ಸೈಂಟ್ ಮೇರೀಸ್ ದ್ವೀಪ
'ಸೈಂಟ್ ಮೇರೀಸ್ ದ್ವೀಪ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಮಲ್ಪೆಯ ಸಮುದ್ರ ಕಿನಾರೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ದ್ವೀಪ. ಸೈಂಟ್ ಮೇರೀಸ್ ದ್ವೀಪವನ್ನು Coconut Island ಎಂದು ಇನ್ನೊಂದು ಹೆಸರಿನ್ನಲ್ಲಿ ಕರೆಯುತ್ತಾರೆ. ಕಾಲೊಮ್ನಾರ್ ಬಾಲೆಸ್ಟಿಕ್ ಲಾವಾದಿಂದಾಗಿ ಈ ದ್ವೀಪ ಬಹಳ ಹೆಸರುವಾಸಿ ಯಾಗಿದೆ[1]. ಕರ್ನಾಟಕ ರಾಜ್ಯದ ಕೇವಲ ೪ ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಸೈಂಟ್ ಮೇರೀಸ್ ದ್ವೀಪವು ಒಂದು ಹಾಗು ದೇಶದ ೨೬ ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಒಂದು ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ ಇಲಾಖೆ ಘೋಷಿಸಿದೆ,
ಸೈಂಟ್ ಮೇರೀಸ್ ದ್ವೀಪ. | |
ಸೈಂಟ್ ಮೇರೀಸ್ ದ್ವೀಪ. ನಗರದ ಪಕ್ಷಿನೋಟ | |
![]() ![]() ಸೈಂಟ್ ಮೇರೀಸ್ ದ್ವೀಪ.
| |
ರಾಜ್ಯ - ಜಿಲ್ಲೆ |
Karnataka - Udupi |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
km² - 10 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ - ಸಾಂದ್ರತೆ |
- /ಚದರ ಕಿ.ಮಿ. |
Four Islands -Coconut Island, the North Island, the Daryabahadurgarh Island and the South Island |
ಇತಿಹಾಸ
ಇದರ ಮೊದಲ ಹೆಸರು "ತೋನ್ಸೆ ಪಾರ್"...ಇತಿಹಾಸದ ಪ್ರಕಾರ ೧೪೯೭ರಲ್ಲಿ ಪೋರ್ಚುಗೀಸ್ ಶೋಧಕ ವಾಸ್ಕೋ ಡ ಗಾಮ , ಯುರೋಪ್‌ನಿಂದ ಭಾರತದ ಕಡೆಗೆ ಸಾಗರ ಮಾರ್ಗದಲ್ಲಿ ಪ್ರಯಾಣಿಸುವಾಗ ಈ ದ್ವೀಪದಲ್ಲಿ ಇಳಿದನೆಂದು ಹಾಗು ಅಲ್ಲಿ ಯೆಸು ಕ್ರಿಸ್ತನ ಕ್ರೊಸ್ಅನ್ನು ನೆಟ್ಟು "El Padron de Santa Maria" ಅಂದರೆ "ತಾಯಿ ಮೇರಿಗಾಗಿ ಸಮರ್ಪಿಸಿದ ತಾಣ" ಎಂದು ಹೆಸರಿಟ್ಟ ಎಂದು ನಂಬಲಾಗಿದೆ. ಆದರಿಂದಾಗಿ ಈಗಿನ ಸೈಂಟ್ ಮೇರೀಸ್ ದ್ವೀಪ ಹೆಸರನ್ನು ಪಡೆಯಿತು ಎನ್ನಲಾಗಿದೆ[2].
ಭೂವಿಜ್ಞಾನ ಹಾಗು ಸ್ಥಳವಿವರಣೆ
ಸೈಂಟ್ ಮೇರೀಸ್ ದ್ವೀಪವು ೪ ದ್ವೀಪಗಳ ಸಮೂಹದಿಂದಾಗಿದೆ. ೪ ದ್ವೀಪಗಳಲ್ಲಿನ ಒಂದಾದ ಉತ್ತರದ ದ್ವೀಪ ಬಸಾಲ್ಟ್-ರಯೋಡೇಸೈಟು ವರ್ಗದ ಶಿಲೆ (basaltic- rhyodacitic rocks) ಗಳಿಂದ ರಚನೆಯಾಗಿದ್ದು ಷಡ್ಭುಜ ಆಕೃತಿಯ ಶಿಲೆಗಳ ಸಮೂಹವಾಗಿದೆ. ಈ ಬಗೆಯ ಸುಂದರ ಷಡ್ಭುಜ ಆಕೃತಿಯ ಶಿಲಾರಚನೆಗಳು ದೇಶದಲ್ಲಿ ಇವು ಏಕಮಾತ್ರ ಎನ್ನಲಾಗಿದೆ. ದ್ವೀಪದ ವಿಸ್ತಾರವು ಸುಮಾರು ೫೦೦ ಮೀ (೧,೬೪೦.೪ ಅಡಿ). ಉದ್ದವಾಗಿದ್ದು ಅಗಲವು ೧೦೦ ಮೀ ಇದೆ. ದ್ವೀಪದ ತುಂಬೆಲ್ಲಾ ತೆಂಗಿನ ಮರಗಳು ಇವೆ. ದ್ವೀಪದಲ್ಲಿ ಮನುಷ್ಯ ನೆಲೆ ಇಲ್ಲ[3][4]. ಉತ್ತರ-ದಕ್ಷಿಣ ದಿಕ್ಕಿನಲ್ಲಿ ಚಾಚಿಕೊಂಡಿರುವ ದ್ವೀಪಸಮೂಹವು ೪ ದೊಡ್ದ ದ್ವೀಪಗಳಿಂದ ಕೂಡಿದೆ. ಈ ೪ ದೊಡ್ದ ದ್ವೀಪಗಳನ್ನು ೧. ನಾರಿಕೇಳ(ಕೊಕೊನೆಟ್) ದ್ವೀಪ ೨. ಉತ್ತರ ದ್ವೀಪ ೩. ದರ್ಯ ಬಹಾದ್ದೂರ ದ್ವೀಪ ಹಾಗು ೪. ದಕ್ಷಿಣ ದ್ವೀಪ ಎಂದು ಕರೆಯಲಾಗುತ್ತದೆ.
ದ್ವೀಪದ ಛಾಯಾಚಿತ್ರಗಳು
- ದ್ವೀಪದ ಒಂದು ಸಮುದ್ರ ತಟ.
- ದ್ವೀಪದ ಶಿಲಾಸ್ತರಗಳ ರಚನೆ.
- ದ್ವೀಪದ ದೊರನೊಟ.
- Sandpipers on the Island
![]() |
ವಿಕಿಮೀಡಿಯ ಕಣಜದಲ್ಲಿ St. Mary's Islands ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
ಉಲ್ಲೇಖ
- "Columnar Basalt". Geological Survey of India. Retrieved 2008-07-26.
- Prabhu, Ganesh (2006-03-31). "A beach and an island to relax on". ದ ಹಿಂದು. Retrieved 2008-10-28.
- "St Mary's Island". Retrieved 2009-01-24.
- "Where rocks tell a tale". The Hindu. 2002-09-16. Retrieved 2009-01-24.