ಸಂಯುಕ್ತ ರಾಷ್ಟ್ರ ಸಚಿವಾಲಯ

ಸಂಯುಕ್ತ ರಾಷ್ಟ್ರ ಸಚಿವಾಲಯವು ವಿಶ್ವಸಂಸ್ಥೆಯ ಐದು ಪ್ರಧಾನ ಅಂಗಗಳ ಪೈಕಿ ಒಂದು ಮತ್ತು ಇದರ ನಾಯಕತ್ವವನ್ನು ವಿಶ್ವಾದ್ಯಂತ ಅಂತರರಾಷ್ಟ್ರೀಯ ಸರ್ಕಾರಿ ಅಧಿಕಾರಿಗಳ ಸಹಾಯದಿಂದ ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿಯವರು ವಹಿಸುತ್ತಾರೆ. ಇದು, ವಿಶ್ವಸಂಸ್ಥೆಯ ಅಂಗಗಳಿಗೆ ಅವುಗಳ ಸಭೆಗಳಿಗೆ ಅಗತ್ಯವಾದ ವಿಷಯಗಳ ಬಗ್ಗೆ ಅಧ್ಯಯನಗಳು, ಮಾಹಿತಿ, ಮತ್ತು ಸೌಕರ್ಯಗಳನ್ನು ಒದಗಿಸುತ್ತದೆ. ಅದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ವಿಶ್ವಸಂಸ್ಥೆಯ ಮಹಾಸಭೆ, ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ, ಮತ್ತು ವಿಶ್ವಸಂಸ್ಥೆಯ ಇತರ ಸಂಘಗಳ ನಿರ್ದೇಶದಂತೆ ವಹಿಸಲ್ಪಟ್ಟ ಕಾರ್ಯಗಳನ್ನೂ ನೆರವೇರಿಸುತ್ತದೆ.

ಗುಟೆರಸ್‌ ಮಹಾಕಾರ್ಯದರ್ಶಿ

  • ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಪೋರ್ಚುಗೀಸ್‌ನ ಮಾಜಿ ಪ್ರಧಾನಿ ಅಂಟೊನಿಯೊ ಗುಟೆರಸ್‌ ೧೨-೧೨-೨೦೧೬ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. 67 ವರ್ಷದ ಗುಟೆರಸ್‌ ಅವರು ವಿಶ್ವಸಂಸ್ಥೆಯ 9ನೇ ಮಹಾ ಪ್ರಧಾನ ಕಾರ್ಯದರ್ಶಿ.[1]

ಉಲ್ಲೇಖಗಳು


ಸಂಯುಕ್ತ ರಾಷ್ಟ್ರ ಸಂಸ್ಥೆಗಳು(ವಿಶ್ವಸಂಸ್ಥೆ)

ಸಂಯುಕ್ತ ರಾಷ್ಟ್ರ ಸಂಸ್ಥೆಯ ವ್ಯವಸ್ಥೆ
ಸಾರ್ವತ್ರಿಕ ಸಭೆ | ರಕ್ಷಣಾ ಪರಿಷತ್ತು | ಆರ್ಥಿಕ ಮತ್ತು ಸಾಮಾಜಿಕ ಪರಿಷತ್ತು | ವಿಶ್ವಸ್ತ ಮಂಡಳಿ | ಸಚಿವಾಲಯ | ಅಂತರರಾಷ್ಟ್ರೀಯ ನ್ಯಾಯಸ್ಥಾನ

ಸಂಯುಕ್ತ ರಾಷ್ಟ್ರ ಸಂಕಲ್ಪಗಳು
ಸಾರ್ವತ್ರಿಕ ಸಭೆಯ ಸಂಕಲ್ಪಗಳು | ರಕ್ಷಣಾ ಪರಿಷತ್ತಿನ ಸಂಕಲ್ಪಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.