ಸಯ್ಯದ್ ಕೀರ್ಮಾನಿ

ಸಯ್ಯದ್ ಮುಜ್ತಬಾ ಹುಸೇನ್ ಕೀರ್ಮಾನಿ(ಜನನ: ಡಿಸೆಂಬರ್ ೨೯,೧೯೪೯, ಚೆನ್ನೈ) ಇವರು ಭಾರತ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ವಿಕೆಟ್ ಕೀಪರ. ಇವರು ಕರ್ನಾಟಕ ಮತ್ತು ರೈಲ್ವೇಸ್ ತಂಡಗಳ ಪರವಾಗಿ ರಣಜಿ ಕ್ರಿಕೆಟ್ ಪಂದ್ಯಗಳನ್ನಾಡಿದ್ದರು.

ಸಯ್ಯದ್ ಮುಜ್ತಬಾ ಹುಸೇನ್ ಕೀರ್ಮಾನಿ

'ಕಿರಿ'ಯೆಂದೇ ಪ್ರಸಿದ್ಧರಾಗಿರುವ ಇವರು ಫರೂಖ್ ಇಂಜೀನಿಯರ್ ಅವರ ಕಿರಿಯರಾಗಿ ೧೯೭೧, ೧೯೭೪ ಮತ್ತು ೧೯೭೫ರ ವಿಶ್ವ ಕಪ್ ಕ್ರಿಕೆಟ್ನಲ್ಲಿ ಭಾಗವಹಿಸಿದ್ದರು. ಇವರು ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್ ರಂಗಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ ಎರಡನೇಯ ಟೆಸ್ಟಿನಲ್ಲೇ ಇನ್ನಿಂಗ್ ಒಂದರಲ್ಲಿನ ೬ ಕ್ಯಾಚುಗಳ ವಿಶ್ವ ದಾಖಲೆಯನ್ನು ಸಾಧಿಸಿದರು. ಮುಂದೆ ವೆಸ್ಟ್ ಇಂಡೀಜ್ ವಿರುದ್ಧ ಇವರ ವಿಕೆಟ್ ಕೀಪಿಂಗ್ ಕಳಪೆ ಮಟ್ಟದ್ದಾಗಿತ್ತು.

೧೯೭೭ರಲ್ಲಿ ಭಾರತಕ್ಕೆ ಭೆಟ್ಟಿ ಕೊಟ್ಟ ನ್ಯೂಜಿಲ್ಯಾಂಡ್ ವಿರುದ್ಧ ೬೫.೩೩ರ ಸರಾಸರಿಯಲ್ಲಿ ಅತಿ ಹೆಚ್ಚಿನ ರನ್ನುಗಳನ್ನು ಸೇರಿಸಿದರು ಮತ್ತು ಆಸ್ಟ್ರೇಲಿಯಾ ಪ್ರವಾಸದಲ್ಲಿ ೩೦೫ರನ್ನುಗಳನ್ನು ಪೇರಿಸಿದರು. ೧೯೭೮-೭೯ರಲ್ಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಜ್ ವಿರುದ್ಧ ಇವರ ಸಾಧನೆ ಕಳಪೆ ಮಟ್ಟದ್ದಾಗಿತ್ತು.

ವಿಕೆಟ್ ಕೀಪಿಂಗ್ ಅಂಕಿ ಅಂಶಗಳು

ಟೆಸ್ಟ್ ಸಾಧನೆ
ಕ್ಯಾಚುಗಳುಸ್ಟಂಪಿಂಗಗಳು
೧೬೦೩೮
ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ
ಕ್ಯಾಚುಗಳುಸ್ಟಂಪಿಂಗಗಳು
೨೭

ಬ್ಯಾಟಿಂಗ್ ಅಂಕಿ ಅಂಶಗಳು

ಟೆಸ್ಟ್ ಪಂದ್ಯಗಳು

ಟೆಸ್ಟ್ ಸಾಧನೆ
ಪಂದ್ಯಗಳುರನ್ನುಗಳುಸರಾಸರಿಶತಕಗಳುಅರ್ಧಶತಕಗಳುಗರಿಷ್ಟ
೮೮೨,೭೫೯೨೭.೦೪೧೨೧೦೨

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ
ಪಂದ್ಯಗಳುರನ್ನುಗಳುಸರಾಸರಿಗರಿಷ್ಟ ಮೊತ್ತ
೪೯೩೭೩೨೦.೭೨೪೮
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.