ಸಾಲೊಮನ್ ದ್ವೀಪಗಳು

ಸಾಲೊಮನ್ ದ್ವೀಪಗಳು ಮೆಲಾನೇಷ್ಯಾದ ಒಂದು ದ್ವೀಪಗುಚ್ಛವಾಗಿರುವ ರಾಷ್ಟ್ರ. ಈ ದೇಶವು ಶಾಂತ ಮಹಾಸಾಗರದಲ್ಲಿ ಪಾಪುವ ನ್ಯೂಗಿನಿಯ ಪೂರ್ವಕ್ಕಿದೆ. ಸುಮಾರು ಒಂದು ಸಾವಿರ ದ್ವೀಪಗಳ ಸಮೂಹವಾಗಿರುವ ಸಾಲೊಮನ್ ದ್ವೀಪಗಳ ಒಟ್ಟು ವಿಸ್ತೀರ್ಣ ೨೮,೪೦೦ ಚ.ಕಿ.ಮೀ. ರಾಷ್ಟ್ರದ ರಾಜಧಾನಿ ಹೊನಿಯಾರ. ಯು.ಕೆ.ಯು ೧೮೯೦ರಲ್ಲಿ ಇಲ್ಲಿ ತನ್ನ ವಸಾಹತನ್ನು ಸ್ಥಾಪಿಸಿತು. ದ್ವಿತೀಯ ಜಾಗತಿಕ ಸಮರದ ಅನೇಕ ಭೀಷಣ ಕದನಗಳು ೧೯೪೨-೪೫ರ ಮಧ್ಯದಲ್ಲಿ ಇಲ್ಲಿ ನಡೆದುವು. ೧೯೭೬ರಲ್ಲಿ ಸ್ವಯಮಾಡಳಿತ ಪಡೆದುಕೊಂಡ ಈ ದೇಶವು ಮುಂದೆ ೧೯೭೮ರಲ್ಲಿ ಸ್ವಾತಂತ್ರ್ಯ ಪಡೆಯಿತು. ಈ ರಾಷ್ಟ್ರವು ಕಾಮನ್‌ವೆಲ್ತ್‌ನ ಸದಸ್ಯತ್ವ ಹೊಂದಿದೆ.

Solomon Islands
ಸಾಲೊಮನ್ ದ್ವೀಪಗಳು
[[Image:|85px|the Solomon Islands ದೇಶದ ಲಾಂಛನ]]
ಧ್ವಜ ಲಾಂಛನ
ಧ್ಯೇಯ: "ಸೇವೆಗಾಗಿ ನಾಯಕತ್ವ"
ರಾಷ್ಟ್ರಗೀತೆ: "ದೇವನು ಸಾಲೊಮನ್ ದ್ವೀಪಗಳನ್ನು ರಕ್ಷಿಸಲಿ"

Location of the Solomon Islands

ರಾಜಧಾನಿ ಹೊನಿಯಾರ
9°28′S 159°49′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಇಂಗ್ಲಿಷ್
ಸರಕಾರ ಸಾಂವಿಧಾನಿಕ ಅರಸೊತ್ತಿಗೆ
 - ರಾಣಿ ರಾಣಿ ಎಲಿಜಬೆತ್ II
 - ಗವರ್ನರ್ ಜನರಲ್ ನೆಥಾನಿಯಲ್ ವೇನಾ
 - ಪ್ರಧಾನಿ ಡೆರೆಕ್ ಸಿಕುವಾ
ಸ್ವಾತಂತ್ರ್ಯ  
 - ಯು.ಕೆ.ಯಿಂದಜುಲೈ 7 1978 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ28,896 ಚದರ ಕಿಮಿ ;  (142ನೆಯದು)
 11,157 ಚದರ ಮೈಲಿ 
 - ನೀರು (%)3.2%
ಜನಸಂಖ್ಯೆ  
 - ಜುಲೈ 2005ರ ಅಂದಾಜು478,000 (170ನೆಯದು)
 - ಸಾಂದ್ರತೆ 17 /ಚದರ ಕಿಮಿ ;  (189ನೆಯದು)
43 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು$911 ಮಿಲಿಯನ್ (171st)
 - ತಲಾ$1,894 (146ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
0.592 (128ನೆಯದು)  ಮಧ್ಯಮ
ಕರೆನ್ಸಿ ಸಾಲೊಮನ್ ದ್ವೀಪಗಳ ಡಾಲರ್ (SBD)
ಸಮಯ ವಲಯ (UTC+11)
ಅಂತರ್ಜಾಲ TLD .sb
ದೂರವಾಣಿ ಕೋಡ್ +677
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.