ವಸಾಹತು
ಇತಿಹಾಸದಲ್ಲಿ, ವಸಾಹತು ಎಂದರೆ ಒಂದು ರಾಜ್ಯದ ನೆಲಸಿಗರ ನೇರ ರಾಜಕೀಯ ನಿಯಂತ್ರಣದಲ್ಲಿರುವ ಮತ್ತು ಅವರಿಂದ ಆಕ್ರಮಿತವಾದ ಪ್ರಾಂತ್ಯ. ಇದು ಸಾರ್ವಭೌಮನ ತವರು ಪ್ರಾಂತದಿಂದ ಭಿನ್ನವಾಗಿದೆ. ಪ್ರಾಚೀನ ಕಾಲದಲ್ಲಿನ ವಸಾಹತುಗಳ ವಿಷಯದಲ್ಲಿ, ನಗರ ರಾಜ್ಯಗಳು ಹಲವುವೇಳೆ ತಮ್ಮ ಸ್ವಂತದ ವಸಾಹತುಗಳನ್ನು ಸ್ಥಾಪಿಸುತ್ತಿದ್ದವು. ಕೆಲವು ವಸಾಹತುಗಳು ಐತಿಹಾಸಿಕವಾಗಿ ದೇಶಗಳಾಗಿದ್ದರೆ, ಇತರ ವಸಾಹತುಗಳು ಅವುಗಳ ಪ್ರಾರಂಭದಿಂದ ನಿರ್ದಿಷ್ಟ ರಾಜ್ಯತ್ವವಿರದ ಪ್ರಾಂತಗಳಾಗಿದ್ದವು.
ಕೈಗೊಂಬೆ ರಾಜ್ಯ ಅಥವಾ ಪರಾಧೀನ ರಾಜ್ಯದಂತಿರದೇ, ವಸಾಹತು ಯಾವುದೇ ಸ್ವತಂತ್ರ ಅಂತರರಾಷ್ಟ್ರೀಯ ಪ್ರಾತಿನಿಧ್ಯವನ್ನು ಹೊಂದಿರುವುದಿಲ್ಲ, ಮತ್ತು ಅದರ ಅಗ್ರಮಟ್ಟದ ಆಡಳಿತವು ತವರು ರಾಜ್ಯದ ನೇರ ನಿಯಂತ್ರಣದಲ್ಲಿರುತ್ತದೆ.
ಆಧುನಿಕ ಉದಾಹರಣೆ
ಭಾರತವು ೧೮೫೮ರಿಂದ ೧೯೪೭ರವರೆಗೆ ಯುನೈಟಡ ಕಿಂಗ್ಡಮ್ ಸರ್ಕಾರದ ನೇರ ನಿಯಂತ್ರಣದಲ್ಲಿದ್ದ ಸಾಮ್ರಾಜ್ಯಶಾಹಿ ರಾಜಕೀಯ ಘಟಕವಾಗಿತ್ತು. ಇದು ಇಂದಿನ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್‌ನ್ನು ಒಳಗೊಂಡಿತ್ತು. ೧೫ನೇ ಶತಮಾನದಿಂದ ೧೯೬೧ರ ವರೆಗೆ ಪೊರ್ಚುಗೀಸ್ ಭಾರತ (ಗೋವಾ) ಪೋರ್ಚುಗಲ್‍ನ ವಸಾಹತುವಾಗಿತ್ತು.
ಬಾಹ್ಯ ಸಂಪರ್ಕಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.