ಶ್ರೀ ರಾಮ ನವಮಿ
ಶ್ರೀ ರಾಮನವಮಿ ಹಿಂದೂ ದೇವತೆಯಾದ ರಾಮನು ಹುಟ್ಟಿದ ದಿನ. ಶ್ರೀ ರಾಮ ರಾಮಾಯಣದ ಕಥಾ ನಾಯಕ ಹಾಗೂ ಆದಿಕಾಲದ ಭಾರತದ ಅಯೋಧ್ಯೆಯ ರಾಜ. ದಶರಥ ಮಹಾರಾಜ ಶ್ರೀ ರಾಮನ ತಂದೆ. ಹಿಂದೂ ಸಂಪ್ರದಾಯದಲ್ಲಿ ರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ. ಶ್ರೀ ರಾಮನವಮಿ ಯುಗಾದಿಯ ಎಂಟು ದಿನಗಳ ನಂತರ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಆಚರಿಸಲಾಗುತ್ತದೆ.
- ರಾಮನ ಚರಿತ್ರೆ ಐತಿಹ್ಯವಾಗಿ ಭಾರತವನ್ನು ಧಾರ್ಮಿಕತೆಯಲ್ಲಿ ಸೂಕ್ಷ್ಮಗೊಳಿಸಿದೆ.
- ರಾಮನವಮಿಯಂದು ಜನರು ಕೋಸಂಬರಿ, ಪಾನಕ, ಫಲಾಹಾರಗಳೊಂದಿಗೆ ಸಂಭ್ರಮಿಸುತ್ತಾರೆ.

ರಾಮ ನವಮಿಯ ಆಚರಣೆ
ಆಚರಣೆ
ರಾಮನವಮಿಯಂದು ದಕ್ಷಿಣ ಭಾರತದ ಮನೆಗಳಲ್ಲಿ, ಮುಖ್ಯವಾಗಿ ಕರ್ನಾಟಕದಲ್ಲಿ, ಪಾನಕ ಹಾಗೂ ಕೋಸಂಬರಿಗಳನ್ನು ಬಂದವರಿಗೆ ನೀಡಿ ಆಚರಿಸಲಾಗುತ್ತದೆ. ರಾಮ ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಈಗಿನ ಅಯೋಧ್ಯೆಯಲ್ಲಿ, ತಮಿಳುನಾಡಿನ ರಾಮೇಶ್ವರಂನಲ್ಲಿ ಈ ದಿನದಂದು ಶ್ರೀ ರಾಮನ ಪೂಜೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಕರ್ನಾಟಕಾದ್ಯಂತ ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತ ಕಛೇರಿಗಳು ಆಯೋಜಿಸಲ್ಪಡುತ್ತವೆ. ಇದರಲ್ಲಿ ಕರ್ನಾಟಕದ ಹಾಗೂ ಇತರೆ ರಾಜ್ಯಗಳಿಂದ ಸಂಗೀತ ವಿದ್ವಾಂಸರು ಬಂದು ಪಾಲ್ಗೊಳುತ್ತಾರೆ.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.