ಸರಕಾರ

ಸರಕಾರ ಒಂದು ಪ್ರದೇಶದ ಜನರ ಮೇಲೆ (ಅಥವಾ ಇತರ ರೀತಿಯ ಜನರ ಗುಂಪಿನ ಮೇಲೆ) ಅನ್ವಯಿಸುವಂತಹ ಶಾಸನಗಳನ್ನು ಹೊರಡಿಸಿ, ಅವನ್ನು ಕಾರ್ಯಗತಗೊಳಿಸುವಂತಹ ಅಧಿಕಾರ ಇರುವ ಒಂದು ಸಂಸ್ಥೆ. ಸಾಮಾನ್ಯವಾಗಿ ಇದು ದೇಶಗಳ ಕಾರ್ಯಾಂಗಗಳಿಗೆ ಅನ್ವಯಿಸುತ್ತದೆ.ಒಂದು ಪ್ರದೇಶದ ಚಟುವಟಿಕೆಗಳ ಜವಾಬ್ದಾರಿಯನ್ನು ನಿಭಾಯಿಸುವ ಇಲಾಖೆಯನ್ನು ಸರಕಾರ ರೂಪಿಸುತ್ತದೆ.

ವಿಧಗಳು

ಎಷ್ಟು ಜನರ ಕೈಯಲ್ಲಿ ಅಧಿಕಾರವಿದೆಯೆಂಬುದರ ಮೇಲೆ ಸರಕಾರಗಳನ್ನು ಮೂರು ವಿಧಗಳಾಗಿ ವಿಂಗಡಿಸಬಹುದು.

  • ಏಕಪ್ರಭುತ್ವಗಳಲ್ಲಿ ಅಧಿಕಾರ ಕೇವಲ ಒಂದು ವ್ಯಕ್ತಿಯ ಕೈಯಲ್ಲಿ ಇರುತ್ತದೆ. ಈ ವ್ಯಕ್ತಿಯು ಸಾರ್ವಭೌಮನಾಗಿರಬಹುದು, ಸರ್ವಾಧಿಕಾರಿಯಾಗಿರಬಹುದು ಅಥವಾ ಇತರ ಕೇಂದ್ರ ವ್ಯಕ್ತಿಯಾಗಿರಬಹುದು.
  • ಕೆಲವರ ಪ್ರಭುತ್ವಗಳಲ್ಲಿ ಅಧಿಕಾರ ಸಮಾನ ಹಿತಾಸಕ್ತಿಗಳನ್ನುಳ್ಳ ಕೆಲ ಜನರ ಗುಂಪಿನ ಕೈಯಲ್ಲಿ ಇರುತ್ತದೆ.
  • ಗಣತಂತ್ರಗಳಲ್ಲಿ ಅಧಿಕಾರ ಪ್ರಜೆಗಳ ಕೈಯಲ್ಲಿ ಇರುತ್ತದೆ. ಈ ಅಧಿಕಾರವನ್ನು ಅವರು ನೇರವಾಗಿ ಚಲಾಯಿಸಬಹುದು (ನೇರ ಗಣತಂತ್ರ) ಅಥವಾ ಪ್ರತಿನಿಧಿಗಳನ್ನು ಚುನಾಯಿಸುವುದರಿಂದ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.