ಸಹಾರ

ಸಹಾರ ಮರುಭೂಮಿ ಪ್ರಪಂಚದ ಎರಡನೆಯ ದೊಡ್ಡ ಮರುಭೂಮಿಯಾಗಿದೆ. ೯,೦೦೦,೦೦೦ ಚದರ ಕಿ.ಮೀ (೩,೫೦೦,೦೦೦ ಚದರ ಮೈಲಿ)ಗಳಷ್ಟು ವಿಶಾಲವಾಗಿ ಉತ್ತರ ಆಫ್ರಿಕಾದ ಉತ್ತರ ಭಾಗದಲ್ಲಿ ಹರಡಿರುವ ಇದು ೨.೫ ದಶಲಕ್ಷ ವರ್ಷಗಳಷ್ಟು ಹಳೆಯದು. ಸಹಾರ ಎಂದರೆ ಅರಾಬಿಕ್ ಭಾಷೆಯಲ್ಲಿ ಒಣ ಭೂಮಿ ಎಂದರ್ಥ.

ಉಪಗ್ರಹ ಚಿತ್ರ
ಪಶ್ಚಿಮ ಲಿಬ್ಯದ ಮರುಭೂಮಿ, ಸಹಾರದ ಒಂದು ಭಾಗ

ಭೂಗೋಳ

ಸಹಾರ ಮರುಭೂಮಿಯು ಆಫ್ರಿಕಾದ ಹಲವು ದೇಶಗಳಲ್ಲಿ ಹರಡಿ ಕೊಂಡಿದೆ. ಇದರಲ್ಲಿ ಪ್ರಮುಖ ದೇಶಗಳೆಂದರೆ ಅಲ್ಜೀರಿಯ, ಚಾಡ್, ಈಜಿಪ್ಟ್, ಲಿಬ್ಯ, ಮಾಲಿ, ಮೌರಿಟೇನಿಯ, ಮೊರಾಕೊ, ನೈಜರ್, ಪಶ್ಚಿಮ ಸಹಾರ, ಸುಡಾನ್ ಮತ್ತು ಟ್ಯುನೀಶಿಯ.

ಇದನ್ನೂ ನೋಡಿ

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.