ಹಂಫ್ರಿ ಡೇವಿ

ಹಂಫ್ರಿ ಡೇವಿ(7 ದಶಂಬರ 1778 – 29 ಮೇ 1829)ಇಂಗ್ಲೆಂಡ್‌ನ ರಸಾಯನಶಾಸ್ತ್ರಜ್ಞ.ಇವರು ಡೇವಿ ಲ್ಯಾಂಪ್ ಎಂಬ ಗಣಿಗಳಲ್ಲಿ ಕೆಲಸಮಾಡುವವರಿಗೆ ಉಪಯೋಗವಾಗುವ ದೀಪದ ಆವಿಷ್ಕಾರ ಮಾಡಿದುದರಿಂದ ಪ್ರಖ್ಯಾತಿಯನ್ನು ಪಡೆದರು.ಇದರೊಂದಿಗೆ ಹಲವಾರು ಕ್ಷಾರಗಳನ್ನು ಹಾಗೂ ಕ್ಷಾರೀಯ ಭಸ್ಮ ಲೋಹ(Alkaline earth metals)ಗಳನ್ನು ಕಂಡುಹಿಡಿದರು.ಅರಿವಳಿಕೆ(anaesthetic)ಯಾಗಿ ನೈಟ್ರಸ್ ಆಕ್ಸ್‌ಡ್‌ನ್ನು ಉಪಯೋಗಿಸಿದವರಲ್ಲಿ ಮೊದಲಿಗರು.ಇವರು ಮ್ಯಗ್ನೀಶಿಯಮ್, ಬೊರಾನ್,ಬೇರಿಯಮ್ ಗಳನ್ನು ಕಂಡುಹಿಡಿದರು.

ಡೇವಿ ಲ್ಯಾಂಪ್
ಹಂಫ್ರಿ ಡೇವಿ
ಹಂಫ್ರಿ ಡೇವಿ

ಜೀವನ ಚರಿತ್ರೆ

ಹಂಫ್ರಿಡೇವಿ ಇಂಗ್ಲೆಂಡಿನ ಪ್ರಸಿದ್ಧ ರಸಾಯನಶಾಸ್ತ್ರ ವಿಜ್ಞಾನಿ. ಇವರು ಕ್ರಿ.ಶ ೧೭೭೮ ರಲ್ಲಿ ಇಂಗ್ಲೆಂಡಿನ ಹಳ್ಳಿಯೊಂದರಲ್ಲಿ ಜನಿಸಿದರು. ಬೋರ್ಲಾನ್ ಎಂಬ ಸ್ಥಳೀಯ ವೈದ್ಯರ ಆಶ್ರಯ ಪಡೆದು ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದರು. ಶರೀರ ವಿಜ್ಞಾನದಿಂದ ಆರಂಭಗೊಂಡು ರಸಾಯನ, ತತ್ವಜ್ಞಾನದವರೆಗೆ ಇವರು ಸಂಶೋಧನೆಗಳನ್ನು ಕೈಗೊಂಡರು. [1]

ಸಾಧನೆ

ಕ್ರಿ.ಶ ೧೭೯೮ ರಲ್ಲಿ ಬ್ರಿಸ್ಟಲ್ ನಗರದ ವೈದ್ಯಕೀಯ ಸಂಸ್ಥೆಯಲ್ಲಿ ನೈಟ್ರೋಜನ್, ಹೈಡ್ರೋಜನ್, ಆಕ್ಸಿಜನ್ ಮೊದಲಾದ ಅನಿಲಗಳನ್ನು ರೋಗ ನಿವಾರಣೆಗೆ ಯಾವ ರೀತಿ ಉಪಯೋಗಿಸಿಕೊಳ್ಳಬಹುದೆಂದು ಕಂಡುಹಿಡಿದರು. ಇವರ ಬಹುದೊಡ್ಡ ಸಾಧನೆಯೆಂದರೆ ನಗೆ ಅನಿಲವೆಂದೇ ಹೆಸರಾದ ನೈಟ್ರಸ್ ಆಕ್ಸೈಡ್ ಅನ್ನು ಕಂಡುಹಿಡಿದದ್ದು. [2]

ಹಲವು ಪ್ರಯೋಗಗಳನ್ನ ಮಾಡಿ ಪೊಟಾಸಿಯಂ ಧಾತುವನ್ನು ಕಂಡುಹಿಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ೧೮೧೫ ರಲ್ಲಿ ಇವರು ಗಣಿಕಾರ್ಮಿಕನ ಸುರಕ್ಷತೆಗಾಗಿ ಸೇಫ್ಟಿ ಟ್ಯಾಂಕ್ ಕಂಡುಹಿಡಿದರು, ಈ ಪ್ರಯೋಗದಿಂದಾಗಿ ಸಾವಿರಾರು ಕಾರ್ಮಿಕರ ಪ್ರಾಣ ಉಳಿಸಿದಂತಾಗಿದೆ. ಅಷ್ಟೇ ಅಲ್ಲದೆ ನೀರಿನ ಮೂಲಕ ವಿದ್ಯುತ್ ಹರಿಸಿದಾಗ ಆಮ್ಲ ಮತ್ತು ಕ್ಷಾರ ಉತ್ಪತ್ತಿಯಾಗಲು ಕಾರಣವೇನು ಎಂಬುದನ್ನು ಸಹ ಇವರು ಕಂಡುಹಿಡಿದರು.

ಉಲ್ಲೇಖಗಳು

  1. http://www.bbc.co.uk/history/historic_figures/davy_humphrey.shtml
  2. http://www.biography.com/people/humphry-davy-9268399
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.