ವಿ. ಎಮ್. ಇನಾಮದಾರ

ವೆಂಕಟೇಶ ಮಧ್ವರಾವ ಇನಾಮದಾರ ಇವರು ೧೯೧೩ ಅಕ್ಟೋಬರ ೧ರಂದು ಬೆಳಗಾವಿ ಜಿಲ್ಲೆಯ ಹುದಲಿಯಲ್ಲಿ ಜನಿಸಿದರು. ಎಂ.ಎ. ಪದವಿ ಪಡೆದ ಬಳಿಕ ಕೆಲ ಕಾಲ ನ್ಯಾಯಾಲಯದಲ್ಲಿ ಕೆಲಸ ಮಾಡಿ, ಪ್ರಾಧ್ಯಾಪಕ ವೃತ್ತಿ ಕೈಗೊಂಡರು.[1]

ಕೃತಿಗಳು

ಕಾದಂಬರಿಗಳು

  • ಕನಸಿನ ಮನೆ
  • ಕಟ್ಟಿದ ಮನೆ
  • ಮಂಜು ಮುಸುಕಿದ ದಾರಿ
  • ಮುಗಿಯದ ಕಥೆ
  • ಈ ಪರಿಯ ಸೊಬಗು
  • ವಿಷ ಬೆಳಸು
  • ಮೂರಾಬಟ್ಟೆ
  • ಶಾಪ
  • ನವಿಲು ನೌಕೆ
  • ಬಿಡುಗಡೆ

ಅನುವಾದ

('ಯಯಾತಿ'ಕಾದಂಬರಿಗಾಗಿ ವ್ಹಿ.ಎಸ್.ಖಾಂಡೇಕರ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.)

ಇತರ

  • ಪಾಶ್ಚಾತ್ಯ ಕಾವ್ಯಮೀಮಾಂಸೆ
  • ಕಾಳಿದಾಸನ ಕಥಾ ನಾಟಕಗಳು

ಪುರಸ್ಕಾರ

೧೯೭೭ರಲ್ಲಿ ವಿ.ಎಂ.ಇನಾಮದಾರರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ನೀಡಲಾಯಿತು.

ನಿಧನ

ವಿ.ಎಂ.ಇನಾಮದಾರರು ೧೯೮೬ ಜನೆವರಿ ೨೬ರಂದು ನಿಧನರಾದರು.

ಇನಾಮದಾರ ಪ್ರಶಸ್ತಿ

ಇನಾಮದಾರರ ನಿಧನದ ನಂತರ ಸಾಹಿತ್ಯಕ್ಷೇತ್ರದಲ್ಲಿ "ವಿ.ಎಂ.ಇನಾಮದಾರ ಪ್ರಶಸ್ತಿ"ಯನ್ನು ವಾರ್ಷಿಕವಾಗಿ ನೀಡಲಾಗಿತ್ತಿದೆ.

ಚಲನಚಿತ್ರ

ಇವರ "ಶಾಪ" ಕಾದಂಬರಿಯನ್ನು ಆಧರಿಸಿ "ಮುಕ್ತಿ" ಎನ್ನುವ ಚಲನಚಿತ್ರವನ್ನು ತೆಗೆಯಲಾಗಿತ್ತು. ಈ ಚಲನಚಿತ್ರದಲ್ಲಿ ಕಲ್ಪನಾ ಇವರು ನಾಯಕಿಯಾಗಿದ್ದರು.

ಉಲ್ಲೇಖಗಳು

  1. "Sahitya Akademi to celebrate birth centenary of Inamdar". www.thehindu.com. Retrieved 15 May 2017.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.