಲಿ ಇಲ್ಲಿಗೆ ಬಂದು ಇದನ್ನು ಗೆದ್ದು ಮರುವರ್ಷ ಇಲ್ಲಿ ವಸಾಹತು ನಿರ್ಮಿಸಿದರು. ಈ ದೇಶ ಸ್ವತಂತ್ರವಾದದ್ದು ಸೆಪ್ಟೆಂಬರ್ 15, 1821ರಲ್ಲಿ. ಆದರೆ ಅದಾದ ಅನಂತರ ಮೆಕ್ಸಿಕೋ ಚಕ್ರವರ್ತಿ ಆಗಸ್ತಿನ್ದ ಈಟೂರ್ವೀದ ಎಲ್ ಸಾಲ್ವಡಾರಿಗೆ ಸೈನ್ಯ ಕಳುಹಿಸಿ ಇದನ್ನು ಗೆದ್ದು ವಶಪಡಿಸಿಕೊಂಡ. ತನ್ನನ್ನು ಒಂದು ಸಾರ್ವಭೌಮ ರಾಜ್ಯವೆಂದು ಪರಿಗಣಿಸಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸೇರಿಸಿಕೊಳ್ಳಬೇಕೆಂದು 1822ರಲ್ಲಿ ಇದು ಆ ದೇಶವನ್ನು ಕೇಳಿಕೊಂಡಿತು. ಆದರೆ ಸಂಯುಕ್ತಸಂಸ್ಥಾನ ಕಾಂಗ್ರೆಸ್ ಈ ಮನವಿಯನ್ನು ಒಪ್ಪಲಿಲ್ಲ. 1823ರಲ್ಲಿ ಈಟೂರ್ವೀದನ ಸರ್ಕಾರದ ಪತನವಾದಾಗ ಇದು ಮಧ್ಯ ಅಮೆರಿಕನ್ ರಾಜ್ಯಗಳ ಒಕ್ಕೂಟದಲ್ಲಿ ಸೇರಿತು. ಆಮೇಲೆ ಗ್ವಾಟೆಮಾಲದ ಬೆದರಿಕೆಯಿಂದಾಗಿ ಅಮೆರಿಕನ್ ರಾಜ್ಯಗಳ ಒಕ್ಕೂಟದಿಂದ ಹೊರಬಿದ್ದು ಸ್ವಾತಂತ್ರ್ಯ ಘೋಷಿಸಿಕೊಂಡಿತು (1841). 1800ರಿಂದಲೂ ಈ ದೇಶದಲ್ಲಿ ಆಗಾಗ ಅಧ್ಯಕ್ಷರ ಬದಲಾವಣೆಯೂ ಉದಾರವಾದಿಗಳಿಗೂ ಸಂಪ್ರದಾಯವಾದಿಗಳಿಗೂ ನಡುವೆ ಘರ್ಷಣೆಗಳೂ ನಡೆಯುತ್ತಲೇ ಇವೆ. ಆಂತರಿಕ ಕ್ಷೋಭೆಯಿಂದ ಇದು ಪದೇ ಪದೇ ವಿದೇಶಿ ದಾಳಿಗೆ ಒಳಗಾಯಿತು. 1900ರಿಂದ 1930ರ ಅವಧಿಯಲ್ಲಿ ಶಾಂತ ಪರಿಸ್ಥಿತಿಯಿತ್ತು. ಕಾಫಿ ಉದ್ದಿಮೆ ಬೆಳೆಯಿತು; ದೇಶ ಸಂಪದ್ಭರಿತವಾಯಿತು. 1931ರಲ್ಲಿ ಜನರಲ್ ಮ್ಯಾಕ್ಸಿಮಿಲಿಯಾನೊ ಫರ್ನಾಂಡೆತ್ ಮಾರ್ಟಿನೆತ್ ಅಧಿಕಾರ ಕಸಿದುಕೊಂಡು 1944ರ ವರೆಗೂ ಆಳಿದ. ಈತ ದಬ್ಬಾಳಿಕೆ ನಡೆಸಿದರೂ ಈ ಕಾಲದಲ್ಲಿ ದೇಶ ಸಂಪದ್ಭರಿತವಾಯಿತು. 1944ರಲ್ಲಿ ಮಾರ್ಟಿನೆತನನ್ನು ಅಧಿಕಾರದಿಂದ ಇಳಿಸಲಾಯಿತಾದರೂ ಅನಂತರದ ರಾಜಕೀಯ ಅಸ್ಥಿರವಾಯಿತೆನ್ನಬಹುದು. 1945ರಲ್ಲಿ ಜನರಲ್ ಸಾಲ್ವಡಾರ್ ಕಾಸ್ಟ್ರೊ ಅಧ್ಯಕ್ಷನಾದ. 1948ರಲ್ಲಿ ಇವನ ಅಧಿಕಾರದ ಅವಧಿ ಮುಗಿದಾಗ ಸಂವಿಧಾನವನ್ನೇ ಬದಲಿಸಿ ತಾನೇ ಶಾಶ್ವತವಾಗಿರಬೇಕೆಂದು ಪ್ರಯತ್ನಿಸಿದ. ಆಗ ಇವನನ್ನು ತಳ್ಳಿ ಬಲಿಷ್ಠ ಗುಂಪೊಂದು ಅಧಿಕಾರಕ್ಕೆ ಬಂತು. ಇದರ ಸದಸ್ಯನಾದ ಮೇಜರ್ ಆಸ್ಕಾರ ಒಸೊರಿಯೊನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಲಾಯಿತು. ಈತನೂ ನಿರಂಕುಶನಾದ. 1956ರಲ್ಲಿ ಈತನ ಅನುಯಾಯಿ ಲೆಫ್ಟಿನೆಂಟ್ ಕರ್ನಲ್ ಜೋಸೆ ಮೇರಿಯ ಲೆಮಸನನ್ನು ಅಧ್ಯಕ್ಷನಾಗಿ ಆರಿಸಲಾಯಿತು. ಈತ 1960ರ ವರೆಗೂ ಆಳಿದ. ನಾಗರಿಕ ಮತ್ತು ಸೈನಿಕರ ಸಂಮಿಶ್ರ ಗುಂಪೊಂದು ಈತನನ್ನು ತಳ್ಳಿ ತಾನು ಅಧಿಕಾರಕ್ಕೆ ಬಂತು. ಪ್ರಜಾಸತ್ತಾತ್ಮಕ ಪದ್ಧತಿಯಂತೆ ಚುನಾವಣೆ ನಡೆಸುವುದಾಗಿ ಆಶ್ವಾಸನೆ ನೀಡಿತು. 1961ರಲ್ಲಿ ನಡೆದ ಚುನಾವಣೆಯಲ್ಲಿ ಕರ್ನಲ್ ಜೂಲಿಯೊ ಅಡಾಲ್ಬರ್ಟೊ ರಿವೆರ ಅಧ್ಯಕ್ಷನಾಗಿ ಆಯ್ಕೆಯಾದ. ರಿವೆರನ ಸರ್ಕಾರವೂ ಸೈನ್ಯಾಧೀನವೇ ಆದರೂ ಈಗ ಹಲವಾರು ರಾಜಕೀಯ ಸುಧಾರಣೆಗಳು ಜಾರಿಗೆ ಬಂದುವು. 1964-66ರಲ್ಲಿ ನಡೆದ ಸ್ಥಳೀಯ ಚುನಾವಣೆಗಳು ಸೈನ್ಯದ ಹಿಡಿತವಿಲ್ಲದೆ ಸ್ವತಂತ್ರ ವಾತಾವರಣದಲ್ಲಿ ನಡೆದುವು. 1967ರ ಕರ್ನಲೆ ಫಿಡೆಲ್ ಸಾಂಚ ಹೆರ್ನಾಂಡ್ಸ್‌ ಅಧ್ಯಕ್ಷನಾಗಿ ಆಯ್ಕೆಯಾದ.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.