ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್

ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್ ಕೆರಿಬ್ಬಿಯನ್ ಸಮುದ್ರಲೆಸ್ಸರ್ ಆಂಟಿಲ್ಸ್ ದ್ವೀಪ ಸಮೂಹದ ಒಂದು ದ್ವೀಪ ರಾಷ್ಟ್ರ. ಸೇಂಟ್ ವಿನ್ಸೆಂಟ್ ಅಗ್ನಿಪರ್ವತವಿರುವ ದ್ವೀಪ. ಕೆರೆಬಿಯನ್ ದ್ವೀಪಗಳಲ್ಲಿ ಅತಿದೊಡ್ಡದು. ಸೇಂಟ್ ವಿನ್ಸೆಂಟ್ ಹಾಗೂ ಗ್ರೆನಡೀನ್ಸ್ ಎನ್ನುತ್ತಾರೆ. ಕೆರೆಬಿಯನ್ ಸಮುದ್ರದ ಸೇಂಟ್ ಲೂಸಿಯ ಮತ್ತು ಗ್ರೆನಡೀನ್ಸ್ ಮಧ್ಯೆ. ನೀರಿನಲ್ಲಿ ಸುಮಾರುಭಾಗ ಮುಳುಗಿರುವ ಜೀವಂತವಾಗಿರುವ ಅಗ್ನಿಪರ್ವತಗಳನ್ನು ಹೊಂದಿದೆ. ಈ ದ್ವೀಪಗಳ ಸ್ವಾಮಿತ್ವದ ಬಗ್ಗೆ ೧೮ ನೆಯ ಶತಮಾನದಲ್ಲಿ ಬ್ರಿಟಿಷ್, ಮತ್ತು ಪ್ರಾನ್ಸ್ ದೇಶಗಳ ಮಧ್ಯೆ ಕದನ ನಡೆಯುತ್ತಲೇ ಇದ್ದು, ಕೊನೆಗೆ ೧೭೬೩, ೧೮೮೩ ರ ಅವಧಿಯಲ್ಲಿ ಬ್ರಿಟನ್ ತನ್ನ ವಶಕ್ಕೆ ತೆಗೆದುಕೊಂಡಿತು. ೧೨೦,೦೦೦ ಜನಸಂಖ್ಯೆಯಿರುವ ಈ ದ್ವೀಪ ಸಮೂಹ, ೧೯೭೯ ರ ಅಕ್ಟೋಬರ್, ೨೭ ರಂದು ಸ್ವಾತಂತ್ರ್ಯಗಳಿಸಿತು. ಕಿಂಗ್ಸ್ಟನ್, ಪ್ರಮುಖ ನಗರದ ಜನಸಂಖ್ಯೆ ೨೫,೪೧೮. ಈ ದ್ವೀಪಗಳ ಜನಸಂಖ್ಯೆ ದೇಶದ ತೀರಪ್ರದೇಶಗಳಲ್ಲಿ ಚದುರಿದೆ.

Saint Vincent and the Grenadines
ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್
[[Image:|85px|ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್ ದೇಶದ ಲಾಂಛನ]]
ಧ್ವಜ ಲಾಂಛನ
ಧ್ಯೇಯ: "Pax et justitia" (ಲ್ಯಾಟಿನ್)
"ಶಾಂತಿ ಮತ್ತು ನ್ಯಾಯ"
ರಾಷ್ಟ್ರಗೀತೆ: St Vincent Land So Beautiful

Location of ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್

ರಾಜಧಾನಿ ಕಿಂಗ್ಸ್ಟೌನ್
13°10′N 61°14′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಆಂಗ್ಲ
ಸರಕಾರ ಸಂಸದೀಯ ಪ್ರಜಾತಂತ್ರ (ಸಾಂವಿಧಾನಿಕ ಚಕ್ರಾಧಿಪತ್ಯ)
 - ಚಕ್ರವರ್ತಿ ಎರಡನೇ ಎಲಿಜಬೆಥ್
 - ಗವರ್ನರ್ ಜನರಲ್ ಸರ್ ಫ್ರೆಡೆರಿಕ್ ಬಾಲ್ಲಂಟೈನ್
 - ಪ್ರಧಾನ ಮಂತ್ರಿ ರಾಲ್ಫ್ ಗೋನ್ಸಾಲ್ವೇಸ್
ಸ್ವಾತಂತ್ರ್ಯ  
 - ಯುಕೆ ಇಂದಅಕ್ಟೋಬರ್ ೨೭, ೧೯೭೯ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ389 ಚದರ ಕಿಮಿ ;  (201st)
 150 ಚದರ ಮೈಲಿ 
 - ನೀರು (%)negligible
ಜನಸಂಖ್ಯೆ  
 - ೨೦೦೫ರ ಅಂದಾಜು119,000 (190th)
 - ಸಾಂದ್ರತೆ 307 /ಚದರ ಕಿಮಿ ;  (39th)
792 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೨ರ ಅಂದಾಜು
 - ಒಟ್ಟು$342 million (212nd)
 - ತಲಾ$7,493 (82nd)
ಮಾನವ ಅಭಿವೃದ್ಧಿ
ಸೂಚಿಕ
(೨೦೦೭)
0.761 (93rd)  ಮಧ್ಯಮ
ಕರೆನ್ಸಿ ಪೂರ್ವ ಕೆರಿಬ್ಬಿಯನ್ ಡಾಲರ್ (XCD)
ಸಮಯ ವಲಯ (UTC-4)
ಅಂತರ್ಜಾಲ TLD .vc
ದೂರವಾಣಿ ಕೋಡ್ +1 784

ಉತ್ಕೃಷ್ಟ ಹತ್ತಿ ಬೆಳೆಗೆ ಹೆಸರುವಾಸಿ

'ಸೀ ಐಲೆಂಡ್' ಎಂಬ ವಿಶ್ವದ ಅತ್ಯುತ್ತಮ ಹತ್ತಿಬೆಳೆ ಇಲ್ಲಿ ಕಂಡುಬಂದಿತು. ಅದನ್ನು ಬಳಸಿಕೊಂಡು ಅಮೆರಿಕದ ಅಪ್ಲ್ಯಾಂಡ್ ಹತ್ತಿಯ ಬೆಳೆಯ ಗುಣಮಟ್ಟವನ್ನು ಸುಧಾರಿಸಲಾಯಿತು. ಈ ಸಂಶೋಧನೆಗೆ ಹಲವು ದಶಕಗಳೇ ಬೇಕಾದವು. ಇಲ್ಲಿನ ಕೆಲವು ಮುಖ್ಯ ಪಟ್ಟಣಗಳ ಹೆಸರುಗಳು ಹೀಗಿವೆ :

  • ಬರ್ರೋಲಿ,
  • ಅಯೊವ್,
  • ಚಾಟೆಬ್ಲೇರ್,ಜಾರ್ಜ್ ಟೌನ್,
  • ಕಾಲಿಯಾಕ್, ಮತ್ತು,
  • ಮರಿಯಾಕ್ ಕಣಿವೆ ಪ್ರದೇಶ.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.