ಶ್ರೀಲಂಕಾ

ಶ್ರೀಲಂಕಾ ಪ್ರಜಾತಾಂತ್ರಿಕ ಸಮಾಜವಾದಿ ಗಣರಾಜ್ಯ (೧೯೭೨ ರ ಮೊದಲು ಸಿಲೋನ್) ಭಾರತೀಯ ಉಪಖಂಡದ ಆಗ್ನೇಯದಲ್ಲಿರುವ ದ್ವೀಪ ರಾಷ್ಟ್ರ.ಪುರಾತನ ಕಾಲದಿಂದ ಲಂಕಾ, ಲಂಕಾದ್ವೀಪ, ಸಿಂಹಳದ್ವೀಪ, ಸೆರೆಂದಿಬ್ ಮೊದಲಾದ ಹೆಸರುಗಳಿಂದ ಗುರುತಿಸಲ್ಪಟ್ಟಿರುವ ಶ್ರೀಲಂಕಾ ಬ್ರಿಟಿಷ್ ಆಡಳಿತದ ಕಾಲದಲ್ಲಿ ಸಿಲೋನ್ ಎಂದು ಹೆಸರು ಪಡೆದಿತ್ತು. ೧೯೭೨ ರಲ್ಲಿ ಅದರ ಹೆಸರನ್ನು ಶ್ರೀಲಂಕಾ ಎಂದು ಬದಲಾಯಿಸಲಾಯಿತು.[1]

ಶ್ರೀಲಂಕಾ ಪ್ರಜಾತಾಂತ್ರಿಕ ಸಮಾಜವಾದಿ ಗಣರಾಜ್ಯ

இலங்கை சனநாயக சோஷலிசக் குடியரசு
ಧ್ವಜ ಲಾಂಛನ
ರಾಷ್ಟ್ರಗೀತೆ: ಶ್ರೀಲಂಕಾ ಮಾತಾ

Location of ಶ್ರೀಲಂಕಾ

ರಾಜಧಾನಿ ಶ್ರೀ ಜಯವರ್ಧನಾಪುರ
6°54′ಉ 79°54′ಪೂ
ಅತ್ಯಂತ ದೊಡ್ಡ ನಗರ ಕೊಲಂಬೊ
ಅಧಿಕೃತ ಭಾಷೆ(ಗಳು) ಸಿಂಹಳ ಭಾಷೆ, ತಮಿಳು
ಸರಕಾರ ಪ್ರಜಾತಾಂತ್ರಿಕ ಸಮಾಜವಾದಿ ಗಣರಾಜ್ಯ
 - ರಾಷ್ಟ್ರಪತಿ ಮಹಿಂದ ರಾಜಪಕ್ಸ
 - ಪ್ರಧಾನ ಮಂತ್ರಿ ರತ್ನಸಿರಿ ವಿಕ್ರಮನಾಯಕೆ
ಸ್ವಾತಂತ್ರ್ಯ ಯುನೈಟೆಡ್ ಕಿಂಗ್‍ಡಮ್‌ನಿಂದ 
 - ಮನ್ನಣೆಫೆಬ್ರುವರಿ ೪ ೧೯೪೮ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ65,610 ಚದರ ಕಿಮಿ ;  (೧೨೨ ನೇ)
 25,332 ಚದರ ಮೈಲಿ 
 - ನೀರು (%)4.4
ಜನಸಂಖ್ಯೆ  
 - ೨೦೦೫ರ ಅಂದಾಜು20,743,000 (52nd)
 - ೨೦೦೧ರ ಜನಗಣತಿ 18,732,255
 - ಸಾಂದ್ರತೆ 316 /ಚದರ ಕಿಮಿ ;  (35th)
818 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು($?)86.72 billion (61st)
 - ತಲಾ$4300 (111st)
ಮಾನವ ಅಭಿವೃದ್ಧಿ
ಸೂಚಿಕ
(೨೦೦೬)
0.755 (93)  ಮಧ್ಯಮ ದರ್ಜೆ
ಕರೆನ್ಸಿ ಶ್ರೀಲಂಕಾ ರುಪಾಯಿ (LKR)
ಸಮಯ ವಲಯ (UTC+5:30)
ಅಂತರ್ಜಾಲ TLD .lk
ದೂರವಾಣಿ ಕೋಡ್ +94

ಚರಿತ್ರೆ

ಶ್ರೀಲಂಕೆಗೆ ಸಿಂಹಳ ಜನರು ಸುಮಾರು ಕ್ರಿ.ಪೂ. ೬ನೇ ಶತಮಾನದಲ್ಲಿ ಪ್ರಾಯಶಃ ಉತ್ತರ ಭಾರತದಿಂದ ಬಂದಿರಬಹುದೆಂದು ಊಹಿಸಲಾಗಿದೆ. ಕ್ರಿ.ಪೂ. ಮೂರನೇ ಶತಮಾನದಲ್ಲಿ ಇಲ್ಲಿಗೆ ಬೌದ್ಧ ಧರ್ಮವನ್ನು ಪರಿಚಯಿಸಲಾಯಿತು. ನಂತರ ದಕ್ಷಿಣ ಭಾರತದಿಂದ ತಮಿಳರ ವಲಸೆ ಆರಂಭವಾಗಿ ಕ್ರಿ.ಶ. ೧೩ನೇ ಶತಮಾನದ ಕಾಲಕ್ಕೆ ಸಾಕಷ್ಟು ತಮಿಳರ ಜನಸಂಖ್ಯೆ ಶ್ರೀಲಂಕೆಯಲ್ಲಿತ್ತು.

೧೬ನೆಯ ಶತಮಾನದಲ್ಲಿ ಶ್ರೀಲಂಕೆಯ ಕೆಲ ಭಾಗಗಳನ್ನು ಪೋರ್ಚುಗೀಸರು ವಶಪಡಿಸಿಕೊಂಡರು. ನಂತರ ಇತರ ಯೂರೋಪಿನ ದೇಶಗಳೂ ಬಂದವು. ೧೭೯೬ ರಲ್ಲಿ ಶ್ರೀಲಂಕಾ ಸಂಪೂರ್ಣವಾಗಿ ಬ್ರಿಟಿಷರ ಕೈಸೇರಿತು. ೧೯೪೮ ರಲ್ಲಿ ಸ್ವಾತಂತ್ರ್ಯ ಪಡೆದ ಶ್ರೀಲಂಕಾ, ೧೯೭೨ ರಲ್ಲಿ ತನ್ನ ಹೆಸರನ್ನು ಅಧಿಕೃತವಾಗಿ "ಶ್ರೀಲಂಕಾ ಪ್ರಜಾತಾಂತ್ರಿಕ ಸಮಾಜವಾದಿ ಗಣರಾಜ್ಯ" ಎಂದು ಬದಲಾಯಿಸಿತು.

ಕಳೆದ ಎರಡು ದಶಕಗಳಲ್ಲಿ ಶ್ರೀಲಂಕೆಯ ತಮಿಳು ಜನರು ಮತ್ತು ಸಿಂಹಳೀಯರ ನಡುವೆ ಸಾಕಷ್ಟು ಅಶಾಂತಿ ಏರ್ಪಟ್ಟಿದ್ದು, ಎಲ್‍ಟಿಟಿಇ ಮತ್ತು ಶ್ರೀಲಂಕಾ ಸರ್ಕಾರದ ನಡುವೆ ಸಾಕಷ್ಟು ತೊಂದರೆಗಳುಂಟಾಗಿವೆ. ೨೦೦೪ರಲ್ಲಿ ಒಂದು ಶಾಂತಿ ಒಪ್ಪಂದ ಮಾಡಿಕೊಳ್ಳಲಾಯಿತು.

ರಾಜಕೀಯ

ಶ್ರೀಲಂಕೆಯ ಈಗಿನ ಅಧ್ಯಕ್ಷರು ಮೈತೀಪಾಲ ಸಿರಿಸೇನಾ. ಈಗಿನ ಪ್ರಧಾನ ಮಂತ್ರಿಗಳು ವಿಕ್ರಮಸಿಘ್ಹ.

ಸಂಪರ್ಕಗಳು

ಪ್ರಮುಖ ಪ್ರವಾಸಿ ತಾಣಗಳು

ಶ್ರೀಲಂಕಾ ಅತೀ ಚಿಕ್ಕ ದ್ವೀಪ ಹಾಗೂ ಕಡಿಮೆ ಪ್ರಮಾಣದ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ.ಇಲ್ಲಿ ಅನೇಕ ಬೀಚ್,ಹೋಟೆಲ್,ರೆಸ್ಟೋರೆಂಟ್‍ಗಳು ಅಭಿವೃಧ್ದಿಯ ಪಥದಲ್ಲಿವೆ.ಇದರ ಜೊತೆಗೆ ವನ್ಯಸಂಪತ್ತು ಕೂಡ ಪ್ರವಸಿಗರನ್ನು ಆಕರ್ಷಿಸುತ್ತಿದೆ.ಈ ದೇಶದ ದಕ್ಷಿಣ ಕರಾವಳಿಯಲ್ಲಿನ ಮೊಟ್ಟೆ ಇಡುವ ಆಮೆಗಳು,ವರ್ಣರಂಜಿತ ಪಕ್ಷಿಗಳು,ನಾನಾ ಬಗೆಯ ಮಂಗಗಳು,ಚಿರತೆಗಳು,ನೀಲಿ ತಿಮಿಂಗಿಲ, ಹಾರುವ ಮೀನು ಮತ್ತು ಡಾ‌‍ಲ್ಫಿನ್ಜತೆಗಿನ ಆಟ ಇಲ್ಲಿನ ಪ್ರವಾಸಿ ತಾಣದ ಪ್ರಮುಖ ಅಂಶಗಳು.ಈ ದೇಶ ಇತ್ತೀಚೆಗೆ ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ.ಪರ್ವತಅರೋಹಿಗಲಿಗೆ ಶ್ರೀಲಂಕಾವು ಬಹಳ ಉಪಯುಕ್ತವಾದ ದೇಶ.ಶ್ರೀಲಂಕಾದ ಹೆದ್ದಾರಿಯ ಪಕ್ಕದಲ್ಲಿ ಆನೆಗಳಿಗೆ ಪಾರ್ಕ್ ಗಳನ್ನು ಮಾಡಿಸಲಾಗಿದೆ, ಗಾಲೆ ಎಂಬಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳು,ಯೇಲ್ ನ್ಯಾಷನಲ್ ಪಾರ್ಕ್ ನಲ್ಲಿರುವ ಚಿರತೆಗಳು, ಶ್ರೀಲಂಕಾದ ಬೆಟ್ಟ ಪ್ರದೇಶಗಳಲ್ಲಿ ತಯಾರಾಗಿ ಮಾರುಕಟ್ಟೆಗೆ ಹೋಗುವ ಕಾಫಿ,ಟೀ ವ್ಯವಹಾರ, ಕಾಡಿನ ನಡುವಿನಲ್ಲಿರುವ ಪ್ರಾಚೀನ ಅವಶೇಷಗಳು ಇಲ್ಲಿನ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಗಳು. ಈ ಕಾರಣಗಳಿಂದಾಗಿ ಪ್ರಸಿಧ್ದ ಪ್ರವಾಸಿಗ "ಮಾರ್ಕೋ ಪೋಲೋ" ಶ್ರೀಲಂಕಾ ದೇಶವನ್ನು ವಿಶ್ವದ ಅತ್ಯುತ್ತಮ ದ್ವೀಪಗಳ ಸಾಲಿಗೆ ಸೇರಿಸಿರುತ್ತಾನೆ.

ಕೊಲಂಬೋ

ಕೊಲಂಬೊ ಶ್ರೀಲಂಕಾದ ರಾಜಧಾನಿಯಾಗಿದೆ.ಮಾರ್ಚ್ನಿನಿಂದ ಮೇ ತಿಂಗಳಿನೊಳಗೆ ಇಲ್ಲಿಗೆ ಭೇಟಿ ನೀಡುವುದು ಉತ್ತಮ.ಇಲ್ಲಿ ಮಹಾದೇವಿ ವಿಹಾರ,ಪಾರ್ಕ್,ಹೂಗಳ ಮಾರುಕಟ್ಟೆ,ಅತ್ಯುತ್ತಮ ಶ್ರೇಣಿಯ ರೆಸ್ಟೋರೆಂಟ್ಗಳನ್ನು ನೋಡಬಹುದು.ಇಲ್ಲಿ ಜು‍ಲೆ ಮತ್ತು ಆಗಸ್ಟ್ ತಿಂಗಳುಗಳ ನಡುವೆಯು ಇಲ್ಲಿನ ಪ್ರಸಿದ್ದ ಹಬ್ಬವಾದ "ವೇಲೇ" ‌ಫೆಸ್ಟಿವಲ್ ನಡೆಯುತ್ತದೆ.

ಕಡಲ ತೀರಗಳು

ಶ್ರೀಲಂಕಾದ ಪಾಮ್ ಬೀಚ್ ಸುಮಾರು ೧೬೦೦ ಕಿ.ಮೀವರೆಗೆ ವ್ಯಾಪಿಸಿರುವುದು.ಇದರ ಪಕ್ಕದಲ್ಲಿಯೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಇರುವುದರಿಂದ ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚು.ಗಾಲೆಯಲ್ಲಿರುವ "ಅನ್ ವಾಟೂನಾ" ಕಡಲ ತೀರ ಪ್ರಪಂಚದ ಮುಂಚೂಣಿಯಲ್ಲಿರುವ ೧೫ ಕಡಲ ತೀರಗಳ ಪಟ್ಟಿಯಲ್ಲಿದೆ.ಇಲ್ಲಿನ ಬೆಂಟೋಟ ಕಡಲ ತೀರದಲ್ಲಿ ಡೈವಿಂಗ್ ಮತ್ತು ಸ್ನಾರ್ಕ್ ಲಿಂಗ್ ಮಾಡುವ ಅವಕಾಶವಿದೆ.ಹವಳದ ಮತ್ತು ನೀರಿನೊಳಗಿರುವ ಗುಹೆಗಳು ಅಭಿವ್ರದ್ದಿಯ ಪಥದಲ್ಲಿದೆ.

ಆಡಮ್ಸ್ ಪೀಕ್

ಶ್ರೀಲಂಕಾದ ಅತ್ಯುನ್ನತ ಪರ್ವತ ಶ್ರೇಣಿಯಲ್ಲಿ ಒಂದಾಗಿರುವ ಇದು ಆ ದೇಶದ ಜಾನಪದ ವಿದ್ವತ್ತಿಗೂ ಕಾರಣವಾಗಿದೆ.ಇದಕ್ಕೆ ಮುಖ್ಯ ಕಾರಣ ಶ್ರೀಪಾದ ಇರುವುದು ಇದೇ ಜಾಗದಲ್ಲಿ.ಬೌದ್ಧ,ಹಿಂದು,ಮುಸ್ಲಿಂ,ಕ್ರೈಸ್ತರೆಲ್ಲರೂ ಈ ಪರ್ವತ ಶ್ರೇಣಿಯನ್ನು ಪವಿತ್ರ ಸ್ಥಳವೆಂದು ಪರಿಗಣಿಸಿದ್ದಾರೆ. ಈ ಪರ್ವತ ಶ್ರೇಣಿಯನ್ನು ತಲುಪಬೇಕಾದರೆ ಸುಮಾರು ೪೮೦೦ ಮೆಟ್ಟಿಲುಗಳನ್ನು ದಾಟಿಕೊಡು ಸಾಗಬೇಕು.

ಅನುರಾಧ ಪುರ

ಸಾವಿರಾರು ವರ್ಷಗಳ ಹಿಂದೆ ಅನುರಾಧಪುರವು ಶ್ರೀಲಂಕಾ ದೇಶದ ರಾಜಧಾನಿಯಾಗಿತ್ತು. ಈ ಪ್ರಾಚೀನ ನಗರಿಯನ್ನು ನೋಡಿದಾಗ ಇಲ್ಲಿ ಬಹು ಹಿಂದೆಯೇ ನಾಗರಿಕತೆಯು ಚಾಲ್ತಿಯಲ್ಲಿತ್ತು ಎಂದು ತಿಳಿದು ಬರುತ್ತದೆ.ಈ ಊರಿನ ರಚನೆಯನ್ನು ಕೂಡ ಬಹಳ ಯೋಜನಾಬದ್ದವಾಗಿ ಮಾಡಲಾಗಿದೆ. ಇಲ್ಲಿನ ಪ್ರಾಚೀನ ದೇವಸ್ಧಾನಗಳ ಅವಶೇಷಗಳು, ಅರಮನೆ, ದೈತ್ಯ ಗಾತ್ರದ ಸ್ತೂಪಗಳು ಇಲ್ಲಿನ ಇತಿಹಾಸವನ್ನು ವಿವರಿಸುತ್ತದೆ.

ಡಂಬುಲ್ಲ ಗುಹೆ ದೇವಾಲಯ

ಶ್ರೀಲಂಕಾದ ಬೌದ್ಧ ಪರಂಪರೆಯ ಒಂದು ಒಳನೋಟವು ಡಂಬುಲ್ಲ ಗುಹೆ ದೇವಾಲಯದಲ್ಲಿ ಕಾಣಸಿಗುತ್ತದೆ. ಇಲ್ಲಿ ದೈತ್ಯಕಾರದ ಕಲ್ಲಿನ ಶಿಲಾ ಸ್ತರದಲ್ಲಿ ಧಾರ್ಮಿಕ ಭಿತ್ತಿ ಚಿತ್ರಗಳನ್ನು ಸಂಗ್ರಹಿಸಲಾಗಿದೆ.

ಗಾಲೆ ಡಚ್ ಕೋಟೆ

ಇದು ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ.ಇಲ್ಲಿ ನಡೆಯುವ ಸಾಹಿತ್ಯ ಉತ್ಸವ ಬಹಳ ಜನಪ್ರಿಯವಾಗಿದೆ.ಈ ಪ್ರದೇಶ ಕರಿ ಮರದ ಕೆತ್ತನೆ ಹಾಗೂ ವಜ್ರದ ಹೊಳಪು ಹೊಂದಿರುವ ಕರಕುಶಲ ಕೇಂದ್ರವಾಗಿಯೂ ಪ್ರಸಿದ್ದಿಯಾಗಿದೆ.

ನೋಡಲೇ ಬೇಕಾದ ಸ್ಥಳಗಳು

  • ಕ್ಯಾಂಡಿಯನ್ ರಾಜ ಮನೆತನದ ಕುರುಹುಗಳಿರುವ ಕ್ಯಾಂಡಿ ಪ್ರದೇಶ.
  • ರಾಫ್ಟಿಂಗ್ ಹಬ್ ಆಗಿರುವ ಕೀಟುಗುಲ್ಲಾ
  • ನೂರಕ್ಕೂ ಅಧಿಕ ಜಾತಿಯ ಪಾರಿವಳಗಳಿರುವ 'ಮೀರಿಸಾ'
  • ಏಷ್ಯಾದ ಆನೆಗಳಿರುವ ಪಿನಿನಾವಾಲಾ
  • ದೊಡ್ಡ ಗಾತ್ರದ ಬುದ್ಧನ ಪ್ರತಿಮೆಗಳಿರುವ ಪೊಲೊನ್ನಾ
  • ರಾಯಲ್ ಅರಮನೆಗಳು
  • ಆರ್.ಪ್ರೇಮದಾಸ ಸ್ಟೇಡಿಯಂ
  • ಸಿಗಿರಿಯಾ ರಾಕ್ ಫೊರ್ಟ್ರೆಸ್
  • ಅಡಾವಾಲೇ ನ್ಯಾಷನಲ್ ಪಾರ್ಕ್ ಮತ್ತು ಯೇಲ್ ನ್ಯಾಷನಲ್ ಪಾರ್ಕ್

ಇದನ್ನು ನೋಡಿ

ಉಲ್ಲೇಖಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.